/newsfirstlive-kannada/media/post_attachments/wp-content/uploads/2024/11/VIRAT_KOHLI.jpg)
ಕ್ರಿಕೆಟ್ ಲೋಕದ ಕಿಂಗ್ ಯಾರು ಅಂದ್ರೆ ಇಡೀ ವಿಶ್ವ ಕ್ರಿಕೆಟ್ ವಿರಾಟ್ ಕೊಹ್ಲಿಯತ್ತ ಕೈ ತೋರಿಸುತ್ತೆ. ಕೊಹ್ಲಿಯ ಕಿಂಗ್ ಪಟ್ಟಕ್ಕೆ ಈಗ ಕುತ್ತು ಬಂದಿದೆ. ಪಟ್ಟವನ್ನ ಕಬ್ಜಾ ಮಾಡಲು ಉತ್ತರಾಧಿಕಾರಿ ಯಶಸ್ವಿ ಜೈಸ್ವಾಲ್ ಸಜ್ಜಾಗಿದ್ದಾರೆ. ನಾವಲ್ಲ.. ಆಸ್ಟ್ರೇಲಿಯಾದವರೆಲ್ಲಾ ಜೈಸ್ವಾಲ್ನ ನ್ಯೂ ಕಿಂಗ್ ಅಂತಿದ್ದಾರೆ. ಕಾಂಗರೂ ನಾಡಲ್ಲಿ ಯಶಸ್ವಿಯ ಫೀವರ್ ಜೋರಾಗಿದೆ.
‘ದಿ ನ್ಯೂ ಕಿಂಗ್‘ ಯಶಸ್ವಿ ಜೈಸ್ವಾಲ್..!
ಯಶಸ್ವಿ ಜೈಸ್ವಾಲ್.. ಟೀಮ್ ಇಂಡಿಯಾದ ರೈಸಿಂಗ್ ಸ್ಟಾರ್. ಭವಿಷ್ಯದ ಸೂಪರ್ ಸ್ಟಾರ್ ಅಂತಾನೇ ಗುರುತಿಸಿಕೊಂಡಿರುವ ಈ ಮುಂಬೈಕರ್, ಈಗ ನಯಾ ಕಿಂಗ್ ಪಟ್ಟವೇರಿದ್ದಾರೆ. ಇದು ನಾವ್ ಹೇಳ್ತಿರುವ ಮಾತಲ್ಲ. ಈತನ ಆಟಕ್ಕೆ ಕ್ಲೀನ್ಬೋಲ್ಡ್ ಆಗಿರೋ ಆಸ್ಟ್ರೇಲಿಯಾ ಪ್ರತಿಷ್ಠಿತ ಪತ್ರಿಕೆಯಾದ ದಿ ಡೈಲಿ ಟೆಲಿಗ್ರಾಫ್, ಈ ಯುವ ಆಟಗಾರನನ್ನ ನ್ಯೂ ಕಿಂಗ್ ಅಂತಾನೇ ಪರಿಚಯಿಸಿದೆ. ಈತನ ಆಟವನ್ನು ಕೊಂಡಾಡಿದೆ.
ಇದನ್ನೂ ಓದಿ:ರಿಷಬ್ ಪಂತ್-ಬೂಮ್ರಾ ಮಧ್ಯೆ ಬಿಗ್ ವಾರ್.. ಬೌಲಿಂಗ್ ಕೋಚ್ ಮಾರ್ಕೆಲ್ ಸ್ಟನ್..!
ಟೆಸ್ಟ್ ಕ್ರಿಕೆಟ್ನಲ್ಲಿ ಜೈಸ್ವಾಲ್ ಯಶಸ್ವಿಯಾನ..!
ಜೈಸ್ವಾಲ್ ನ್ಯೂ ಕಿಂಗ್ ಅಂದಿರೋದ್ರ ಹಿಂದೆ ಕಾರಣ ಇದೆ. 2023 ಜುಲೈನಲ್ಲಿ ವೆಸ್ಟ್ ಇಂಡೀಸ್ ಎದುರು ಶತಕ ಸಿಡಿಸಿ ಟೆಸ್ಟ್ ಕ್ರಿಕೆಟ್ಗೆ ಗ್ರ್ಯಾಂಡ್ ಡೆಬ್ಯು ಮಾಡಿದ ಯಶಸ್ವಿ ಜೈಸ್ವಾಲ್, ಮೊದಲ ಪಂದ್ಯದಲ್ಲೇ ಸೆನ್ಸೇಷನ್ ಸೃಷ್ಟಿಸಿದ್ರು. ಕೇವಲ 14 ಟೆಸ್ಟ್ ಪಂದ್ಯಗಳಲ್ಲೇ ತಾನೋರ್ವ ಫ್ಯೂಚರ್ ಸ್ಟಾರ್ ಎಂಬ ಸಂದೇಶ ರವಾನಿಸಿರುವ ಜೈಸ್ವಾಲ್, ಕ್ಯಾಲೆಂಡರ್ ವರ್ಷದಲ್ಲಿ ಸಾವಿರ ರನ್ ಪೂರೈಸಿದ ಮೊದಲ ಭಾರತೀಯ ಬ್ಯಾಟರ್ ಎಂಬ ಹೆಗ್ಗಳಿಕೆಗೆ ಭಾಜನರಾಗಿದ್ದಾರೆ. 2023-25ರ ವಿಶ್ವ ಟೆಸ್ಟ್ ಚಾಂಪಿಯನ್ ಆವೃತ್ತಿಯಲ್ಲಿ 2ನೇ ಗರಿಷ್ಠ ಸರದಾರ ಎನಿಸಿಕೊಂಡಿದ್ದು, ಟೀಮ್ ಇಂಡಿಯಾ ಪರ ಅತಿ ಹೆಚ್ಚು ರನ್ ಗಳಿಸಿದ ಬ್ಯಾಟರ್ ಆಗಿದ್ದಾರೆ.
WTCನಲ್ಲಿ ಜೈಸ್ವಾಲ್
ಪ್ರಸಕ್ತ ವಿಶ್ವ ಟೆಸ್ಟ್ ಚಾಂಪಿಯನ್ಶಿಪ್ ಸೈಕಲ್ನಲ್ಲಿ 14 ಟೆಸ್ಟ್ ಪಂದ್ಯಗಳಿಂದ 1407 ರನ್ ಗಳಿಸಿರುವ ಜೈಸ್ವಾಲ್, 56.28ರ ಬ್ಯಾಟಿಂಗ್ ಆ್ಯವರೇಜ್ ಹೊಂದಿದ್ದಾರೆ. 3 ಶತಕ, 8 ಅರ್ಧಶತಕ ಗಳಿಸಿದ್ದಾರೆ. ಜೈಸ್ವಾಲ್ರ ಈ ಅಮೋಘ ಬ್ಯಾಟಿಂಗ್, ಕೆಲವೇ ಪಂದ್ಯಗಳಲ್ಲಿ ಟೀಮ್ ಇಂಡಿಯಾದ ಸೂಪರ್ ಸ್ಟಾರ್ ಕ್ರಿಕೆಟರ್ ಆಗಿ ಮಾಡಿದೆ. ಈ ಆಟ, ಈ ಖದರ್ನ ಆಸ್ಟ್ರೇಲಿಯಾ ಮಾಧ್ಯಮಗಳು ಕೊಂಡಾಡಿವೆ. ಜೊತೆಗೆ ನ್ಯೂ ಕಿಂಗ್ ಎಂಬ ಪಟ್ಟವನ್ನೂ ಕಟ್ಟಿವೆ.
ಕೊಹ್ಲಿ ಉತ್ತರಾಧಿಕಾರಿಯಾಗಿ ಜೈಸ್ವಾಲ್
ಶುಭ್ಮನ್ ಗಿಲ್ ವಿರಾಟ್ ಕೊಹ್ಲಿ ಸಿಂಹಾಸನದ ಉತ್ತರಾಧಿಕಾರಿ ಅಂತಾನೇ ಬಿಂಬಿತರಾಗಿದ್ದರು. ಪ್ರಿನ್ಸ್ ಎಂದೇ ಕ್ರಿಕೆಟ್ ಲೋಕ ಕರೆದಿತ್ತು. ಈಗ ಜೈಸ್ವಾಲ್ರ ಪ್ರಸ್ತುತ ಫಾರ್ಮ್ ವಿರಾಟ್ ಕೊಹ್ಲಿಯನ್ನೇ ನೆನೆಪಿಸುತ್ತಿದೆ. ಜೈಸ್ವಾಲ್ರಲ್ಲಿನ ಆಕ್ರಮಣಕಾರಿ ಆಟ, ಆನ್ ಫೀಲ್ಡ್ನಲ್ಲಿನ ಆಕ್ಟೀವ್ನೆಸ್ ವಿರಾಟ್ ಕೊಹ್ಲಿಯನ್ನೇ ಹೋಲುತ್ತೆ. ಇದೇ ಕಾರಣಕ್ಕೆ ಜೈಸ್ವಾಲ್ನ ನ್ಯೂ ಕಿಂಗ್ ಅಂತಾ ಕರೆಸಿಕೊಂಡಿದ್ದಾರೆ.
ಟೆಸ್ಟ್ ಕ್ರಿಕೆಟ್ನಲ್ಲಿ ಯಶಸ್ವಿ ಜೈಸ್ವಾಲ್ ರನ್ ಹೊಳೆ ಹರಿಸಿದ್ದಾರೆ ನಿಜ. ಭಾರತ ಬಿಟ್ಟು, ಆಫ್ರಿಕಾದಂತ ಟಫ್ ಕಂಡೀಷನ್ಸ್ನಲ್ಲಿ ವೈಫಲ್ಯ ಅನುಭವಿಸಿದ್ದಾರೆ. ಹೀಗಾಗಿ ಆಸ್ಟ್ರೇಲಿಯಾದ ಬೌನ್ಸಿ ಕಂಡೀಷನ್ಸ್ನಲ್ಲಿ ರನ್ಗಳಿಸ್ತಾರಾ ಎಂಬ ಪ್ರಶ್ನೆಯಿದೆ. ಕಾಂಗರೂ ನಾಡಲ್ಲಿ ಜೈಸ್ವಾಲ್ಗೆ ಕಠಿಣ ಸವಾಲು ಎದುರಾಗಲಿದ್ದು, ಈ ಚಾಲೆಂಜ್ ಗೆಲ್ತಾರಾ ಅನ್ನೋದು ಕುತೂಹಲ ಮೂಡಿಸಿದೆ.
ಇದನ್ನೂ ಓದಿ:RCB ಟಾರ್ಗೆಟ್ ದಕ್ಷಿಣ ಆಫ್ರಿಕಾದ ಈ ಸೂಪರ್ ಸ್ಟಾರ್.. ಬೌಲಿಂಗ್ಗಾಗಿ ಕೋಟಿ ಕೋಟಿ ಸುರಿಯಲು ರೆಡಿ..!
ಜೈಸ್ವಾಲ್ ಯುಗ ಆರಂಭ.!
ಸದ್ಯಕ್ಕಂತೂ ಆಸ್ಟ್ರೇಲಿಯನ್ ಮಾಧ್ಯಮಗಳ ಕಣ್ಣು ವಿರಾಟ್ ಕೊಹ್ಲಿ ಹಾಗೂ ಜೈಸ್ವಾಲ್ ಮೇಲೆ ನೆಟ್ಟಿವೆ. ವಿರಾಟ್ ಕೊಹ್ಲಿ ಪಾಲಿಗೆ ಇದೇ ಕೊನೆ ಆಸ್ಟ್ರೇಲಿಯಾ ಸರಣಿಯಾಗಿದೆ. ಆದ್ರೆಮ ಜೈಸ್ವಾಲ್ಗೆ ಇದು ಮೊದಲ ಆಸ್ಟ್ರೇಲಿಯಾದ ಪ್ರವಾಸ. ವಿರಾಟ್ ಕೊಹ್ಲಿ ಆಸ್ಟ್ರೇಲಿಯಾದಲ್ಲಿ ಅಬ್ಬರಿಸಿ ಬೊಬ್ಬಿರಿದು ಸೈ ಎನಿಸಿಕೊಂಡಿದ್ದಾರೆ. ಟಫ್ ಕಂಡೀಷನ್ಸ್ನಲ್ಲಿ ಜೈಸ್ವಾಲ್, ವಿರಾಟ್ ಕೊಹ್ಲಿಯ ಪರಂಪರೆ ಮುಂದುವರಿಸ್ತಾರಾ..? ನಂಬಿಕೆ ಉಳಿಸಿಕೊಳ್ತಾರಾ.? ಎಂಬ ಕ್ಯೂರಿಯಾಸಿಟಿಗೆ ಕೆಲವೇ ದಿನಗಳಲ್ಲಿ ಉತ್ತರ ಸಿಗಲಿದೆ.
ವಿಶೇಷ ಸೂಚನೆ: ಕ್ರಿಕೆಟ್ನ ವಿಶೇಷ ಸುದ್ದಿಗಳಿಗಾಗಿ ವೀಕ್ಷಿಸಿ 'ರನ್ ಭೂಮಿ' ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ ಫಸ್ಟ್ ಚಾನೆಲ್