Advertisment

ಕೊನೆಗೂ ವಕ್ಫ್​ ಬೋರ್ಡ್​ ತಿದ್ದುಪಡೆ ಕಾಯ್ದೆ ಮಂಡನೆ.. ವಿರೋಧ ಯಾಕೆ? ಇದರ ಇತಿಹಾಸ ಏನು?

author-image
Gopal Kulkarni
Updated On
ಇಂದು ಲೋಕಸಭೆಯಲ್ಲಿ ವಕ್ಫ್​ ಬಿಲ್ ಮಂಡನೆ.. ಮಸೂದೆ ಅಂಗೀಕಾರಕ್ಕೆ ಸಂಖ್ಯಾಬಲ ಇದೆಯಾNDA ಬಳಿ?
Advertisment
  • ಲೋಕಸಭೆಯಲ್ಲಿ ವಕ್ಫ್​ಬೋರ್ಡ್ ಆ್ಯಕ್ಟ್ ತಿದ್ದುಪಡಿ ಮಸೂದೆ ಮಂಡನೆ
  • ನರೇಂದ್ರ ಮೋದಿ ಸರ್ಕಾರದ ವಿರುದ್ಧ ಗುಡುಗಿದ ವಿಪಕ್ಷಗಳ ನಾಯಕರು
  • ಏನಿದು ವಕ್ಫ್​​ಬೋರ್ಡ್​ ಆ್ಯಕ್ಟ್​..? ಯಾಕಿಷ್ಟು ರಾಜಕೀಯ ಕೋಲಾಹಲ!

ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಸತತ ಮೂರನೇ ಅವಧಿಗೆ ಅಧಿಕಾರದ ಚುಕ್ಕಾಣಿ ಹಿಡಿದಿದೆ. ಪ್ರತಿ ಬಾರಿ ಅಧಿಕಾರಕ್ಕೆ ಬಂದಾಗಲೂ ಆಗಸ್ಟ್​ 5 ರಂದು ಏನಾದರೂ ಒಂದು ವಿಶೇಷತೆಯನ್ನು ಎನ್‌ಡಿಎ ಸರ್ಕಾರ ದೇಶಕ್ಕೆ ನೀಡುತ್ತಾ ಬಂದಿದೆ. ಜಮ್ಮು ಕಾಶ್ಮೀರಕ್ಕೆ ನೀಡಲಾಗಿದ್ದ 370 ವಿಧಿ ರದ್ದಾಗಿತ್ತು. ಆಗಸ್ಟ್​ 5 ರಂದೇ ರಾಮ ಮಂದಿರ ಸ್ಥಾಪನೆಗೆ ಶಂಕುಪೂಜೆ ನೇರವೇರಿತ್ತು. ಈಗ ಆಗಸ್ಟ್ 5 ರಂದೇ ಮತ್ತೊಂದು ಪ್ರಮುಖವಾದ ಹೆಜ್ಜೆಯನ್ನಿಟ್ಟಿದೆ ಮೋದಿ ಸರ್ಕಾರ. ವಕ್ಫ್‌ ಬೋರ್ಡ್‌ ಆ್ಯಕ್ಟ್​ನಲ್ಲಿ ಹಲವು ತಿದ್ದುಪಡಿ ತರಲು ಕೇಂದ್ರ ಸಚಿವ ಸಂಪುಟದಲ್ಲಿ ಇದೇ ದಿನಾಂಕದಂದು ನಿರ್ಧರಿಸಿತ್ತು. ಅದರ ಪ್ರಕಾರವೇ ಇಂದು ಲೋಕಸಭೆಯಲ್ಲಿ ಕಾನೂನು ಸಂಸದೀಯ ಹಾಗೂ ಅಲ್ಪಸಂಖ್ಯಾತರ ಇಲಾಖೆ ಸಚಿವ ಕಿರೇನ್​ ರಿಜುಜು ವಕ್ಫ್​ಬೋರ್ಡ್ ತಿದ್ದುಪಡೆ ಮಸೂದೆಯನ್ನು ಪರಿಚಯಿಸಿದ್ದಾರೆ.

Advertisment

publive-image

ಏನಿದು ವಕ್ಫ್​ಬೋರ್ಡ್ ಆ್ಯಕ್ಟ್​? ಯಾಕಿಷ್ಟು ವಿರೋಧ?

1947ರಲ್ಲಿ ಭಾರತ ಹಾಗೂ ಪಾಕಿಸ್ತಾನ ಇಬ್ಭಾಗಗೊಂಡ ವೇಳೆ ದೇಶದಲ್ಲಿನ ಮುಸ್ಲಿಂರ ಆಸ್ತಿಯ ರಕ್ಷಣೆಗಾಗಿ ಹಾಗೂ ಅವರಿಗೆ ಉಳಿಸೋ ಉದ್ದೇಶದಿಂದ ಅಂದಿನ ಪ್ರಧಾನ ಮಂತ್ರಿ ಜವಾಹರಲಾಲ್ ನೆಹರು ಅವರು 1954ರಲ್ಲಿ ಈ ವಕ್ಫ್​ಬೋರ್ಡ್ ಆ್ಯಕ್ಟ್​ನ್ನು ಪರಿಚಯಿಸಿದರು. 1964ರಲ್ಲಿ ಸೆಂಟ್ರಲ್ ವಕ್ಫ್​ಬೋರ್ಡ್ ರಚನೆಯಾಯಿತು. ಇದರ ಅನ್ವಯ ಮುಸ್ಲಿಂ ನಾಗರಿಕರು ತಮ್ಮ ಯಾವುದಾದ್ರೂ ಆಸ್ತಿಯನ್ನು ದಾನ ಮಾಡಿದ್ರೆ ಅದರ ಮೇಲೆ ವಕ್ಫ್​ಬೋರ್ಡ್​ನ ನಿಯಂತ್ರಣವಿರುತ್ತಿತ್ತು. ಮತ್ತು ಅವುಗಳನ್ನು ಕೇವಲ ಮಸೀದಿ, ಮದರಸಾಗಳಂತಹ ಪರೋಪಕಾರಕ್ಕೆ ಸೀಮಿತವಾದ ಪ್ರಯೋಜನಕ್ಕೆ ಮಾತ್ರ ಬಳಸಲು ನಿಯಮವಿತ್ತು. ಮುಸ್ಲಿಂ ಧರ್ಮದ ಪ್ರಕಾರ ದಾನವೆಂದು ಬಂದ ಆಸ್ತಿಯನ್ನು ಮಾರಾಟ ಮಾಡುವ ಹಕ್ಕಿಲ್ಲ. ಹೀಗಾಗಿ ಅದನ್ನು ನಿರ್ವಹಣೆ ಮಾಡುವ ಅಧಿಕಾರವನ್ನು ವಕ್ಫ್​ ಬೋರ್ಡ್​ಗೆ ನೀಡಲಾಯಿತು.

ಇದನ್ನೂ ಓದಿ:ರಾಹುಲ್ ಗಾಂಧಿಗೆ ಪಾಕಿಸ್ತಾನದಿಂದ ಭರ್ಜರಿ ಉಡುಗೊರೆ..? ಹೊಸ ವಿವಾದ..!

ಸದ್ಯ ಭಾರತದಲ್ಲಿ ಸೇನೆ, ರೇಲ್ವೆ ಇಲಾಖೆ ಬಿಟ್ಟರೆ ಅತಿ ಹೆಚ್ಚು ಭೂಮಾಲಿಕತ್ವ ಹೊಂದಿರುವ ಸಂಸ್ಥೆ ವಕ್ಫ್​ಬೋರ್ಡ್. ಇದಕ್ಕೆ 1995ರಲ್ಲಿ ಒಂದಿಷ್ಟು ತಿದ್ದುಪಡಿಯನ್ನು ತರಲಾಯಿತು. ಕೇವಲ ಕೇಂದ್ರದಲ್ಲಿ ಮಾತ್ರವಲ್ಲ, ಉಳಿದ ರಾಜ್ಯಗಳು ಹಾಗೂ ಕೇಂದ್ರಾಳಿತ ಪ್ರದೇಶಗಳಲ್ಲಿಯೂ ವಕ್ಫ್​​ಬೋರ್ಡ್​ ಸ್ಥಾಪನೆಗೆ ಅವಕಾಶ ನೀಡಲಾಯಿತು. ಸದ್ಯ ದೇಶದಲ್ಲಿ ಒಟ್ಟು 30 ರಿಂದ 40 ವಕ್ಫ್​​ಬೋರ್ಡ್​ಗಳಿವೆ. ಒಟ್ಟು ಇದರ ಬಳಿ ಇರುವ ಆಸ್ತಿ 1.2 ಲಕ್ಷ ಕೋಟಿ ರೂಪಾಯಿಷ್ಟು ಎಂದು ಹೇಳಲಾಗುತ್ತಿದೆ. 9.40 ಲಕ್ಷ ಎಕರೆ ಜಾಗ ಈಗ ವಕ್ಫ್​​ಬೋರ್ಡ್​ ಸುಪರ್ಧಿಯಲ್ಲಿದೆ.

ಇಷ್ಟು ವಿಶಾಲವಾದ ಆಸ್ತಿಯನ್ನು ಹೊಂದಿರುವುದರಿಂದ ಅಲ್ಲಿ ಸಿಕ್ಕಾಪಟ್ಟೆ ಅವ್ಯವಹಾರಗಳು ಆಗ್ತಿವೆ, ಆ ಅವ್ಯವಹಾರದ ಮೊತ್ತವೇ ಟ್ರಿಲಿಯನ್ ಲೆಕ್ಕದಲ್ಲಿ ಇದೆ ಎಂದು ಆರೋಪಗಳು ಕೂಡ ಕೇಳಿ ಬಂದಿವೆ. ಈ ಒಂದು ವಕ್ಫ್​ಬೋರ್ಡ್​ಗಿರುವ ಸ್ವತಂತ್ರ ಶಕ್ತಿಗೆ ಕೊಕ್ಕೆ ಹಾಕಲು ಕೇಂದ್ರ ಸರ್ಕಾರ ಮುಂದಾಗಿದೆ.

Advertisment

ಇದನ್ನೂ ಓದಿ:ಭಾರತದ ಗಡಿಗೆ ನುಗ್ಗಲು ಮುಂದಾದ ಸಾವಿರಾರು ಬಾಂಗ್ಲಾ ಜನ; ಗಡಿಯಲ್ಲಿ BSF ಪಡೆಗೆ ಬಿಗ್ ಚಾಲೆಂಜ್..!

ಇಂದು ಲೋಕಸಭೆಯಲ್ಲಿ ಮಂಡನೆಯಾದ ವಕ್ಫ್​​ಬೋರ್ಡ್​ ತಿದ್ದುಪಡಿ ಮಸೂದೆಯಲ್ಲಿ ಒಟ್ಟು 40 ತಿದ್ದುಪಡಿಗೆ ಸಂಪುಟ ಈಗಾಗಲೇ ಅಂಗೀಕಾರ ಕೊಟ್ಟಿದೆ. ಈ ತಿದ್ದುಪಡಿಯನ್ವಯ ಇನ್ನು ಮುಂದೆ ಯಾವುದೇ ಆಸ್ತಿಯನ್ನು ವಕ್ಫ್​ ಆಸ್ತಿಯೆಂದು ಸುಮ್ ಸುಮ್ಮನೆ ಘೋಷಿಸಲು ಆಗುವುದಿಲ್ಲ ಕಡ್ಡಾಯವಾಗಿ ವೆರಿಫಿಕೇಷನ್ ಮಾಡಬೇಕು. ವಕ್ಫ್​ನಲ್ಲಿ ಮಹಿಳೆಯರಿಗೂ ಅವಕಾಶ ನೀಡುವ ಉದ್ದೇಶ ಈ ತಿದ್ದುಪಡಿಯಲ್ಲಿದೆ. ಸದ್ಯ ವಿವಾದದಲ್ಲಿ ಇರುವ ಜಾಗಗಳನ್ನ ಮರುಪರಿಶೀಲನೆ ಮಾಡುವ ಅಂಶವೂ ಈ ತಿದ್ದುಪಡಿಯಲ್ಲಿ ಸೇರಿದೆ. ಅದು ಅಲ್ಲದೇ ಇನ್ಮುಂದೆ ವಕ್ಫ್​ಬೋರ್ಡ್ ಆಸ್ತಿಯನ್ನ ಜಿಲ್ಲಾ ಮ್ಯಾಜಿಸ್ಟ್ರೇಟ್​ ಮೇಲ್ವಿಚಾರಣೆ ಮಾಡಲಿದ್ದಾರೆ. ಇದು ಈಗ ಮುಸ್ಲಿಂ ಸಂಘಟನೆಗಳು ಸೇರಿದಂತೆ ರಾಜಕೀಯ ಪಕ್ಷಗಳ ಹಾಗೂ ವಿಪಕ್ಷಗಳ ಆಕ್ರೋಶಕ್ಕೆ ಗುರಿಯಾಗಿದೆ.

ಇದು ಮುಸ್ಲಿಂರ ಹಕ್ಕುಗಳನ್ನು ಕಸಿದುಕೊಳ್ಳುವ ಅಜೆಂಡಾ ಎಂದು ಹೈದರಾಬಾದ್‌ ಸಂಸದ ಅಸಾದುದ್ದಿನ್ ಓವೈಸಿ ಹೇಳಿದ್ದಾರೆ. ಇದಕ್ಕೆ ಉತ್ತರಿಸಿರುವ ಸಚಿವ ಕಿರೇನ್ ರಿಜುಜ್, ಇದರಿಂದ ಲಾಭಗಳೇ ಜಾಸ್ತಿ ಇವೆ, ಸುಮ್ಮನೆ ಮುಸ್ಲಿಂ ಸಮುದಾಯದ ದಾರಿ ತಪ್ಪಿಸಬೇಡಿ ಎಂದು ಹೇಳಿದ್ದಾರೆ. ಸದ್ಯ ಲೋಕಸಭೆಯಲ್ಲಿ ಮಂಡನೆಯಾದ ವಕ್ಫ್​ಬೋರ್ಡ್ ತಿದ್ದುಪಡಿ ಮಸೂದೆ, ರಾಜ್ಯಸಭೆಯಲ್ಲಿ ಏನೆಲ್ಲಾ ಸಮಸ್ಯೆ ಎದುರಿಸಲಿದೆ ಅನ್ನೋದನ್ನ ನೋಡಬೇಕು.

Advertisment

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment
Advertisment
Advertisment