newsfirstkannada.com

ಮೊದಲ ಅಗ್ನಿವೀರ್ ಹುತಾತ್ಮ.. ಸೈನಿಕನ ಕುಟುಂಬಕ್ಕೆ ಸಿಗೋ ಪರಿಹಾರದ ಹಣ ಎಷ್ಟು?

Share :

Published October 23, 2023 at 5:02pm

Update October 23, 2023 at 5:03pm

  ಸಿಯಾಚಿನ್‌ನಲ್ಲಿ ಹುತಾತ್ಮರಾದ ಮೊದಲ ಅಗ್ನಿವೀರ್ ಅಕ್ಷಯ್ ಗಾವಟೆ

  1 ಕೋಟಿ ರೂಪಾಯಿಗೂ ಅಧಿಕ ಪರಿಹಾರ ಸಿಗೋದು ಹೇಗೆ ಗೊತ್ತಾ?

  ರಾಹುಲ್ ಗಾಂಧಿ ಅವರ ಪರಿಹಾರದ ಪ್ರಶ್ನೆಗೆ ಅಮಿತ್ ಮಾಳವೀಯ ಸ್ಪಷ್ಟನೆ

ನವದೆಹಲಿ: ವಿಶ್ವದ ಅತಿ ಎತ್ತರದ ಯುದ್ಧಭೂಮಿ ಸಿಯಾಚಿನ್‌ನಲ್ಲಿ ಹುತಾತ್ಮರಾದ ಅಗ್ನಿವೀರ್ ಅಕ್ಷಯ್ ಗಾವಟೆ ಅವರ ಅಂತ್ಯಕ್ರಿಯೆ ನೆರವೇರಿದೆ. ಮಹಾರಾಷ್ಟ್ರದ ಬುಲ್ದಾನಾ ಜಿಲ್ಲೆಯ ಪೀಪಲ್ ಗಾವ್ ಸಾರಾಯಿ ಗ್ರಾಮದಲ್ಲಿ ಸಕಲ ಸೇನಾ ಗೌರವಗಳೊಂದಿಗೆ ಹುತಾತ್ಮ ಅಗ್ನಿವೀರ್ ಅಂತ್ಯಸಂಸ್ಕಾರ ನೆರವೇರಿಸಲಾಗಿದೆ. ಅಗ್ನಿವೀರ್ ಅಕ್ಷಯ್ ಲಕ್ಷ್ಮಣ್ ಗಾವಟೆ ಅವರು ಕಾಶ್ಮೀರದ ಸಿಯಾಚಿನ್ ನಿರ್ಗಲ್ಲಿನಲ್ಲಿ ಗಡಿ ಕಾಯುವಾಗ ಹುತಾತ್ಮರಾಗಿದ್ದಾರೆ. ದೇಶ ರಕ್ಷಣೆಯಲ್ಲಿ ಹುತಾತ್ಮನಾದ ಮೊದಲ ಅಗ್ನಿವೀರ್‌ ಸೈನಿಕ ಇವರಾಗಿದ್ದಾರೆ. ದೇಶದಲ್ಲಿ ಮೊದಲ ಅಗ್ನಿವೀರ್ ಹುತಾತ್ಮರಾದ ಬಳಿಕ ಅಗ್ನಿವೀರರಿಗೆ ನೀಡುವ ಪರಿಹಾರದ ಬಗ್ಗೆ ಬಹಳಷ್ಟು ಚರ್ಚೆಯಾಗುತ್ತಿದೆ.

ಕರ್ತವ್ಯನಿರತ ಅಗ್ನಿವೀರ್ ಪ್ರಾಣ ಕಳೆದುಕೊಂಡ ಕುಟುಂಬಕ್ಕೆ ಭಾರತೀಯ ಸೇನೆ ಹಾಗೂ ಕೇಂದ್ರ ಸರ್ಕಾರದಿಂದ 1 ಕೋಟಿ ರೂಪಾಯಿಗೂ ಅಧಿಕ ಪರಿಹಾರ ಸಿಗಲಿದೆ. ಈ ಕುರಿತು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರು ಕೇಂದ್ರ ಸರ್ಕಾರವನ್ನು ಪ್ರಶ್ನಿಸಿದ್ದರು. ಈ ಬಗ್ಗೆ ಬಿಜೆಪಿ ನಾಯಕ ಅಮಿತ್ ಮಾಳವೀಯ ಸ್ಪಷ್ಟನೆ ನೀಡಿದ್ದಾರೆ. 48 ಲಕ್ಷ ರೂಪಾಯಿಗಳನ್ನು ಕೊಡುಗೆ ರಹಿತ ವಿಮೆಯಾಗಿ, 44 ಲಕ್ಷ ರೂಪಾಯಿಯನ್ನು ಎಕ್ಸ್‌ಗ್ರೇಷಿಯಾವಾಗಿ, ಸೇವಾ ನಿಧಿಯ ಶೇಕಡಾ 30 ರಷ್ಟು ಕೊಡುಗೆಯನ್ನು ಪಡೆಯುತ್ತಾರೆ. ಸರ್ಕಾರದಿಂದ ಸಮಾನ ಹೊಂದಾಣಿಕೆಯ ಜೊತೆಗೆ ಕೊಡುಗೆಯನ್ನು ನೀಡಲಾಗುತ್ತದೆ ಎಂದು ಟ್ವೀಟ್ ಮಾಡಿದ್ದಾರೆ.

ಹುತಾತ್ಮರಾದ ಅಗ್ನಿವೀರ್ ಸಂಬಂಧಿಕರು ಮರಣದ ದಿನಾಂಕದಿಂದ 4 ವರ್ಷಗಳು ಪೂರ್ಣಗೊಳ್ಳುವವರೆಗೆ ₹13 ಲಕ್ಷಕ್ಕಿಂತ ಹೆಚ್ಚು ವೇತನವನ್ನು ಪಡೆಯುತ್ತಾರೆ. ಬಾಕಿ ಉಳಿದಿರುವ ಅವಧಿಯ ಪ್ರಕಾರ ಮತ್ತು ಸಶಸ್ತ್ರ ಪಡೆಗಳ ಯುದ್ಧ ಅಪಘಾತ ನಿಧಿಯಿಂದ ₹8 ಲಕ್ಷದ ಕೊಡುಗೆ ನೀಡಲಾಗುತ್ತದೆ. ಹೀಗಾಗಿ ಸುಳ್ಳು ಸುದ್ದಿ ಹಬ್ಬಿಸುವುದನ್ನ ನಿಲ್ಲಿಸಿ. ನೀವು ಪ್ರಧಾನಿಯಾಗುವ ಹಂಬಲ ಹೊಂದಿದ್ದೀರಿ. ಆ ರೀತಿಯಲ್ಲೇ ಪ್ರಯತ್ನಿಸಿ ಎಂದು ತಿರುಗೇಟು ನೀಡಿದ್ದಾರೆ.

ಸಿಯಾಚಿನ್ ಹಿಮನದಿಯು ವಿಶ್ವದ ಅತಿ ಎತ್ತರದ ಮಿಲಿಟರಿ ವಲಯವಾದ ಸಿಯಾಚಿನ್ ಹಿಮನದಿಯ ಕಾರಕೋರಂ ಶ್ರೇಣಿಯಲ್ಲಿ ಸೈನಿಕರು ಹೋರಾಡಬೇಕಿತ್ತು. ಇದೇ ವೇಳೆ ಅಗ್ನಿವೀರ್ ಗವಟೆ ಅಕ್ಷಯ್ ಲಕ್ಷ್ಮಣ್ ಹುತಾತ್ಮರಾಗಿದ್ದಾರೆ. ಇನ್ನೂ ಅಗ್ನಿವೀರ್ ಗವಟೆ ಅಕ್ಷಯ್ ಲಕ್ಷ್ಮಣ್ ನಿಧನಕ್ಕೆ​ ಸೇನಾ ಮುಖ್ಯಸ್ಥ ಜನರಲ್ ಮನೋಜ್ ಪಾಂಡೆ ಮತ್ತು ಸೇನಾ ಪಡೆ ಸಂತಾಪ ಸೂಚಿಸಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಮೊದಲ ಅಗ್ನಿವೀರ್ ಹುತಾತ್ಮ.. ಸೈನಿಕನ ಕುಟುಂಬಕ್ಕೆ ಸಿಗೋ ಪರಿಹಾರದ ಹಣ ಎಷ್ಟು?

https://newsfirstlive.com/wp-content/uploads/2023/10/agniveer-1.jpg

Load More