/newsfirstlive-kannada/media/post_attachments/wp-content/uploads/2024/11/BHUVI.jpg)
ಐಪಿಎಲ್ ಮೆಗಾ ಹರಾಜಿನಲ್ಲಿ ಆರ್ಸಿಬಿ ಸೇರಿದ ಬಳಿಕ ವೇಗಿ ಭುವನೇಶ್ವರ್ ಕುಮಾರ್ ಸಂತಸ ವ್ಯಕ್ತಪಡಿಸಿದ್ದಾರೆ. ವಿಡಿಯೋ ಮೂಲಕ ಖರೀದಿಸಿದ ಆರ್ಸಿಬಿ ಮ್ಯಾನೇಜ್ಮೆಂಟ್ಗೆ ಧನ್ಯವಾದ ತಿಳಿಸಿದ್ದಾರೆ.
ಆರ್ಸಿಬಿ ತಂಡವನ್ನ ಸೇರಿದ್ದು ನನಗೆ ಖುಷಿ ತಂದಿದೆ. ನನ್ನ ಮೇಲೆ ನಂಬಿಕೆ ಇಟ್ಟ ಮ್ಯಾನೇಜ್ಮೆಂಟ್ಗೆ ಧನ್ಯವಾದ. ಉತ್ತಮ ಪ್ರದರ್ಶನ ನೀಡಲು ಎದುರು ನೋಡ್ತಿದ್ದೇನೆ ಎಂದು ವೇಗಿ ಭುವನೇಶ್ವರ್ ಕುಮಾರ್ ಹೇಳಿದ್ದಾರೆ. ಭುವನೇಶ್ವರ್ ಕುಮಾರ್ ಅವರನ್ನು 10.75 ಕೋಟಿ ನೀಡಿ ಆರ್ಸಿಬಿ ಖರೀದಿಸಿದೆ. ಭುವಿ ಅವರ ಮೂಲ ಬೆಲೆ 2 ಕೋಟಿ ರೂಪಾಯಿ ಆಗಿತ್ತು.
ಇದನ್ನೂ ಓದಿ: Umpire Jobs: ಕ್ರಿಕೆಟ್ ಅಂಪೈರ್ ಆಗೋದು ಹೇಗೆ..? ಲಕ್ಷ ಲಕ್ಷ ಸ್ಯಾಲರಿ..! ಆಯ್ಕೆ ಪ್ರಕ್ರಿಯೆ ಹೇಗಿರುತ್ತದೆ..?
Bhuvi + Chinnaswamy with ‘Bhuvi Bhuvi’ chants: Goosebumps guaranteed. ❤
Can’t wait to see you home, King of Swing. 👑@BhuviOfficial | #PlayBold#ನಮ್ಮRCB#IPLAuction#BidForBold#IPL2025pic.twitter.com/4aPCu4n2nk— Royal Challengers Bengaluru (@RCBTweets) November 26, 2024
ಅಂದ್ಹಾಗೆ ಭುವಿ ಐಪಿಎಲ್ ಜರ್ನಿ ಆರಂಭಿಸಿದ್ದು ಆರ್ಸಿಬಿ ಮೂಲಕವೇ. 2009ರಲ್ಲಿ ಆರ್ಸಿಬಿ ಸೇರಿಕೊಂಡಿದ್ದರು. ಎರಡು ಸೀಸನ್ ಆಡಿದ ಮೇಲೆ ಪುಣೆ ವಾರಿಯರ್ಸ್ ಸೇರಿದ್ದರು. 2014ರಲ್ಲಿ ಸನ್ ರೈಸರ್ಸ್ ಹೈದ್ರಾಬಾದ್ ತಂಡ ಕೂಡಿಕೊಂಡಿದ್ದರು. ಐಪಿಎಲ್ನಲ್ಲಿ ಒಟ್ಟು 176 ಪಂದ್ಯಗಳನ್ನು ಆಡಿರುವ ಅನುಭವ ಹೊಂದಿರುವ ಭುವಿ 181 ವಿಕೆಟ್ ಪಡೆದುಕೊಂಡಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ