/newsfirstlive-kannada/media/post_attachments/wp-content/uploads/2025/04/KL-RAHUL-KOHLI-1.jpg)
ಅರುಣ್ ಜೇಟ್ಲಿ ಸ್ಟೇಡಿಯಂನಲ್ಲಿ ನಡೆದ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು ಡೆಲ್ಲಿ ಕ್ಯಾಪಿಟಲ್ಸ್ ಅನ್ನು 6 ವಿಕೆಟ್ಗಳಿಂದ ಸೋಲಿಸಿದೆ. ಆ ಮೂಲಕ ಚಿನ್ನಸ್ವಾಮಿಯಲ್ಲಿ ಆಗಿದ್ದ ಸೋಲಿನ ಸೇಡನ್ನು ತೀರಿಸಿಕೊಂಡಿದೆ.
ಈ ಗೆಲುವಿನ ಬೆನ್ನಲ್ಲೇ ಡೆಲ್ಲಿ ಆಟಗಾರ ಕೆ.ಎಲ್.ರಾಹುಲ್ ಅವರನ್ನು ಕೊಹ್ಲಿ ಆಡ್ಕೊಂಡಿದ್ದಾರೆ. ಚಿನ್ನಸ್ವಾಮಿ ಮೈದಾನದಲ್ಲಿ ನಡೆದ ಪಂದ್ಯದಲ್ಲಿ ಕೆ.ಎಲ್.ರಾಹುಲ್, ಅದ್ಭುತವಾಗಿ ಆಡಿದ್ದರು. ಕೊನೆಯವರೆಗೂ ಕ್ರೀಸ್ನಲ್ಲಿದ್ದ ರಾಹುಲ್, ಗೆದ್ದ ಬಳಿಕ ಕಾಂತಾರ ಸ್ಟೈಲ್ನಲ್ಲಿ ಸೆಲೆಬ್ರೇಷನ್ ಮಾಡಿದ್ದರು. ಇದು ನನ್ನ ಮೈದಾನ, ನನ್ನ ತವರು, ನನಗಾಗಿ ಬಂದಿರುವ ಕರ್ನಾಟಕದ ಅಭಿಮಾನಿಗಳು ನನ್ನ ಹೃದಯದಲ್ಲಿದ್ದೀರಿ ಎಂದು ರಾಹುಲ್ ಹೇಳಿದ್ದರು.
ಇದನ್ನೂ ಓದಿ: ಕೊಹ್ಲಿ, ಪಾಂಡ್ಯ ಸಿಡಿಲಬ್ಬರದ ಅರ್ಧಶತಕ.. ಡೆಲ್ಲಿ ವಿರುದ್ಧ ಸೇಡು ತೀರಿಸಿಕೊಂಡ RCB, ಟಾಪ್ಗೆ ಹೋದ ಬೆಂಗಳೂರು
ಅರುಣ್ ಜೇಟ್ಲಿ ಮೈದಾನ, ವಿರಾಟ್ ಕೊಹ್ಲಿ ಅವರ ಹೋಂ ಗ್ರೌಂಡ್. ಅಲ್ಲದೇ, ಮೈದಾನದ ಪೆವಿಲಿಯನ್ಗೆ ಕೊಹ್ಲಿಯ ಹೆಸರು ಕೂಡ ಇದೆ. ಅಂತೆಯೇ ನಿನ್ನೆಯ ಪಂದ್ಯಕ್ಕೂ ಮೊದಲು ಕೊಹ್ಲಿ, ಕೆ.ಎಲ್.ರಾಹುಲ್ ಅವರ ಕಾಂತಾರ ಸ್ಟೈಲ್ಗೆ ಉತ್ತರ ನೀಡುತ್ತಾರೆ ಅಂತಲೇ ಚರ್ಚೆ ಆಗಿತ್ತು. ನಿರೀಕ್ಷೆಯಂತೆ ವಿರಾಟ್ ಕೊಹ್ಲಿ ಅದ್ಭುತವಾಗಿ ಬ್ಯಾಟಿಂಗ್ ಮಾಡಿದರು. ಇನ್ನೇನು ತಂಡ ಗೆಲ್ಲುತ್ತೆ ಅನ್ನುವಷ್ಟರಲ್ಲಿ 51 ರನ್ಗಳಿಸಿ ಔಟ್ ಆದರು. ಕೊನೆಗೂ ಆರ್ಸಿಬಿ ಗೆದ್ದು ಬೀಗಿತು. ಬಳಿಕ ಕೊಹ್ಲಿ ಪೆವಿಲಿಯನ್ನಲ್ಲಿ ಜೋರಾಗಿ ಸಂಭ್ರಮಿಸಿದ್ದರು.
ಇದನ್ನೂ ಓದಿ: RCBಗೆ ಆರಂಭಿಕ ಬ್ಯಾಟಿಂಗ್ ವಿಘ್ನ.. ಯಂಗ್ ಬ್ಯಾಟರ್ ಬೆನ್ನಲ್ಲೇ ಕನ್ನಡಿಗ, ಕ್ಯಾಪ್ಟನ್ ಬ್ಯಾಕ್ ಟು ಬ್ಯಾಕ್ ಔಟ್
ರಾಹುಲ್-ಕೊಹ್ಲಿ ಮುಖಾಮುಖಿ
ಪಂದ್ಯ ಮುಗಿದ ಬಳಿಕ ವಿರಾಟ್ ಕೊಹ್ಲಿ ಹಾಗೂ ರಾಹುಲ್ ಮತ್ತೆ ಮುಖಾಮುಖಿ ಆದರು. ಕೆ.ಎಲ್.ರಾಹುಲ್, ಕನ್ನಡಿಗರಾದ ದೇವದತ್ತ ಪಡಿಕ್ಕಲ್, ಕರುಣ್ ನಾಯರ್ ಜೊತೆ ನಿಂತು ಮಾತನಾಡುತ್ತಿದ್ದರು. ಅಲ್ಲಿಗೆ ಆಗಮಿಸಿದ ವಿರಾಟ್, ರಾಹುಲ್ ಅಂದು ಮಾಡಿದ್ದ ಕಾಂತಾರ ಸ್ಟೈಲ್ನ ಸೆಲೆಬ್ರೇಷನ್ ಮಾಡಿ ತಮಾಷೆ ಮಾಡಿದರು. ಅದಕ್ಕೆ ಕೆ.ಎಲ್.ರಾಹುಲ್, ಅದು ಅಲ್ಲಿ ಅನ್ನೋ ರೀತಿಯಲ್ಲಿ ಕೈತೋರಿಸಿ ನಕ್ಕರು. ಆಗ ಕೊಹ್ಲಿ ಜೋರಾಗಿ ನಕ್ಕು ರಾಹುಲ್ರನ್ನು ಆತ್ಮೀಯವಾಗಿ ತಬ್ಬಿಕೊಂಡರು. ಕೊಹ್ಲಿ ಮತ್ತು ರಾಹುಲ್ ನಡುವಿನ ಆತ್ಮೀಯ ಸಂಭಾಷಣೆ ಎಲ್ಲರ ಮನಗೆದ್ದಿದೆ.
ಇದನ್ನೂ ಓದಿ: ಎಲ್ಲರ ಕಣ್ಣಲ್ಲೂ ನೀರು ತರಿಸಿದ ಸುನಿಲ್ ಹಾಡು.. ಅಪ್ಪನ ನೆನೆದು ಕಣ್ಣೀರಿಟ್ಟ ಗಾಯಕ
Kohli mocking Kl Rahul about his celebration 😭😭 pic.twitter.com/7h4mPsJ65A
— Ayush (@OneKohli) April 27, 2025
ವಿಶೇಷ ಸೂಚನೆ: ಕ್ರಿಕೆಟ್ನ ವಿಶೇಷ ಸುದ್ದಿಗಳಿಗಾಗಿ ವೀಕ್ಷಿಸಿ 'ರನ್ ಭೂಮಿ' ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ ಫಸ್ಟ್ ಚಾನೆಲ್