ಕರ್ಣನಿಗೆ ಬಂದ ವಿಘ್ನ ವಿನಾಶ.. ಸೀರಿಯಲ್ ತಂಡದಿಂದ ಫ್ಯಾನ್ಸ್​ಗೆ ಭರ್ಜರಿ ಗುಡ್​​ನ್ಯೂಸ್..!

author-image
Veena Gangani
Updated On
ಇನ್ಮುಂದೆ ಕರ್ಣನ ಹವಾ ಬಲು ಜೋರು.. ವೀಕ್ಷಕರಿಗೆ ಇಷ್ಟ ಆಗುತ್ತಾ ಅಕ್ಕ-ತಂಗಿ ಕಾಂಬಿನೇಷನ್..!
Advertisment
  • ಕರ್ಣ ಧಾರಾವಾಹಿ ಪ್ರಸಾರ ಆಗದಿದ್ದಕ್ಕೆ ಬೇಸರವಾಗಿದ್ದ ಫ್ಯಾನ್ಸ್
  • ಇಷ್ಟು ದಿನ ಕಾದು ಕುಳಿತಿದ್ದ ಅಭಿಮಾನಿಗಳು ಕೊನೆಗೂ ಖುಷ್​
  • ಎಲ್ಲ ಅಡೆತಡೆಗಳನ್ನು ದಾಟಿ ಹೃದಯ ಮೀಟಲು ಕರ್ಣ ರೆಡಿ

ಅಂದುಕೊಂಡಂತೆ ಜೂನ್​ 16ರಂದು ಕರ್ಣ ಧಾರಾವಾಹಿ ಪ್ರಸಾರ ಕಂಡಿದ್ದರೇ ಇಂದಿಗೆ 17 ದಿನಗಳು ಕಳೆಯುತ್ತಿದ್ದವು. ಅಂದು ಅಭಿಮಾನಿಗಳು ಅಂದುಕೊಂಡಂತೆ ಸೀರಿಯಲ್​ ಪ್ರಸಾರ ಕಂಡಿರಲಿಲ್ಲ.


ಆದ್ರೆ ಇದೀಗ ಎಲ್ಲ ಅಡೆತಡೆಗಳನ್ನು ದಾಟಿ ನಿಮ್ಮ ಹೃದಯ ಮೀಟಲು ನಾಳೆಯಿಂದಲೇ ಕರ್ಣ! ಬರ್ತಿದ್ದಾನೆ. ಹೌದು, ಬರೋಬ್ಬರಿ ಎರಡು ವರ್ಷಗಳ ನಂತರ ನಟ ಕಿರಣ್​ ರಾಜ್​ ಅವರನ್ನು0 ಕಣ್ತುಂಬಿಕೊಳ್ಳಬೇಕು ಅಂತ ಅಭಿಮಾನಿಗಳು ಕಾಯುತ್ತಿದ್ದರು. ಆದ್ರೆ, ಕೆಲವು ಕಾರಣಾಂತರಗಳಿಂದ ಕರ್ಣ ಸೀರಿಯಲ್​ ಜೂನ್​ 16ರಂದು ಪ್ರಸಾರ ಕಂಡಿರಲಿಲ್ಲ. ಹೀಗಾಗಿ ವೀಕ್ಷಕರು ಹಾಗೂ ಅಭಿಮಾನಿಗಳಿಗೆ ನಿರಾಸೆ ಉಂಟಾಗಿತ್ತು.

ಇದನ್ನೂ ಓದಿ: 16 ವರ್ಷದ ಹುಡುಗನ ಮೇಲೆ ಲೇಡಿ ಶಿಕ್ಷಕಿಯಿಂದ ನಿರಂತರ ಲೈಂಗಿಕ ದೌರ್ಜನ್ಯ.. ಈಗ ಏನಾಗಿದೆ..?

publive-image

ಇದೀಗ ಕೊಟ್ಟ ಮಾತಿನಂತೆ ಕರ್ಣ ಬರ್ತಿದ್ದಾನೆ. ಅಂದ್ರೆ ನಾಳೆಯಿಂದ ಸೋಮ-ಶುಕ್ರ ರಾತ್ರಿ 8ಕ್ಕೆ ಕರ್ಣ ಸೀರಿಯಲ್​ ಪ್ರಸಾರವಾಗಲಿದೆ. ಈ ಬಗ್ಗೆ ಖುದ್ದು ಜೀ ಕನ್ನಡ ತನ್ನ ಅಫೀಷಿಯಲ್ ಸೋಷಿಯಲ್​ ಮೀಡಿಯಾ ಖಾತೆಗಳಲ್ಲಿ ಹಂಚಿಕೊಂಡಿದೆ. ದಿಢೀರ್​ ಅಂತ ಕರ್ಣ ಡೇಟ್​ ಮುಂದೂಡಿಕೆ ಮಾಡಲಾಗಿತ್ತು. ಈ ಹಿನ್ನೆಲೆಯಲ್ಲಿ ನಟ ಕಿರಣ್ ರಾಜ್ ಅವರು ವೀಕ್ಷಕರಲ್ಲಿ ಕ್ಷಮೆಯಾಚಿಸಿದ್ದರು. ಕರ್ಣನಾಗಿ ನಿಮ್ಮ ಮನೆಗೆ ಬರಬೇಕಿತ್ತು. ಆದರೆ ಕೆಲ ಕಾರಣಗಳಿಂದ ಅದು ಆಗಲಿಲ್ಲ. ಹೀಗಾಗಿ ಎಲ್ಲ ವೀಕ್ಷಕರ ಬಳಿ ಕ್ಷಮೆ ಕೇಳುತ್ತಿದ್ದೇನೆ ಎಂದಿದ್ದರು ಕಿರಣ್​ ರಾಜ್​. ಅದೇ ರೀತಿ ನಿತ್ಯಾ ಪಾತ್ರ ಮಾಡ್ತಿರೋ ನಮ್ರತಾ ಗೌಡ ಅವರು ಕೂಡ ಕ್ಷಮೆ ಕೇಳಿದ್ದರು. ಆದಷ್ಟು ಬೇಗ ನಿಮ್ಮ ಮುಂದೆ ಬಂದೇ ಬರ್ತಿವಿ ಅಂತ ಕೂಡ ಭರವಸೆ ಕೊಟ್ಟಿದ್ದರು. ಜೊತೆಗೆ ನಿಧಿ ಪಾತ್ರ ಮಾಡ್ತಿರೋ ಭವ್ಯಾ ಗೌಡ ಕೂಡ ಈ ಬಗ್ಗೆ ಬೇಸರ ಹೊರ ಹಾಕಿದ್ದರು. ತಮ್ಮ ಸೋಷಿಯಲ್​ ಮೀಡಿಯಾ ಖಾತೆಯಲ್ಲಿ ಆಗೋದಲ್ಲ ಒಳ್ಳೆಯದಕ್ಕೆ ಎಂಬ ಅರ್ಥದಲ್ಲಿ ಟ್ರಸ್ಟ್​ ದಿ ಪ್ರೋಸಸ್​ ಎಂದು ಬರೆದುಕೊಂಡಿದ್ದರು.

publive-image

ಸದ್ಯ ಕೊಟ್ಟ ಮಾತಿನಂತೆ ನಾಳೆಯಿಂದ ಜೀ ಕನ್ನಡದಲ್ಲಿ ರಾತ್ರಿ 8.00 ಗಂಟೆಗೆ ಕರ್ಣ ಸೀರಿಯಲ್​ ಪ್ರಸಾರವಾಗಲಿದೆ. ಇನ್ನೂ, ಈ ಹಿಂದೆ ಕರ್ಣ ಸೀರಿಯಲ್​ ತಂಡಕ್ಕೆ ಕಾನೂನು ಸಮಸ್ಯೆ ಎದುರಾಗಿತ್ತು. ಈ ಬಗ್ಗೆ ವಾಹಿನಿ ಸ್ಪಷ್ಟ ಮಾಹಿತಿ ಬಿಟ್ಟುಕೊಟ್ಟಿರಲಿಲ್ಲ. ಆದ್ರೆ ಇಂಟರ್​ನಲ್ ಸಮಸ್ಸೆ ಆಗಿದ್ದರಿಂದ ವೀಕ್ಷಕರ ಮುಂದೆ ಬರೋದಕ್ಕೆ ತಡವಾಗಿತ್ತು. ಈಗ ಎಲ್ಲಾ ಸವಾಲುಗಳನ್ನ ಮೀರಿ ಕರ್ಣ ಧಾರಾವಾಹಿ ನಾಳೆ ಪ್ರಸಾರ ಆಗಲಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment