/newsfirstlive-kannada/media/post_attachments/wp-content/uploads/2024/10/kipi-1.jpg)
ಹಾಯ್ ಜನರೇ ಎಂದು ಹೇಳುತ್ತಾ ಇನ್ಸ್ಟಾಗ್ರಾಮ್ನಲ್ಲಿ ಸಖತ್ ಸದ್ದು ಮಾಡುತ್ತಿದ್ದಾರೆ ಕಿಪಿ ಕೀರ್ತಿ. ಇದೇ ಕಿಪಿ ಕೀರ್ತಿ ಇದೀಗ ಕಾಮಿಡಿ ಕಿಲಾಡಿಗಳು ವೇದಿಕೆ ಮೇಲೆ ಮಿಂಚುತ್ತಿದ್ದಾರೆ. ಆಗಾಗ ಸೋಷಿಯಲ್ ಮೀಡಿಯಾದಲ್ಲಿ ಕಿಪಿ ಕೀರ್ತಿ ಸಖತ್ ಟ್ರೋಲ್ ಆಗುತ್ತಲೇ ಇರುತ್ತಾರೆ. ಇದೀಗ ಅಚ್ಚರಿ ಎಂಬಂತೆ ಕೊಡಗಿನ ಮೂಲದ ಕಿಪಿ ಕೀರ್ತಿ ಜೀ ಕನ್ನಡದ ಕಾಮಿಡಿ ಕಿಲಾಡಿಗಳು ವೇದಿಕೆಗೆ ಎಂಟ್ರಿ ಕೊಟ್ಟಿದ್ದಾರೆ.
ಇದನ್ನೂ ಓದಿ:ಜಾಲಿ ಮೂಡ್ನಲ್ಲಿ ಸ್ಯಾಂಡಲ್ವುಡ್ ಸ್ಟಾರ್ ಜೋಡಿ; ತರುಣ್ ಸುಧೀರ್, ಸೋನಲ್ ಸುಮಧುರ ಫೋಟೋಸ್ ಇಲ್ಲಿವೆ
ಹೌದು, ಕಾಮಿಡಿ ಕಿಲಾಡಿಗಳು ಪ್ರೀಮಿಯರ್ ಲೀಗ್ಗೆ ಬಂದಿದ್ದಾರೆ ಸೋಷಿಯಲ್ ಮೀಡಿಯಾದ ಸ್ಟಾರ್ ಕಿಪಿ ಕೀರ್ತಿ. ಮಸ್ತ್ ಮಸ್ತ್ ಹುಡುಗಿ ಬಂದ್ಲು ಸಾಂಗ್ ಮೂಲಕವೇ ವೇದಿಕೆಗೆ ಎಂಟ್ರಿ ಕೊಟ್ಟಿದ್ದ ಕೀರ್ತಿ ಮಧ್ಯೆ ಮಧ್ಯೆ ಬನ್ನಿ ಬನ್ನಿ ಜನರೇ ಅಂತ ಅವರ ಟೈಟಲ್ ಅನ್ನು ಹಾಕಿದ್ದಾರೆ. ಕೀರ್ತಿ ವೇದಿಕೆಗೆ ಬರುತ್ತಿದ್ದಂತೆ ಜಡ್ಜ್ಗಳು ಶಾಕ್ ಆಗಿದ್ದಾರೆ.
ಇನ್ನು, ಕೀರ್ತಿಯಿದ್ದ ವೇದಿಕೆಗೆ ಬಂದ ಜಡ್ಜ್ಗಳು ಕೆಲ ವಿಚಾರದ ಬಗ್ಗೆ ಮಾತಾಡಿದ್ದಾರೆ. ಅದರಲ್ಲೂ ನಿರೂಪಕಿ ಅನುಶ್ರೀ ಕಿಪಿ ಕೀರ್ತಿ ಬಗ್ಗೆ ಮನಸ್ಸಾರೆ ಹಾಡಿ ಹೊಗಳಿದ್ದಾರೆ. ಈ ಬಗ್ಗೆ ಮಾತಾಡಿದ ಅನುಶ್ರೀ ಜನರೇ ಎಂಬ ಪದವನ್ನು ಬಳಿಕ ಎಲ್ಲರನ್ನು ನಗಿಸಬೇಕು ಅಂತ ಪ್ರಯತ್ನ ಪಡ್ತಾ ಇದ್ದಾರೆ. ಆದರೆ ಆ ನಗಿಸುವ ಉದ್ದೇಶದ ಹಿಂದಿನ ಇವರನ್ನು ಯಾಕೆ ಹರ್ಟ್ ಮಾಡಬೇಕು? ಯಾಕೆ ಅವರ ನ್ಯೂನತೆಯನ್ನು ಕೆಟ್ಟ ಕೆಟ್ಟ ಕಾಮೆಂಟ್ ಮೂಲಕ ಹೇಳಬೇಕು ಅಂತ ಪ್ರಶ್ನೆ ಮಾಡಿದ್ದಾರೆ.
ಕಿಪಿಯನ್ನು ಎಷ್ಟೇ ಟ್ರೋಲ್ ಮಾಡಿದ್ರು, ಅವರನ್ನು ಎಷ್ಟೇ ಕೆಳ ಮಟ್ಟಕ್ಕೆ ಕರೆದುಕೊಂಡು ಹೋದ್ರು ಆಕೆ ಖುಷಿ ಖುಷಿಯಿಂದ ವಿಡಿಯೋ ಮಾಡ್ತಾ ಇದ್ದಾಳೆ ಅಂತ ಹೇಳಿದ್ದಾರೆ. ಅನುಶ್ರೀ ಅವರ ಮಾತು ಕೇಳುತ್ತಿದ್ದಂತೆ ಕೀರ್ತಿ ವೇದಿಕೆ ಮೇಲೆ ಕಣ್ಣೀರು ಹಾಕಿದ್ದಾರೆ. ಈ ವೇಳೆ ಮಾತಾಡಿದ ಕಿಪಿ ಕೀರ್ತಿ, ನನಗೆ ಇಲ್ಲಿಗೆ ಬಂದು ಖುಷಿ ಆಯ್ತು. ನನ್ನ ಜೀವನದಲ್ಲಿ ತುಂಬಾ ಜನ ಅವಮಾನ ಮಾಡಿದ್ದಾರೆ. ನಮ್ಮ ಸಂಬಂಧಿಕರು ಹಾಗೂ ನನ್ನ ಫ್ರೆಂಡ್ಸ್ ತುಂಬಾ ಬೇಜಾರು ಮಾಡಿದ್ದಾರೆ. ಅಪ್ಪು ಸರ್ ಅವರ ಫ್ಯಾನ್ ನಾನು, ಅವರ ಹಾದಿಯನ್ನೇ ನಾನು ಹಿಡಿಬೇಕು ಅಂತ ಇದ್ದೇನೆ ಅಂತ ಹೇಳಿ ಕಣ್ಣೀರು ಹಾಕಿದ್ದಾರೆ. ಇದೇ ಪ್ರೋಮೋ ನೋಡಿದ ಸಾಕಷ್ಟು ಮಂದಿ ಕಿಪಿ ತುಂಬಾ ಬಡ ಹುಡುಗಿ ನಮ್ಮ ಕರ್ನಾಟಕ ಜನ ಸಪೋರ್ಟ್ ಮಾಡಿ ಅಂತ ಕಾಮೆಂಟ್ಸ್ ಹಾಕಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ