/newsfirstlive-kannada/media/post_attachments/wp-content/uploads/2024/04/heat-wave3.jpg)
ಬೆಂಗಳೂರು: ಸಿಲಿಕಾನ್ ಸಿಟಿ ಜನರೇ ಎಚ್ಚರ ಎಚ್ಚರ.. ಏಕೆಂದರೆ ಇನ್ಮುಂದೆ ಬಿಸಿಲಿನ ಶಾಖ ದಿನದಿಂದ ದಿನಕ್ಕೆ ಹೆಚ್ಚಾಗುತ್ತಲೇ ಇರುತ್ತದೆ. ಹೀಗೆ ಬಿಸಿಲು ಹೆಚ್ಚಾಗುತ್ತಿದ್ದಂತೆ ನಗರದಲ್ಲಿ ಕಿಡ್ನಿ ಸ್ಟೋನ್ ಪ್ರಕರಣಗಳು ಜಾಸ್ತಿಯಾಗುತ್ತಿವೆ. ಮುಂಜಾನೆ 8 ಗಂಟೆಯಿಂದಲೇ ಬಿಸಿಲು ಬೆಂಗಳೂರು ನಗರ ಸುಟ್ಟು ಕಾದ ಕಾವಲಿಯಂತಾಗಿದೆ. ಇವತ್ತಷ್ಟೇ ಅಲ್ಲ ಮುಂದಿನ 7 ದಿನಗಳಲ್ಲಿ ಸೂರ್ಯ ಮತ್ತಷ್ಟು ನಿಮ್ಮನ್ನು ಸುಡಲಿದ್ದಾನೆ. ಭಾರತೀಯ ಹವಾಮಾನ ಇಲಾಖೆ ಈ ಬಗ್ಗೆ ಮಹತ್ವದ ಮಾಹಿತಿ ನೀಡಿ ಸಾಮಾನ್ಯ ಜನರನ್ನು ಎಚ್ಚರಿಸಿದೆ.
ಇದನ್ನೂ ಓದಿ: ಹೆಚ್ಚು ಸದ್ದು-ಗದ್ದಲ ಇಲ್ಲದೇ ದುಬಾರಿ ಟ್ರಾಫಿಕ್ ರೂಲ್ಸ್ ಜಾರಿ; ಮೊದಲಿಗಿಂತ 10 ಪಟ್ಟು ದಂಡ ಬೀಳಲಿದೆ..!
ಒಂದು ಕಡೆ ಬಿಸಿಲಿನ ತಾಪಮಾನ ಹೆಚ್ಚಾಗುತ್ತಿದೆ, ಮತ್ತೊಂದು ಕಡೆ ಬೇಸಿಗೆಯಲ್ಲಿ ಸಿಟಿ ಜನರಿಗೆ ಕಿಡ್ನಿ ಸಮಸ್ಯೆಯಿಂದ ಬಳಲುವಂತೆ ಆಗಿದೆ. ನೀರಿನಾಂಶ ಕಡಿಮೆಯಾಗಿ ಕಿಡ್ನಿ ಪ್ರಾಬ್ಲಂ. ಜಂಕ್ ಫುಡ್ ದಾಸರಾದವರಲ್ಲಿ ಕಿಡ್ನಿ ಸಮಸ್ಯೆ ಶುರುವಾಗುತ್ತಿದೆ. ಈ ಹಿಂದೆ ದೊಡ್ಡವರಲ್ಲಿ ಕಾಣಿಸಿಕೊಳ್ಳುತ್ತಿದ್ದ ಕಿಡ್ನಿ ಸ್ಟೋನ್ ಪ್ರಕರಣಗಳು ಇದೀಗ ಮಕ್ಕಳಲ್ಲೂ ಪತ್ತೆಯಾಗುತ್ತಿದೆ.
ಹೀಗಾಗಿ ಮಕ್ಕಳ ತಜ್ಞರು ಆತಂಕ ಹೊರ ಹಾಕುತ್ತಿದ್ದಾರೆ. ಹೊಟ್ಟೆ ನೋವಿನಿಂದ ಬರುವ ಮಕ್ಕಳಿಗೆ ಕಿಡ್ನಿ ಸ್ಟೋನ್ ಪತ್ತೆಯಾಗುತ್ತಿದೆ. ಜೆನೆಟಿಕ್, ಹೈ ಸೋಡಿಯಂ ಇನ್ ಟೇಕ್, ಡಿ ಹೈಡ್ರೇಷನ್ನಿಂದ ಮಕ್ಕಳಲ್ಲೂ ಕಿಡ್ನಿ ಸಮಸ್ಯೆ ಕಾಣಿಸಿಕೊಳ್ಳುತ್ತಿದೆ. ಇದೇ ಮೊದಲ ಬಾರಿಗೆ ಬೆಂಗಳೂರಿನಲ್ಲಿ ಮಕ್ಕಳಲ್ಲಿ ಕಿಡ್ನಿ ಸ್ಟೋನ್ ಪತ್ತೆಯಾಗಿದೆ. 5 ವರ್ಷಗಳ ಹಿಂದೆ ವಾರದಲ್ಲಿ ದಿನಕ್ಕೆ 4 ರಿಂದ 5 ಪ್ರಕರಣಗಳು ಬೆಳಕಿಗೆ ಒಂದಿತ್ತು. ಆದ್ರೆ ಈಗ 10ಕ್ಕೆ ಪ್ರಕರಣಗಳು ಏರಿಕೆ ಕಂಡಿವೆ. ಅದರಲ್ಲೂ ವಾಂತಿ, ಹೊಟ್ಟೆ ನೋವು ಎಂದು ಬರುವ ಮಕ್ಕಳಿಗೆ ಅಲ್ಟ್ರಾಸೌಂಡ್ ಎಕ್ಸ್ ರೇ ಮಾಡಿದಾಗ ಕಿಡ್ನಿ ಸ್ಟೋನ್ ಪತ್ತೆಯಾಗಿದೆ. ಈಗೀನ ಲೈಫ್ ಸ್ಟೈಲ್ನಿಂದಲೂ ಕಿಡ್ನಿ ಸಮಸ್ಯೆ ಬರುವ ಆತಂಕ ಹೆಚ್ಚಾಗುತ್ತಿದೆ.
ಕಿಡ್ನಿ ಸ್ಟೋನ್ ಲಕ್ಷಣಗಳೇನು?
ದೇಹದಲ್ಲಿ ಯೂರಿಕ್ ಆಸಿಡ್ ಜಾಸ್ತಿಯಾದಾಗ ಮೂತ್ರಪಿಂಡದಲ್ಲಿ ಕಲ್ಲುಗಳು ರೂಪಗೊಳ್ಳುತ್ತವೆ. ನಿಮ್ಮ ದೇಹದಲ್ಲಿ ಹೆಚ್ಚಿನ ಯೂರಿಕ್ ಆಮ್ಲವು ಸಣ್ಣ ಕಲ್ಲುಗಳ ರಚನೆಗೆ ಕಾರಣವಾಗುತ್ತದೆ. ಇದು ನೀವು ಮೂತ್ರ ವಿಸರ್ಜಿಸಿದಾಗ ತೀವ್ರವಾದ ನೋವನ್ನು ಉಂಟುಮಾಡಬಹುದು ಮತ್ತು ನಿಮ್ಮ ಮೂತ್ರದಲ್ಲಿ ರಕ್ತವನ್ನು ಉಂಟುಮಾಡಬಹುದು. ಕಿಡ್ನಿ ಸ್ಟೋನ್ ಬರೋದಕ್ಕೂ ಮುನ್ನ ಅಸ್ವಸ್ಥತೆಯಿಂದಾಗಿ ಕೆಲವರು ಹೊಟ್ಟೆಯಲ್ಲಿ ವಿಚಿತ್ರ ಅನುಭವಿಸಬಹುದು. ಅಥವಾ ವಾಂತಿ ಮಾಡಬಹುದು. ಒಬ್ಬ ವ್ಯಕ್ತಿಯು ಆಗಾಗ ಮೂತ್ರ ವಿಸರ್ಜಿಸಲು ಕಷ್ಟ ಅನುಭವಿಸಬಹುದು. ಮೂತ್ರ ವಿಸರ್ಜನೆಯ ಸಮಯದಲ್ಲಿ ಉರಿಯುತ ಅನುಭವಿಸುವುದು. ಇದೆಲ್ಲಾ ಕಿಡ್ನಿ ಸ್ಟೋನ್ ಬರುವ ಮುನ್ಸೂಚನೆಯಾಗಿದೆ. ಈ ಮೇಲಿನ ಲಕ್ಷಣಗಳು ಬಂದರೇ ಕೂಡಲೇ ವೈದ್ಯರನ್ನು ಸಂಪರ್ಕಿಸಬೇಕು.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ