ಕೆ.ಎಲ್​​​​ ರಾಹುಲ್ ಮುಂದೆ ಕಿಂಗ್ ಕೊಹ್ಲಿ ಸೈಲೆಂಟ್.. IPL ಅಂಕಿ-ಅಂಶ ಹೇಳ್ತಿವೆ ಕಠೋರ ಸತ್ಯ!

author-image
admin
Updated On
KL ರಾಹುಲ್ ‘ಕಾಂತಾರ’ ಸೆಲೆಬ್ರೇಷನ್​ಗೆ ಕೊಹ್ಲಿ ರಿಯಾಕ್ಷನ್ ಏನು? ವಿರಾಟ್ ರಿವೇಂಜ್‌ ಪ್ಲಾನ್ ಏನು?
Advertisment
  • ವಿಶ್ವ ಕ್ರಿಕೆಟ್​ಗೆ ಅಲ್ಲ.. ಇನ್ಮುಂದೆ ಕಿಂಗ್ ಆಫ್ ಐಪಿಎಲ್ ಯಾರು?
  • ಬ್ಯಾಟ್​ನಿಂದಲೇ ಎಲ್ಲಕ್ಕೂ ಉತ್ತರ ಕೊಟ್ಟ ಕನ್ನಡಿಗ ಕೆ.ಎಲ್‌ ರಾಹುಲ್
  • ಈಗ ಐಪಿಎಲ್​ನ ಅಸಲಿ ರೂಲರ್​​ ಕನ್ನಡಿಗ ಕೆ.ಎಲ್.ರಾಹುಲ್..!

ಕಿಂಗ್ ಅಂದ್ರೆ, ಥಟ್ ಅಂತ ನೆನಪಾಗೋ ಹೆಸರು ವಿರಾಟ್ ಕೊಹ್ಲಿ. ವಿಶ್ವ ಕ್ರಿಕೆಟ್​ಗೆ ಅಲ್ಲ.. ಐಪಿಎಲ್​ನಲ್ಲೂ ಕೊಹ್ಲಿಯೇ ಕಿಂಗ್. ಆದ್ರೆ, ಇನ್ಮುಂದೆ ಕಿಂಗ್ ಆಫ್ ಐಪಿಎಲ್ ಯಾರು ಎಂಬ ಪ್ರಶ್ನೆ ಹುಟ್ಟಿದ್ರೆ, ಅದಕ್ಕೆ ಫ್ಯಾನ್ಸ್​ ಮರಿಯದೇ ಕೆ.ಎಲ್.ರಾಹುಲ್ ಹೆಸರೇಳಿ. ಅದ್ಯಾಕೆ ಅನ್ನೋ ಪ್ರಶ್ನೆಗೆ ಉತ್ತರ ಇಲ್ಲಿದೆ ನೋಡಿ.

ಕ್ಲಾಸ್​.. ಕನ್ಸಿಸ್ಟೆನ್ಸಿ.. ರನ್ ಮಷಿನ್.. ಚೇಸ್ ಮಾಸ್ಟರ್​.. ಇದಕ್ಕೆಲ್ಲಾ ಕೇರ್ ಆಫ್ ಅಡ್ರೆಸ್​ ಒನ್​ ಆ್ಯಂಡ್ ಒನ್ಲಿ ವಿರಾಟ್​​​​​​​​​​​​​​ ಕೊಹ್ಲಿ ಅನ್ನೋ ಮಾತಿತ್ತು. ಇದೀಗ ಕನ್ನಡಿಗ ಈ ಕೆ.ಎಲ್.ರಾಹುಲ್ ಕೊಹ್ಲಿಗೆ ಸರಿಸಾಟಿಯಾಗಿ ನಿಂತಿದ್ದಾರೆ.

ಕಣ್ಣೂರು ಲೋಕೇಶ್ ರಾಹುಲ್.. ಕ್ಲಾಸ್ ಬ್ಯಾಟಿಂಗ್ ಸೈ.. ಮಾಸ್ ಹಿಟ್ಟಿಂಗ್ ಜೈ ಅನ್ನೋ ಕನ್ನಡಿಗ ಕೆ.ಎಲ್. ರಾಹುಲ್, ನ್ಯೂ ಟೀಮ್​ನಲ್ಲಿ. ನ್ಯೂ ಬ್ಯಾಟಿಂಗ್ ರೋಲ್​​ನಲ್ಲಿ ಅದೇ ಕ್ಲಾಸ್ ಪರ್ಫಾಮೆನ್ಸ್​ ನೀಡ್ತಿದ್ದಾರೆ. ಪ್ರತಿ ತಂಡದ ಎದುರು ಅಬ್ಬರಿಸುತ್ತಿರುವ ಸೈಲೆಂಟ್ ಕಿಲ್ಲರ್, ಬ್ಯಾಟ್​ನಿಂದಲೇ ಎಲ್ಲಕ್ಕೂ ಉತ್ತರ ನೀಡ್ತಿದ್ದಾರೆ. ಅದೇ ರೀತಿ ಚಿನ್ನಸ್ವಾಮಿಯ ಕೋಟೆಯಲ್ಲಿ ಅಬ್ಬರಿಸಿದ ಕರುನಾಡ ಕಲಿ ರಾಹುಲ್, ಇದು ನನ್ ಅಡ್ಡ.. ಇಲ್ಲಿ ನಾನೇ ರಾಜ ಎಂಬ ಸಂದೇಶ ನೀಡಿದ್ದಾರೆ. ಜೊತೆಗೆ ಇಂಡಿಯನ್ ಪ್ರೀಮಿಯರ್ ಲೀಗ್​ನ ಅಸಲಿ ಲಯನ್ ನಾನೇ ಎಂಬ ಸಂದೇಶವನ್ನೂ ರವಾನಿಸಿದ್ದಾರೆ.

publive-image

ಐಪಿಎಲ್ ಟೂರ್ನಿಗೆ ರಾಹುಲ್ ರಿಯಲ್ ಲಯನ್..!
ಕನ್ನಡಿಗ ರಾಹುಲ್ ಮುಂದೆ ಕಿಂಗ್ ಕೊಹ್ಲಿ ಸೈಲೆಂಟ್..!
ಐಪಿಎಲ್​ನ ರೂಲರ್, ಚಿನ್ನಸ್ವಾಮಿಯ ಚಿನ್ನ ಯಾರು ಅಂದ್ರೆ, ಫ್ಯಾನ್ಸ್ ಎಲ್ಲಾ ಕೊಹ್ಲಿಯ ನಾಮ ಜಪಿಸ್ತಾರೆ. ಆದ್ರೆ, ರಿಯಲ್ ಲಯನ್, ರಿಯಲ್ ಚಿನ್ನಸ್ವಾಮಿಯ ಚಿನ್ನ ಕನ್ನಡಿಗ ಕೆ.ಎಲ್.ರಾಹುಲ್. ಇದಕ್ಕೆ ಬೆಸ್ಟ್​ ಎಕ್ಸಾಂಪಲ್ ಚಿನ್ನಸ್ವಾಮಿಯಲ್ಲಿ ಕೊಹ್ಲಿ ಹಾಗೂ ರಾಹುಲ್​ ನಡುವಿನ ಬ್ಯಾಟಿಂಗ್ ಅವರೇಜ್.

ಇದನ್ನೂ ಓದಿ: 40 ಬಾಲ್‌ಗೆ 100 ಸಂಭ್ರಮ.. ಅಭಿಷೇಕ್ ಶರ್ಮಾ ಚೀಟಿಯಲ್ಲಿ ಬರೆದಿದ್ದೇನು? ಏನಿದರ ವಿಶೇಷ ಗೊತ್ತಾ? 

ಚಿನ್ನಸ್ವಾಮಿಯಲ್ಲಿ 18 ವರ್ಷಗಳಿಂದ ಆಡ್ತಿರುವ ವಿರಾಟ್, ಜಸ್ಟ್ 39ರ ಬ್ಯಾಟಿಂಗ್ ಅವರೇಜ್‌ನಲ್ಲಿ ರನ್ ಗಳಿಸಿದ್ರೆ, ಕೇವಲ 15 ಇನ್ನಿಂಗ್ಸ್​ಗಳಲ್ಲಿ ಬ್ಯಾಟ್ ಬೀಸಿರುವ ರಾಹುಲ್​, 44ರ ಬ್ಯಾಟಿಂಗ್​ ಅವರೇಜ್ ಹೊಂದಿದ್ದಾರೆ. ಅಷ್ಟೇ ಅಲ್ಲ.. ವಿರಾಟ್​ಗಿಂತ ಉತ್ತಮ ಸ್ಟ್ರೈಕ್​ರೇಟ್ ಹೊಂದಿದ್ದಾರೆ. ಇಂಡಿಯನ್ ಪ್ರೀಮಿಯರ್​​ ಲೀಗ್​ನ ಅಂಕಿ ಅಂಶಗಳು ಸಹ ಕೆ.ಎಲ್. ರಾಹುಲ್​, ರಿಯಲ್ ರೂಲರ್ ಅಂತಿದ್ದಾವೆ.

ಐಪಿಎಲ್​ನ ಅಸಲಿ ರೂಲರ್​​ ಕನ್ನಡಿಗ ಕೆ.ಎಲ್.ರಾಹುಲ್​ ..!
2018ರ ನಂತರದ ಅಂಕಿಅಂಶಗಳು ಹೇಳ್ತಿವೆ ಕಠೋರ ಸತ್ಯ..!
ಪ್ರತಿ ಸಲ ಹೆಯೆಸ್ಟ್ ರನ್ ಗೆಟರ್, ಹೈಯೆಸ್ಟ್ 50 ಸ್ಕೋರರ್ ಯಾರು ಅಂದ್ರೆ, ಸಾಮಾನ್ಯವಾಗಿ ಕೊಹ್ಲಿ ಹೆಸರನ್ನೇ ಹೇಳ್ತೇವೆ. ಆದ್ರೆ, 2018ರ ನಂತರ ಅಂಕಿಅಂಶಗಳನ್ನು ನೋಡಿದ್ರೆ.. ಕೆ.ಎಲ್.ರಾಹುಲ್​​​​​​​​​​​​​​ ಆಟದ ಮುಂದೆ ವಿರಾಟ್ ವೀರಾವೇಶ ಏನೂ ನಡೆದಿಲ್ಲ.

publive-image

2018ರಿಂದ ಐಪಿಎಲ್​ನಲ್ಲಿ ರಾಹುಲ್, ಕೊಹ್ಲಿ
2018ರ ಐಪಿಎಲ್​ನಿಂದ ಇದುವರೆಗೆ ಕೆ.ಎಲ್.ರಾಹುಲ್, 96 ಪಂದ್ಯಗಳಿಂದ 4143 ರನ್ ಕಲೆ ಹಾಕಿದ್ದಾರೆ. 51.14ರ ಬ್ಯಾಟಿಂಗ್ ಅವರೇಜ್​ನಲ್ಲಿ ರನ್​ ಗಳಿಸಿರುವ ಕೆ.ಎಲ್. ರಾಹುಲ್, 35 ಅರ್ಧಶತಕ, 4 ಶತಕ ಸಿಡಿಸಿದ್ದಾರೆ. ಇದೇ ಅವಧಿಯಲ್ಲಿ ವಿರಾಟ್ ಕೊಹ್ಲಿ, 108 ಪಂದ್ಯಗಳಿಂದ 3772 ರನ್ ಸಿಡಿಸಿದ್ದಾರೆ. ಅದು ಕೂಡ 40ರ ಬ್ಯಾಟಿಂಗ್ ಅವರೇಜ್​ನಲ್ಲಿ, 27 ಅರ್ಧಶತಕ ದಾಖಲಿಸಿರುವ ಕೊಹ್ಲಿ, 4 ಶತಕ ಸಿಡಿಸಿದ್ದಾರೆ.

ಚೇಸಿಂಗ್​ನಲ್ಲೂ ಕೆ.ಎಲ್.ರಾಹುಲ್​ಗೆ ಸಾಟಿಯಿಲ್ಲ..!
ಪಂದ್ಯ ಶ್ರೇಷ್ಠ ಪ್ರಶಸ್ತಿಯಲ್ಲೂ ಕನ್ನಡಿಗನೇ ಮುಂದೆ..!
ಕೊಹ್ಲಿ ಚೇಸಿಂಗ್​ ಮಾಸ್ಟರ್​ ಅನ್ನೋ ಮಾತು ಐಪಿಎಲ್​ನಲ್ಲಿ ಸುಳ್ಳಾಗಿದೆ. ಯಾಕಂದ್ರೆ, 2018ರಿಂದ ಐಪಿಎಲ್​ನಲ್ಲಿ ಚೇಸಿಂಗ್ ವೇಳೆ ರಾಹುಲ್​ 21 ಅತಿ ಹೆಚ್ಚು ಅರ್ಧಶತಕ ಸಿಡಿಸಿದ್ರೆ, ವಿರಾಟ್ ಕೊಹ್ಲಿ ಕೇವಲ 9 ಅರ್ಧಶತಕ ಸಿಡಿಸಿದ್ದಾರೆ. 25 ಬಾರಿ ಸಕ್ಸಸ್​ ಫುಲ್ ಆಗಿ ತಂಡವನ್ನು ಗೆಲುವಿನ ದಡ ಸೇರಿಸಿರುವ ಕೆ.ಎಲ್ ರಾಹುಲ್, 148.58ರ ಸ್ಟ್ರೈಕ್​ರೇಟ್​ನಲ್ಲಿ ಬ್ಯಾಟ್ ಬೀಸಿದ್ದು, ಬರೋಬ್ಬರಿ 71.05ರ ಬ್ಯಾಟಿಂಗ್ ಅವರೇಜ್ ಹೊಂದಿದ್ದಾರೆ. 15 ಬಾರಿ ಮ್ಯಾನ್ ಆಫ್ ದಿ ಮ್ಯಾಚ್ ಅವಾರ್ಡ್​ ಪಡೆದುಕೊಂಡಿದ್ದಾರೆ. ಆದ್ರೆ, ಕೊಹ್ಲಿ 18 ವರ್ಷಗಳ ಸುದೀರ್ಘ ಕರಿಯರ್​ನಲ್ಲಿ ಪಡೆದುಕೊಂಡಿರೋದು ಕೇವಲ 18 ಮ್ಯಾನ್​ ಆಫ್​ ದ ಮ್ಯಾಚ್​ ಅವಾರ್ಡ್​.

publive-image

ಇದಿಷ್ಟೇ ಅಲ್ಲ. ಮುಂಬೈ, ಚೆನ್ನೈ, ಕೆಕೆಆರ್ ಹಾಗೂ ಆರ್​ಸಿಬಿಯಂತಹ ಬಿಗ್ ಟೀಮ್ಸ್​ ಎದುರೇ ಅದ್ಬುತ ದಾಖಲೆ ಹೊಂದಿರುವ ಕೆ.ಎಲ್.ರಾಹುಲ್, ಈ 4 ತಂಡಗಳ ಎದುರೇ 10 ಮ್ಯಾನ್ ಆಫ್ ದ ಮ್ಯಾಚ್ ಅವಾರ್ಡ್​ ದಕ್ಕಿಸಿಕೊಂಡಿದ್ದಾರೆ. 2018ರ ಸೀಸನ್​​ನಿಂದ ಹಿಡಿದು 2024ರ ಸೀಸನ್ ತನಕ 4 ಬಾರಿ 600ಕ್ಕೂ ಅಧಿಕ ರನ್ ಗಳಿಸಿರುವ ರಾಹುಲ್​, 2 ಬಾರಿ 500ಕ್ಕೂ ಅಧಿಕ ರನ್ ಗಳಿಸಿದ್ದಾರೆ. ಇದು ಕೆ.ಎಲ್.ರಾಹುಲ್​​​​​​ನ ಕನ್ಸಿಸ್ಟೆಂಟ್​ ಆಟಕ್ಕೆ ಹಿಡಿದ ಕೈಗನ್ನಡಿಯಾಗಿದೆ. ಇದೇ ಕಾರಣಕ್ಕೆ ಹೇಳ್ತಿರುವುದು ಕೆ.ಎಲ್.ರಾಹುಲ್, ಐಪಿಎಲ್​ನ ರಿಯಲ್ ಲಯನ್ ಅಂತ.

ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್‌ ಫಸ್ಟ್‌ ಚಾನೆಲ್​​ನಲ್ಲಿ ‘ರನ್ ಭೂಮಿ’ ವೀಕ್ಷಿಸಿ

Advertisment