ವಿಜಯ್ ಮಲ್ಯಗೆ ತಪ್ಪದ ಸಂಕಷ್ಟಗಳು.. ಸಾಲ, ಬಡ್ಡಿ, ಚಕ್ರ ಬಡ್ಡಿಯ ಅಸಲಿ ಲೆಕ್ಕಾಚಾರ ಇಲ್ಲಿದೆ..!

author-image
admin
Updated On
RCB ಮರೆಯದ ವಿಜಯ್ ಮಲ್ಯ.. ಪ್ಲೇ ಆಫ್​ಗೆ ಬೆಂಗಳೂರು ರಾಯಲ್​ ಎಂಟ್ರಿ ಕೊಟ್ಟಿದ್ದಕ್ಕೆ ಏನಂದ್ರು?
Advertisment
  • ತಮ್ಮಿಂದ ಬ್ಯಾಂಕ್‌ಗಳು 14 ಸಾವಿರ ಕೋಟಿ ಸಾಲ ವಸೂಲಿ
  • ಸಂದರ್ಶನದಲ್ಲಿ ಸಾಲದ ಮಾಹಿತಿ ಬಿಚ್ಚಿಟ್ಟ ಉದ್ಯಮಿ ವಿಜಯ ಮಲ್ಯ
  • SBI ಸೇರಿ ಹಲವು ಬ್ಯಾಂಕ್‌ಗಳ ಸಾಲ, ಬಡ್ಡಿಯ ಲೆಕ್ಕಾಚಾರವೇ ಬೇರೆ!

ಕರ್ನಾಟಕದ ಉದ್ಯಮಿ ವಿಜಯ ಮಲ್ಯ ಅವರು ಇತ್ತೀಚೆಗೆ ನೀಡಿದ ಪಾಡ್ ಕಾಸ್ಟ್‌ನಲ್ಲಿ ತಮ್ಮಿಂದ ಭಾರತದ ಬ್ಯಾಂಕ್‌ಗಳು 14 ಸಾವಿರ ಕೋಟಿ ರೂಪಾಯಿ ಸಾಲವನ್ನ ವಸೂಲಿ ಮಾಡಿಕೊಂಡಿವೆ. ಬೆಂಗಳೂರಿನ ಸಾಲ ವಸೂಲಾತಿ ನ್ಯಾಯಾಧೀಕರಣ ತಾವು ಪಡೆದಿರುವ ಸಾಲ 6 ಸಾವಿರ ಕೋಟಿ ರೂಪಾಯಿ ಎಂದು ಹೇಳಿದೆ ಎಂದು ದಾಖಲೆ ಪ್ರದರ್ಶಿಸಿದ್ದರು. ಭಾರತದಲ್ಲಿ ಅಧಿಕಾರಶಾಹೀ ತಮಗೆ ಕಿರುಕುಳ ನೀಡಿದೆ ಎಂದು ಹೇಳಿದ್ದರು. ಇದು ವಿಜಯ ಮಲ್ಯ ಪರವಾದ ವಾದ, ಸಮರ್ಥನೆ.

ವಿಜಯ ಮಲ್ಯ ಕಿಂಗ್ ಫಿಷರ್ ಏರ್‌ಲೈನ್ಸ್‌ಗಾಗಿ ಪಡೆದ 6 ಸಾವಿರ ಕೋಟಿ ರೂಪಾಯಿ ಸಾಲಕ್ಕೆ ಬಡ್ಡಿ ಸೇರಿಸಿ ಬ್ಯಾಂಕ್‌ಗಳು 14 ಸಾವಿರ ಕೋಟಿ ರೂಪಾಯಿ ಸಾಲ ವಸೂಲಿ ಮಾಡಿಕೊಂಡಿದ್ದರೂ, ವಿಜಯ ಮಲ್ಯ ಈಗಲೂ ಸಾಲದಿಂದ ಸಂಪೂರ್ಣ ಮುಕ್ತರಾಗಿಲ್ಲ. ವಿಜಯ ಮಲ್ಯ ಹಾಗೂ ಕಿಂಗ್ ಫಿಷರ್ ಏರ್ ಲೈನ್ಸ್ ಸಾಲದ ಬಗ್ಗೆ ಭಾರತದ ಬ್ಯಾಂಕ್‌ಗಳು ಹೇಳುವುದೇ ಬೇರೆ. ಹಾಗಾದರೆ ಕಿಂಗ್ ಫಿಷರ್ ಏರ್ ಲೈನ್ಸ್ ಸಾಲದ ಬಗ್ಗೆ SBI ನೇತೃತ್ವದ ಬ್ಯಾಂಕ್‌ಗಳು ಏನ್ ಹೇಳುತ್ತಿವೆ ಅನ್ನೋ ಮಾಹಿತಿ ಇಲ್ಲಿದೆ.

ರಾಜ್ ಶಮಾನಿ ಸಂದರ್ಶನದ ಬಳಿಕ ಭಾರತದಲ್ಲಿ ಉದ್ಯಮಿ ವಿಜಯ ಮಲ್ಯ ಟಾಕ್ ಆಫ್ ದಿ ಟೌನ್ ಆಗಿದ್ದಾರೆ. ಆದರೆ ವಿಜಯ ಮಲ್ಯ ಇನ್ನೂ ಭಾರತದಲ್ಲಿ ಎಸ್‌ಬಿಐ ನೇತೃತ್ವದ 17 ಬ್ಯಾಂಕ್ ಗಳಿಗೆ 7 ಸಾವಿರ ಕೋಟಿ ರೂಪಾಯಿ ಸಾಲವನ್ನು ಬಾಕಿ ಉಳಿಸಿಕೊಂಡಿದ್ದಾರೆ ಎಂದು ಬ್ಯಾಂಕ್ ಗಳು ಹೇಳಿವೆ. ಹೀಗಾಗಿ ವಿಜಯ ಮಲ್ಯ ಇನ್ನೂ ಸಂಪೂರ್ಣವಾಗಿ ಸಾಲ ಮುಕ್ತರಾಗಿಲ್ಲ.

publive-image

ಬ್ಯಾಂಕ್‌ಗಳಿಂದ ಪಡೆದ ಸಾಲವನ್ನು ಸಂಪೂರ್ಣ ಹಿಂತಿರುಗಿಸಿದ ಬಳಿಕವೂ ತಮಗೆ ಕಿರುಕುಳ ನೀಡಲಾಯಿತು ಎಂದು ಮಲ್ಯ ಅಳಲು ತೋಡಿಕೊಂಡಿದ್ದರು. ಆದರೆ ವಿಜಯ ಮಲ್ಯ, ಇನ್ನೂ ಸಾಲವನ್ನು ಬಾಕಿ ಉಳಿಸಿಕೊಂಡಿದ್ದಾರೆ ಎನ್ನುತ್ತಿವೆ. ಬ್ಯಾಂಕ್‌ಗಳು ವಿಜಯ ಮಲ್ಯ ಇನ್ನೂ 7 ಸಾವಿರ ಕೋಟಿ ರೂಪಾಯಿ ಸಾಲವನ್ನು ಬಾಕಿ ಉಳಿಸಿಕೊಂಡಿದ್ದಾರೆ ಎಂದಿವೆ.

ಸಾಲ ವಸೂಲಾತಿ ನ್ಯಾಯಾಧೀಕರಣದ ಪ್ರಕಾರ, ಕಿಂಗ್ ಫಿಷರ್ ಏರ್ ಲೈನ್ಸ್ 2013ರ ಜೂನ್‌ನಲ್ಲಿ 6,848 ಕೋಟಿ ರೂಪಾಯಿ ಅನುತ್ಪಾದಕ ಸಾಲವನ್ನು ಹೊಂದಿತ್ತು. ಆದರೆ 2025ರ ಜೂನ್ 10ಕ್ಕೆ ಸಾಲ ಮತ್ತು ಬಡ್ಡಿ, ಚಕ್ರಬಡ್ಡಿ ಸೇರಿ ಒಟ್ಟಾರೆ ಮೊತ್ತ 17,781 ಕೋಟಿ ರೂಪಾಯಿಗೆ ಏರಿದೆ. ಇದರಲ್ಲಿ ಬ್ಯಾಂಕ್‌ಗಳು 10, 815 ಕೋಟಿ ರೂಪಾಯಿ ಹಣವನ್ನು ವಿಜಯ ಮಲ್ಯರಿಂದ ವಸೂಲಿ ಮಾಡಿಕೊಂಡಿವೆ. ಇನ್ನೂ 6,997 ಕೋಟಿ ರೂಪಾಯಿ ಸಾಲದ ಹಣ ವಸೂಲಿ ಬಾಕಿ ಇದೆ.

publive-image

ವಿಜಯ ಮಲ್ಯ, ಬ್ಯಾಂಕ್‌ಗಳಿಗೆ ಸಾಲವನ್ನು ಮರುಪಾವತಿಸಿದ್ದೇನೆ ಎಂದು ಹೇಳಿದ್ದರಲ್ಲಿ ಬಡ್ಡಿ, ಚಕ್ರಬಡ್ಡಿ ಸೇರಿಲ್ಲ. ಸಾಲದ ಮೂಲ ಮೊತ್ತವನ್ನು ಸಂಪೂರ್ಣವಾಗಿ ಪಾವತಿಸುವವರೆಗೂ ಸಾಲದ ಬಡ್ಡಿ, ಚಕ್ರಬಡ್ಡಿ, ದಂಡವನ್ನು ವಿಧಿಸಲಾಗುತ್ತಲೇ ಇರುತ್ತೆ. ಹೀಗಾಗಿ ಒಟ್ಟಾರೆ ಸಾಲದ ಮೊತ್ತ ಈಗ 17,781 ಕೋಟಿ ರೂಪಾಯಿಗೆ ಏರಿದೆ.

ವಿಜಯ ಮಲ್ಯ ಬರೀ ಪ್ರಧಾನ ಸಾಲದ ಮೊತ್ತವನ್ನು ಮರು ಪಾವತಿಸಿದ್ದೇನೆ ಎಂದು ಭಾವಿಸಿದ್ದಾರೆ. ಆದರೆ ಸಾಲಕ್ಕೆ ಬಡ್ಡಿ, ಚಕ್ರಬಡ್ಡಿ, ದಂಡ ಎಲ್ಲವೂ ಇರುತ್ತೆ. ಇದೆಲ್ಲವನ್ನೂ ಸಂಪೂರ್ಣವಾಗಿ ಪಾವತಿಸಿ, ನೋ ಡ್ಯೂ ಸರ್ಟಿಫಿಕೇಟ್ ಅನ್ನು ಬ್ಯಾಂಕ್‌ಗಳಿಂದ ಪಡೆಯಬೇಕು. ಈ ಸರ್ಟಿಫಿಕೇಟ್ ಪಡೆದರೆ ಮಾತ್ರವೇ ಬ್ಯಾಂಕ್‌ನಲ್ಲಿ ಇನ್ನೂ ಯಾವುದೇ ಸಾಲ ಬಾಕಿ ಇಲ್ಲ ಎಂದರ್ಥ.

publive-image

ವಿಜಯ್‌ ಮಲ್ಯ ದೇಶ ಬಿಟ್ಟು ಹೋದ ಬಳಿಕ ಭಾರತದಲ್ಲಿ ಬ್ಯಾಂಕ್‌ಗಳು ಕೋರ್ಟ್ ಮೆಟ್ಟಿಲೇರಿವೆ. ಸಿಬಿಐ ಕೇಸ್ ಆಧಾರದ ಮೇಲೆ ಇ.ಡಿ ಕೇಸ್‌ಗೆ ಎಂಟ್ರಿಯಾಗಿದೆ. ಇ.ಡಿ ಪಿಎಂಎಲ್‌ಎ ಕಾಯಿದೆಯಡಿ ಕೇಸ್ ದಾಖಲಿಸಿದೆ.

ಕೋರ್ಟ್‌ಗಳು ಸಾಲಕ್ಕೆ ಶೂರಿಟಿಯಾಗಿ ನೀಡಿದ್ದ ಆಸ್ತಿಗಳನ್ನು ಹರಾಜು ಹಾಕಲು ಆದೇಶ ನೀಡಿವೆ. ಹೀಗಾಗಿ ಗೋವಾದ ಕಿಂಗ್ ಫಿಷರ್ ವಿಲ್ಲಾ, ಮುಂಬೈ ಕಿಂಗ್ ಫಿಷರ್ ಹೌಸ್ ಸೇರಿದಂತೆ ಬೇರೆ ಬೇರೆ ಆಸ್ತಿಗಳನ್ನು ಹರಾಜು ಹಾಕಿ ಸಾಲದ ಹಣ ವಸೂಲಿ ಮಾಡಿಕೊಳ್ಳಲಾಗಿದೆ. ಆದರೆ ಇನ್ನೂ ಸಂಪೂರ್ಣ ಸಾಲ, ಬಡ್ಡಿ, ಚಕ್ರ ಬಡ್ಡಿ, ದಂಡ ಪಾವತಿಯಾಗಿಲ್ಲ ಎಂದು ಬ್ಯಾಂಕ್‌ಗಳು ಹೇಳುತ್ತಿವೆ.

ಇದನ್ನೂ ಓದಿ: RCB ಖರೀದಿಸಿದ್ದು ಕ್ರೀಡಾ ಸ್ಫೂರ್ತಿಯಿಂದಲ್ಲ, ಹಿಂದಿನ ಉದ್ದೇಶವೇ ಬೇರೆ ಆಗಿತ್ತು.. 18 ವರ್ಷದ ನಂತರ ಸತ್ಯ ಹೇಳಿದ ಮಲ್ಯ 

ವಿಜಯ ಮಲ್ಯ ಯಾವ್ಯಾವ ಬ್ಯಾಂಕ್‌ಗಳಿಂದ ಸಾಲ ಪಡೆದಿದ್ದರು. ಎಷ್ಟು ಸಾಲ ಮರು ಪಾವತಿಸಿದ್ದಾರೆ. ಇನ್ನೂ ಎಷ್ಟು ಸಾಲ ಮರುಪಾವತಿ ಬಾಕಿ ಇದೆ ಅಂತ ನೋಡೋದಾದ್ರೆ.

ಬ್ಯಾಂಕ್‌ಗಳು - ಒಟ್ಟು ಸಾಲ - ವಸೂಲಿಯಾದ ಮೊತ್ತ
SBI - 5,208 ಕೋಟಿ ರೂ - 3,174 ಕೋಟಿ ರೂ
PNB - 3,084 ಕೋಟಿ ರೂ - 1,910 ಕೋಟಿ ರೂ
IDBI - 2,390 ಕೋಟಿ ರೂ - 1,375 ಕೋಟಿ ರೂ
BIO - 1,759 ಕೋಟಿ ರೂ - 1,034 ಕೋಟಿ ರೂ
BIB - 1,580 ಕೋಟಿ ರೂ - 994 ಕೋಟಿ ರೂ
OTH - 3,760 ಕೋಟಿ ರೂ - 2,327 ಕೋಟಿ ರೂ
ಒಟ್ಟು 17,781 ಕೋಟಿ ರೂ - 10,814 ಕೋಟಿ ರೂ

ಹೀಗೆ ವಿಜಯ ಮಲ್ಯರಿಂದ ಇದುವರೆಗೂ 10 ಸಾವಿರದ 814 ಕೋಟಿ ರೂಪಾಯಿ ಸಾಲ ಮಾತ್ರ ವಸೂಲಿಯಾಗಿದೆ. ಇನ್ನೂ 6 ಸಾವಿರದ 997 ಕೋಟಿ ರೂಪಾಯಿ ಸಾಲ ವಸೂಲಿ ಬಾಕಿ ಇದೆ ಎಂದು ಬ್ಯಾಂಕ್‌ಗಳು ಹಾಗೂ ಕೇಂದ್ರ ಸರ್ಕಾರ ಹೇಳುತ್ತಿವೆ.

ವಿಶೇಷ ವರದಿ: ಚಂದ್ರಮೋಹನ್  

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment