newsfirstkannada.com

ಮತ್ತೊಂದು ರಣ ರೋಚಕ ಯುದ್ಧಕ್ಕೆ ಸಜ್ಜಾದ ಕಿಂಗ್ ಕೊಹ್ಲಿ.. ವಿರಾಟ್‌ಗೆ ನಿಜವಾದ ಎದುರಾಳಿ ಯಾರು?

Share :

Published May 21, 2024 at 4:55pm

    ಇಂದಿನಿಂದ IPL-17 ಪ್ಲೇಆಫ್​​​​​​​​ ರೇಸ್‌ನಲ್ಲಿ ರಣರೋಚಕ ಕದನ

    SRH ಬ್ಯಾಟರ್​ನನ್ನ ಓವರ್​​ಟೇಕ್ ಮಾಡ್ತಾರಾ ಕಿಂಗ್ ಕೊಹ್ಲಿ..?

    ಈ ಯುದ್ಧದಲ್ಲಿ ಕೊನೆಗೆ ಗೆಲ್ಲೋದ್ಯಾರು? ಸೋಲೋದ್ಯಾರು?

ಈ ಬಾರಿ ನಡೆಯುತ್ತಿರುವ ಐಪಿಎಲ್‌ ಆರೆಂಜ್​ ಕ್ಯಾಪ್​​ ಯುದ್ಧದಲ್ಲಿ ಕಿಂಗ್ ಕೊಹ್ಲಿ ಬಹುತೇಕ ಗೆದ್ದಾಗಿದೆ. ಈಗ ಇನ್ನೊಂದು ಪಟ್ಟಕ್ಕಾಗಿ ವಿರಾಟ್ ಹಪಹಪಿಸುತ್ತಿದ್ದಾರೆ. ಅದಕ್ಕಾಗಿ ಈ ಸೀಸನ್​​ನ ಮೋಸ್ಟ್​ ಡೇಂಜರಸ್ ಬ್ಯಾಟರ್ ಜೊತೆ ಪೈಪೋಟಿಗಿಳಿದಿದ್ದಾರೆ. ಅಷ್ಟಕ್ಕೂ ಕಿಂಗ್ ಕೊಹ್ಲಿಗೆ ಕಣ್ಣಿಟ್ಟಿರೋ ಆ ಪಟ್ಟ ಯಾವುದು? ರಣರಂಗದ ಎದುರಾಳಿ ಯಾರು?

ಕುತೂಹಲ ಘಟ್ಟ ತಲುಪಿದ್ದ ಸೀಸನ್​​​​ -17ನೇ ಐಪಿಎಲ್​ನ ಲೀಗ್​​ ಹಂತದ ಪಂದ್ಯಗಳು ಕೊನೆಗೊಂಡಿವೆ. ಇನ್ನೇನಿದ್ರೂ ನಾಕೌಟ್​​​​ ಪಂದ್ಯಗಳ ಹಬ್ಬ. ಇಂದಿನಿಂದ ಪ್ಲೇಆಫ್​​​​​​​​ ರೇಸ್​​​ ಕದನ ಏರ್ಪಡಲಿದ್ದು ಯಾರು ಟ್ರೋಫಿ ಎತ್ತಿ ಹಿಡಿತಾರೆ ಅನ್ನೋದು ಸಾಕಷ್ಟು ಕ್ಯೂರಿಯಾಸಿಟಿ ಹೆಚ್ಚಿಸಿದೆ. ಇದೇ ಹೊತ್ತಲ್ಲಿ ಕಿಂಗ್ ಕೊಹ್ಲಿ ಹಾಗೂ ಅಭಿಷೇಕ್​​ ಶರ್ಮಾ ನಡುವಿನ ಸಿಕ್ಸ್ ಸಮರ ಕ್ರಿಕೆಟ್ ಪ್ರೇಮಿಗಳಿಗೆ ಸಖತ್​ ಟ್ರೀಟ್​ ಕೊಡ್ತಿದೆ.

ಯಾರಾಗ್ತಾರೆ ಸೀಸನ್​​​-17ನೇ IPLನ ಸಿಕ್ಸರ್ ಕಿಂಗ್​​..?
IPL ಹೇಳಿ ಕೇಳಿ ಬ್ಯಾಟ್ಸ್​​ಮನ್​ಗಳ ಕೂಟ. ಬ್ಯಾಟರ್​ಗಳಿಂದ ಸಿಡಿಯುವ ಒಂದೊಂದು ಸಿಕ್ಸ್​ ಅಭಿಮಾನಿಗಳನ್ನ ಹುಚ್ಚೆದ್ದು ಕುಣಿಯುವಂತೆ ಮಾಡುತ್ತೆ. ಈ ಬಾರಿಯೂ ಸಿಕ್ಸರ್ ಧಮಾಕ ಜೋರಾಗಿದೆ. ಸಿಕ್ಸರ್​ ಕಿಂಗ್​​​ ಪಟ್ಟಕ್ಕಾಗಿ ಕಿಂಗ್ ಕೊಹ್ಲಿ ಹಾಗೂ ಅಭಿಷೇಕ್ ಶರ್ಮಾ ಮೆಗಾ ಪೈಪೋಟಿ ಏರ್ಪಟ್ಟಿದೆ. ಸೀನಿಯರ್ ವರ್ಸಸ್​​​​ ಯಂಗ್​ ಬ್ಯಾಟರ್​​​​​​​​​ ನಡುವಿನ ಸಿಕ್ಸ್​​​​​​​ ವಾರ್​ ಪಂದ್ಯಾವಳಿಗೆ ಹೊಸ ಮೆರುಗು ತಂದುಕೊಟ್ಟಿದೆ. ಅಷ್ಟೇ ಅಲ್ಲ, ಕೊಹ್ಲಿ ವರ್ಸಸ್​​ ಅಭಿಷೇಕ್​​​ ಶರ್ಮಾರ ಭಿನ್ನ-ವಿಭಿನ್ನ ಸಿಕ್ಸರ್​ಗಳನ್ನ ನೋಡಲೆಂದು ಒಂದು ಸಮೂಹ ಹುಟ್ಟಿಕೊಂಡಿದೆ.

ಇದನ್ನೂ ಓದಿ: ಹೈದರಾಬಾದ್​​ ವಿರುದ್ಧ ಪಂದ್ಯಕ್ಕೆ ಮುನ್ನವೇ ಕೆಕೆಆರ್​ಗೆ ಬಿಗ್​ ಶಾಕ್​​.. ಇದು ಆರ್​​ಸಿಬಿಗೂ ಗುಡ್​ನ್ಯೂಸ್​​! 

ಆರಂಭಿಕರಾಗಿ ಕಣಕ್ಕಿಳಿಯೋ ಇಬ್ಬರು ಸಿಕ್ಸರ್​​​​​​​​​​ಗಳ ಭರಾಟೆ ನಡೆಸ್ತಿದ್ದಾರೆ. ಅದ್ಯಾವ ಮಟ್ಟಿಗೆ ಅಂದ್ರೆ ಸಿಕ್ಸ್​​​​ ಸಿಡಿಸದೇ ಪೆವಿಲಿಯನ್​ಗೆ ವಾಪಾಸ್​ ಆಗುತ್ತಿಲ್ಲ. ಪ್ಯಾಡ್​ ಕಟ್ಟಿ ಕಣಕ್ಕಿಳಿದ್ರೆ ಸಿಕ್ಸರ್‌ಗಳನ್ನೆ ಟಾರ್ಗೆಟ್ ಮಾಡುತ್ತಿದ್ದಾರೆ. ಸದ್ಯ ಇಬ್ಬರ ಗುರಿ ಒಂದೇ. ಸಿಕ್ಸ್​ ಕಿಂಗ್ ಅನ್ನಿಸಿಕೊಳ್ಳೋದು. ಅದಕ್ಕಾಗಿ ರಣಬೇಟೆಗಾರ ಕೊಹ್ಲಿ ಹಾಗೂ ಡೇಂಜರಸ್​​​​​​​​ ಅಭಿಷೇಕ್​​​​ ಶರ್ಮಾ ಮಧ್ಯೆ ಜಿದ್ದಾಜಿದ್ದಿನ ಫೈಟ್​ ಏರ್ಪಟ್ಟಿದೆ.

IPL 2024 ರಲ್ಲಿ ಗರಿಷ್ಠ ಸಿಕ್ಸ್​​​​​​
ಆಟಗಾರ – ಸಿಕ್ಸರ್​
ಅಭಿಷೇಕ್ ಶರ್ಮಾ – 41
ಕಿಂಗ್ ಕೊಹ್ಲಿ – 37
ನಿಕೋಲಸ್ ಪೂರನ್ ​ – 36

ಪ್ರಸಕ್ತ ಐಪಿಎಲ್​ನಲ್ಲಿ ಸನ್​ರೈಸರ್ಸ್​ ಹೈದ್ರಾಬಾದ್​ ತಂಡದ ಅಭಿಷೇಕ್​ ಶರ್ಮಾ 41 ಸಿಕ್ಸ್ ಸಿಡಿಸಿ ಮೊದಲ ಸ್ಥಾನದಲ್ಲಿದ್ರೆ, ಆರ್​ಸಿಬಿಯ ಕಿಂಗ್ ಕೊಹ್ಲಿ 37 ಸಿಕ್ಸರ್​ಗಳೊಂದಿಗೆ 2ನೇ ಸ್ಥಾನದಲ್ಲಿದ್ದಾರೆ. ಇನ್ನು 36 ಸಿಕ್ಸ್​ ಸಿಡಿಸಿರುವ ಲಕ್ನೋ ಸೂಪರ್​​ ಜೈಂಟ್ಸ್​​ನ ನಿಕೋಲಸ್​ ಪೂರನ್ 3ನೇ ಸ್ಥಾನಕ್ಕೆ ತೃಪ್ತಿ ಪಟ್ಟಿದ್ದಾರೆ.

ಇದನ್ನೂ ಓದಿ: ಇಂದು KKR VS ಹೈದರಾಬಾದ್​​.. ಯಾರು ಗೆದ್ರೆ ಆರ್​​ಸಿಬಿಗೆ ಒಳ್ಳೆಯದು? ಬೆಂಗಳೂರಿಗೆ ಸುವರ್ಣಾವಕಾಶ! 

ಆವೃತ್ತಿಯೊಂದರಲ್ಲಿ ಅಭಿಷೇಕ್​ ಶರ್ಮಾ ಅತ್ಯಧಿಕ ಸಿಕ್ಸ್​​​..!
2024ನೇ ಐಪಿಎಲ್​ನಲ್ಲಿ ನೆಕ್ಸ್ಟ್​ ಲೆವೆಲ್​ನಲ್ಲಿ ಬ್ಯಾಟ್ ಬೀಸ್ತಿರುವ ಅಭಿಷೇಕ್​​ ಶರ್ಮಾ 13 ಪಂದ್ಯಗಳಿಂದ 41 ಸಿಕ್ಸ್ ಸಿಡಿಸಿದ್ದಾರೆ. ಆ ಮೂಲಕ ಐಪಿಎಲ್​​ ಆವೃತ್ತಿಯೊಂದರಲ್ಲೇ ಗರಿಷ್ಠ ಸಿಕ್ಸರ್​​​ ಬಾರಿಸಿದ ಸಾಧನೆ ಅವರದ್ದಾಗಿದೆ. 2016 ರಲ್ಲಿ ಕಿಂಗ್ ಕೊಹ್ಲಿ 38 ಸಿಕ್ಸ್​​ ಬಾರಿಸಿದ್ರು. ಸದ್ಯ ಆ ದಾಖಲೆಯನ್ನ ಹೈದ್ರಾಬಾದ್​​ನ ವಿಧ್ವಂಸಕ ಬ್ಯಾಟರ್​ ಅಳಿಸಿ ಹಾಕಿದ್ದಾರೆ.

ಸದ್ಯ ಕಿಂಗ್ ಕೊಹ್ಲಿ ಹಾಗೂ ಅಭಿಷೇಕ್​​ ಶರ್ಮಾ ನಡುವೆ ಸಿಕ್ಸರ್ ಪಟ್ಟಕ್ಕಾಗಿ ಬಿಗ್ ವಾರ್ ನಡೀತಿದೆ. ಪ್ರಚಂಡ ಫಾರ್ಮ್​ನಲ್ಲಿರೋ ಕೊಹ್ಲಿ ಅಭಿಷೇಕ್​ಗಿಂತ ಜಸ್ಟ್​​ 4 ಸಿಕ್ಸರ್ ಹಿಂದಿದ್ದಾರೆ. ಕೊಹ್ಲಿ ಮನಸ್ಸು ಮಾಡಿದ್ರೆ ಒಂದೇ ಪಂದ್ಯದಲ್ಲಿ ಹೈದ್ರಾಬಾದ್​​ ವಾಲಾರನ್ನ ಹಿಂದಿಕ್ಕಬಹುದು. ಆದರೆ ಅತ್ತ ಅಭಿಷೇಕ್​ ಕೂಡ ಸಾಲಿಡ್ ಟಚ್​​ನಲ್ಲಿದ್ದಾರೆ. ಇನ್ನಷ್ಟು ಆರ್ಭಟಿಸಿ ಸಿಕ್ಸರ್​ಗಳ ಸಂಖ್ಯೆಯನ್ನ ಹೆಚ್ಚಿಸಿಕೊಳ್ಳಬಹುದು.

ನಾಕೌಟ್​​ ಪಂದ್ಯಗಳ ಕುತೂಹಲದಷ್ಟೇ ಕೊಹ್ಲಿ ಹಾಗೂ ಅಭಿಷೇಕ್​​ ಶರ್ಮಾ ನಡುವೆ ಸಿಕ್ಸರ್​​​​​​​​​​​​ ಸಮರವು ಜೋರಾಗಿದೆ. ಸಿಕ್ಸರ್​​ ಕಿಂಗ್​​​ ಪಟ್ಟಕ್ಕೆ ನಡೆಯುತ್ತಿರುವ ಈ ಯುದ್ಧದಲ್ಲಿ ಕೊನೆಗೆ ಗೆಲ್ಲೋದ್ಯಾರು? ಸೋಲೋದ್ಯಾರು? ಅನ್ನೋದಕ್ಕೆ ಶೀಘ್ರವೇ ಆನ್ಸರ್ ಸಿಗಲಿದೆ.

ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್‌ ಫಸ್ಟ್‌ ಚಾನೆಲ್​​ನಲ್ಲಿ ‘ರನ್ ಭೂಮಿ’ ವೀಕ್ಷಿಸಿ

ಮತ್ತೊಂದು ರಣ ರೋಚಕ ಯುದ್ಧಕ್ಕೆ ಸಜ್ಜಾದ ಕಿಂಗ್ ಕೊಹ್ಲಿ.. ವಿರಾಟ್‌ಗೆ ನಿಜವಾದ ಎದುರಾಳಿ ಯಾರು?

https://newsfirstlive.com/wp-content/uploads/2024/05/Virat-Kohli-3.jpg

Load More