/newsfirstlive-kannada/media/post_attachments/wp-content/uploads/2025/05/kishan3.jpg)
ಕನ್ನಡದ ಬಿಗ್ ರಿಯಾಲಿಟಿ ಶೋ ಬಿಗ್ಬಾಸ್ ಮಾಜಿ ಸ್ಪರ್ಧಿ, ಕಿರುತೆರೆ ನಟ ಕಿಶನ್ ಬಿಳಗಲಿ ಯಾರಿಗೆ ತಾನೇ ಗೊತ್ತಿಲ್ಲ ಹೇಳಿ. ಸಾಮಾಜಿಕ ಜಾಲತಾಣದಲ್ಲಿ ತಮ್ಮ ಅದ್ಭುತ ಡ್ಯಾನ್ಸ್ ಮೂಲಕ ನೆಟ್ಟಿಗರ ಗಮನವನ್ನು ಸೆಳೆಯುವುದರಲ್ಲಿ ನಂಬರ್ ಒನ್.
ಇದನ್ನೂ ಓದಿ:‘ಲಕ್ಷ್ಮೀ ಪಾತ್ರಕ್ಕೆ ಆಡಿಷನ್ ಕೊಟ್ಟು ಕೀರ್ತಿಯಾಗಿ ಸೆಲೆಕ್ಟ್ ಆದೆ’.. ತನ್ವಿ ರಾವ್ ಸೀರಿಯಲ್ ರೋಚಕ ಜರ್ನಿ ಹೇಗಿತ್ತು?
ಕಿಶನ್ ಬಿಳಗಲಿ ಅವರು ಬಿಗ್ಬಾಸ್ ಸ್ಪರ್ಧಿ ನಮ್ರತಾ ಗೌಡ, ಅನುಪಮಾ ಗೌಡ, ಸಂಯುಕ್ತ ಹೆಗ್ಡೆ, ಸಪ್ತ ಸಾಗರದಾಚೆ ಎಲ್ಲೋ ಸೈಡ್ ಬಿ ಮೂಲಕ ಸಿನಿಪ್ರಿಯರನ್ನು ಗಮನ ಸೆಳೆದಿದ್ದ ನಟಿ ಚೈತ್ರಾ ಜೆ ಆಚಾರ್, ದೀಪಿಕಾ ದಾಸ್, ರಾಗಿಣಿ ಹೀಗೆ ಸ್ಟಾರ್ ನಟಿಯರ ಜೊತೆ ಮಸ್ತ್ ಡ್ಯಾನ್ಸ್ ಮಾಡುತ್ತಾ ಇರುತ್ತಾರೆ.
View this post on Instagram
ಈಗ ಬಿಗ್ಬಾಸ್ ಸೀಸನ್ 10ರ ಮಾಜಿ ಸ್ಪರ್ಧಿ, ಬೆಂಕಿ ಅಂತಲೇ ಫೇಮಸ್ ಆಗಿರೋ ತನಿಷಾ ಕುಪ್ಪಂಡ ಜೊತೆಗೆ ಮಾಸ್ ಆಗಿ ಡ್ಯಾನ್ಸ್ ಮಾಡಿದ್ದಾರೆ. ಕಿಶನ್ ಇದೇ ಮೊದಲ ಬಾರಿಗೆ ತನಿಷಾ ಕುಪ್ಪಂಡ ಜೊತೆಗೆ ಹೆಜ್ಜೆ ಹಾಕಿದ್ದಾರೆ. ನಟ ದರ್ಶನ್ ಹಾಗೂ ರಕ್ಷಿತಾ ಅಭಿನಯದ ಸುಂಟರಗಾಳಿ ಸಿನಿಮಾದ ಹಾಡಿಗೆ ಜಬರ್ದಸ್ತ್ ಡ್ಯಾನ್ಸ್ ಮಾಡಿದ್ದಾರೆ.
ಇದೇ ವಿಡಿಯೋವನ್ನು ಕಿಶನ್ ಬಿಳಗಲಿ ಹಾಗೂ ತನಿಷಾ ಕುಪ್ಪಂಡ ತಮ್ಮ ಇನ್ಸ್ಟಾಗ್ರಾಮ್ನಲ್ಲಿ ಶೇರ್ ಮಾಡಿಕೊಂಡಿದ್ದಾರೆ. ಸದ್ಯ ಇದೇ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿದೆ. ಇನ್ನು ಇದೇ ವಿಡಿಯೋ ನೋಡಿದ ಅಭಿಮಾನಿಗಳು ರಸಿಕರ ರಾಜ ನೀವು, ಕಲಿಯುಗದ ಕೃಷ್ಣ, ಏನ್ ಎನರ್ಜಿ ಬೆಂಕಿ ಅಂತೆಲ್ಲಾ ಕಾಮೆಂಟ್ಸ್ ಮಾಡಿ ಹಾಡಿ ಹೊಗಳುತ್ತಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ