/newsfirstlive-kannada/media/post_attachments/wp-content/uploads/2024/03/Kohli-RCB.bmp)
ಟೆಸ್ಟ್ ಕ್ರಿಕೆಟ್ಗೆ ಗುಡ್ಬೈ ಹೇಳಿರುವ ವಿರಾಟ್ ಕೊಹ್ಲಿ ಸದ್ಯ ಹೆಡ್ಲೈನ್ ಆಗ್ತಿದ್ದಾರೆ. ರನ್ ಮಷಿನ್ ಕೊಹ್ಲಿ ಇದೀಗ ಆಸ್ತಿ ವಿಚಾರಕ್ಕೆ ಸುದ್ದಿಯಾಗಿದ್ದಾರೆ. ಅಂದಹಾಗೆ ಅವರ ಒಟ್ಟು ಆಸ್ತಿಯ ಮೌಲ್ಯ, 1000 ಕೋಟಿಗೂ ಅಧಿಕ ಎಂದು ವರದಿಗಳು ಹೇಳಿವೆ.
Stock Gro ವರದಿ ಪ್ರಕಾರ, ಕೊಹ್ಲಿ ಅವರ ಒಟ್ಟು ಆಸ್ತಿಯ ಮೌಲ್ಯ 1,050 ರೂಪಾಯಿ ಆಗಿದೆ. ಇದರಲ್ಲಿ ಪ್ರಸ್ತುತ ಬಿಸಿಸಿಐ ಜೊತೆಗಿನ ಒಪ್ಪಂದಗಳು, ಬ್ರ್ಯಾಂಡ್ ಪ್ರಚಾರದ ರಾಯಭಾರಿ ಮೂಲಕ ಬರುವ ಆದಾಯ ಹಾಗೂ ಸೋಶಿಯಲ್ ಮೀಡಿಯಾದಿಂದ ಬರುವ ಆದಾಯ ಮತ್ತು ತಮ್ಮ ಮಾಲೀಕತ್ವದಿಂದ ಬರುವ ಬ್ರ್ಯಾಂಡ್ಸ್ ಆದಾಯೂ ಕೂಡ ಸೇರಿವೆ.
ವರದಿಗಳ ಪ್ರಕಾರ ವಿರಾಟ್ ಕೊಹ್ಲಿ ಬ್ರ್ಯಾಂಡ್ ಇಂಡೋರ್ಸ್ಮೆಂಟ್ನಿಂದ ಹೆಚ್ಚು ಆದಾಯ ಗಳಿಸುತ್ತಿದ್ದಾರೆ. ಬಿಸಿಸಿಐನಿಂದ ವಾರ್ಷಿಕವಾಗಿ ಕೊಹ್ಲಿ 7 ಕೋಟಿ ಹಣ ಪಡೆಯುತ್ತಾರೆ. ಜೊತೆಗೆ ಪ್ರತೀ ಟೆಸ್ಟ್ ಪಂದ್ಯಕ್ಕೆ 15 ಲಕ್ಷ ರೂಪಾಯಿ ಹಣ ಪಡೆಯುತ್ತಿದ್ದರು. ಏಕದಿನ ಪಂದ್ಯಕ್ಕೆ 6 ಲಕ್ಷ ರೂಪಾಯಿ ಪಡೆದರೆ, ಟಿ-20 ಪಂದ್ಯಗಳಿಗೆ 3 ಲಕ್ಷ ರೂಪಾಯಿ ಹಣ ಪಡೆಯುತ್ತಿದ್ದರು. ಆ ಮೂಲಕ ವಾರ್ಷಿಕವಾಗಿ 15 ಕೋಟಿ ರೂಪಾಯಿ ಹಣ ಗಳಿಸುತ್ತಾರೆ.
ಇದನ್ನೂ ಓದಿ: RCBಗೆ ವಿದೇಶಿ ಆಟಗಾರರಿಂದ ಭಾರೀ ಹೊಡೆತ.. ಐಪಿಎಲ್ನ ಟಾಪ್- 5 ತಂಡಗಳಿಗೆ ಸಂಕಷ್ಟ!
ಇನ್ನು ಕೊಹ್ಲಿ start-ups ಹಣ ಹೂಡಿಕೆ ಮಾಡಿದ್ದಾರೆ. Blue Tribe, Universal Sportsbiz, Mpl, Sports Convo, Digit ಸೇರಿದಂತೆ ಹಲವು ಕಡೆಗಳಲ್ಲಿ ಹಣ ಹೂಡಿಕೆ ಮಾಡಿದ್ದಾರೆ. Vivo, Myntra, Blue Star, Volini, Luxor, Hsbc, Uber, Mrf, Tissot, Cinthol ಸೇರಿದಂತೆ ಅನೇಕ ಕಂಪನಿಗಳ ಪ್ರಚಾರ ರಾಯಭಾರಿ ಕೂಡ ಆಗಿದ್ದಾರೆ. 2025ರ ಐಪಿಎಲ್ನಲ್ಲಿ ಕೊಹ್ಲಿ 21 ಕೋಟಿ ರೂಪಾಯಿ ಹಣ ಪಡೆಯುತ್ತಿದ್ದಾರೆ.
ಇದನ್ನೂ ಓದಿ: ರಜತ್ KKR ವಿರುದ್ಧ ಆಡೋದು ಡೌಟ್.. ಆರ್ಸಿಬಿ ಕ್ಯಾಪ್ಟನ್ ಪಾಟೀದಾರ್ಗೆ ಆಗಿದ್ದೇನು..?
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ