Advertisment

ರಾಜ್ಯ ಸರ್ಕಾರದ ಅತ್ಯುತ್ತಮ ನಟ ಪ್ರಶಸ್ತಿ ನಿರಾಕರಿಸಿದ ಕಿಚ್ಚ ಸುದೀಪ್; ಕಾರಣವೇನು?

author-image
admin
Updated On
ಕನ್ನಡದ ನೆಲ, ಜಲ, ಭಾಷೆಯ ಹೋರಾಟಗಳಲ್ಲಿ ನಾನು ನಿಮ್ಮೊಂದಿಗಿದ್ದೀನಿ; ಸಿಎಂ ಸಿದ್ದರಾಮಯ್ಯಗೆ ಮನವಿ ಮಾಡಿದ ಕಿಚ್ಚ ಸುದೀಪ್
Advertisment
  • ರಾಜ್ಯ ಸರ್ಕಾರ ಘೋಷಣೆ ಮಾಡಿರುವ ಅತ್ಯುತ್ತಮ ನಟ ಪ್ರಶಸ್ತಿ
  • 2019ನೇ ಸಾಲಿನ ಚಲನಚಿತ್ರ ಪ್ರಶಸ್ತಿ ಘೋಷಣೆ ಮಾಡಿದ್ದ ಸರ್ಕಾರ
  • ರಾಜ್ಯ ಸರ್ಕಾರಕ್ಕೆ ವಿಶೇಷವಾದ ಮನವಿ ಮಾಡಿದ ಕಿಚ್ಚ ಸುದೀಪ್‌!

ಸ್ಯಾಂಡಲ್‌ವುಡ್ ಬಾದ್‌ ಷಾ ಕಿಚ್ಚ ಸುದೀಪ್ ಅವರು ರಾಜ್ಯ ಸರ್ಕಾರ ಘೋಷಣೆ ಮಾಡಿರುವ ಪ್ರಶಸ್ತಿಯನ್ನು ಸ್ವೀಕರಿಸಲು ನಿರಾಕರಿಸಿದ್ದಾರೆ. ಎಕ್ಸ್ ಖಾತೆಯಲ್ಲಿ ಈ ಬಗ್ಗೆ ಪೋಸ್ಟ್ ಮಾಡಿರುವ ಸುದೀಪ್, ಸಿಎಂ ಸಿದ್ದರಾಮಯ್ಯ ಸರ್ಕಾರಕ್ಕೆ ಕ್ಷಮೆ ಕೋರಿದ್ದಾರೆ.

Advertisment

publive-image

2019ನೇ ಸಾಲಿನ ಚಲನಚಿತ್ರ ಪ್ರಶಸ್ತಿಯನ್ನು ನಿನ್ನೆಯಷ್ಟೇ ರಾಜ್ಯ ಸರ್ಕಾರ ಘೋಷಣೆ ಮಾಡಿತ್ತು. ‘ಪೈಲ್ವಾನ್’ ಚಿತ್ರದ ಅಭಿನಯಕ್ಕಾಗಿ ಅತ್ಯುತ್ತಮ ನಟ ಪ್ರಶಸ್ತಿಗೆ ಕಿಚ್ಚ ಸುದೀಪ್‌ ಅವರನ್ನ ಆಯ್ಕೆ ಮಾಡಲಾಗಿತ್ತು. ಅತ್ಯುತ್ತಮ ನಟ ಪ್ರಶಸ್ತಿಯನ್ನು ಸುಬ್ಬಯ್ಯ ನಾಯ್ಡು ಅವರ ಹೆಸರಿನಲ್ಲಿ ಸರ್ಕಾರ ನೀಡುತ್ತಿತ್ತು.


">January 23, 2025

ಇದನ್ನೂ ಓದಿ: ಪೈಲ್ವಾನ್‌ಗೆ ಮತ್ತೊಂದು ಕಿರೀಟ.. ಕಿಚ್ಚ ಸುದೀಪ್ ಅತ್ಯುತ್ತಮ ನಟ; ಸರ್ಕಾರದಿಂದ ಚಲನಚಿತ್ರ ಪ್ರಶಸ್ತಿ ಪ್ರಕಟ 

Advertisment

ರಾಜ್ಯ ಸರ್ಕಾರ ಘೋಷಣೆ ಮಾಡಿರುವ ಈ ಪ್ರಶಸ್ತಿಯನ್ನು ಸ್ವೀಕರಿಸಲು ಕಿಚ್ಚ ಸುದೀಪ್ ಅವರು ನಿರಾಕರಿಸಿದ್ದಾರೆ. ನನ್ನನ್ನು ಆಯ್ಕೆ ಮಾಡಿದ ತೀರ್ಪುಗಾರರಿಗೆ ಧನ್ಯವಾದಗಳು. ನಾನು ಪ್ರಶಸ್ತಿಗಳನ್ನು ಪಡೆಯೋದು ಬಿಟ್ಟು ತುಂಬಾ ವರ್ಷಗಳಾಗಿದೆ. ನನಗಿಂತ ಉತ್ತಮ ಕಲಾವಿದರು ತುಂಬಾ ಜನ ಇದ್ದಾರೆ. ಅವರಿಗೆ ಈ ಪ್ರಶಸ್ತಿ ಸಿಕ್ಕರೆ ಅದೇ ನನಗೆ ತುಂಬಾ ಖುಷಿಯ ವಿಚಾರ. ಈ ಪ್ರಶಸ್ತಿಯನ್ನು ವಿನಮ್ರವಾಗಿ ತಿರಸ್ಕಾರ ಮಾಡಿದ್ದೇನೆಂದು ಸುದೀಪ್‌ ತಿಳಿಸಿದ್ದಾರೆ.

‘ಪೈಲ್ವಾನ್‌’ ಹೇಳಿದ್ದೇನು?

ಗೌರವಾನ್ವಿತ ಕರ್ನಾಟಕ ಸರ್ಕಾರ ಮತ್ತು ತೀರ್ಪುಗಾರರ ಸದಸ್ಯರು,

ಅತ್ಯುತ್ತಮ ನಟ ವಿಭಾಗದಲ್ಲಿ ರಾಜ್ಯ ಪ್ರಶಸ್ತಿ ಪಡೆದಿರುವುದು ನಿಜಕ್ಕೂ ಒಂದು ಸೌಭಾಗ್ಯ ಮತ್ತು ಈ ಗೌರವಕ್ಕಾಗಿ ಗೌರವಾನ್ವಿತ ತೀರ್ಪುಗಾರರಿಗೆ ನನ್ನ ಹೃತ್ಪೂರ್ವಕ ಧನ್ಯವಾದಗಳು. ಆದಾಗ್ಯೂ, ಕೆಲ ವೈಯಕ್ತಿಕ ಕಾರಣಗಳಿಂದಾಗಿ, ನಾನು ಹಲವು ವರ್ಷಗಳಿಂದ ಪ್ರಶಸ್ತಿಗಳನ್ನು ಸ್ವೀಕರಿಸುವುದನ್ನು ನಿಲ್ಲಿಸಿದ್ದೇನೆ. ಹಲವಾರು ಪ್ರತಿಭಾನ್ವಿತ ನಟರು ಸಿನಿಮಾಗಾಗಿ ಸಾಕಷ್ಟು ಶ್ರಮಿಸಿದ್ದಾರೆ. ನನಗಿಂತಲೂ ಅವರು ಈ ಪ್ರಶಸ್ತಿಗೆ ಅರ್ಹರು. ಅವರಲ್ಲಿ ಒಬ್ಬರು ಈ ಪ್ರಶಸ್ತಿ ಸ್ವೀಕರಿಸುವುದನ್ನು ನೋಡುವುದು ನನಗೆ ಹೆಚ್ಚು ಸಂತೋಷ ನೀಡುತ್ತದೆ.

ನನ್ನ ಶ್ರಮ ಯಾವಾಗಲೂ ಮನರಂಜಿಸುವುದೇ ಆಗಿದ್ದು, ಯಾವುದೇ ಪ್ರಶಸ್ತಿಯ ನಿರೀಕ್ಷೆ ಇರೋದಿಲ್ಲ. ತೀರ್ಪುಗಾರರ ಈ ಆಯ್ಕೆಯು ನನಗೆ ಮತಷ್ಟು ಉತ್ತೇಜನವನ್ನು ನೀಡಿದ್ದು, ಮತ್ತಷ್ಟು ಅತ್ಯುತ್ತಮ ಕೆಲಸಗಳನ್ನು ಮುಂದುವರೆಸಲು ಉತ್ತೇಜಿಸುತ್ತದೆ.

ನನ್ನನ್ನು ಆಯ್ಕೆ ಮಾಡಿದ್ದಕ್ಕಾಗಿ ನಾನು ಪ್ರತಿಯೊಬ್ಬ ಜ್ಯೂರಿ ಸದಸ್ಯರಿಗೆ ಕೃತಜ್ಞನಾಗಿದ್ದೇನೆ. ಏಕೆಂದರೆ ಈ ಆಯ್ಕೆಯೂ ಸ್ವತಃ ನನ್ನ ಪ್ರತಿಫಲವಾಗಿದೆ. ನನ್ನ ನಿರ್ಧಾರವು ಯಾರಿಗೂ ನೋವು ತರುವುದಿಲ್ಲವೆಂದು ಭಾವಿಸುತ್ತೇನೆ. ತೀರ್ಪುಗಾರರು ಮತ್ತು ರಾಜ್ಯ ಸರ್ಕಾರಕ್ಕೆ ನಾನು ಕ್ಷಮೆಯಾಚಿಸುತ್ತೇನೆ ಹಾಗೂ ನೀವು ನನ್ನ ಆಯ್ಕೆಯನ್ನು ಗೌರವಿಸುತ್ತೀರಿ ಮತ್ತು ನಾನು ಆಯ್ಕೆಯನ್ನು ಬೆಂಬಲಿಸುತ್ತೀರಿ ಎಂದು ನಾನು ನಂಬುತ್ತೇನೆ.

ಮತ್ತೊಮ್ಮೆ, ನನ್ನ ಕೆಲಸವನ್ನು ಗುರುತಿಸಿ ಈ ಪ್ರಶಸ್ತಿಗೆ ಪರಿಗಣಿಸಿದ್ದಕ್ಕಾಗಿ ತೀರ್ಪುಗಾರರು ಮತ್ತು ರಾಜ್ಯ ಸರ್ಕಾರಕ್ಕೆ ನಾನು ಧನ್ಯವಾದಗಳನ್ನು ಅರ್ಪಿಸುತ್ತೇನೆ.
- ಕಿಚ್ಚ ಸುದೀಪ​

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment
Advertisment
Advertisment