ಐಪಿಎಲ್ನ ಅಬ್ಬರ.. ಟಿ20 ವಿಶ್ವಕಪ್ನಲ್ಲಿ ಮಾಯ..!
ತಲೆಕೆಳಗಾಯ್ತು ಟೀಮ್ ಮ್ಯಾನೇಜ್ಮೆಂಟ್ ಲೆಕ್ಕಾಚಾರ..!
3 ಪಂದ್ಯ.. 5 ರನ್.. 9 ಎಸೆತ.. ಕೊಹ್ಲಿ ಟ್ರ್ಯಾಕ್ ರೆಕಾರ್ಡ್!
ವಿರಾಟ್ ಕೊಹ್ಲಿ.. ವಿಶ್ವ ಕ್ರಿಕೆಟ್ನ ರನ್ ಸಾಮ್ರಾಟ. ಕೊಹ್ಲಿ ಅಪ್ರತಿಮ ಬ್ಯಾಟಿಂಗ್ಗೆ ಒಂದಿಲ್ಲೊಂದು ದಾಖಲೆ ಚಿಂದಿಯಾಗುತ್ತೆ. ವಿರಾಟ್ ಕೊಹ್ಲಿಯ ಕ್ಲಾಸ್ ಆ್ಯಂಡ್ ಮಾಸ್ ಪರ್ಫಾಮೆನ್ಸ್ಗೆ ವಿಲವಿಲ ಒದ್ದಾಡೋ ಬೌಲರ್ಗಳು, ವಿಕೆಟ್ ಪಡೆಯೋದಕ್ಕೆ ಪರದಾಡ್ತಾರೆ. ಇದೇ ದಿಗ್ಗಜ ರನ್ ಗಳಿಸೋಕೆ ಪರದಾಡ್ತಿದ್ದಾರೆ. ಇದು ಟೀಮ್ ಇಂಡಿಯಾಗೆ ಟೆನ್ಶನ್ ತಂದಿಟ್ಟಿದೆ.
ವಿರಾಟ್ ಕೊಹ್ಲಿ.. ಕ್ರೀಸ್ಗೆ ಇಳಿದ್ರೆ ಸಾಕು, ಎದುರಾಳಿಗಳಿಗೆ ನಡುಕ ಶುರುವಾಗುತ್ತೆ. ವಿರಾಟ್ ಕೊಹ್ಲಿಯ ರನ್ ರೌದ್ರಾವತಾರಕ್ಕೆ ಎದುರಾಳಿಗಳು ಉಡೀಸ್ ಆಗ್ತಾರೆ. ಅಷ್ಟರಮಟ್ಟಿಗೆ ಆನ್ಫೀಲ್ಡ್ನಲ್ಲಿ ವಿರಾಟ್ ಅಬ್ಬರಿಸಿ ಬೊಬ್ಬಿರಿಯುತ್ತಾರೆ. ಪ್ರತಿಯೊಂದು ಪಂದ್ಯದಲ್ಲೂ ಒಂದಿಲ್ಲೊಂದು ದಾಖಲೆ ಸೃಷ್ಟಿಸ್ತಾರೆ. ಟಿ20 ವಿಶ್ವಕಪ್ ಅಂದ್ರೆ, ತಾನೇ ಮ್ಯಾಚ್ ವಿನ್ನರ್, ತಂಡದ ಆಪ್ತ ರಕ್ಷಕನಾಗಿ ಇರ್ತಾರೆ. ಆದ್ರೀಗ ಇದೇ ವಿರಾಟ್ ತಲೆನೋವಾಗಿದ್ದಾರೆ.
ಇದನ್ನೂ ಓದಿ:‘ಅವರಣ್ಣ ಉಂಟು, ಅವನುಂಟು.. ನಾವು ತಲೆನೇ ಕೆಡಿಸಿಕೊಳ್ಳಲ್ಲ’ ಆರೋಪಿ ಪವನ್ ತಂದೆ ಅಚ್ಚರಿ ಹೇಳಿಕೆ
ಟಿ20 ವಿಶ್ವಕಪ್ನಲ್ಲಿ ಅಬ್ಬರಿಸಬೇಕಿದ್ದ ವಿರಾಟ್ ಕೊಹ್ಲಿ, ಮಂಕಾಗಿ ಹೋಗಿದ್ದಾರೆ. ರನ್ ಶಿಖರ ಕಟ್ಟಬೇಕಿದ್ದ ರನ್ ಮಷಿನ್, ಆರಂಭಿಕನಾಗಿ ಫುಲ್ ಡಲ್ ಆಗಿದ್ದಾರೆ. ಇದು ಟೀಮ್ ಮ್ಯಾನೇಜ್ಮೆಂಟ್ಗೆ ಮಾತ್ರವಲ್ಲ.. ಫ್ಯಾನ್ಸ್ ಮನದಲ್ಲೂ ಆತಂಕ ಮೂಡಿಸಿದೆ. ಅಷ್ಟೇ ಅಲ್ಲ..! ವಿರಾಟ್ ಕೊಹ್ಲಿಗೆ ಫೇವರಿಟ್ ಸ್ಲಾಟ್ ನೀಡುವಂತೆ ಕಿಡಿ ಕಾರುತ್ತಿದ್ದಾರೆ. ಹೀಗಾಗಿ ವಿರಾಟ್ ಕೊಹ್ಲಿಯ ಸ್ಲಾಟ್ ಚೇಂಜಸ್ಗೆ ಟೀಮ್ ಮ್ಯಾನೇಜ್ಮೆಂಟ್ ಮುಂದಾಗಿದೆ.
ಐಪಿಎಲ್ನಲ್ಲಿ ಅಬ್ಬರ.. T20 ವಿಶ್ವಕಪ್ನಲ್ಲಿ ಮಾಯ..!
ಐಪಿಎಲ್ನಲ್ಲಿ ಸಿಡಿಲಬ್ಬರದ ಬ್ಯಾಟಿಂಗ್ ಪ್ರದರ್ಶಿಸಿದ್ದ ವಿರಾಟ್ ಕೊಹ್ಲಿ, ಟಿ20 ವಿಶ್ವಕಪ್ನಲ್ಲಿ ಫುಲ್ ಮಂಕಾಗಿದ್ದಾರೆ. ಇದಕ್ಕೆ ಸಾಕ್ಷಿ ಟಿ20 ವಿಶ್ವಕಪ್ನಲ್ಲಿ ಮೊದಲ 3 ಪಂದ್ಯಗಳಲ್ಲಿ ವಿರಾಟ್ ಕೊಹ್ಲಿ ನೀಡಿರೋ ಹೀನಾಯ ಪರ್ಫಾಮೆನ್ಸ್. ಆರಂಭಿಕನಾಗಿ ಐಪಿಎಲ್ನಲ್ಲಿ ಅಬ್ಬರಿಸಿದ್ದ ವಿರಾಟ್, ಟಿ20 ವಿಶ್ವಕಪ್ನಲ್ಲಿ ಇನ್ನಿಂಗ್ಸ್ ಆರಂಭಿಸಲಿ ಅನ್ನೋದು ಎಲ್ಲರ ಹೆಬ್ಬಯಕೆ ಆಗಿತ್ತು. ಐಪಿಎಲ್ನಲ್ಲಿ ರನ್ ಫೆಸ್ಟ್ ಮಾಡಿದ್ದ ವಿರಾಟ್, ಟಿ20 ವಿಶ್ವಕಪ್ನಲ್ಲಿ ಎರಡಂಕಿ ಮೊತ್ತ ಕಲೆಹಾಲು ಹೆಣಗಾಡ್ತಿದ್ದಾರೆ. ಐರ್ಲೆಂಡ್ನಂತ ಸಣ್ಣ ದೇಶದ ಎದುರು ಕೇವಲ 1 ರನ್ಗೆ ಔಟಾಗಿದ್ದ ಕೊಹ್ಲಿ, ಪಾಕ್ ಎದುರು 4 ರನ್ಗೆ ಆಟ ಮುಗಿಸಿದ್ರು. ಯುಎಸ್ಎ ವಿರುದ್ಧವಂತೂ ಶೂನ್ಯಕ್ಕೆ ಪೆವಿಲಿಯನ್ ಸೇರಿದ್ರು. ಇಂಟ್ರೆಸ್ಟಿಂಗ್ ಅಂದ್ರೆ ಈ 3 ಪಂದ್ಯಗಳಿಂದ ಕೊಹ್ಲಿ ಎದುರಿಸಿದ ಎಸೆತ ಜಸ್ಟ್ 9.. ಹೀಗೆ ಸುಲಭಕ್ಕೆ ವಿರಾಟ್ ವಿಕೆಟ್ ಒಪ್ಪಿಸಿರುವುದು ಟೀಮ್ ಇಂಡಿಯಾದ ಚಿಂತೆ ಹೆಚ್ಚಿಸಿದೆ.
ಇದನ್ನೂ ಓದಿ:36 ಗಂಟೆ.. 13 ಅಧಿಕಾರಿಗಳು.. ರೋಚಕ.. ಸಿನಿಮಾವನ್ನೂ ಮೀರಿಸಿದ ‘ಆಪರೇಷನ್ ಡಿ’..!
ಸೂಪರ್-8ನಲ್ಲಿ ವಿರಾಟ್ ಫಾರ್ಮ್ ಅನಿವಾರ್ಯ..!
ಟೀಮ್ ಇಂಡಿಯಾ ಪಾಲಿಗೆ ಸೂಪರ್ 8 ಪಂದ್ಯಗಳು ನಿರ್ಣಾಯಕ. ಈ ವೇಳೆಗೆ ವಿರಾಟ್ ಕೊಹ್ಲಿ, ಫಾರ್ಮ್ ಕಂಡುಕೊಳ್ಳಬೇಕಾದ ಅನಿವಾರ್ಯತೆ ಟೀಮ್ ಇಂಡಿಯಾಗಿದೆ. ಯಾಕಂದ್ರೆ, ಇಲ್ಲಿನ ಪ್ರತಿ ಪಂದ್ಯದಲ್ಲೂ ಟೀಮ್ ಇಂಡಿಯಾಗೆ ಕ್ರೂಶಿಯಲ್ ಆಗಿರಲಿವೆ. ವಿರಾಟ್ ಕೊಹ್ಲಿಯಂತಹ ಅನುಭವಿ ಆಟಗಾರನ ರೋಲ್ ಇಂಪಾರ್ಟೆಂಟ್ ಆಗಿರಲಿದೆ. ಹೀಗಾಗಿ ವಿರಾಟ್ ಕೊಹ್ಲಿ ಫಾರ್ಮ್ ಬಗ್ಗೆ ತಲೆ ಕೆಡಿಸಿಕೊಂಡಿರುವ ಟೀಮ್ ಮ್ಯಾನೇಜ್ಮೆಂಟ್, ಕೆನಡಾ ಎದುರಿನ ಪಂದ್ಯದಲ್ಲಿ ವಿರಾಟ್ ಕೊಹ್ಲಿಯನ್ನ ಮರಳಿ 3ನೇ ಕ್ರಮಾಂಕದಲ್ಲಿ ಬ್ಯಾಟಿಂಗ್ಗೆ ಇಳಿಸಿದರು ಅಚ್ಚರಿ ಇಲ್ಲ..
3ನೇ ಕ್ರಮಾಂಕಕ್ಕೆ ಕೊಹ್ಲಿ.. ಜೈಸ್ವಾಲ್ ಓಪನರ್..?
ಆರಂಭಿಕನಾಗಿ ವೈಫಲ್ಯ ಅನುಭವಿಸಿರುವ ವಿರಾಟ್ ಕೊಹ್ಲಿ, ತನ್ನ ಫೇವರಿಟ್ 3ನೇ ಕ್ರಮಾಂಕದಲ್ಲೇ ಬ್ಯಾಟಿಂಗ್ಗೆ ಇಳಿದ್ರೆ, ಸ್ಪೆಷಲಿಸ್ಟ್ ಓಪನರ್ ಮುಂಬೈಕರ್ ಜೈಸ್ವಾಲ್, ರೋಹಿತ್ ಶರ್ಮಾ ಜೊತೆ ಇನ್ನಿಂಗ್ಸ್ ಆರಂಭಿಸುವುದು ಗ್ಯಾರಂಟಿ. ಮುಂಬೈಕರ್ಗಳು ಇನ್ನಿಂಗ್ಸ್ ಆರಂಭಿಸುವುದು ಟೀಮ್ ಇಂಡಿಯಾ ಬಿಗ್ ಅಡ್ವಾಂಟೇಜ್ ಆಗಲಿದೆ. ಲೆಫ್ಟಿ ರೈಟಿ ಕಾಂಬಿನೇಷನ್ನಿಂದ ಎದುರಾಳಿ ಮೇಲೆಯೂ ಒತ್ತಡ ಹೇರಬಹುದಾಗಿದೆ.
ಟಿ20 ವಿಶ್ವಕಪ್ ಇತಿಹಾಸದಲ್ಲಿ ಲೀಡಿಂಗ್ ರನ್ ಸ್ಕೋರರ್ ಆಗಿರೋ ವಿರಾಟ್, ಎಂದಿನ 3ನೇ ಕ್ರಮಾಂಕದಲ್ಲೇ ಬ್ಯಾಟ್ ಬೀಸೋದ್ರಿಂದ ಫಾರ್ಮ್ ಕಂಡುಕೊಳ್ಳಲು ನೆರವಾಗುತ್ತೆ. ಇದೇ ಸ್ಲಾಟ್ನಲ್ಲಿ ಬ್ಯಾಟ್ ಬೀಸಿಯೇ ವಿರಾಟ್, ಅಂತಾರಾಷ್ಟ್ರೀಯ ಟಿ20 ಕ್ರಿಕೆಟ್ನಲ್ಲಿ 3 ಸಾವಿರಕ್ಕೂ ಅಧಿಕ ರನ್ ಗಳಿಸಿರುವುದು. ಹೀಗಾಗಿ ಹಾಟ್ ಫೇವರಿಟ್ ಸ್ಲಾಟ್ನಲ್ಲೇ ವಿರಾಟ್, ಬ್ಯಾಟ್ ಬೀಡೋದು ತಂಡಕ್ಕೆ ಉತ್ತಮ ಕೂಡ. ಯಶಸ್ವಿ ಎಂಟ್ರಿ ಯಾರ ಪಾಲಿಗೆ ಮುಳ್ಳಾಗುತ್ತೆ ಅನ್ನೋದು ಯಕ್ಷಪ್ರಶ್ನೆ.
ಇದನ್ನೂ ಓದಿ:ಟೀಂ ಇಂಡಿಯಾ ಸೋಲೇ ಇಲ್ಲದೇ ಮುನ್ನುಗ್ತಿದ್ದರೂ ಫ್ಯಾನ್ಸ್ಗೆ ಭಾರೀ ಬೇಸರ.. ಅದಕ್ಕೆಲ್ಲ ಕಾರಣ ಈತ..!
ಒಟ್ನಲ್ಲಿ, ಐಪಿಎಲ್ ಸಕ್ಸಸ್ ಅನ್ನೇ ನಂಬಿಕೊಂಡು ಕಿಂಗ್ ಕೊಹ್ಲಿಯನ್ನ ಆರಂಭಿಕರನ್ನಾಗಿ ಟೀಮ್ ಮ್ಯಾನೇಜ್ಮೆಂಟ್ ಆಡಿಸಿ ಕೈಸುಟ್ಟುಕೊಂಡಿದೆ. ಹೀಗಾಗಿ ಮುಂದಿನ ಮಹತ್ವದ ಪಂದ್ಯಗಳಲ್ಲಿ ಮೂರನೇ ಕ್ರಮಾಂಕದಲ್ಲೇ ಆಡಿಸಿ ಸಕ್ಸಸ್ ಕಾಣುವ ಲೆಕ್ಕಚಾರ ಮ್ಯಾನೇಜ್ಮೆಂಟ್ ಮುಂದಿದ್ದು, ಕಾರ್ಯರೂಪಕ್ಕೆ ಇಳಿಸುತ್ತಾ ಅನ್ನೋದನ್ನ ಕಾದುನೋಡಬೇಕಿದೆ.
ವಿಶೇಷ ಸೂಚನೆ: ಕ್ರಿಕೆಟ್ನ ವಿಶೇಷ ಸುದ್ದಿಗಳಿಗಾಗಿ ವೀಕ್ಷಿಸಿ ‘ರನ್ ಭೂಮಿ’ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ ಫಸ್ಟ್ ಚಾನೆಲ್