/newsfirstlive-kannada/media/post_attachments/wp-content/uploads/2024/11/DNA-TEST.jpg)
ಅಲೆಕ್ಷ ಮತ್ತು ರೋಬ್ ಎಂಬ ಪತಿ ಪತ್ನಿಯರಿಗೆ ಒಟ್ಟು ಮೂವರು ಮಕ್ಕಳು. ಪತ್ನಿ ಅಲೆಕ್ಸಾ ಕಪ್ಪು ಬಣ್ಣದಿಂದ ಕೂಡಿದ್ದರೆ ಅವರ ಪತಿ ರೋಬ್ ಶ್ವೇತ ವರ್ಣದವರು. ಇವರಿಗಿರುವ ಮೂರು ಮಕ್ಕಳಲ್ಲಿ ಕೊನೆಯ ಮಗು ಪಡ್ಜ್ ಪಡ್ಜ್ ಶ್ವೇತವರ್ಣದಿಂದ ಕೂಡಿದ್ದ. ಟ್ರೋಲ್ ಮಾಡಲು ಇನ್ನೊಬ್ಬರ ಕಾಲು ಎಳೆಯಲೆಂದೇ ಜಗತ್ತಿನಲ್ಲಿ ಈಗ ಕೋಟ್ಯಾಂತರ ಟ್ರೋಲ್ ಪೇಜ್ಗಳಿವೆ. ಅಲೆಕ್ಷಳಿಗೂ ಕೂಡ ಇಂತಹುದೇ ಟ್ರೋಲರ್ಗಳ ಕಾಟ ಜೋರಾಗಿತ್ತು. ಶ್ವೇತವರ್ಣದ ಮಗುವನ್ನು ಕಂಡು ಟ್ರೋಲ್ಪೇಜ್ಗಳು ಹಲವು ಸಂಶಯವನ್ನು ಹಾಗೂ ಕೊಳಕು ಪ್ರತಿಕ್ರಿಯೆಯನ್ನು ನೀಡಿದ್ದವು. ಅಲೆಕ್ಷ ರೋಬ್ ನಡುವಿನ ಸಂಬಂಧವನ್ನೇ ಪ್ರಶ್ನಿಸುವಂತಹ ಲೇವಡಿಗಳು ಟ್ರೋಲರ್ಗಳಿಂದ ಹರಿದು ಬಂದಿದ್ದವು.
ಇದನ್ನೂ ಓದಿ:ನೋ ಸೆಕ್ಸ್, ನೋ ಚೈಲ್ಡ್ ಬರ್ತ್; ಟ್ರಂಪ್ ಗೆಲುವಿಗೆ ಪುರುಷರ ವಿರುದ್ಧ ಅಮೆರಿಕಾ ಮಹಿಳೆಯರ 4B ಸೇಡು; ಏನಿದು?
ಟೀಕೆಗಳು ಹಾಗೂ ಟ್ರೋಲ್ಗಳು ಅದು ಯಾವ ಮಟ್ಟಕ್ಕೆ ಹೋದವರು ಅಂದ್ರೆ ಅದಕ್ಕಾಗಿ ಅಲೆಕ್ಸಾ ಡಿಎನ್ಎ ಟೆಸ್ಟ್ವರೆಗೂ ಹೋಗಬೇಕಾದ ಪರಿಸ್ಥಿತಿ ಬಂತು. ಇದರ ಬಗ್ಗೆ ಖುದ್ದು ಅಲೆಕ್ಸಾ ಅವರೇ ಹೇಳಿಕೊಂಡಿದ್ದಾರೆ. ಸಾಮಾಜಿಕ ಜಾಲತಾಣಗಳಲ್ಲಿ ಬಂದ ಟೀಕೆಯನ್ನು ಕಂಡು ನಾವು ಡಿಎನ್ಎ ಟೆಸ್ಟ್ ಮಾಡಿಸಿಕೊಳ್ಳಲು ನಿರ್ಧರಿಸಿದೇವು. ಪಡ್ಜ್ ಪಡ್ಜ್ ಹುಟ್ಟಿದಾಗ ನಮ್ಮ ಇಬ್ಬರು ಮಕ್ಕಳಿಗಿಂತ ಬೇರೆಯದೇ ರೀತಿ ಕಾಣಿಸುತ್ತಿದ್ದ. ಇದು ಕೆಲವರಿಗೆ ಆಹಾರವಾಗಿತ್ತು. ಹೀಗಾಗಿಯೇ ನಾವು ಡಿಎನ್ಎ ಟೆಸ್ಟ್ ಮಾಡಿಸಿಕೊಂಡೆವು ಎಂದು ಅಲೆಕ್ಸಾ ಹೇಳಿದ್ದಾರೆ.
ಉಳಿದ ಇಬ್ಬರು ಮಕ್ಕಳಿಗಿಂತ ಈ ಮಗು ಭಿನ್ನವಾಗಿದ್ದ ಕಾರಣ ನಾನು ವರ್ಣಭೇದ ನೀತಿಯೂ ಯಾವ ಮಟ್ಟಿಗೆ ಇದೆ ಎಂಬುದನ್ನು ಕಣ್ಣಾರೆ ಕಾಣಬೇಕಾಯ್ತು. ಒಂದು ಮಗುವಿನ ತಾಯಿಯಾಗಿ ನಾನು ಪಡಬಾರದ ಪರಿಪಾಟಲು ಕಂಡಿದ್ದೇನೆ. ಈ ಮಗು ನಿಜವಾಗಿಯೂ ಯಾರದ್ದು ಎಂಬ ಕೊಳಕು ಟೀಕೆಗಳನ್ನು ಕೂಡ ನಾನು ಕೇಳಬೇಕಾಗಿ ಬಂತು ಹೀಗಾಗಿಯೇ ನಾವು ಡಿಎನ್ಎ ಟೆಸ್ಟ್ಗೆ ಮಾಡಿಸಿಕೊಳ್ಳಲು ನಿರ್ಧರಿಸಿದೇವು ಕೊನೆಗೆ ವರದಿಯಲ್ಲಿ ಪ್ಲಡ್ಜ್ ನಮ್ಮದೇ ಮಗು ಎಂಬುದು ಸಾಬೀತಾಯ್ತು. ಆದರೂ ಕೂಡ ಕೆಲವು ಕೀಳು ಟೀಕೆಗಳು ಇನ್ನೂ ನಿಂತಿಲ್ಲ. ಆದ್ರೆ ಒಂದಂತೂ ಸತ್ಯ. ಈ ಮಗು ನನ್ನದೇ ರಕ್ತ. ನನ್ನದೇ ಮಾಂಸದಿಂದ ಸೃಷ್ಟಿಯಾದ ಕೂಸು ಎಂದು ಹೇಳಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ