/newsfirstlive-kannada/media/post_attachments/wp-content/uploads/2024/10/SUDEEP.jpg)
ಕನ್ನಡದ ಬಿಗ್ ರಿಯಾಲಿಟಿ ಶೋ ಬಿಗ್‌ಬಾಸ್ ಸೀಸನ್ 11ರಲ್ಲಿ ದಿನದಿಂದ ದಿನಕ್ಕೆ ಬದಲಾವಣೆಗಳು ಕಾಣುತ್ತಿವೆ. ಸೀಸನ್ 1ರಿಂದ 10ರವೆರೆಗೂ ಕಿಚ್ಚ ಸುದೀಪ್ ಅವರ ಸಾರಥ್ಯದಲ್ಲಿ ಬಿಗ್‌ಬಾಸ್ ಮೂಡಿ ಬರುತ್ತಿತ್ತು. ಆದ್ರೆ, ತಾಯಿಯ ಅಗಲಿಕೆಯ ದುಃಖದಲ್ಲಿರೋ ಕಿಚ್ಚ ಈ ವಾರ ಬಿಗ್‌ಬಾಸ್ ಶೋ ಹೋಸ್ಟ್ ಮಾಡ್ತಿಲ್ಲ. ಹಾಗಾದ್ರೆ ಯಾರು ನಿರೂಪಣೆ ಮಾಡ್ತಾರೆ? ಇಲ್ಲಿದೆ ಡಿಟೇಲ್ಸ್.
ಬಿಗ್‌ಬಾಸ್ ಇದು ತಮಾಷೆನೇ ಅಲ್ಲ. ಬಿಗ್‌ಬಾಸ್ ಅಂದ್ರೆ ಕಿಚ್ಚ ಸುದೀಪ್. ಸುದೀಪ್ ಅಂದ್ರೆ ಬಿಗ್‌ಬಾಸ್ ಅನ್ನೋ ಮಾತುಗಳು ವೀಕ್ಷಕರಲ್ಲಿ ಚಾಲ್ತಿಯಲ್ಲಿದೆ. ವಾರ ಪೂರ್ತಿ ಬರೋ ಬಿಗ್‌ಬಾಸ್‌ನ ನೋಡ್ತಾರೋ ಇಲ್ವೋ ಗೊತ್ತಿಲ್ಲ. ಆದ್ರೆ.. ಶನಿವಾರ-ಭಾನುವಾರ ವಾರದ ಕಥೆ ಕಿಚ್ಚನ ಜೊತೆ ಫ್ರೋಗ್ರಾಂ ಮಿಸ್ಸೇ ಆಗಲ್ಲ. ಆದ್ರೀಗ ಈ ವೀಕೆಂಡ್‌ನಲ್ಲಿ ಕಿಚ್ಚ ಇರಲ್ಲ.
ಯೋಗರಾಜ್ ಭಟ್ ಅಥವಾ ಸೃಜನ್ ಲೋಕೇಶ್!
ಬಿಗ್‌ಬಾಸ್ 1ರಿಂದ ಶುರುವಾಗಿ ಬಿಗ್‌ಬಾಸ್ 11ಕ್ಕೆ ಕಾಲಿಟ್ಟಿದೆ. ಶುರುವಾಗಿನಿಂದ ಹಿಡಿದು ಸತತ 11 ವರ್ಷಗಳ ಕಾಲ ನಿರೂಪಣೆ ಮಾಡ್ಕೊಂಡು ಬಂದಿರೋದು ಕಿಚ್ಚ ಸುದೀಪ್.. ಅದೆಷ್ಟೋ ಪರಿಪೂರ್ಣ ಕಾರ್ಯಕ್ರಮ ನಡೆಸಿಕೊಂಡು ಬರ್ತಾರೆ ಅಂದ್ರೆ ಫ್ಯಾನ್ಸ್‌ಗೆ ಚಾನಲ್ ಚೇಂಜ್ ಮಾಡೋಕೆ ಮನಸ್ಸು ಬರಲ್ಲ. ಆದ್ರೀಗ ಈ ವಾರ ಕಿಚ್ಚ, ವಾರದ ಕಥೆ ಕಿಚ್ಚನ ಜೊತೆ. ಸೂಪರ್ ಸಂಡೇ ವಿತ್ ಸುದೀಪ ಕಾರ್ಯಕ್ರಮದ ಹೋಸ್ಟ್ ಮಾಡ್ತಿಲ್ಲ.
ಇದನ್ನೂ ಓದಿ: BBK11: ಅಮ್ಮನ ಅಗಲಿಕೆಯಿಂದ ಬಿಗ್ಬಾಸ್ಗೆ ಕಿಚ್ಚ ಸುದೀಪ್ ಗೈರು; ವೀಕೆಂಡ್ ಶೋ ಸಾರಥಿ ಯಾರು ?
ಇದೇ ಮೊಟ್ಟ ಮೊದಲ ಬಾರಿಗೆ ಬಿಗ್‌ಬಾಸ್ ಸೀಸನ್ 11ರಲ್ಲಿ ಇಬ್ಬರು ಶೋ ನಿರೂಪಣೆ ಮಾಡಲಿದ್ದಾರೆ. ಪ್ರತಿ ವಿಕೇಂಡ್ನಲ್ಲೂ ಬಿಗ್‌ಬಾಸ್ ಶೋ ನಡೆಸಿಕೊಡಲು ಕಿಚ್ಚ ಸುದೀಪ್ ಅವರು ಬರುತ್ತಿದ್ದರು. ಆದ್ರೆ, ಇತ್ತೀಚಿಗಷ್ಟೇ ತಾಯಿಯನ್ನ ಕಳೆದುಕೊಂಡಿರೋ ಕಿಚ್ಚ. ಇದೇ ನೋವಲ್ಲಿದ್ದಾರೆ. ಹೀಗಾಗಿ ಎರಡು ದಿನದ ಬಿಗ್‌ಬಾಸ್‌ನ ಯೋಗರಾಜ್ ಭಟ್. ಸೃಜನ್ ಲೋಕೇಶ್ ಹೋಸ್ಟ್ ಮಾಡ್ತಾರೆ ಎಂಬ ಮಾಹಿತಿ ಲಭ್ಯವಾಗಿದೆ.
ಶನಿವಾರದ ಎಪಿಸೋಡ್‌ನ ನಿರ್ದೇಶಕ ಯೋಗರಾಜ್ ಭಟ್ ನಡೆಸಿಕೊಡಲಿದ್ದಾರೆ. ಭಾನುವಾರದ ಎಪಿಸೋಡ್‌ನ್ನ ನಟ ಸೃಜನ್ ಲೋಕೇಶ್ ನಡೆಸಿಕೊಡಲಿದ್ದಾರೆ ಎಂದು ತಿಳಿದು ಬಂದಿದೆ. ಸದ್ಯ ಕಿಚ್ಚ ಸುದೀಪ್ ಅವರು ಅನುಪಸ್ಥಿತಿಯಲ್ಲಿ ಅವರ ಜಾಗಕ್ಕೆ ಈ ಇಬ್ಬರು ಸೆಲೆಬ್ರೆಟಿಗಳು ವೀಕೆಂಡ್ ಶೋ ನಡೆಸಿಕೊಡ್ತಿದ್ದಾರೆ. ಆದ್ರೂ ಕಿಚ್ಚ ಇದ್ರೆ ಬಿಗ್‌ಬಾಸ್ ಅನ್ನೋ ವೀಕ್ಷಕರ ರೆಸ್ಪಾನ್ಸ್ ಹೇಗಿರುತ್ತೆ ಅನ್ನೋದೇ ಸದ್ಯದ ಕುತೂಹಲ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ