ಕನ್ನಡಿಗರ ಶೇ 75ರಷ್ಟು ಮೀಸಲಾತಿಗೆ ಮೋಹನ್ ದಾಸ್ ಪೈ, ಕಿರಣ್ ಮಜುಂದಾರ್ ಭಾರೀ ವಿರೋಧ..! ಡಿಕೆಶಿ ಕೌಂಟರ್

author-image
Ganesh
Updated On
ಕನ್ನಡಿಗರ ಶೇ 75ರಷ್ಟು ಮೀಸಲಾತಿಗೆ ಮೋಹನ್ ದಾಸ್ ಪೈ, ಕಿರಣ್ ಮಜುಂದಾರ್ ಭಾರೀ ವಿರೋಧ..! ಡಿಕೆಶಿ ಕೌಂಟರ್
Advertisment
  • ಬೆಂಗಳೂರು ಉದ್ಯಮಿಗಳಿಗೆ ಡಿಕೆ ಶಿವಕುಮಾರ್ ಕೌಂಟರ್
  • ರಾಜ್ಯ ಸರ್ಕಾರದ ನಿರ್ಣಯ ವಿರೋಧಿಸಿದ ಖಾಸಗಿ ಕಂಪನಿಗಳು
  • ಆಡಳಿತ ಹಾಗೂ ಆಡಳಿತಾತ್ಮಕವಲ್ಲದ ಹುದ್ದೆಗಳಿಗೆ ಮೀಸಲಾತಿ

ಬೆಂಗಳೂರು:ಕೈಗಾರಿಕೆಗಳು, ಕಾರ್ಖಾನೆಗಳು ಮತ್ತು ಇತರ ಸಂಸ್ಥೆಗಳು ನಿರ್ವಹಣಾ ಸ್ಥಾನಗಳಲ್ಲಿ ಶೇಕಡಾ 50 ರಷ್ಟು ಮತ್ತು ನಿರ್ವಹಣೇತರ ಹುದ್ದೆಗಳಲ್ಲಿ ಶೇಕಡಾ 75 ರಷ್ಟು ಹುದ್ದೆಗಳನ್ನು ಸ್ಥಳೀಯ ಅಭ್ಯರ್ಥಿಗಳಿಗೆ ಕಾಯ್ದಿರಿಸಬೇಕೆಂದು ಕಡ್ಡಾಯಗೊಳಿಸುವ ಮಸೂದೆ ಮಂಡಿಸಲು ರಾಜ್ಯ ಸರ್ಕಾರ ಮುಂದಾಗಿದೆ. ಈ ಬೆನ್ನಲ್ಲೇ ಪರ-ವಿರೋಧಗಳು ಶುರುವಾಗಿವೆ.

ಕರ್ನಾಟಕದಲ್ಲಿ ಕನ್ನಡಿಗರಿಗೆ ಉದ್ಯೋಗ ನೀಡುವ ಮಸೂದೆಗೆ ಟಿ.ವಿ.ಮೋಹನ್ ದಾಸ್ ಪೈ ವಿರೋಧ ವ್ಯಕ್ತಪಡಿಸಿದ್ದಾರೆ. ಇನ್ಫೋಸಿಸ್ ಕಂಪನಿಯ ಸ್ಥಾಪಕರಲ್ಲಿ ಒಬ್ಬರಾಗಿರುವ ಅವರು, ಕನ್ನಡಿಗರಿಗೆ ಉದ್ಯೋಗ ನೀಡಬೇಕೆಂದರೆ ಉನ್ನತ ಶಿಕ್ಷಣಕ್ಕೆ ಹೆಚ್ಚಿನ ವೆಚ್ಚ ಮಾಡಲಿ. ಕನ್ನಡಿಗರಿಗೆ ಉದ್ಯೋಗಕ್ಕೆ ಸೂಕ್ತ ತರಬೇತಿ ನೀಡಲಿ. ಕೌಶಲ್ಯಾಭಿವೃದ್ಧಿಗೆ ಹೆಚ್ಚಿನ ಹಣವನ್ನು ರಾಜ್ಯ ಸರ್ಕಾರ ವೆಚ್ಚ ಮಾಡಲಿ.

ಇದನ್ನೂ ಓದಿ:ಕನ್ನಡಿಗರಿಗೆ ಗುಡ್​​ನ್ಯೂಸ್.. ಖಾಸಗಿ ಕಂಪನಿಗಳಲ್ಲಿ ಶೇ.75ರಷ್ಟು ಮೀಸಲಾತಿ; ಸಿದ್ದು ಸರ್ಕಾರ ಮಹತ್ವದ ನಿರ್ಧಾರ

publive-image

ಇಂಟರ್ನ್​ಶಿಪ್, ಅಪ್ರೆಂಟಿಷಿಪ್​ಗೆ ಹೆಚ್ಚಿನ ಹಣ ವೆಚ್ಚ ಮಾಡಲಿ. ಇದರಿಂದ ಕನ್ನಡಿಗರು ಕೂಡ ಕೌಶಲ್ಯ ಹೊಂದಿದವರು ಆಗುತ್ತಾರೆ. ಆದರೆ ಕನ್ನಡಿಗರಿಗೇ ಉದ್ಯೋಗ ನೀಡಬೇಕೆಂದು ಕಾನೂನು ಮಾಡುವುದು ಸರಿಯಲ್ಲ. ಇದರಿಂದ ಸರ್ಕಾರ ಏನು ಸಾಧನೆ ಮಾಡುತ್ತೆ? ಖಾಸಗಿ ಕಂಪನಿಗಳ ನೇಮಕಾತಿ ಸಮಿತಿಯಲ್ಲಿ ಸರ್ಕಾರದ ಪ್ರತಿನಿಧಿ ಏಕಿರಬೇಕು? ಕರ್ನಾಟಕದಲ್ಲಿ ಭ್ರಷ್ಟರಿದ್ದಾರೆ, ಕಾರ್ಮಿಕ ಇನ್ಸ್​​ಪೆಕ್ಟರ್​ಗಳೆಲ್ಲ ಲಂಚ ತೆಗೆದುಕೊಳ್ಳುತ್ತಾರೆ ಎಂದಿದ್ದಾರೆ.

ಅವರು ಕೂಡ ರಾಜ್ಯದಿಂದಲೇ ಬೆಳದಿರುವವರು

ಕರ್ನಾಟಕ ಸರ್ಕಾರದ ಮಸೂದೆಗೆ ಬೆಂಗಳೂರಿನ ಉದ್ಯಮ ಮಾಲೀಕರ ವಿರೋಧಕ್ಕೆ ಪ್ರತಿಕ್ರಿಯಿಸಿರುವ ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್, ಟೆಕ್ನಿಕಲ್ ಇದ್ದ ಕಡೆ ಏನು ಮಾಡಲು ಆಗಲ್ಲ. ನಾವು ಕೂಡ ಅರ್ಥ ಮಾಡಿಕೊಳ್ಳುತ್ತೇವೆ. ಅವರು ಕೂಡ ರಾಜ್ಯದಿಂದಲೇ ಬೆಳೆದಿರುವವರು. ಟೆಕ್ನಿಕಲ್ ಬೇಕಾಗುವ ಕಡೆ ರಿಯಾಯಿತಿ ಕೋಡುತ್ತೇವೆ. ಸರ್ಕಾರದ ಗಮನಕ್ಕೆ ಅವರು ತರಬೇಕು ಎಂದಿದ್ದಾರೆ.

ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಕನ್ನಡಿಗರ ಸ್ವಾಭಿಮಾನ ಎತ್ತಿಹಿಡಿಯಬೇಕು ಅಂತ ಬಂದಿದೆ. ಕನ್ನಡ ಬೋರ್ಡ್, ಭಾಷೆ, ಧ್ವಜ ಬಳಕೆ, ನಮ್ಮ ಸಂಸ್ಕೃತಿ, ಕಡತಗಳಲ್ಲಿ ಕನ್ನಡ ಬಳಕೆ ಆಗಲಿದೆ. ಮುಂದೆ ರಾಜ್ಯದಲ್ಲಿ ಉದ್ಯೋಗ ಸೃಷ್ಟಿ ಇರಬಹುದು. ಕಡ್ಡಾಯವಾಗಿ ಕನ್ನಡಿಗರಿಗೆ ಇಷ್ಟು ಪರ್ಸೆಂಟ್ ಇರಬೇಕು ಎಂಬ ತೀರ್ಮಾನವನ್ನು ಮಾಡಿದ್ದೇವೆ. ಈ ಸಂಬಂಧ ಬಿಲ್ ತರುತ್ತಿದ್ದೇವೆ ಎಂದರು.

ಇದನ್ನೂ ಓದಿ:ರೋಹಿತ್​ಗೆ ಪರ್ಯಾಯ ನಾಯಕ ಯಾರು? ರೇಸ್​​ನಲ್ಲಿ 5 ಆಟಗಾರರು..!

ಕಾರ್ಮಿಕ ಸಚಿವ ಸಂತೋಷ್ ಲಾಡ್ ಮಾತನಾಡಿ, ಈ ಅಧಿವೇಶನದಲ್ಲಿ ಹೊಸ ಕಾನೂನು ವಿಧೇಯಕ ತರುತ್ತೇವೆ. ಆದರೆ, ಕೆಲ ಕಂಪನಿಗಳು ಇದಕ್ಕೆ ವಿರೋಧ ವ್ಯಕ್ತಪಡಿಸಿವೆ. ಅದು ಸಹ ನಮ್ಮ ಗಮನಕ್ಕೆ ಬಂದಿದೆ. ಮಜುಂದಾರ್ ಶಾ ನನಗೆ ಮೆಸೇಜ್ ಮಾಡಿದ್ದಾರೆ. ಮುಖ್ಯಮಂತ್ರಿಗಳು ಎಕ್ಸ್​ನಲ್ಲಿ ಪೋಸ್ಟ್ ಮಾಡಿದ ಬಳಿಕ ಮೆಸೇಜ್ ಮಾಡಿದ್ದರು. ನಾನು ಸಹ ವ್ಯವಹಾರದ ಕುಟುಂಬದಿಂದ ಬಂದವನು. ನನಗೂ ಅದರ ಬಗ್ಗೆ ಮಾಹಿತಿ ಇದೆ. ಅವರು ಬಂದು ನಮ್ಮ ಬಳಿ ಹೇಳಲಿ. ಕಂಪನಿಗಳಿಗೆ ಇದರಿಂದ ನಷ್ಟ ಆಗುತ್ತೆ ಅನ್ನೋದಾದ್ರೆ ನಮ್ಮ ಬಳಿ ಬಂದು ಹೇಳಲಿ.

ಅವರ ಸಮಸ್ಯೆಯನ್ನು ಪರಿಶೀಲನೆ ಮಾಡೋಣ. ಇದನ್ನ ರಾತ್ರೋರಾತ್ರಿ ಮಾಡೋದಿಲ್ಲ. ಕಂಪನಿಗಳ ಹಿತದೃಷ್ಟಿಯಿಂದಲೇ ಮಾಡ್ತೇವೆ. ನಾವು ಹೊರ ರಾಜ್ಯ ಮತ್ತು ಹೊರ ದೇಶದಲ್ಲಿ ಕಂಪನಿ ಮಾಡಿದ್ರೆ ಸ್ಥಳೀಯರಿಗೆ ನಾವು ಅವಕಾಶ ಕೊಡ್ತೇವೆ. ಅವರು ಸಹ ಇಲ್ಲಿ ಸ್ಥಳೀಯರಿಗೆ ಅವಕಾಶ ಕೊಡಲಿ. ನಮ್ಮಲ್ಲೇ ಸ್ಕಿಲ್ ಜಾಸ್ತಿ ಸಿಗುತ್ತೆ. ಒಂದು ವೇಳೆ ಸ್ಥಳೀಯವಾಗಿ ಸಿಗದಿದ್ರೆ ಹೊರಗಡೆಯಿಂದ ತೆಗೆದುಕೊಳ್ಳಬಹುದು. ಆಡಳಿತಾತ್ಮಕ ಹುದ್ದೆಗಳ ಬಗ್ಗೆ ಕಂಪನಿಗಳೇ ನಿಗದಿ ಮಾಡಲಿ ಎಂದಿದ್ದಾರೆ.

ಇದನ್ನೂ ಓದಿ:ಆಳ ಸಮುದ್ರದಲ್ಲಿ ಅನಾಹುತ.. ತೈಲ ಟ್ಯಾಂಕರ್​ ಮುಳುಗಿ 13 ಭಾರತೀಯರು ಸೇರಿ 16 ಮಂದಿ ನಾಪತ್ತೆ

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment