/newsfirstlive-kannada/media/post_attachments/wp-content/uploads/2024/12/Kiccha-Sudeep-Mother.jpg)
ಅಮ್ಮ ಎಂದರೆ ಯಾರಿಗೆ ಇಷ್ಟ ಇಲ್ಲ ಹೇಳಿ. ಅಮ್ಮ ಇಲ್ಲದ ನೋವು ಕಳೆದುಕೊಂಡವರಿಗೆ ಮಾತ್ರ ಅರ್ಥವಾಗುತ್ತೆ. ಇತ್ತೀಚೆಗೆ ಸ್ಯಾಂಡಲ್‌ವುಡ್ ಬಾದ್ ಷಾ ಕಿಚ್ಚ ಸುದೀಪ್ ಅವರು ತಮ್ಮ ತಾಯಿಯನ್ನು ಕಳೆದುಕೊಂಡಿದ್ದಾರೆ. ಪ್ರೀತಿಯ ಅಮ್ಮನ ಅಗಲಿಕೆಯನ್ನು ಕಿಚ್ಚನಿಗೆ ಅರಗಿಸಿಕೊಳ್ಳಲು ಆಗುತ್ತಿಲ್ಲ.
/newsfirstlive-kannada/media/post_attachments/wp-content/uploads/2024/10/Sudeep-mother.jpg)
ಅಮ್ಮನ ಸಾವಿನ ಬಳಿಕ ನೋವಿನಲ್ಲಿರುವ ಕಿಚ್ಚ ಸುದೀಪ್​ ಈಗಲೂ ನಿತ್ಯಪೂಜೆ ಪೂಜೆ ಸಲ್ಲಿಸುತ್ತಿದ್ದಾರೆ. ತಾಯಿ ಸರೋಜಾ ಅವರು ಕೂರುತ್ತಿದ್ದ ಕುರ್ಚಿಗೆ ಪ್ರತಿನಿತ್ಯ ಗೌರವ ಸಲ್ಲಿಸುತ್ತಿದ್ದಾರೆ. ಅಷ್ಟೇ ಅಲ್ಲ ತಾಯಿ ಹಾಕುತ್ತಿದ್ದ ಪಾದರಕ್ಷೆಗೆ ಒಂದು ಪೀಠ ಮಾಡಿ ಸುದೀಪ್ ಅವರು ಪ್ರತಿನಿತ್ಯ ತಪ್ಪದೇ ಪೂಜೆ ಸಲ್ಲಿಸುತ್ತಿದ್ದಾರೆ.
/newsfirstlive-kannada/media/post_attachments/wp-content/uploads/2024/12/Kiccha-sudeep-Mother-1.jpg)
ಇದನ್ನೂ ಓದಿ: ಕಿಚ್ಚನಿಗೆ ತಾಯಿ ಕಳಿಸಿದ ಕೊನೆಯ ಸಂದೇಶವೇನು? ಈ ಬಗ್ಗೆ ನಟ ಸುದೀಪ್​ ಹೇಳಿದ್ದೇನು?
ಸುದೀಪ್​​​ಗೆ ತಾಯಿ ಅಂದ್ರೆ ಬೇರೆಯದ್ದೇ ಪ್ರಪಂಚ. ತಾಯಿ ಮಗ ಇಬ್ಬರು ಎಲ್ಲೇ ಮಾತನಾಡಿದ್ರೂ, ಏನೇ ಮಾತನಾಡಲ್ಲಿ ಇಬ್ಬರಲ್ಲೂ ಆ ಪ್ರೀತಿ ಎದ್ದು ಕಾಣ್ತಿತ್ತು. ಬೇಕಿದ್ರೆ ಯಾವುದೇ ಸಿನಿಮಾದಲ್ಲಿ ನೋಡಿ, ಸುದೀಪ್​​ ಅಮ್ಮನ ಪಾತ್ರದ ಮುಂದೆ ಕಣ್ಣೀರಾಗಿ ಗಂಟಲುಬ್ಬಿಸಿಕೊಂಡಿರ್ತಾರೆ. ಇವೆಲ್ಲಾ ತೆರೆ ಮೇಲೆ ಕಾಣೋ ಕಣ್ಣೀರಿನ ಘಟನೆಗಳಾಗಿದ್ರೆ, ಸುದೀಪ್​ಗೆ ಈ ಘಟನೆ ನಿಜವಾಗಿ ಎದುರಾಗಿ ಬಿಟ್ಟಿದೆ. ತನಗಿಂತಲೂ ಹೆಚ್ಚಾಗಿ ಪ್ರೀತಿಸುತ್ತಿದ್ದ ಅಮ್ಮನನ್ನು ಕಿಚ್ಚ ಪ್ರತಿನಿತ್ಯವೂ ಪೂಜಿಸುತ್ತಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us