/newsfirstlive-kannada/media/post_attachments/wp-content/uploads/2025/05/SUDEEP_MODI.jpg)
ಆಪರೇಷನ್​ ಸಿಂಧೂರ.. ಇತ್ತೀಚೆಗಷ್ಟೇ ಈ ಆಪರೇಷನ್​ ಬಗ್ಗೆ ನಟ ಕಿಚ್ಚ ಸುದೀಪ್​, ತನ್ನ ಎಕ್ಸ್ ಖಾತೆಯಲ್ಲಿ ಹಂಚಿಕೊಂಡಿದ್ದರು. ಇದೊಂದು ಕೇವಲ ಮಿಷನ್ ಅಲ್ಲ, ಇದೊಂದು ಪವಿತ್ರ ಪ್ರತಿಜ್ಞೆ. ಭಾರತದ ಸಿಂಧೂರಕ್ಕೆ ಈ ಹಿಂದೆ ಕಲೆ ಬಿದ್ದಿತ್ತು. ನಮ್ಮ ಸೈನಿಕರು ಬೆಂಕಿಯಿಂದ ಮತ್ತು ನಿಖರತೆಯಿಂದ ಅದರ ಗೌರವವನ್ನ ಮರಳಿ ಸ್ಥಾಪನೆ ಮಾಡಿದ್ದಾರೆ. ಎಂದು ಹೇಳುತ್ತಾ ಸಮಸ್ತ ಆಪರೇಷನ್​ ಸಿಂಧೂರ ಟೀಮ್​ಗೆ ಸಲಾಂ ಹೊಡೆದಿದ್ದರು. ಈಗ ಇದೇ ವಿಚಾರವಾಗಿ ಪ್ರಧಾನಿ ಮೋದಿಗೆ ಕಿಚ್ಚ ಪತ್ರ ಬರೆದಿದ್ದಾರೆ. ಹಾಗೆ ತಮ್ಮ ಮತ್ತೊಂದು ವಿಷಯವನ್ನೂ ಈ ಪತ್ರದ ಮೂಲಕ ಹಂಚಿಕೊಂಡಿದ್ದಾರೆ.
ತಾಯಿ ನಿಧನರಾದಾಗ ಪ್ರಧಾನಿ ಮೋದಿಯ ಸಂತಾಪ ನೆನಪಿಸಿಕೊಂಡ ಕಿಚ್ಚ!
ಕಿಚ್ಚ ಸುದೀಪ್ ಅವರು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಪತ್ರ ಬರೆದಿದ್ದು ಆಪರೇಷನ್​ ಸಿಂಧೂರ ವಿಷಯಕ್ಕೆ ಮಾತ್ರವಲ್ಲ. ತನ್ನ ತಾಯಿ ಸರೋಜಾ ಅವರು ನಿಧನರಾದಾಗ ಸುದೀಪ್ ಅವರಿಗೆ ಮೋದಿ ಅವರು ತಿಳಿಸಿದ ಸಂತಾಪಗಳನ್ನ ಇಲ್ಲಿ ಸ್ಮರಿಸಿದ್ದಾರೆ. ಒಂದೇ ಪತ್ರದಲ್ಲಿ ಎದೆಯಲ್ಲಿನ ತಾಯಿ ನೋವು, ಭಾರತ ಮಾತೆಯ ನೋವುನ್ನು ಮೋದಿಯೊಟ್ಟಿಗೆ ಕಿಚ್ಚ ಹಂಚಿಕೊಂಡಿದ್ದಾರೆ. ಅಷ್ಟಕ್ಕೂ ಆ ಪತ್ರದ ಭಾವಾಕ್ಷರ ಇಲ್ಲಿದೆ.
ಮೊದಲಿಗೆ, ನನ್ನ ತಾಯಿ ಶ್ರೀಮತಿ ಸರೋಜಾ ಸಂಜೀವ್ ಅವರ ನಿಧನಕ್ಕೆ ನೀವು ಕಳುಹಿಸಿದ ಹೃದಯಸ್ಪರ್ಶಿ ಸಂತಾಪದ ಪತ್ರಕ್ಕೆ ಧನ್ಯವಾದಗಳು. ಆ ಕ್ಷಣದಲ್ಲಿ, ನಿಮ್ಮ ಮಾತುಗಳು ನನಗೆ ಶಕ್ತಿ ಮತ್ತು ಕರುಣೆಯನ್ನ ನೀಡಿದವು, ಅದನ್ನು ನಾನು ಯಾವತ್ತಿಗೂ ಮರೆಯಲಾರೆ. ಇಂದು, ನಾನು ಕೇವಲ ಕೃತಜ್ಞನಾದ ಮಗನಾಗಿ ಮಾತ್ರವಲ್ಲ, ಒಬ್ಬ ಹೆಮ್ಮೆಯ ಭಾರತೀಯನಾಗಿ ನಿಮಗೆ ಈ ಪತ್ರವನ್ನ ಬರೆಯುತ್ತಿದ್ದೇನೆ.
/newsfirstlive-kannada/media/post_attachments/wp-content/uploads/2025/05/SUDEEP_MODI_1.jpg)
ಇಡೀ ಭಾರತ ‘ಆಪರೇಷನ್ ಸಿಂಧೂರ’ದ ಯಶಸ್ಸಿಗೆ ಅಭಿನಂದನೆಗಳನ್ನ ತಿಳಿಸುತ್ತಿದೆ. ನಾನು ಕೂಡ ಇದನ್ನ ಮೆಚ್ಚುತ್ತಿದ್ದೇನೆ. ಈ ಆಪರೇಷನ್ ಕೇವಲ ಪ್ರತ್ಯುತ್ತರವಲ್ಲ, ಪ್ರಬಲ ಸಂದೇಶವಾಗಿತ್ತು. ನಮ್ಮ ದೇಶ ಹಿಂದೆ ಸರಿಯದು, ನಮ್ಮ ದೇಶ ಯಾವುದನ್ನೂ ಮರೆಯದು, ನಮ್ಮ ದೇಶ ಯಾವಾಗಲೂ ಪುಟಿದೇಳುತ್ತದೆ ಎಂಬ ಧೈರ್ಯಶಾಲಿ ಮತ್ತು ನಿರ್ಣಾಯಕ ಸಂದೇಶವನ್ನು ವಿಶ್ವಕ್ಕೆ ಸಾರಿದೆ.
ನೀವು ಕೇವಲ ಬಾಯಿ ಮಾತುಗಳಿಂದ ಮಾರ್ಗದರ್ಶನ ಮಾಡುವ ನಾಯಕನಲ್ಲ, ದೃಢ ನಿಶ್ಚಯದಿಂದ ಮುನ್ನಡೆಸುವ ನಾಯಕನನ್ನ ಕಾಣುತ್ತಿದ್ದೇವೆ. ಈ ಆಪರೇಷನ್​ ನಡೆಸಿದ ಸ್ಪಷ್ಟತೆ, ವಿಶ್ವಾಸವು ನಮ್ಮ ಸಂಸ್ಕೃತಿಯ ಆತ್ಮವನ್ನ ಪ್ರತಿಬಿಂಬಿಸುತ್ತದೆ, ಅದು ಯಾವಾಗಲೂ ನಿರ್ಭೀತಿ ಆಗಿದೆ, ಧಾರ್ಮಿಕವಾಗಿದೆ, ಸಂಕಲ್ಪಶೀಲವಾಗಿದೆ.
ಪ್ರತಿಯೊಬ್ಬ ಕನ್ನಡಿಗನೂ, ಸಂಪೂರ್ಣ ಕನ್ನಡ ಚಿತ್ರರಂಗವೂ ನಿಮ್ಮೊಂದಿಗೆ ಗಟ್ಟಿಯಾಗಿ ಯಾವಾಗಲೂ ಇರುತ್ತದೆ. ನಿಮ್ಮ ಧೈರ್ಯದಿಂದ ನಾವು ಸ್ಫೂರ್ತಿಯನ್ನ ಪಡೆಯುತ್ತೇವೆ. ನಿಮ್ಮ ನಾಯಕತ್ವದಲ್ಲಿ, ನಮ್ಮ ರಕ್ಷಣಾ ಪಡೆಗಳು ಅಸಮಾನವಾದ ನಿಖರತೆ, ಶಿಸ್ತು ಮತ್ತು ಶೌರ್ಯವನ್ನ ಪ್ರದರ್ಶಿಸಿವೆ. ಅವರ ಯಶಸ್ಸು ನಮ್ಮ ಹೆಮ್ಮೆಯಾಗಿದೆ. ನಾವು ಒಂದೇ ಜನ, ಒಂದೇ ಧ್ವನಿ, ಒಂದೇ ದೇಶವಾಗಿ ಒಗ್ಗಟ್ಟಾಗಿ ನಿಲ್ಲುತ್ತೇವೆ.
ಜೈ ಹಿಂದ್. ಜೈ ಕರ್ನಾಟಕ. ಜೈ ಭಾರತ.
ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us