ಕನ್ನಡ ಕಿರುತೆರೆಯಲ್ಲೇ ಹೊಸ ದಾಖಲೆ ಮಾಡಿದ ಕಿರಣ್​ ರಾಜ್​.. ಗೊತ್ತಾದ್ರೆ ನೀವೂ ಖುಷಿ ಆಗ್ತೀರಾ!

author-image
Veena Gangani
Updated On
‘ಕರ್ಣ’ ಸೀರಿಯಲ್​ನಲ್ಲಿ ಬಿಗ್​ ಸ್ಟಾರ್ಸ್ ನಟಿಯರೇ ಏಕೆ? ತಂಡದ ​ಹಿಂದಿನ ಗುಟ್ಟೇನು ಗೊತ್ತಾ?
Advertisment
  • ಕನ್ನಡದ ಮೋಸ್ಟ್ ಹ್ಯಾಂಡ್ಸಮ್ ನಟರಲ್ಲಿ ಸ್ಟಾರ್​ ಕಿರಣ್ ರಾಜ್ ಕೂಡ ಒಬ್ಬರು
  • ಅಭಿಮಾನಿಗಳು ಇಷ್ಟೊಂದು ಪ್ರೀತಿ ತೋರಿಸಿದ್ದಕ್ಕೆ ಕಿರಣ್​ ರಾಜ್ ಹೇಳಿದ್ದೇನು?
  • ಕನ್ನಡತಿ ಸೀರಿಯಲ್​ ಬಳಿಕ ಬೆಳ್ಳಿ ತೆರೆ ಕಡೆ ಮುಖ ಮಾಡಿದ ನಟ ಕಿರಣ್ ರಾಜ್

ಕನ್ನಡ ಮೋಸ್ಟ್ ಹ್ಯಾಂಡ್ಸಮ್ ನಟರಲ್ಲಿ ಟಾಪ್ ಲಿಸ್ಟ್​ನಲ್ಲಿ​ ಬರೋದು ಅಂದರೆ ನಮ್ಮ ಕಿರಣ್ ರಾಜ್. ಕನ್ನಡತಿ ಧಾರಾವಾಹಿಯ ಮೂಲಕ ಇಡೀ ಕರುನಾಡ ಮನೆ ಹಾಗೂ ಮನವನ್ನು ತಲುಪಿದ ನಟ ಕಿರಣ್​​​ ರಾಜ್​​​ ಮತ್ತೆ ಸುದ್ದಿಯಲ್ಲಿದ್ದಾರೆ. ಸೀರಿಯಲ್ ಮುಕ್ತಾಯದ ಬಳಿಕ ಬೆಳ್ಳಿ ತೆರೆ ಕಡೆ ಮುಖ ಮಾಡಿದ್ದರು ಕನ್ನಡತಿ ಹೀರೋ.

ಇದನ್ನೂ ಓದಿ:ಪುನೀತ್ ರಾಜ್​ಕುಮಾರ್ ಬರ್ತ್​ಡೇ ಸ್ಪೆಷಲ್.. ಮಸಾಲಪೂರಿ, ಪಾನಿಪೂರಿ ಫ್ರೀ.. ಫ್ರೀ.. ಎಲ್ಲಿ?

publive-image

ಆದ್ರೆ ಇದೀಗ ಇದೀಗ ನಟ ಕಿರಣ್​​ ರಾಜ್ ಅವರು ಮತ್ತೆ ಕಿರುತೆರೆ ಲೋಕಕ್ಕೆ ಭರ್ಜರಿಯಾಗಿ ಕಾಲಿಟ್ಟಿದ್ದಾರೆ. ಹೌದು, ಕನ್ನಡತಿ ಸೀರಿಯಲ್​ ಮೂಲಕ ಸೂಪರ್​ ಹೀರೋ  ಆಗಿ ಮಿಂಚುತ್ತಿರೋ ಸ್ಟಾರ್​ ನಟ ಕಿರಣ್​ ರಾಜ್​ ಇನ್ಮುಂದೆ ಡಾಕ್ಟರ್​ ಕರ್ಣ ಆಗಿ ಟಿವಿ ಪರೆದೆ ಮೇಲೆ ಬರ್ತಿದ್ದಾರೆ. ಕನ್ನಡತಿ ನಂತರ ಕಿರಣ್‌ ರಾಜ್‌ಗೆ ಬ್ಯಾಕ್‌ ಟು ಬ್ಯಾಕ್‌ ಕನ್ನಡ ಸಿನಿಮಾ ಆಫರ್ಸ್‌ ಬಂದಿದ್ದವರು. ಹಲವು ಸಿನಿಮಾಗಳು ರಿಲೀಸ್ ಕೂಡ ಆದವು.

publive-image

ಇವತ್ತಿಗೂ ಇವರ ಸಿನಿಮಾ ಆಫರ್ಸ್‌ಗೆ ನಿಜಕ್ಕೂ ಕೊರತೆ ಇಲ್ಲ. ಪಾಪ್ಯುಲಾರಿಟಿ ಇವರಿಗೆ ಭದ್ರಬುನಾದಿಯನ್ನೂ ಹಾಕಿಕೊಟ್ಟಿದೆ. ಇದಕ್ಕೆಲ್ಲಾ ಮುಖ್ಯ ಕಾರಣ ಕಿರಣ್‌ ರಾಜ್ ಅಭಿನಯ ಮತ್ತು ಅವರ ಪಾಸಿಟಿವ್‌ ಆ್ಯಟಿಟ್ಯೂಡ್‌. ಈಗ ಬರುತ್ತಿರೋ ಸೀರಿಯಲ್​ನಲ್ಲಿ ನಟ ಕಿರಣ್‌ ರಾಜ್‌ ಅವರು ಲೀಡ್‌ ರೋಲ್​ನಲ್ಲಿ ಕಾಣಿಸಿಕೊಳೋದಕ್ಕೆ ಸಜ್ಜಾಗಿದ್ದಾರೆ. ಮೊನ್ನೆಯಷ್ಟೇ ಕರ್ಣ ಸೀರಿಯಲ್ ಪ್ರೋಮೋ ಒಂದು ರಿಲೀಸ್ ಆಗಿತ್ತು. ಅದೇ ವಿಡಿಯೋವನ್ನು ನಟ ಕಿರಣ್ ರಾಜ್ ತಮ್ಮ ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದರು.

ಇದೇ ವಿಚಾರ ತಿಳಿಯುತ್ತಿದ್ದಂತೆ ಅಭಿಮಾನಿಗಳು ಫುಲ್​ ಖುಷ್​ ಆಗಿದ್ದರು. ಅಲ್ಲದೇ ನಟ ಆಗಮನಕ್ಕೆ ಇಷ್ಟು ದಿನ ಕಾಯುತ್ತಿದ್ದ ಅಭಿಮಾನಿಗಳು ಸೋಷಿಯಲ್​ ಮೀಡಿಯಾದಲ್ಲಿ ಶುಭಾಶಯ ಮಹಾಪೂರವೇ ಹರಿಸಿದ್ದರು. ಇದಕ್ಕೆ ಸಾಕ್ಷಿ ಎಂಬಂತೆ ರಿಲೀಸ್​ ಆಗಿರೋ ಕಿರಣ್ ರಾಜ್ ಹೊಚ್ಚ ಹೊಸ ಪ್ರೋಮೋಗೆ ಎರಡು ದಿನಗಳಲ್ಲಿ ಬರೋಬ್ಬರಿ 8.7 ಮಿಲಿಯನ್ಸ್ ವೀವ್ಸ್ ಪಡೆದಿದೆ. ರಿಲೀಸ್​ ಆದ ಪ್ರೋಮೋಗೆ ಬಿಗ್ ಓಪನಿಂಗ್ ಸಿಕ್ಕಂತೆ ಆಗಿದೆ. ಅಭಿಮಾನಿಗಳು ಇಷ್ಟೊಂದು ಪ್ರೀತಿ ತೋರಿಸಿದ್ದಕ್ಕೆ ಕಿರಣ್​ ರಾಜ್​ ಧನ್ಯವಾದ ತಿಳಿಸಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment