ಅಮ್ಮನನ್ನು ತಬ್ಬಿ ಬಿಕ್ಕಿಬಿಕ್ಕಿ ಅತ್ತ ಸುದೀಪ್​​​; ಕಿಚ್ಚನನ್ನು ನೋಡಿದ್ರೆ ಕರುಳು ಚುರುಕ್ ಅನ್ನುತ್ತೆ!

author-image
Ganesh Nachikethu
Updated On
ಅಮ್ಮನನ್ನು ತಬ್ಬಿ ಬಿಕ್ಕಿಬಿಕ್ಕಿ ಅತ್ತ ಸುದೀಪ್​​​; ಕಿಚ್ಚನನ್ನು ನೋಡಿದ್ರೆ ಕರುಳು ಚುರುಕ್ ಅನ್ನುತ್ತೆ!
Advertisment
  • ಅಭಿನಯ ಚಕ್ರವರ್ತಿ ನಟ ಕಿಚ್ಚ ಸುದೀಪ್​ಗೆ ಮಾತೃ ವಿಯೋಗ
  • ಸುದೀಪ್​​ ಅವರ ಮನೆಯಲ್ಲೇ ತಾಯಿಯ ಅಂತಿಮ ದರ್ಶನ..!
  • ತಾಯಿಯನ್ನು ನೋಡಿ ಗಳಗಳನೇ ಕಣ್ಣೀರಿಟ್ಟ ಕಿಚ್ಚ ಸುದೀಪ್​​​

ಬೆಂಗಳೂರು: ಅಭಿನಯ ಚಕ್ರವರ್ತಿ ನಟ ಕಿಚ್ಚ ಸುದೀಪ್ ತಾಯಿ ಸರೋಜಾ ಅವರು ನಿಧನರಾಗಿದ್ದಾರೆ. ಇಂದು ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿಯಾಗದ ಕಾರಣ ತಮ್ಮ ಕೊನೆಯುಸಿರೆಳೆದಿದ್ದಾರೆ. ಹೀಗಾಗಿ ಸುದೀಪ್​​ ಅವರ ಇಡೀ ಕುಟುಂಬ ಶೋಕ ಸಾಗರದಲ್ಲಿ ಮುಳುಗಿದೆ.

ಇತ್ತೀಚೆಗೆ ನಟ ಸುದೀಪ್ ಅವರ ತಾಯಿ ಅನಾರೋಗ್ಯದಿಂದ ಬಳಲುತ್ತಿದ್ದರು. ಆರೋಗ್ಯ ಸಮಸ್ಯೆ ಹೆಚ್ಚಾದ ಕಾರಣ ಕೂಡಲೇ ಖಾಸಗಿ ಆಸ್ಪತ್ರೆಗೆ ಸೇರಿಸಲಾಯ್ತು. ಆದರೀಗ, ಚಿಕಿತ್ಸೆಗೆ ಸ್ಪಂದಿಸದೇ ಇಂದು ನಿಧನರಾಗಿದ್ದಾರೆ. ಈ ಸುದ್ದಿ ಕಿಚ್ಚು ಸುದೀಪ್​​ ಮತ್ತವರ ಆಪ್ತರಿಗೆ ಭಾರೀ ಆಘಾತ ನೀಡಿದೆ.

ಸುದೀಪ್​​ ಮನೆಯಲ್ಲಿ ಅಂತಿಮ ದರ್ಶನ

ಇಂದು ಮಧ್ಯಾಹ್ನ 12 ಗಂಟೆಗೆ ಜೆಪಿ ನಗರದ ಸುದೀಪ್ ಅವರ ಮನೆಗೆ ತಾಯಿ ಸರೋಜಾ ಅವರ ಮೃತದೇಹ ತರಲಾಗಿತ್ತು. ಅಲ್ಲೇ ಕಲಾವಿದರಿಗೆ, ರಾಜಕೀಯ ಗಣ್ಯರಿಗೆ ಅಂತಿಮ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿದೆ.

ಬಿಕ್ಕಿಬಿಕ್ಕಿ ಅತ್ತ ಸುದೀಪ್​​

ಜೀವ ಬಿಟ್ಟ ತಾಯಿಯನ್ನು ನೋಡಿ ನಟ ಸುದೀಪ್​​​ ಅವರು ಬಿಕ್ಕಿಬಿಕ್ಕಿ ಅತ್ತಿದ್ದಾರೆ. ಈ ಫೋಟೋ ನೋಡಿದ್ರೆ ಯಾರಿಗಾದ್ರೂ ಕರುಳು ಚುರುಕ್​ ಅನ್ನುತ್ತೆ. ಇಂದು ಸಂಜೆಯೇ ಅಂತ್ಯಕ್ರಿಯೆ ನೆರವೇರಲಿದೆ ಎಂದು ಕುಟುಂಬದ ಮೂಲಗಳು ಮಾಹಿತಿ ನೀಡಿವೆ.

ಇದನ್ನೂ ಓದಿ:ಮಾಜಿ ಸಿಎಂ ಬಸವರಾಜ್​ ಬೊಮ್ಮಾಯಿಯನ್ನು ತಬ್ಬಿ ಅತ್ತ ಸುದೀಪ್​.. ಅಮ್ಮನನ್ನು ಕಳೆದುಕೊಂಡ ಮಾಣಿಕ್ಯ

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment