/newsfirstlive-kannada/media/post_attachments/wp-content/uploads/2024/09/Sudeep-BiggBoss-Kannada.jpg)
ಸೋಷಿಯಲ್ ಮೀಡಿಯಾದಲ್ಲಿ ಸಖತ್ ಆ್ಯಕ್ಟೀವ್ ಆಗಿರೋ ಮೂಲಕ ಸುದ್ದಿಯಾಗಿರೋ ಧನರಾಜ್ ಆಚಾರ್. ಇವರು ಬಿಗ್ಬಾಸ್ ಕನ್ನಡ ಸೀಸನ್ 11ಕ್ಕೆ ಎಂಟ್ರಿ ಕೊಟ್ಟು ಅಚ್ಚರಿ ಮೂಡಿಸಿದ್ದಾರೆ.
ಧನರಾಜ್ ಸದಾ ಹೆಂಡತಿ ಜೊತೆ ರೀಲ್ಸ್ ಮಾಡುತ್ತಾ ಜನರನ್ನು ಎಂಟರ್ಟೈನ್ ಮಾಡುತ್ತಾರೆ. ಇವರು ಹೆಚ್ಚು ಆದ್ಯತೆ ನೀಡುವುದು ಕಾಮಿಡಿ ವಿಡಿಯೋಗಳಿಗೆ. ಅದರಲ್ಲೂ ಈ ಹಿಂದೆ ಧನರಾಜ್ ಬಿಗ್ಬಾಸ್ ಬಗ್ಗೆಯೇ ಒಂದು ಮಾಡಿದ್ದು, ಈಗ ಕಿಚ್ಚ ಸುದೀಪ್ ಕೆಂಗಣ್ಣಿಗೆ ಗುರಿಯಾಗಿದ್ದಾರೆ.
ವಿಡಿಯದಲ್ಲೇನಿದೆ?
ಬಿಗ್ ಬಾಸ್’ ಬಗ್ಗೆ ಧನರಾಜ್ ಮಾಡಿದ ವಿಡಿಯೋದಲ್ಲಿ ಜಗಳ ನಡೆಯೋದು ಟಿಆರ್ಪಿಗಾಗಿ ಎಂದು ವ್ಯಂಗ್ಯವಾಡಿದ್ದರು. ಧನರಾಜ್ ಆಚಾರ್ ಎಂಟ್ರಿ ಕೊಟ್ಟಾಗ ವೇದಿಕೆ ಮೇಲೆಯೇ ಸುದೀಪ್ ಈ ವಿಡಿಯೋ ಪ್ಲೇ ಮಾಡಿಸಿದ್ರು. ಬಳಿಕ ಈ ವಿಚಾರವಾಗಿ ಸುದೀಪ್ ಗಂಭೀರವಾಗಿ ಕ್ಲಾಸ್ ತೆಗೆದುಕೊಂಡರು.
ಕಿಚ್ಚ ಸುದೀಪ್ ಕ್ಲಾಸ್
ನಾವು ಹೆಂಗ್ ಕಾಣಿಸ್ತೀವಿ? ನಾನು ತಮಾಷೆ ಮಾಡೋ ಹಾಗೆ ಕಾಣ್ತಾ ಇದೀನಾ? ಜಗಳ ಮಾಡೋದು ಟಿಆರ್ಪಿಗಾ? ಗೌರವ ಇಲ್ಲದ ವ್ಯಕ್ತಿಯನ್ನೇಕೆ ಬಿಗ್ಬಾಸ್ಗೆ ಕರೆಸಿದ್ರಿ ಎಂದು ಸುದೀಪ್ ಪ್ರಶ್ನೆ ಮಾಡಿದ್ರು. ಇದಕ್ಕೆ ಧನರಾಜ್ ನಾನು ತಮಾಷೆಗಾಗಿ ಈ ವಿಡಿಯೋ ಮಾಡಿದ್ದು ಎಂದರು. ಆಗ ಸುದೀಪ್ ನಕ್ಕರು. ಬಳಿಕ ಧನರಾಜ್ ನಿಟ್ಟುಸಿರು ಬಿಟ್ಟರು.
ಇದನ್ನೂ ಓದಿ:BBK11: ಗೋಲ್ಡ್ ಸುರೇಶ್ ಮಾತಿಗೆ ಬೆಚ್ಚಿಬಿದ್ದ ಕಿಚ್ಚ ಸುದೀಪ್; ಚಿನ್ನದ ಸರದಾರ ಹೇಳಿದ್ದೇನು?
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ