Advertisment

ಭಾರೀ ಮಳೆಗೆ ಕುಸಿದ ಅಣೆಕಟ್ಟು.. ಮೃತರ ಸಂಖ್ಯೆ ಹೆಚ್ಚುತ್ತಲೇ ಇದೆ.. ಪ್ರವಾಹ ಹೋದಲೆಲ್ಲ ನರಕದರ್ಶನ..!

author-image
Ganesh
Updated On
ಭೀಕರ ಮಳೆಗೆ ಡ್ಯಾಂ ಕುಸಿತ.. ಅಲ್ಲಿ 155, ಇಲ್ಲಿ 40 ಮಂದಿ ಸಾವು.. ಪ್ರವಾಹದಿಂದ ಜೀವ ಉಳಿಸಿಕೊಳ್ಳಲು ಜನರ ಪರದಾಟ
Advertisment
  • ಅಣೆಕಟ್ಟು ಕುಸಿದು ಸಾವನ್ನಪ್ಪಿದವರ ಸಂಖ್ಯೆ 50ಕ್ಕೆ ಏರಿಕೆ
  • 2,00,000ಕ್ಕೂ ಹೆಚ್ಚು ಜನರು ಪ್ರವಾಹಕ್ಕೆ ಸಿಲುಕಿದ್ದಾರೆ
  • ಭಾರೀ ಮಳೆಯಿಂದಾಗಿ ಮನೆಗಳನ್ನು ಕಳೆದುಕೊಂಡು ಜನ ಕಂಗಾಲು

ಕೀನ್ಯಾದ ರಾಜಧಾನಿ ನೈರೋಬಿಯಾದ ಸಮೀಪದ ಗ್ರೇಟ್ ರಿಫ್ಟ್ ವ್ಯಾಲಿ ಪ್ರದೇಶದಲ್ಲಿ ಅಣೆಕಟ್ಟು ಕುಸಿತದ ಘಟನೆಯಲ್ಲಿ ಸಾವನ್ನಪ್ಪಿದವರ ಸಂಖ್ಯೆ 50ಕ್ಕೆ ಏರಿಕೆಯಾಗಿದೆ.

Advertisment

ಕೀನ್ಯಾದಲ್ಲಿ ಕಳೆದೊಂದು ವಾರದಲ್ಲಿ ಧಾರಾಕಾರ ಮಳೆಯಾಗ್ತಿದ್ದು, ಡ್ಯಾಂಗಳು ಭರ್ತಿಯಾಗಿವೆ. ಭರ್ತಿಯಾಗಿದ್ದ ಕಿಜಾಬೆ ಅಣೆಕಟ್ಟು, ಕುಸಿದ ಪರಿಣಾಮ ಜಲಾಶಯದ ನೀರು ಜನವಸತಿ ಪ್ರದೇಶಕ್ಕೆ ನುಗ್ಗಿ, ಈವರೆಗೆ 50 ಜನರು ಸಾವಿಗೀಡಾಗಿದ್ದಾರೆ.

ಇದನ್ನೂ ಓದಿ:ಭೀಕರ ಅಪಘಾತ.. ಕಂದಕಕ್ಕೆ ಉರುಳಿದ 50ಕ್ಕೂ ಹೆಚ್ಚು ಪ್ರಯಾಣಿಕರಿದ್ದ ಬಸ್​

publive-image

ಕೀನ್ಯಾದ ರಾಜಧಾನಿ ನೈರೋಬಿಯಿಂದ ಸುಮಾರು 60 ಕಿ.ಮೀ ದೂರದಲ್ಲಿರುವ ಗ್ರೇಟ್ ರಿಫ್ಟ್ ವ್ಯಾಲಿ ಪ್ರದೇಶದ ಹಳೆಯ ಕಿಜಾಬೆ ಅಣೆಕಟ್ಟು ಕುಸಿತಗೊಂಡು ಇಂತದೊಂದು ದುರಂತ ಸಂಭವಿಸಿದೆ. ಕೀನ್ಯಾದಲ್ಲಿ ಕಳೆದೊಂದು ವಾರದಲ್ಲಿ ಧಾರಾಕಾರ ಮಳೆಯಾಗ್ತಿದ್ದು, ಡ್ಯಾಂಗಳು ಭರ್ತಿಯಾಗಿದೆ. ಭರ್ತಿಯಾಗಿದ್ದ ಕಿಜಾಬೆ ಅಣೆಕಟ್ಟು ಕುಸಿದಿದೆ.

Advertisment

ಇದನ್ನೂ ಓದಿ:ಅಭಿಮಾನಿಗಳಿಗೆ ಬಿಗ್ ಶಾಕ್.. ಪೊಲೀಸರ ಮುಂದೆ ಹಾಜರಾದ ರಶ್ಮಿಕಾ ಮಂದಣ್ಣ.. ಏನಾಯ್ತು..

publive-image

ಜಲಾಶಯ ಕುಸಿತದಿಂದ ಅಪಾರ ಪ್ರಮಾಣ ನೀರು ಜನವಸತಿ ಪ್ರದೇಶಕ್ಕೆ ನುಗ್ಗಿ, ಅಲ್ಲೋಲ ಕಲ್ಲೊಲ ಸೃಷ್ಟಿಸಿದೆ. ಮನೆಗಳೆಲ್ಲ ಕೆಸರು ಮಯವಾಗಿವೆ. ಸ್ಥಳದಲ್ಲಿ ರಕ್ಷಣಾ ಕಾರ್ಯಾಚರಣೆ ಭರದಿಂದ ಸಾಗಿದೆ. ಸಾವಿನ ಸಂಖ್ಯೆ ಇನ್ನೂ ಹೆಚ್ಚುವ ಸಾಧ್ಯತೆ ಇದೆ ಅಂತ ರಕ್ಷಣಾ ಪಡೆಗಳು ತಿಳಿಸಿವೆ. ಇನ್ನು ಜೋರು ಮಳೆಯಿಂದಾಗಿ ಪೂರ್ವ ಆಫ್ರಿಕಾದ ಹಲವು ಪ್ರದೇಶಗಳು ಪ್ರವಾಹ ಭೀತಿ ಎದುರಿಸುತ್ತಿವೆ. ಟಾಂಜಾನಿಯಾದಲ್ಲಿ ಈಗಾಗಲೇ 155 ಜನರು ಸಾವನ್ನಪ್ಪಿದ್ದಾರೆ. ಬುರುಂಡಿಯಲ್ಲಿ 2,00,000ಕ್ಕೂ ಹೆಚ್ಚು ಜನರು ಬಾಧಿತರಾಗಿದ್ದಾರೆ. ದೇಶದ ಎಲ್ಲಾ ಶಾಲೆಗಳಿಗೆ ರಜೆ ನೀಡಲಾಗಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment
Advertisment
Advertisment