/newsfirstlive-kannada/media/post_attachments/wp-content/uploads/2024/09/Bigg-Boss-Sudeep-2.jpg)
ಬಿಗ್​ಬಾಸ್​​ ಕನ್ನಡ 11ನೇ ಸೀಸನ್​​ ಆರಂಭಕ್ಕೆ ಕ್ಷಣಗಣನೆ ಶುರುವಾಗಿದೆ. ಇದೇ ತಿಂಗಳು ಸೆಪ್ಟೆಂಬರ್ 29ನೇ ತಾರೀಕಿನಿಂದ ಈ ರಿಯಾಲಿಟಿ ಶೋ ಆರಂಭವಾಗಲಿದೆ. ಈ ಸಲ ಬಿಗ್ ಬಾಸ್​ನಿಂದ ಫ್ಯಾನ್ಸ್ ಸಾಕಷ್ಟು ನಿರೀಕ್ಷೆ ಮಾಡುತ್ತಿದ್ದಾರೆ. 11ನೇ ಸೀಸನ್​ಗೆ ಹೊಸ ಲೆಕ್ಕ ಎಂಬ ಟ್ಯಾಗ್​ಲೈನ್​ ಕೂಡ ನೀಡಲಾಗಿದೆ. ಇದರ ಮಧ್ಯೆ ನಟ ಸುದೀಪ್​ ಸುದ್ದಿಗೋಷ್ಠಿ ನಡೆಸಿ ಮಾತಾಡಿದ್ದಾರೆ.
ನಟ ಸುದೀಪ್​ ಏನಂದ್ರು?
ಬಿಗ್​​ಬಾಸ್ ಸಹವಾಸ​ ಸಾಕು ಅನಿಸಿದ್ದು ನಿಜ. ಅದಕ್ಕೆ ಬೇರೆಯದ್ದೇ ಕಾರಣಗಳು ಇದ್ದವು. ನಮ್ಮಗಳ ಮಧ್ಯೆ ಯಾವುದೇ ಮಸನಸ್ತಾಪ ಇರಲಿಲ್ಲ. ಇದರ ಬದಲಿಗೆ ಸಿನಿಮಾ ಕಡೆ ಒಂದಷ್ಟು ಗಮನ ನೀಡೋಣ ಎಂದಿದ್ದೆ. ಕೊನೆಗೆ ಬಿಗ್​ಬಾಸ್​ ಟೀಮ್​​​ ನನ್ನ ಮನೆಗೆ ಭೇಟಿ ನೀಡಿ ಒಪ್ಪಿಸಿದ್ರು ಎಂದರು ಸುದೀಪ್​​.
ಬಿಗ್​ಬಾಸ್​ ನನ್ನ ಜೀವನದ ಭಾಗ ಆಗಿದೆ. ಕಳೆದ 10 ವರ್ಷಗಳಿಂದ ಬಿಗ್​ಬಾಸ್​ ನಡೆಸಿಕೊಂಡು ಬಂದಿದ್ದೇನೆ. ಮನೆಗೆ ಬಂದ ಬಿಗ್​ಬಾಸ್​ ಟೀಮ್​ ಎಲ್ಲವೂ ವಿವರಿಸಿದ್ರು. ಬಿಗ್​ಬಾಸ್​ಗೆ ನನಗೆ ಏನೋ ಒಂದು ರೀತಿ ಸಂಬಂಧ. ಹಾಗಾಗಿ ಬಿಗ್​ಬಾಸ್​ ಒಪ್ಪಿಕೊಂಡೆ ಎಂದರು.
ವದಂತಿಗೆ ಫುಲ್​ ಸ್ಟಾಪ್​ ಇಟ್ಟ ಸುದೀಪ್​​
ಈ ಹಿಂದೆ ಸುದೀಪ್​ ಬಿಗ್​ಬಾಸ್​ ಶೋನಿಂದ ಹಿಂದೆ ಸರಿಯಲಿದ್ದಾರೆ ಎಂದು ಹೇಳಲಾಗಿತ್ತು. ಈ ಸಲ ಬಿಗ್​​​ಬಾಸ್​​​ ಆ್ಯಂಕರ್​ ಯಾರಾಗಲಿದ್ದಾರೆ? ಅನ್ನೋ ಚರ್ಚೆ ಬಹಳ ಜೋರಾಗಿತ್ತು. ರಮೇಶ್​​ ಅರವಿಂದ್​​, ರಿಷಬ್​ ಶೆಟ್ಟಿ, ಗಣೇಶ್​​, ಶಿವಣ್ಣ ಯಾರಾದ್ರೂ ಒಬ್ಬರು ಬಿಗ್​ಬಾಸ್​ ಶೋ ನಡೆಸಿಕೊಡಲಿದ್ದಾರೆ ಅನ್ನೋ ಮಾತುಗಳು ಕೇಳಿ ಬಂದಿತ್ತು. ಈಗ ಎಲ್ಲಾ ವದಂತಿಗೂ ನಟ ಸುದೀಪ್​ ಫುಲ್​ ಸ್ಟಾಪ್​ ಇಟ್ಟಿದ್ದಾರೆ.
ವಿಶೇಷ ಸೂಚನೆ: ಕ್ರಿಕೆಟ್​​ನ ವಿಶೇಷ ಸುದ್ದಿಗಳಿಗಾಗಿ ವೀಕ್ಷಿಸಿ ‘ರನ್ ಭೂಮಿ’ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ ಫಸ್ಟ್ ಚಾನೆಲ್