/newsfirstlive-kannada/media/post_attachments/wp-content/uploads/2025/03/Dr-George-P-Abraham.jpg)
ಇಡೀ ದೇಶದಲ್ಲೇ ಮೂತ್ರಪಿಂಡ ಕಸಿಗೆ (kidney transplantation) ಖ್ಯಾತರಾಗಿದ್ದ ವೈದ್ಯ ಡಾ.ಜಾರ್ಜ್ ಪಿ. ಅಬ್ರಹಾಂ ಅವರ ದುರಂತ ಅಂತ್ಯ ಬೆಚ್ಚಿ ಬೀಳಿಸಿದೆ. ಹೆಸರಾಂತ ನೆಫ್ರಾಲಜಿಸ್ಟ್ ಕೇರಳದ ಫಾರ್ಮ್‌ಹೌಸ್‌ನಲ್ಲಿ ಸಾವಿಗೆ ಶರಣಾಗಿದ್ದಾರೆ. ಡಾ. ಜಾರ್ಜ್ ಪಿ. ಅಬ್ರಹಾಂ ಸಾವನ್ನಪ್ಪಿದ ಜಾಗದಲ್ಲಿ ಡೆತ್ ನೋಟ್ ಕೂಡ ಪತ್ತೆಯಾಗಿದೆ.
ಡಾ. ಜಾರ್ಜ್ ಪಿ. ಅಬ್ರಹಾಂ ಮೂತ್ರಪಿಂಡ ಕಸಿಗೆ ಹೆಸರುವಾಸಿಯಾಗಿದ್ದರು. 74 ವರ್ಷ ವಯಸ್ಸಿನ ಈ ಖ್ಯಾತ ವೈದ್ಯ ತನ್ನ 25 ವರ್ಷದ ವೃತ್ತಿ ಜೀವನದಲ್ಲಿ ಬರೋಬ್ಬರಿ 25 ಸಾವಿರ ಮೂತ್ರಪಿಂಡ ಕಸಿ ಮಾಡಿದ್ದರು.
ಕಳೆದ ಮಾರ್ಚ್ 2ರಂದು ಕೇರಳ ಎರ್ನಾಕುಲಂನಲ್ಲಿರುವ ತನ್ನ ಫಾರ್ಮ್ ಹೌಸ್‌ಗೆ ತೆರಳಿದ ಡಾ. ಜಾರ್ಜ್ ಡೆತ್ ನೋಟ್ ಬರೆದಿಟ್ಟು ಸಾವಿಗೆ ಶರಣಾಗಿದ್ದಾರೆ. ಡೆತ್‌ನೋಟ್‌ನಲ್ಲಿ ತನ್ನ ಸಾವಿಗೆ ಕಾರಣವೇನು ಅನ್ನೋದನ್ನು ಡಾ.ಜಾರ್ಜ್ ಉಲ್ಲೇಖಿಸಿದ್ದಾರೆ.
6 ತಿಂಗಳ ಹಿಂದೆ ಡಾ. ಜಾರ್ಜ್ ಪಿ. ಅಬ್ರಹಾಂ ಅವರಿಗೆ ಬೆನ್ನು ನೋವಿನ ಹಿನ್ನೆಲೆಯಲ್ಲಿ ಶಸ್ತ್ರ ಚಿಕಿತ್ಸೆ ಮಾಡಲಾಗಿತ್ತು. ಆ ಶಸ್ತ್ರ ಚಿಕಿತ್ಸೆ ಬಳಿಕ ಇವರಿಗೆ ಕೈ ನಡುಗುವ ಸಮಸ್ಯೆಗಳು ಎದುರಾಗಿತ್ತು. ಈ ಹಿನ್ನೆಲೆಯಲ್ಲಿ ತಮ್ಮ ವೈದ್ಯಕೀಯ ವೃತ್ತಿಯನ್ನು ಅದೇ ಪ್ರಾವೀಣ್ಯತೆಯಿಂದ ಮುಂದುವರಿಸಲು ಸಾಧ್ಯವಾಗುತ್ತಿರಲಿಲ್ಲ. ತನ್ನ ಕೈ ನಡುಗುವ ಸ್ಥಿತಿಗೆ ತಲುಪಿದ್ದರಿಂದ ವೃತ್ತಿ ಜೀವನದಲ್ಲಿ ಮುಂದುವರಿಯಲು ಕಷ್ಟಪಡುತ್ತಿದ್ದೇನೆ. ಹೀಗಾಗಿ ಸಾವಿಗೆ ಶರಣಾಗಿರುವುದಾಗಿ ಡೆತ್‌ನೋಟ್‌ನಲ್ಲಿ ಬರೆದಿಟ್ಟಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us