/newsfirstlive-kannada/media/post_attachments/wp-content/uploads/2025/02/KOHLI-GILL.jpg)
ಫೆಬ್ರವರಿ 6 ರಂದು ಟೀಂ ಇಂಡಿಯಾ ಇಂಗ್ಲೆಂಡ್ ವಿರುದ್ಧ ಮೊದಲ ಏಕದಿನ ಪಂದ್ಯವನ್ನು ಆಡಿತು. ಟಾಸ್ ಗೆದ್ದು ಇಂಗ್ಲೆಂಡ್ ನೀಡಿದ್ದ 249 ರನ್ಗಳ ಗುರಿಯನ್ನು ಭಾರತ ಕೇವಲ 38.4 ಓವರ್ನಲ್ಲಿ 6 ವಿಕೆಟ್ ಕಳೆದುಕೊಂಡು ಗೆಲುವು ದಾಖಲಿಸಿತು.
ಮೊದಲ ಪಂದ್ಯದಲ್ಲಿ ಟೀಂ ಇಂಡಿಯಾ ಅಭಿಮಾನಿಗಳಿಗೆ ಅಚ್ಚರಿಯೊಂದು ಕಾದಿತ್ತು. ಅದು ವಿರಾಟ್ ಕೊಹ್ಲಿಯನ್ನು ಪ್ಲೇಯಿಂಗ್-11ನಿಂದ ಹೊರಗಿಟ್ಟಿರೋದು. ಕೊನೆಗೆ ಗೊತ್ತಾಗಿದ್ದು ಏನೆಂದತೆ ವಿರಾಟ್ ಕೊಹ್ಲಿಗೆ ಮಂಡಿ ನೋವಿನ ಸಮಸ್ಯೆ ಉಲ್ಬಣಿಸಿದೆ. ಹೀಗಾಗಿ ಅವರು ಮೊದಲ ಪಂದ್ಯದಲ್ಲಿ ಆಡುತ್ತಿಲ್ಲ ಎಂದು ಕ್ಯಾಪ್ಟನ್ ರೋಹಿತ್ ಶರ್ಮಾ ಮಾಹಿತಿ ನೀಡಿದ್ದರು.
ಇದನ್ನೂ ಓದಿ: ಅದಾನಿ ಮಹಾದಾನಿ..! ಪುತ್ರನ ಮದುವೆ ಸಿಂಪಲ್ಲಾಗಿ ಮಾಡಿ 10,000 ಕೋಟಿ ರೂಪಾಯಿ ದಾನ
ಇದೀಗ ಕೊಹ್ಲಿ ಅವರ ಮಂಡಿ ನೋವಿಗೆ ಸಂಬಂಧಿಸಿದಂತೆ ಉಪನಾಯಕ ಶುಬ್ಮನ್ ಗಿಲ್ ಮಹತ್ವದ ಮಾಹಿತಿಯನ್ನು ನೀಡಿದ್ದಾರೆ. ಎರಡನೇ ಪಂದ್ಯಕ್ಕೆ ಕೊಹ್ಲಿ ಲಭ್ಯರಾಗಲಿದ್ದಾರೆ. ವಿರಾಟ್ ಕೊಹ್ಲಿಗೆ ಆಗಿರುವ ಗಾಯ ಗಂಭೀರವಾದುದಲ್ಲ. ಅವರು ಅಭ್ಯಾಸದ ವೇಳೆ ಚೆನ್ನಾಗಿಯೇ ಇದ್ದರು. ಗುರುವಾರ ಬೆಳಗ್ಗೆ ಮೊಣಕಾಲಿನಲ್ಲಿ ಊತ ಕಾಣಿಸಿಕೊಂಡಿತು. ಅವರು ಖಂಡಿತವಾಗಿಯೂ ಎರಡನೇ ಪಂದ್ಯವನ್ನು ಆಡಲಿದ್ದಾರೆ ಅಂತಾ ತಿಳಿಸಿದ್ದಾರೆ.
ಟೀಂ ಇಂಡಿಯಾ: ರೋಹಿತ್ ಶರ್ಮಾ (ನಾಯಕ), ಶುಭ್ಮನ್ ಗಿಲ್ (ಉಪನಾಯಕ), ವಿರಾಟ್ ಕೊಹ್ಲಿ, ಶ್ರೇಯಸ್ ಅಯ್ಯರ್, ಕೆಎಲ್ ರಾಹುಲ್, ಹಾರ್ದಿಕ್ ಪಾಂಡ್ಯ, ಅಕ್ಷರ್ ಪಟೇಲ್, ವಾಷಿಂಗ್ಟನ್ ಸುಂದರ್, ಕುಲ್ದೀಪ್ ಯಾದವ್, ಜಸ್ಪ್ರೀತ್ ಬುಮ್ರಾ, ಮೊಹಮ್ಮದ್ ಶಮಿ, ಅರ್ಷದೀಪ್ ಸಿಂಗ್, ಯಶಸ್ವಿ ಜೈಸ್ವಾಲ್, ರಿಷಬ್ ಪಂತ್, ರವೀಂದ್ರ ಜಡೇಜಾ
ಇದನ್ನೂ ಓದಿ: RCB, ಶ್ರೇಯಾಂಕ ಪಾಟೀಲ್ ಅಭಿಮಾನಿಗಳಿಗೆ ಸ್ವೀಟ್ ನ್ಯೂಸ್.. ಹೊಸ ಸಮಾಚಾರ..!
ವಿಶೇಷ ಸೂಚನೆ: ಕ್ರಿಕೆಟ್ನ ವಿಶೇಷ ಸುದ್ದಿಗಳಿಗಾಗಿ ವೀಕ್ಷಿಸಿ 'ರನ್ ಭೂಮಿ' ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ ಫಸ್ಟ್ ಚಾನೆಲ್