/newsfirstlive-kannada/media/post_attachments/wp-content/uploads/2024/11/KING-COBRA-AND-COBRA.jpg)
ಜಗತ್ತಿನ ಅತ್ಯಂತ ವಿಷಕಾರಿ ಹಾವುಗಳ ವಿಚಾರ ಬಂದಾಗ ಕಿಂಗ್ ಕೋಬ್ರಾ ಅಂದ್ರೆ ಕಾಳಿಂಗ ಸರ್ಪವೂ ಕೂಡ ಪ್ರಮುಖ ಸ್ಥಾನ ಪಡೆಯುತ್ತದೆ. ಅದು ಗಾತ್ರ ಹಾಗೂ ಅದರೊಳಗಿರುವ ಮಾರಣಾಂತಿಕ ವಿಷ ಇವು ಎರಡು ಕೂಡ ಗಣನೆಗೆ ತೆಗೆದುಕೊಳ್ಳಲಾಗುತ್ತದೆ. ಅದರಲ್ಲೂ ಭಾರತದಲ್ಲಿ ಸಿಗುವ ನಾಗರಹಾವು ಮಾನವನ ಜೀವಕ್ಕೆ ಅತ್ಯಂತ ಅಪಾಯಕಾರಿ ಎಂದು ಹೇಳಲಾಗುತ್ತದೆ.
ಹಾವುಗಳು ಜಗತ್ತಿನ ಅತ್ಯಂತ ವಿಷಕಾರಿ ಹಾಗೂ ನಿಗೂಢವಾದ ಸರಿಸೃಪಗಳು. ಅವುಗಳನ್ನು ಅವುಗಳ ಅಪಾಯಕಾರಿ ವಿಷಗಳಿಂದಲೇ ವಿಂಗಡನಡೆ ಮಾಡಿ ಗುರುತಿಸಲಾಗುತ್ತದೆ. ಅವು ನಿಸರ್ಗದಲ್ಲಿರುವ ಅತ್ಯಂತ ಮಾರಕ ಹಾಗೂ ಅಸಾಧಾರಣವಾದ ಪರಭಕ್ಷಕಗಳು. ಅತ್ಯಂತ ವಿಷಕಾರಿ ಹಾವುಗಳ ವಿಚಾರದಲ್ಲಿ ಎರಡು ಹಾವುಗಳು ಬಹಳ ಚರ್ಚೆಗೆ ಒಳಪಡುತ್ತವೆ. ಒಂದು ಕಾಳಿಂಗ ಸರ್ಪ ಹಾಗೂ ನಾಗರಹಾವು. ನಾಗರಹಾವು, ಕಾಳಿಂಗ ಸರ್ಪಕ್ಕಿಂತಲೂ ಅತ್ಯಂತ ಅಪಾಯಕಾರಿ ವಿಷವನ್ನು ತನ್ನ ಹಲ್ಲುಗಳಲ್ಲಿ ಇಟ್ಟುಕೊಂಡಿರುವ ಹಾವು ಎಂದೇ ಹೇಳಲಾಗುತ್ತದೆ. ಇದು ಕಾಳಿಂಗ ಸರ್ಪಕ್ಕಿಂತಲೂ ಹೆಚ್ಚು ಅಪಾಯಕಾರಿ.
ಇತ್ತ ಕಾಳಿಂಗ ಸರ್ಪವೂ ಕೂಡ ವಿಶ್ವದ ಅತ್ಯಂತ ಅಪಾಯಕಾರಿ ಹಾವುಗಳ ಜಾತಿಗೆ ಸೇರಿಕೊಳ್ಳುತ್ತದೆ. ಒಂದು ಬಾರಿ ಇದು ಕಚ್ಚಿದರೆ ಭಾರೀ ಪ್ರಮಾಣದಲ್ಲಿ ವಿಷ ಬಿಡುಗಡೆ ಮಾಡುವ ಹಾವು ಎಂದು ಗುರುತಿಸಲ್ಪಡುತ್ತದೆ. ಆದರೆ ನಾಗರಹಾವಿಗೆ ಇದನ್ನು ಹೋಲಿಸಿ ನೊಡಿದಾಗ ಇದರ ರೋಷಾವೇಷ ಕೊಂಚ ಕಡಿಮೆ.
ಇದನ್ನೂ ಓದಿ:ಮನುಷ್ಯನಂತೆಯೇ ಅಳುತ್ತವೆ ಪ್ರಮುಖ ಈ ಏಳು ಪ್ರಾಣಿಗಳು; ಯಾವುವು ಗೊತ್ತಾ?
ಕಾಳಿಂಗ ಸರ್ಪ ತನ್ನ ಪ್ರಬಲವಾದ ವಿಷದಿಂದ ಹಾಗೂ ಗುರುತಿಸಿಕೊಂಡಿದೆ. ಇದು ಒಂದು ಬಾರಿ ಮನುಷ್ಯನನಲ್ಲಿ ಕಚ್ಚಿದರೆ ಸುಮಾರು 1 ಸಾವಿರ ಮಿಲಿ ಗ್ರಾಂನಷ್ಟು ತನ್ನ ದೇಹದಲ್ಲಿರುವ ವಿಷವನ್ನು ಮನುಷ್ಯನ ದೇಹಕ್ಕೆ ಇಂಜೆಕ್ಟ್ ಮಾಡುತ್ತದೆ. ಇದು ನೋಡಲು ದೊಡ್ಡ ಮಾತ್ರದ ಪ್ರಮಾಣ ಎನಿಸಿದರು ಕೂಡ ಇದರಲ್ಲಿರುವ ಮಾರಕ ಅಂಶ ನಾಗರಹಾವಿಗೆ ಹೋಳಿಸಿದರೆ ಕಡಿಮೆ ಎಂದು ಹೇಳಲಾಗುತ್ತದೆ. ಕಾಳಿಂಗ ಸರ್ಪದ ವಿಷದಲ್ಲಿ ವಿಷಕಾರಿ (ಟಾಕ್ಸಿಕ್) ಅಂಶ 1.28 ಮಿಲಿಗ್ರಾಂನಷ್ಟು ಇರುತ್ತದೆ. ಇದು ನಾಗರಹಾವಿಗೆ ಹೋಲಿಸಿ ನೋಡಿದರೆ ಅತ್ಯಂಕ ಕಡಿಮೆ ವಿಷಕಾರಿತನ ಕಾಳಿಂಗ ಸರ್ಪದ ವಿಷದಲ್ಲಿದೆ.
ಭಾರತದಲ್ಲಿ ಕಾಣಸಿಗುವ ಇಂಡಿಯನ್ ಕೊಬ್ರಾ ಅಥವಾ ನಾಗರಹಾವು ಒಂದು ಬಾರಿ ಕಚ್ಚಿದರೆ 170 ರಿಂದ 250 ಮಿಲಿಗ್ರಾಂ ಪ್ರಮಾಣದಷ್ಟು ವಿಷವನ್ನು ಬಿಡುಗಡೆ ಮಾಡುತ್ತದೆ.
ಆದ್ರೆ ಇದರ ವಿಷ ಅತ್ಯಂತ ಅಪಾಯಕಾರಿ. ಒಂದೇ ಒಂದು ಬೈಟ್ ನಲ್ಲಿ ಇದು 10 ಮಂದಿಯನ್ನು ಕೊಲ್ಲುವಷ್ಟು ವಿಷವನ್ನು ಮನುಷ್ಯನ ದೇಹದಲ್ಲಿ ಬಿಡುತ್ತದೆ. ಇದರ ವಿಷವಂತೂ ಅತ್ಯಂತ ಅಪಾಯಕಾರಿ. ಇಂದು ಒಂದ ಬಾರಿ ಕಚ್ಚಿದರೆ ಅದು ಬಿಡಗಡೆ ಮಾಡುವ ವಿಷಯದಲ್ಲಿ 0.56 ಮಿಲಿಗ್ರಾಂನಷ್ಟು ಎಲ್ಡಿ50 ಎಂಬ ವಿಷಕಾರಿ ಅಂಶ ಇರುತ್ತದೆ ಎಂದು ಹೇಳಲಾಗುತ್ತದೆ. ಭಾರತದಲ್ಲಿ ಸಿಗುವ ಈ ನಾಗರಹಾವು ಅತ್ಯಂತ ವಿಷಕಾರಿ ಹಾವುಗಳ ಟಾಪ್ 4 ಪಟ್ಟಿಯಲ್ಲಿದೆ. ಈ ಒಂದು ಹಾವಿನಿಂದ ಕಚ್ಚಿಸಿಕೊಂಡು ಸಾಯುವವರ ಸಂಖ್ಯೆ ವರ್ಷಕ್ಕೆ 15 ಸಾವಿರ ಎಂಬ ಮಾಹಿತಿಯೂ ಕೂಡ ಇದೆ.
ಇದನ್ನೂ ಓದಿ:ಕೋಳಿ ಮುಂಜಾನೆ ಯಾಕೆ ಕೂಗುತ್ತದೆ..? ನಿಮಗೆ ಗೊತ್ತಾ ಈ ಅಚ್ಚರಿ ವಿಚಾರಗಳು..?
ಇನ್ನು ಈ ಎರಡು ಸರಿಸೃಪಗಳ ಗಾತ್ರವನ್ನು ಗಣನೆಗೆ ತೆಗೆದುಕೊಂಡಾಗ ಕಾಳಿಂಗ ಸರ್ಪ 19 ಅಡಿಯವರೆಗೂ ಇರುತ್ತವೆ ಮತ್ತು ಅವುಗಳ ತೂಕ 7 ಕೆಜಿಗೂ ಅಧಿಕವಿರುತ್ತದೆ. ಇನ್ನು ನಾಗರಹಾವು ವಿಷಯಕ್ಕೆ ಬಂದಾಗ ಇವು 7 ಅಡಿಯಷ್ಟು ಉದ್ದವಿರುತ್ತವೆ. 3 ಕೆಜಿಯವರೆಗೂ ತೂಗುತ್ತವೆ.
ಕಾಳಿಂಗ ಸರ್ಪ ಮತ್ತು ನಾಗರಹಾವುಗಳಲ್ಲಿ ಇನ್ನೊಂದು ಹೋಲಿಕೆ ಅಂದ್ರೆ ಅವುಗಳ ಹಲ್ಲುಗಳು. ಹಲ್ಲುಗಳ ವಿಚಾರದಲ್ಲಿ ಕಾಳಿಂಗ ಸರ್ಪ ಹಾಗೂ ನಾಗರಹಾವು ತಮ್ಮದೇ ಆದ ಅನನ್ಯ ವೈಶಿಷ್ಟ್ಯಗಳನ್ನು ಹೊಂದಿವೆ. ಕಾಳಿಂಗ ಸರ್ಪದ ಬಾಯಲ್ಲಿ ಸುಮಾರು 0.3 ಇಂಚಿನ ಗಾತ್ರದ ಹಲ್ಲುಗಳು ಇವೆ. ಇದು ಕಚ್ಚುವಾಗ ಸರಿಯಾಗಿ ಗ್ರಿಪ್ ಸಿಗುವಂತಹ ವಿನ್ಯಾಸವನ್ನು ಹೊಂದಿವೆ. ಗಟ್ಟಿಯಾಗಿ ಕಚ್ಚಿ ಹಿಡಿದು ಅವು ತಮ್ಮ ವಿಷವನ್ನು ಬಿಡುಗಡೆ ಮಾಡುತ್ತವೆ. ಆದ್ರೆ ನಾಗರಹಾವು ಕಚ್ಚಿದಾಗ ಅಗೆಯುವ ರೀತಿ ಕಚ್ಚಿ ತಮ್ಮ ವಿಷವನ್ನು ರಿಲೀಸ್ ಮಾಡುತ್ತವೆ. ಕಿಂಗ್ ಕೋಬ್ರಾಗೆ ಹೋಲಿಸಿದರೆ ನಾಗರಹಾವಿನ ಹಲ್ಲುಗಳ ಗಾತ್ರ ಚಿಕ್ಕದಿವೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ