ಇಂದಿನಿಂದ IPL-17 ಪ್ಲೇಆಫ್ ರೇಸ್ನಲ್ಲಿ ರಣರೋಚಕ ಕದನ
SRH ಬ್ಯಾಟರ್ನನ್ನ ಓವರ್ಟೇಕ್ ಮಾಡ್ತಾರಾ ಕಿಂಗ್ ಕೊಹ್ಲಿ..?
ಈ ಯುದ್ಧದಲ್ಲಿ ಕೊನೆಗೆ ಗೆಲ್ಲೋದ್ಯಾರು? ಸೋಲೋದ್ಯಾರು?
ಈ ಬಾರಿ ನಡೆಯುತ್ತಿರುವ ಐಪಿಎಲ್ ಆರೆಂಜ್ ಕ್ಯಾಪ್ ಯುದ್ಧದಲ್ಲಿ ಕಿಂಗ್ ಕೊಹ್ಲಿ ಬಹುತೇಕ ಗೆದ್ದಾಗಿದೆ. ಈಗ ಇನ್ನೊಂದು ಪಟ್ಟಕ್ಕಾಗಿ ವಿರಾಟ್ ಹಪಹಪಿಸುತ್ತಿದ್ದಾರೆ. ಅದಕ್ಕಾಗಿ ಈ ಸೀಸನ್ನ ಮೋಸ್ಟ್ ಡೇಂಜರಸ್ ಬ್ಯಾಟರ್ ಜೊತೆ ಪೈಪೋಟಿಗಿಳಿದಿದ್ದಾರೆ. ಅಷ್ಟಕ್ಕೂ ಕಿಂಗ್ ಕೊಹ್ಲಿಗೆ ಕಣ್ಣಿಟ್ಟಿರೋ ಆ ಪಟ್ಟ ಯಾವುದು? ರಣರಂಗದ ಎದುರಾಳಿ ಯಾರು?
ಕುತೂಹಲ ಘಟ್ಟ ತಲುಪಿದ್ದ ಸೀಸನ್ -17ನೇ ಐಪಿಎಲ್ನ ಲೀಗ್ ಹಂತದ ಪಂದ್ಯಗಳು ಕೊನೆಗೊಂಡಿವೆ. ಇನ್ನೇನಿದ್ರೂ ನಾಕೌಟ್ ಪಂದ್ಯಗಳ ಹಬ್ಬ. ಇಂದಿನಿಂದ ಪ್ಲೇಆಫ್ ರೇಸ್ ಕದನ ಏರ್ಪಡಲಿದ್ದು ಯಾರು ಟ್ರೋಫಿ ಎತ್ತಿ ಹಿಡಿತಾರೆ ಅನ್ನೋದು ಸಾಕಷ್ಟು ಕ್ಯೂರಿಯಾಸಿಟಿ ಹೆಚ್ಚಿಸಿದೆ. ಇದೇ ಹೊತ್ತಲ್ಲಿ ಕಿಂಗ್ ಕೊಹ್ಲಿ ಹಾಗೂ ಅಭಿಷೇಕ್ ಶರ್ಮಾ ನಡುವಿನ ಸಿಕ್ಸ್ ಸಮರ ಕ್ರಿಕೆಟ್ ಪ್ರೇಮಿಗಳಿಗೆ ಸಖತ್ ಟ್ರೀಟ್ ಕೊಡ್ತಿದೆ.
ಯಾರಾಗ್ತಾರೆ ಸೀಸನ್-17ನೇ IPLನ ಸಿಕ್ಸರ್ ಕಿಂಗ್..?
IPL ಹೇಳಿ ಕೇಳಿ ಬ್ಯಾಟ್ಸ್ಮನ್ಗಳ ಕೂಟ. ಬ್ಯಾಟರ್ಗಳಿಂದ ಸಿಡಿಯುವ ಒಂದೊಂದು ಸಿಕ್ಸ್ ಅಭಿಮಾನಿಗಳನ್ನ ಹುಚ್ಚೆದ್ದು ಕುಣಿಯುವಂತೆ ಮಾಡುತ್ತೆ. ಈ ಬಾರಿಯೂ ಸಿಕ್ಸರ್ ಧಮಾಕ ಜೋರಾಗಿದೆ. ಸಿಕ್ಸರ್ ಕಿಂಗ್ ಪಟ್ಟಕ್ಕಾಗಿ ಕಿಂಗ್ ಕೊಹ್ಲಿ ಹಾಗೂ ಅಭಿಷೇಕ್ ಶರ್ಮಾ ಮೆಗಾ ಪೈಪೋಟಿ ಏರ್ಪಟ್ಟಿದೆ. ಸೀನಿಯರ್ ವರ್ಸಸ್ ಯಂಗ್ ಬ್ಯಾಟರ್ ನಡುವಿನ ಸಿಕ್ಸ್ ವಾರ್ ಪಂದ್ಯಾವಳಿಗೆ ಹೊಸ ಮೆರುಗು ತಂದುಕೊಟ್ಟಿದೆ. ಅಷ್ಟೇ ಅಲ್ಲ, ಕೊಹ್ಲಿ ವರ್ಸಸ್ ಅಭಿಷೇಕ್ ಶರ್ಮಾರ ಭಿನ್ನ-ವಿಭಿನ್ನ ಸಿಕ್ಸರ್ಗಳನ್ನ ನೋಡಲೆಂದು ಒಂದು ಸಮೂಹ ಹುಟ್ಟಿಕೊಂಡಿದೆ.
ಇದನ್ನೂ ಓದಿ: ಹೈದರಾಬಾದ್ ವಿರುದ್ಧ ಪಂದ್ಯಕ್ಕೆ ಮುನ್ನವೇ ಕೆಕೆಆರ್ಗೆ ಬಿಗ್ ಶಾಕ್.. ಇದು ಆರ್ಸಿಬಿಗೂ ಗುಡ್ನ್ಯೂಸ್!
ಆರಂಭಿಕರಾಗಿ ಕಣಕ್ಕಿಳಿಯೋ ಇಬ್ಬರು ಸಿಕ್ಸರ್ಗಳ ಭರಾಟೆ ನಡೆಸ್ತಿದ್ದಾರೆ. ಅದ್ಯಾವ ಮಟ್ಟಿಗೆ ಅಂದ್ರೆ ಸಿಕ್ಸ್ ಸಿಡಿಸದೇ ಪೆವಿಲಿಯನ್ಗೆ ವಾಪಾಸ್ ಆಗುತ್ತಿಲ್ಲ. ಪ್ಯಾಡ್ ಕಟ್ಟಿ ಕಣಕ್ಕಿಳಿದ್ರೆ ಸಿಕ್ಸರ್ಗಳನ್ನೆ ಟಾರ್ಗೆಟ್ ಮಾಡುತ್ತಿದ್ದಾರೆ. ಸದ್ಯ ಇಬ್ಬರ ಗುರಿ ಒಂದೇ. ಸಿಕ್ಸ್ ಕಿಂಗ್ ಅನ್ನಿಸಿಕೊಳ್ಳೋದು. ಅದಕ್ಕಾಗಿ ರಣಬೇಟೆಗಾರ ಕೊಹ್ಲಿ ಹಾಗೂ ಡೇಂಜರಸ್ ಅಭಿಷೇಕ್ ಶರ್ಮಾ ಮಧ್ಯೆ ಜಿದ್ದಾಜಿದ್ದಿನ ಫೈಟ್ ಏರ್ಪಟ್ಟಿದೆ.
IPL 2024 ರಲ್ಲಿ ಗರಿಷ್ಠ ಸಿಕ್ಸ್
ಆಟಗಾರ – ಸಿಕ್ಸರ್
ಅಭಿಷೇಕ್ ಶರ್ಮಾ – 41
ಕಿಂಗ್ ಕೊಹ್ಲಿ – 37
ನಿಕೋಲಸ್ ಪೂರನ್ – 36
ಪ್ರಸಕ್ತ ಐಪಿಎಲ್ನಲ್ಲಿ ಸನ್ರೈಸರ್ಸ್ ಹೈದ್ರಾಬಾದ್ ತಂಡದ ಅಭಿಷೇಕ್ ಶರ್ಮಾ 41 ಸಿಕ್ಸ್ ಸಿಡಿಸಿ ಮೊದಲ ಸ್ಥಾನದಲ್ಲಿದ್ರೆ, ಆರ್ಸಿಬಿಯ ಕಿಂಗ್ ಕೊಹ್ಲಿ 37 ಸಿಕ್ಸರ್ಗಳೊಂದಿಗೆ 2ನೇ ಸ್ಥಾನದಲ್ಲಿದ್ದಾರೆ. ಇನ್ನು 36 ಸಿಕ್ಸ್ ಸಿಡಿಸಿರುವ ಲಕ್ನೋ ಸೂಪರ್ ಜೈಂಟ್ಸ್ನ ನಿಕೋಲಸ್ ಪೂರನ್ 3ನೇ ಸ್ಥಾನಕ್ಕೆ ತೃಪ್ತಿ ಪಟ್ಟಿದ್ದಾರೆ.
ಇದನ್ನೂ ಓದಿ: ಇಂದು KKR VS ಹೈದರಾಬಾದ್.. ಯಾರು ಗೆದ್ರೆ ಆರ್ಸಿಬಿಗೆ ಒಳ್ಳೆಯದು? ಬೆಂಗಳೂರಿಗೆ ಸುವರ್ಣಾವಕಾಶ!
ಆವೃತ್ತಿಯೊಂದರಲ್ಲಿ ಅಭಿಷೇಕ್ ಶರ್ಮಾ ಅತ್ಯಧಿಕ ಸಿಕ್ಸ್..!
2024ನೇ ಐಪಿಎಲ್ನಲ್ಲಿ ನೆಕ್ಸ್ಟ್ ಲೆವೆಲ್ನಲ್ಲಿ ಬ್ಯಾಟ್ ಬೀಸ್ತಿರುವ ಅಭಿಷೇಕ್ ಶರ್ಮಾ 13 ಪಂದ್ಯಗಳಿಂದ 41 ಸಿಕ್ಸ್ ಸಿಡಿಸಿದ್ದಾರೆ. ಆ ಮೂಲಕ ಐಪಿಎಲ್ ಆವೃತ್ತಿಯೊಂದರಲ್ಲೇ ಗರಿಷ್ಠ ಸಿಕ್ಸರ್ ಬಾರಿಸಿದ ಸಾಧನೆ ಅವರದ್ದಾಗಿದೆ. 2016 ರಲ್ಲಿ ಕಿಂಗ್ ಕೊಹ್ಲಿ 38 ಸಿಕ್ಸ್ ಬಾರಿಸಿದ್ರು. ಸದ್ಯ ಆ ದಾಖಲೆಯನ್ನ ಹೈದ್ರಾಬಾದ್ನ ವಿಧ್ವಂಸಕ ಬ್ಯಾಟರ್ ಅಳಿಸಿ ಹಾಕಿದ್ದಾರೆ.

ಸದ್ಯ ಕಿಂಗ್ ಕೊಹ್ಲಿ ಹಾಗೂ ಅಭಿಷೇಕ್ ಶರ್ಮಾ ನಡುವೆ ಸಿಕ್ಸರ್ ಪಟ್ಟಕ್ಕಾಗಿ ಬಿಗ್ ವಾರ್ ನಡೀತಿದೆ. ಪ್ರಚಂಡ ಫಾರ್ಮ್ನಲ್ಲಿರೋ ಕೊಹ್ಲಿ ಅಭಿಷೇಕ್ಗಿಂತ ಜಸ್ಟ್ 4 ಸಿಕ್ಸರ್ ಹಿಂದಿದ್ದಾರೆ. ಕೊಹ್ಲಿ ಮನಸ್ಸು ಮಾಡಿದ್ರೆ ಒಂದೇ ಪಂದ್ಯದಲ್ಲಿ ಹೈದ್ರಾಬಾದ್ ವಾಲಾರನ್ನ ಹಿಂದಿಕ್ಕಬಹುದು. ಆದರೆ ಅತ್ತ ಅಭಿಷೇಕ್ ಕೂಡ ಸಾಲಿಡ್ ಟಚ್ನಲ್ಲಿದ್ದಾರೆ. ಇನ್ನಷ್ಟು ಆರ್ಭಟಿಸಿ ಸಿಕ್ಸರ್ಗಳ ಸಂಖ್ಯೆಯನ್ನ ಹೆಚ್ಚಿಸಿಕೊಳ್ಳಬಹುದು.
ನಾಕೌಟ್ ಪಂದ್ಯಗಳ ಕುತೂಹಲದಷ್ಟೇ ಕೊಹ್ಲಿ ಹಾಗೂ ಅಭಿಷೇಕ್ ಶರ್ಮಾ ನಡುವೆ ಸಿಕ್ಸರ್ ಸಮರವು ಜೋರಾಗಿದೆ. ಸಿಕ್ಸರ್ ಕಿಂಗ್ ಪಟ್ಟಕ್ಕೆ ನಡೆಯುತ್ತಿರುವ ಈ ಯುದ್ಧದಲ್ಲಿ ಕೊನೆಗೆ ಗೆಲ್ಲೋದ್ಯಾರು? ಸೋಲೋದ್ಯಾರು? ಅನ್ನೋದಕ್ಕೆ ಶೀಘ್ರವೇ ಆನ್ಸರ್ ಸಿಗಲಿದೆ.
ವಿಶೇಷ ಸೂಚನೆ: ಕ್ರಿಕೆಟ್ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ ಫಸ್ಟ್ ಚಾನೆಲ್ನಲ್ಲಿ ‘ರನ್ ಭೂಮಿ’ ವೀಕ್ಷಿಸಿ