ಲಾಯರ್​​ ಜಗದೀಶ್​​​ಗೆ ‘LOVE YOU SIR’ ಎಂದ ಕಿಚ್ಚ ಸುದೀಪ್​​.. ಅಸಲಿಗೆ ನಡೆದಿದ್ದೇನು?

author-image
Ganesh Nachikethu
ಲಾಯರ್​​ ಜಗದೀಶ್​​​ಗೆ ‘LOVE YOU SIR’ ಎಂದ ಕಿಚ್ಚ ಸುದೀಪ್​​.. ಅಸಲಿಗೆ ನಡೆದಿದ್ದೇನು?
Advertisment
  • ಬಿಗ್‌ಬಾಸ್ ಕನ್ನಡ ಸೀಸನ್‌ ಆರಂಭವಾಗಿ ಬರೋಬ್ಬರಿ 1 ವಾರ
  • ಕಿಚ್ಚನ ಜೊತೆ ವಾರದ ಕಥೆಯಲ್ಲಿ ಲಾಯರ್​​ ಜಗದೀಶ್​​ಗೆ​ ಕ್ಲಾಸ್​!
  • ಲಾಯರ್​ ಜಗದೀಶ್​ಗೆ ಬಿಗ್​ಬಾಸ್​ ಬಗ್ಗೆ ಅರ್ಥ ಮಾಡಿಸಿದ ಕಿಚ್ಚ

ಬಹುನಿರೀಕ್ಷಿತ ಬಿಗ್‌ಬಾಸ್ ಕನ್ನಡ ಸೀಸನ್‌ ಆರಂಭವಾಗಿ ಬರೋಬ್ಬರಿ 1 ವಾರ ಕಳೆದಿದೆ. ಇತ್ತೀಚೆಗೆ ಶನಿವಾರ ನಡೆದ ಕಿಚ್ಚನ ಜೊತೆ ವಾರದ ಕಥೆ ಕಾರ್ಯಕ್ರಮದಲ್ಲಿ ಲಾಯರ್​​ ಜಗದೀಶ್​ ಅವರಿಗೆ ಸರಿಯಾಗಿ ಕ್ಲಾಸ್​ ತೆಗೆದುಕೊಳ್ಳಲಾಗಿದೆ. ಇಡೀ ವಾರ ಬಿಗ್​​ಬಾಸ್​ ಮನೆಯಲ್ಲಿ ಕಿರುಚಾಡಿದ್ದ ಲಾಯರ್​​ ಜಗದೀಶ್​ ಅವರ ಕುರಿತು ಕಿಚ್ಚ ಸುದೀಪ್​ ಇಂಚಿಂಚೂ ಮಾಹಿತಿ ಪಡೆದರು.

ಇಷ್ಟೇ ಅಲ್ಲ ಎಲ್ಲಾ ಮಾಹಿತಿ ಪಡೆದ ಮೇಲೆ ಅವರದ್ದೇ ಶೈಲಿಯಲ್ಲಿ ಬಿಗ್​ಬಾಸ್​ ಕುರಿತು ಜದೀಶ್​ ಅವರಿಗೆ ಕಿಚ್ಚ ಸುದೀಪ್​ ಅವರು ಅರ್ಥ ಮಾಡಿಸಿದ್ರು. ಈ ಸಂದರ್ಭದಲ್ಲಿ ನಾನು ಬೇಕಂತಲೇ ಹಾಗೇ ಮಾಡಿದ್ದು. ಎಲ್ಲರೂ ಮುಖವಾಡ ಹಾಕಿಕೊಂಡು ಗೇಮ್​ ಆಡುತ್ತಿದ್ದಾರೆ. ನನಗೆ ಇದೆಲ್ಲೋ ಸ್ಕ್ರಿಪ್ಟೆಡ್​ ಅಂದು ಅನಿಸಿದ್ದು ನಿಜ. ಹಾಗಾಗಿ ಹೀಗೆ ಮಾತಾಡಿದ್ದೆ ಕ್ಷಮಿಸಿ ಎಂದು ಜಗದೀಶ್​ ತಪ್ಪೊಪ್ಪಿಕೊಂಡರು.

ಮನೆಯಲ್ಲಿ ಒಂದು ವಾರ ಬಿಗ್​ಬಾಸ್​ ರೂಲ್ಸ್​​ ವೈಲೇಟ್​ ಮಾಡಿದ್ದರ ಜತೆಗೆ ಕೆಟ್ಟ ಪದ ಬಳಸಿದ ಬಗ್ಗೆ ಕೂಡ ಲಾಯರ್​ ಜಗದೀಶ್​ ಅವರಿಗೆ ಸುದೀಪ್​​​ ಚೆನ್ನಾಗಿ ಕ್ಲಾಸ್​ ತೆಗೆದುಕೊಂಡರು.

ಸುದೀಪ್​ ಏನಂದ್ರು?

ನಾನು ಕಾನೂನು ಗೌರವಿಸುತ್ತೇನೆ. ದೇಶದ ಕಾನೂನು ಪಾಲಿಸುತ್ತೇನೆ. ಮುಂದೆ ಸಿಎಂ ಆಗಬೇಕು ಎನ್ನುತ್ತೀರಿ. ಬಿಗ್​ಬಾಸ್​ ನಿಯಮ ಏಕೆ ಉಲ್ಲಂಘಿಸುತ್ತೀರಿ. ಅದು ಕೂಡ ಒಂದು ಕಾನೂನು. ನೀವು ಅದು ಫಾಲೋ ಮಾಡಬೇಕು ಎಂದರು ಸುದೀಪ್​​.
ಲವ್ಯೂ ಜಗದೀಶ್​ ಸಾರ್​ ಎಂದ ಸುದೀಪ್​​.

ಕ್ಲಾಸ್​ ತೆಗೆದುಕೊಂಡ ಬಳಿಕ ಕೊನೆಗೆ ನಿಮ್ಮನ್ನು ಕಂಡ್ರೆ ಇಡೀ ಮನೆಗೆ ಗೌರವ ಇದೆ. ನನಗೆ ನಿಮ್ಮ ಮೇಲೆ ಅಷ್ಟೇ ಪ್ರೀತಿ ಗೌರವ ಇದೆ. ವಿ ಲವ್ಯೂ ಸಾರ್​​ ಎಂದು ಜಗದೀಶ್​ ಅವರಿಗೆ ಕಿಚ್ಚ ಸುದೀಪ್​​ ಕೊನೆಗೆ ಹೇಳಿದ್ರು. ಹಾರ್ಟ್​​ ತೋರಿಸಿ ಲವ್ಯೂ ಎಂದಿದ್ದ ಸುದೀಪ್​ ಅವರ ನಡೆಗೆ ಭಾರೀ ಮೆಚ್ಚುಗೆ ವ್ಯಕ್ತವಾಗಿದೆ.

ಇದನ್ನೂ ಓದಿ:ಬಿಗ್​ಬಾಸ್​ ಮನೆಯಲ್ಲಿ ಬಿಗ್​ ಟ್ವಿಸ್ಟ್​; ಸ್ವರ್ಗದಲ್ಲಿ ಇರೋ ಜಗದೀಶ್​ ನೇರವಾಗಿ ನರಕಕ್ಕೆ ಎಂಟ್ರಿ!

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment