ನಮ್ಮೂರಿಗೆ ಬನ್ನಿ, ನಾ ಹೇಳಿದಂತೆ ಪ್ರವಾಸ ಮಾಡಿ.. ವಿದೇಶಿ ಟೂರಿಸ್ಟ್​ಗಳಿಗೆ ಗುಡ್​ನ್ಯೂಸ್ ಜತೆ ಕಿಮ್​ನ ಷರತ್ತು!

author-image
Bheemappa
Updated On
ನಮ್ಮೂರಿಗೆ ಬನ್ನಿ, ನಾ ಹೇಳಿದಂತೆ ಪ್ರವಾಸ ಮಾಡಿ.. ವಿದೇಶಿ ಟೂರಿಸ್ಟ್​ಗಳಿಗೆ ಗುಡ್​ನ್ಯೂಸ್ ಜತೆ ಕಿಮ್​ನ ಷರತ್ತು!
Advertisment
  • ಎಷ್ಟು ವರ್ಷಗಳ ಬಳಿಕ ಪ್ರವಾಸಿಗರಿಗೆ ಬಾಗಿಲು ತೆರೆದಿದೆ ಉ.ಕೊರಿಯಾ?
  • ನಮ್ಮೂರಿಗೆ ಬನ್ನಿ.. ಬನ್ನಿ.. ಎನ್ನುತ್ತಿರುವ ಅಧ್ಯಕ್ಷ ಕಿಮ್ ಜಾಂಗ್ ಉನ್
  • ನಾನು ಹೇಳಿದಂತೆ ಪ್ರವಾಸ ಮಾಡಿ ಎಂದ ಉತ್ತರ ಕೊರಿಯಾ ಅಧ್ಯಕ್ಷ

ಕಿಮ್ ಜಾಂಗ್ ಉನ್​ನ ಕೆಲವೊಂದು ನೀತಿಗಳು ನಿಜಕ್ಕೂ ಬೆಚ್ಚಿ ಬೀಳಿಸುವಂತಿರುತ್ತವೆ. ಈ ದೇಶದಲ್ಲಿ ಕಿಮ್ ಆಡಿದ್ದೇ ವೇದ ವಾಕ್ಯ, ಆತ ಮಾಡಿದ್ದೇ ಕಾನೂನು. ಸರ್ವಾಧಿಕಾರಿ ಅಧ್ಯಕ್ಷನ ವಿರುದ್ಧ ಯಾರಾದರು ಮಾತನಾಡಿದರೆ, ಅವರ ಕತೆ ಮುಗೀತು ಎಂದೇ ಅರ್ಥ. ಉತ್ತರ ಕೊರಿಯಾದಲ್ಲಿ ಪ್ರವಾಸ ಮಾಡಿ ಎಂದು ವಿದೇಶಿ ಪ್ರವಾಸಿಗರಿಗೆ ಕಿಮ್ ಜಾಂಗ್ ಉನ್ ಇದೇ ಮೊದಲ ಬಾರಿಗೆ ಕರೆ ಕೊಟ್ಟಿದ್ದಾರೆ.

ಉತ್ತರ ಕೊರಿಯಾ.. ಈ ಹೆಸರು ಕೇಳಿದ್ರೆ ಸಾಕು ನೆನಪಾಗೋದು ಅಲ್ಲಿನ ಸರ್ವಾಧಿಕಾರಿ ಹುಚ್ಚು ರಾಜ ಕಿಮ್ ಜಾಂಗ್ ಉನ್. ಆತನ ಹುಚ್ಚುಚ್ಚು ಆದೇಶಗಳು, ಕಠೋರ ನೀತಿಗಳು, ಆಡಳಿತದಿಂದಲೇ ಉತ್ತರ ಕೊರಿಯಾ ಜಗತ್ತಿನಲ್ಲಿ ಕುಖ್ಯಾತಿ ಪಡೆದಿದೆ. ಇಲ್ಲಿ ಯಾರೂ ಈತನ ವಿರುದ್ಧ ಕಮಕ್​-ಕಿಮಕ್ ಅನ್ನಂಗಿಲ್ಲ. ಸದ್ಯ ಈ ದೊರೆ ಮತ್ತೆ ಸುದ್ದಿಯಲ್ಲಿದ್ದಾರೆ.

publive-image

ಕೊನೆಗೂ ವಿದೇಶಿಗರಿಗೆ ಬಾಗಿಲು ತೆರೆದ ಉತ್ತರ ಕೊರಿಯಾ

ಅಂದಾಗೆ ಉತ್ತರ ಕೊರಿಯಾದ ಆಡಳಿತ ವ್ಯವಸ್ಥೆಯಲ್ಲಿ ಕಿಮ್ ತೆಗೆದುಕೊಂಡ ನಿರ್ಧಾರಗಳು ಅಚ್ಚರಿ ಹಾಗೂ ಭಯ ಹುಟ್ಟಿಸುತ್ತವೆ. ಅಲ್ಲಿನ ಪ್ರಜೆಗಳ ಮೇಲೆ ಕನಿಕರ ಉಂಟಾಗುತ್ತದೆ. ಇಲ್ಲಿಗೆ ಹೊರಗಿನವರು ಬರಂಗಿಲ್ಲ. ಇಂತ ಹಿನ್ನೆಲೆ ಹೊಂದಿರುವ ದೇಶ ಇಡೀ ಜಗತ್ತೇ ತಿರುಗಿ ನೋಡುವಂತ ಆದೇಶ ಹೊರಡಿಸಿದೆ. 5 ವರ್ಷಗಳ ನಂತರ ಇದೇ ಮೊದಲ ಬಾರಿಗೆ ವಿದೇಶಿ ಪ್ರವಾಸಿಗರಿಗೆ ನಮ್ಮ ದೇಶಕ್ಕೆ ಬನ್ನಿ ಅಂತ ಬಾಗಿಲು ತೆರೆದಿದೆ. ನಮ್ಮ ದೇಶದಲ್ಲಿ ಪ್ರವಾಸ ಮಾಡಿ ಅಂತ ಹೇಳ್ತಿದೆ. ಆದ್ರೆ ಅದಕ್ಕೆ ಷರತ್ತುಗಳಿವೆ.

ಉತ್ತರ ಕೊರಿಯಾ ಪ್ರವಾಸಕ್ಕೆ ಷರತ್ತು!

ಪ್ರವಾಸೋದ್ಯಮ ಇಲ್ಲದೇ ದೇಶದ ಆರ್ಥಿಕ ಪರಿಸ್ಥಿತಿ ಕುಂಠಿತಗೊಂಡಿದೆ. ಇದರಿಂದ ಅಭಿವೃದ್ಧಿ ಕಾರ್ಯಗಳು ಸಾಧ್ಯವಾಗುತ್ತಿಲ್ಲ. ಜನಜೀವನ ಮಟ್ಟ ಸುಧಾರಿಸುವುದು ಕಷ್ಟ ಎನ್ನುವಂತಾಗಿದೆ. ಕುಸಿದಿರುವ ಆರ್ಥಿಕ ಪರಿಸ್ಥಿತಿ ಪುನರುಜ್ಜೀವನಗೊಳಿಸಲು ಸರ್ವಾಧಿಕಾರಿ ದೇಶಕ್ಕೆ ಈಗ ವಿದೇಶಿ ಕರೆನ್ಸಿಯ ಅಗತ್ಯವಿದೆ. ಆ ಪ್ರಯತ್ನದಲ್ಲಿ ವಿದೇಶಿ ಪ್ರವಾಸಿಗರಿಗೆ ಪ್ರವಾಸ ಕೈಗೊಳ್ಳಲು ಆಹ್ವಾನ ನೀಡಲಾಗಿದೆ.

ಇದನ್ನೂ ಓದಿ:ಹೋಳಿ ಹಬ್ಬಕ್ಕೆ ಕೌಂಟ್​ಡೌನ್.. ವಿಶೇಷ ಹಲಗೆಮೇಳಕ್ಕೆ ಸಿಲಿಕಾನ್ ಸಿಟಿಯಲ್ಲಿ‌ ವೈಭವದ ಚಾಲನೆ

publive-image

ಈ ಕ್ರಮದಿಂದ ಪ್ರವಾಸೋದ್ಯಮ ಸುಧಾರಣೆ ಕಂಡು, ದೇಶದ ಆರ್ಥಿಕ ಪರಿಸ್ಥಿತಿಗೆ ಬೂಸ್ಟ್ ಸಿಗಲಿದೆ ಎಂಬ ಲೆಕ್ಕಾಚಾರ ಇದೆ. ಕೊರೊನಾ ಸಾಂಕ್ರಾಮಿಕ ರೋಗ 2020ರ ಸಂದರ್ಭದಲ್ಲಿ ದೇಶದ ಗಡಿ ಬಾಗಿಲು ಬಂದ್ ಆಗಿದ್ದು ಈಗ ಮತ್ತೆ ತೆರೆದುಕೊಂಡಿದೆ. ಪ್ರತಿ ಪ್ರವಾಸಿಗರು ಸ್ಥಳೀಯ ಮಾರ್ಗದರ್ಶಕರನ್ನು ನೇಮಿಸಿಕೊಂಡು ಪ್ರವಾಸ ಮಾಡಬೇಕು. ಸೂಕ್ಷ್ಮ ಸ್ಥಳಗಳಲ್ಲಿ ಫೋಟೊ, ವೀಡಿಯೋ ಚಿತ್ರೀಕರಿಸಲು ಅವಕಾಶ ಇರಲ್ಲ ಎಂದು ಸ್ಪಷ್ಟಪಡಿಸಿದೆ.

ಆರ್ಥಿಕ ಸಂಕಷ್ಟಕ್ಕೆ ಉತ್ತರ ಕೊರಿಯಾ ತತ್ತರಿಸಿದೆ. ಹೀಗಾಗಿ ನಮ್ಮ ದೇಶದಲ್ಲಿ ಪ್ರವಾಸ ಮಾಡಿ ಅಂತ ಕರೆಯುತ್ತಿದೆ. ಪ್ರವಾಸೋದ್ಯಮ ಉತ್ತೇಜಿಸಲು ಜೂನ್‌ನಲ್ಲಿ ಪೂರ್ವ ಕರಾವಳಿಯಲ್ಲಿ ಬೃಹತ್ ಪ್ರವಾಸೋದ್ಯಮ ತಾಣ ತೆರೆಯಲು ಕೂಡ ಯೋಜಿಸಿದೆ. ಯಾರಾದರೂ ಹೋಗುವವರು ಒಮ್ಮೆ ಪ್ರಯಾಣಿಸಿ. ಯಾವುದಕ್ಕೂ ಕೊಂಚ ಹುಷಾರ್​!.

ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment