ಕಿಚ್ಚನಿಗೆ ತಾಯಿ ಕಳಿಸಿದ ಕೊನೆಯ ಸಂದೇಶವೇನು? ಈ ಬಗ್ಗೆ ನಟ ಸುದೀಪ್​ ಹೇಳಿದ್ದೇನು?

author-image
Ganesh Nachikethu
Updated On
ತುತ್ತಿಟ್ಟ, ಮುತ್ತಿಟ್ಟ ಹೆತ್ತಮ್ಮನನ್ನು ಕಳೆದುಕೊಂಡ ಕಿಚ್ಚ ಸುದೀಪ್​.. ಅಷ್ಟಕ್ಕೂ ಆಗಿದ್ದೇನು?
Advertisment
  • ಪ್ರೀತಿಯ ಅಮ್ಮನ ನೆನೆದು ಭಾವನಾತ್ಮಕ ಪತ್ರ ಬರೆದ ಕಿಚ್ಚ
  • ಅಮ್ಮನ ನೆನಪುಗಳನ್ನ ಮೆಲುಕು ಹಾಕಿದ ನಟ ಸುದೀಪ್​!
  • ನನ್ನ ಮೊದಲ ಅಭಿಮಾನಿ ನನ್ನಮ್ಮನೇ ಎಂದು ಸಂದೇಶ

ಬೆಂಗಳೂರು: ಪ್ರೀತಿಯ ಅಮ್ಮನ ಅಗಲಿಕೆಯನ್ನು ಕಿಚ್ಚನಿಗೆ ಅರಗಿಸಿಕೊಳ್ಳಲು ಆಗುತ್ತಿಲ್ಲ. ತಾಯಿಯನ್ನು ಕಳೆದುಕೊಂಡ ನೋವಿನಲ್ಲೇ ನಟ ಸುದೀಪ್​ ಅಮ್ಮನ ನೆನೆದು ಭಾವುಕ ಪತ್ರವೊಂದನ್ನ ಬರೆದಿದ್ದಾರೆ. ನನ್ನ ಮೊದಲ ಅಭಿಮಾನಿ ನನ್ನಮ್ಮ ಎಂದು ನೆನಪುಗಳನ್ನ ಸುದೀಪ್​ ಮೆಲುಕು ಹಾಕಿದ್ದಾರೆ.

ಪ್ರೀತಿಯ ಅಮ್ಮನ ನೆನೆದು ಭಾವನಾತ್ಮಕ ಪತ್ರ ಬರೆದ ಕಿಚ್ಚ

ಸುದೀಪ್​​​ಗೆ ತಾಯಿ ಅಂದ್ರೇ ಬೇರೆಯದ್ದೇ ಪ್ರಪಂಚ. ತಾಯಿ ಮಗ ಇಬ್ಬರು ಎಲ್ಲೇ ಮಾತನಾಡಿದ್ರೂ, ಏನೇ ಮಾತನಾಡಲ್ಲಿ ಇಬ್ಬರಲ್ಲೂ ಆ ಪ್ರೀತಿ ಎದ್ದು ಕಾಣ್ತಿತ್ತು. ಬೇಕಿದ್ರೆ ಯಾವುದೇ ಸಿನಿಮಾದಲ್ಲಿ ನೋಡಿ, ಸುದೀಪ್​​ ಅಮ್ಮನ ಪಾತ್ರದ ಮುಂದೆ ಕಣ್ಣೀರಾಗಿ ಗಂಟಲುಬ್ಬಿಸಿಕೊಂಡಿರ್ತಾರೆ. ಇವೆಲ್ಲಾ ತೆರೆ ಮೇಲೆ ಕಾಣೋ ಕಣ್ಣೀರಿನ ಘಟನೆಗಳಾಗಿದ್ರೆ, ಸುದೀಪ್​ಗೆ ಈ ಘಟನೆ ನಿಜವಾಗಿ ಎದುರಾಗಿ ಬಿಟ್ಟಿದೆ.

70 ಹರೆಯದಲ್ಲೆ ಕುಟುಂಬವನ್ನ ಬಿಟ್ಟು ಹೊರಟ ತಾಯಿಯನ್ನ ನೋಡ್ತಾ ಸುದೀಪ್​​ ಮೂಕರೋಧನೆ ಅನುಭವಿಸುತ್ತಿದ್ದಾರೆ. ತನಗಿಂತಲೂ ಹೆಚ್ಚಾಗಿ ಪ್ರೀತಿಸುತ್ತಿದ್ದ ಅಮ್ಮನನ್ನು ನೆನೆದು ಕಿಚ್ಚ ಸುದೀಪ್ ಭಾವನಾತ್ಮಕವಾಗಿ ಪತ್ರ ಬರೆದಿದ್ದಾರೆ. ನನ್ನ ಮೊದಲ ಅಭಿಮಾನಿ ನನ್ನಮ್ಮ ಎಂದಿರೋ ಸುದೀಪ್​​, ತನ್ನ ಬಾಳಲ್ಲಿ ಸರೋಜಮ್ಮನ ಪಾತ್ರವೇನು? ಅನ್ನೋದು ವಿವರಿಸಿದ್ದಾರೆ.

ಅಮ್ಮನ ಕೊನೆಯ ಸಂದೇಶ ನೆನೆದ ಕಿಚ್ಚ ಸುದೀಪ್​​​

ಯಾವಾಗಲೂ ಪ್ರೀತಿ ತೋರಿಸುವ, ಕೇರ್ ಮಾಡುವ, ಕ್ಷಮಿಸುವ ನನ್ನ ತಾಯಿ. ಈಕೆ ನನ್ನೊಂದಿಗೆ ಇದ್ದಿದ್ರೆ ಚೆನ್ನಾಗಿರ್ತಿತ್ತು. ನನ್ನ ತಾಯಿ ನನಗೆ ಹಬ್ಬ, ಟೀಚರ್ ಆಗಿದ್ರು. ಅಷ್ಟೇ ಅಲ್ಲದೆ ನನ್ನ ಮೊದಲ ಅಭಿಮಾನಿ ಕೂಡ ಹೌದು. ನನ್ನ ಕೆಲಸ ಚೆನ್ನಾಗಿಲ್ಲ ಅಂದ್ರೂ ಇಷ್ಟಪಟ್ಟಿದ್ದಳು. ನನ್ನ ಮನದಲ್ಲಿರುವ ದುಃಖವನ್ನು ಹೊರಹಾಕಲು ನನಗೆ ಪದಗಳಿಲ್ಲ. ಇಪ್ಪತ್ನಾಲ್ಕು ಗಂಟೆಯಲ್ಲಿ ಎಲ್ಲವೂ ಬದಲಾಗಿ ಹೋಯ್ತು. ನಿತ್ಯವೂ ನನಗೆ ಬೆಳಗ್ಗೆ 5.30ಗೆ ಗುಡ್ ಮಾರ್ನಿಂಗ್ ಕಂದ ಎಂಬ ಸಂದೇಶ ಬರುತ್ತಿತ್ತು. ನನಗೆ ಕಳೆದ ಅಕ್ಟೋಬರ್ 18ಕ್ಕೆ ಕೊನೆಯದಾಗಿ ಮೆಸೇಜ್ ಬಂದಿತ್ತು ಎಂದು ಕಣ್ಣೀರಿಟ್ಟರು.

ಅದೇನೆ ಇರಲಿ! ಸುದೀಪ್​ ಮತ್ತವರ ತಾಯಿಯ ನಡುವೆ ಇದ್ದ ಪ್ರೀತಿ ಅಪಾರವಾದ್ದದ್ದು. ಇಬ್ಬರ ಬಂಧ ಎಂಥಾದ್ದು ಅಂತಾ ವರ್ಣಿಸೋದಕ್ಕೂ ಸಾಧ್ಯವಾಗದಂತದ್ದು. ಅಮ್ಮನನ್ನು ಕಳೆದುಕೊಂಡಿರುವ ಕಿಚ್ಚನಿಗೆ ನೋವು ತಡೆದುಕೊಳ್ಳುವ ಶಕ್ತಿಯನ್ನು ಆ ದೇವರು ಕರುಣಿಸಲಿ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment