ದೇಹದ ಈ ಐದು ಭಾಗದಲ್ಲಿ ಸಮಸ್ಯೆ ಕಾಣಿಸಿಕೊಂಡ್ರೆ ನಿಮ್ಮ ಕಿಡ್ನಿ ಹಾಳಾಗಿದೆ ಎಂದರ್ಥ..!

author-image
Ganesh
Updated On
ದೇಹದ ಈ ಐದು ಭಾಗದಲ್ಲಿ ಸಮಸ್ಯೆ ಕಾಣಿಸಿಕೊಂಡ್ರೆ ನಿಮ್ಮ ಕಿಡ್ನಿ ಹಾಳಾಗಿದೆ ಎಂದರ್ಥ..!
Advertisment
  • ಕಿಡ್ನಿಗೆ ಸಮಸ್ಯೆ ಆದಾಗ ದೇಹಕ್ಕೆ ಹೇಗೆಲ್ಲ ಸೂಚನೆ ಕೊಡುತ್ತೆ..?
  • ಕೆಟ್ಟ ಆಹಾರ ಪದ್ದತಿ, ಜೀವನಶೈಲಿಯೇ ಕಿಡ್ನಿ ಸಮಸ್ಯೆಗೆ ಕಾರಣ
  • ಕಿಡ್ನಿಗೆ ಹಾನಿ ಆದಾಗ ಎಲ್ಲೆಲ್ಲಿ ಊತ ಕಂಡುಬರುತ್ತದೆ..?

ಮೂತ್ರಪಿಂಡಗಳು (Kdney) ಆರೋಗ್ಯವಾಗಿರಬೇಕು. ಸ್ವಲ್ಪ ಹೆಚ್ಚು-ಕಡಿಮೆಯಾದರೂ ಅದು ಕೆಟ್ಟ ಪರಿಣಾಮ ಬೀರುತ್ತದೆ. ಇಡೀ ದೇಹದ ಸ್ಥಿತಿ ಹದಗೆಡುತ್ತದೆ. ಕಿಡ್ನಿಗಳು ಸರಿಯಾಗಿ ಕಾರ್ಯನಿರ್ವಹಿಸದಿದ್ರೆ ಪ್ರಮುಖ ಅಂಗಗಳ ಮೇಲೂ ಪರಿಣಾಮ ಬೀರುತ್ತದೆ.

ಇತ್ತೀಚಿನ ದಿನಗಳಲ್ಲಿ ಕಿಡ್ನಿ ಸಮಸ್ಯೆಗೆ ಪ್ರಮುಖ ಕಾರಣ ಕೆಟ್ಟ ಆಹಾರ ಪದ್ಧತಿ ಮತ್ತು ಜೀವನಶೈಲಿ ಆಗಿದೆ. ಮೂತ್ರಪಿಂಡಕ್ಕೆ ಸಮಸ್ಯೆಯಾದಾಗ ದೇಹವು ಅನೇಕ ರೀತಿಯ ಸಂಕೇತಗಳನ್ನು ನೀಡುತ್ತದೆ. ಇದನ್ನು ಸರಿಯಾದ ಸಮಯದಲ್ಲಿ ಅರ್ಥಮಾಡಿಕೊಂಡರೆ ದೊಡ್ಡ ಅಪಾಯದಿಂದ ಪಾರಾಗಬಹುದು.

ಕಾಲುಗಳಲ್ಲಿ ಊತ

ಪಾದಗಳು ಅಥವಾ ಮೊಣಕಾಲುಗಳಲ್ಲಿ ಊತವಿದ್ದರೆ ಅದು ಮೂತ್ರಪಿಂಡದ ಸಮಸ್ಯೆ ಆಗಿರುವ ಸಾಧ್ಯತೆ ಹೆಚ್ಚಿರುತ್ತದೆ. ಕಿಡ್ನಿಗಳು ಸರಿಯಾಗಿ ಕೆಲಸ ಮಾಡದಿದ್ದಾಗ ಕಾಲುಗಳಲ್ಲಿ ಲಿಕ್ವಿಡ್ ಸಂಗ್ರಹ ಆಗಲು ಶುರುವಾಗುತ್ತದೆ. ಕಾರಣವಿಲ್ಲದೇ ಪಾದಗಳಲ್ಲಿ ಊತವಿದ್ದರೆ ಕೂಡಲೇ ಎಚ್ಚೆತ್ತುಕೊಳ್ಳಬೇಕು.

ಇದನ್ನೂ ಓದಿ: ಮುಟ್ಟು ಆಗಿದ್ದಕ್ಕೆ ವಿದ್ಯಾರ್ಥಿನಿಯನ್ನ ಕ್ಲಾಸ್ ರೂಂ ಹೊರಗೆ ಕೂರಿಸಿ ಪರೀಕ್ಷೆ ಬರೆಸಿದ ಶಾಲೆ..!

publive-image

ಮುಖದ ಮೇಲೆ ಊತ

ಮೂತ್ರಪಿಂಡವು ಹಾನಿಗೊಳಗಾದಾಗ ಮುಖವೂ ಊದಿಕೊಳ್ಳಲು ಪ್ರಾರಂಭಿಸುತ್ತದೆ. ಈ ರೋಗಲಕ್ಷಣವನ್ನು ನಿರ್ಲಕ್ಷಿಸಬಾರದು. ಇನ್ನು ಅನೇಕ ಕಾರಣಗಳಿಂದ ಮುಖ ಊದಿಕೊಳ್ಳುತ್ತದೆ. ನಿಜ, ಕಾರಣ ತಿಳಿಯಲು ವೈದ್ಯರ ಭೇಟಿ ಮಾಡಬೇಕು.

ಕೈಗಳಲ್ಲಿ ಊತ

ಕೈಗಳಲ್ಲಿ ಊತ ಮತ್ತು ಬೆರಳುಗಳಲ್ಲಿ ಆಗಾಗ್ಗೆ ನೋವು ಬರುತ್ತಿದ್ದರೆ ಅದೂ ಕೂಡ ಕಿಡ್ನಿ ಸಮಸ್ಯೆ ಆಗಿರುವ ಸಾಧ್ಯತೆ ಹೆಚ್ಚಿರುತ್ತದೆ. ಬೆರಳುಗಳಲ್ಲಿ ಊತ ಕಂಡುಬಂದರೆ ತಕ್ಷಣ ವೈದ್ಯರ ಬಳಿಗೆ ಬರಬೇಕು.

ಹೊಟ್ಟೆ ಉಬ್ಬರ

ಹೊಟ್ಟೆಯಲ್ಲಿ ಊತ ಉಂಟಾಗಬಹುದು. ದೀರ್ಘಕಾಲದವರೆಗೆ ಹೊಟ್ಟೆಯ ಒಂದು ಬದಿಯಲ್ಲಿ ಊತ ಮತ್ತು ನೋವಿದ್ದರೆ ಆದಷ್ಟು ಬೇಗ ವೈದ್ಯರ ಸಂಪರ್ಕಿಸಬೇಕು.

ಕಣ್ಣುಗಳ ಊತ

ಕಣ್ಣುಗಳ ಊತಕ್ಕೆ ಇದೊಂದೇ ಕಾರಣವಲ್ಲ. ಹಲವು ಕಾರಣಗಳಿರಬಹುದು. ಆದರೆ ಕಣ್ಣುಗಳ ಸುತ್ತ ಆಗಾಗ ಊತ ಬರುತ್ತಿದ್ದರೆ ನಿರ್ಲಕ್ಷಿಸಬಾರದು. ಮೂತ್ರಪಿಂಡದ ಸಮಸ್ಯೆಗಳಿಂದಾಗಿ ಕಣ್ಣುಗಳ ಕೆಳಗೆ ಊತದ ಸಮಸ್ಯೆ ಆಗುತ್ತದೆ.

ಇದನ್ನೂ ಓದಿ: ಮಿನರಲ್ ವಾಟರ್ ಕುಡಿಯುವವರೇ ಎಚ್ಚರ.. ರಾಜ್ಯದ ಪ್ರತಿಯೊಬ್ಬರು ಓದಲೇಬೇಕಾದ ಸ್ಟೋರಿ!

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment