/newsfirstlive-kannada/media/post_attachments/wp-content/uploads/2024/04/kishan.jpg)
ಕನ್ನಡದ ಬಿಗ್ ರಿಯಾಲಿಟಿ ಶೋ ಬಿಗ್ಬಾಸ್ ಮಾಜಿ ಸ್ಪರ್ಧಿ ಕಿಶನ್ ಬಿಳಗಲಿ ಯಾರಿಗೆ ತಾನೇ ಗೊತ್ತಿಲ್ಲ ಹೇಳಿ. ಸಾಮಾಜಿಕ ಜಾಲತಾಣಲ್ಲಿ ತಮ್ಮ ಅದ್ಭುತ ಡ್ಯಾನ್ಸ್ ಮೂಲಕ ನೆಟ್ಟಿಗರ ಗಮನವನ್ನು ಸೆಳೆಯುವುದರಲ್ಲಿ ನಂಬರ್ ಒನ್.
ಇದನ್ನೂ ಓದಿ:ಸೆಲೆಬ್ರಿಟಿಗಳ ಚೆಫ್ ಕುನಾಲ್ ಕಪೂರ್ ದಾಂಪತ್ಯಕ್ಕೆ ಬ್ರೇಕ್.. ಡಿವೋರ್ಸ್ ಸಿಗಲು ಕಾರಣವೇನು?
ಕಿಶನ್ ಬಿಳಗಲಿ ಅವರು ಬಿಗ್ಬಾಸ್ ಸ್ಪರ್ಧಿ ನಮ್ರತಾ ಗೌಡ, ಅನುಪಮಾ ಗೌಡ, ಸಂಯುಕ್ತ ಹೆಗ್ಡೆ ಹೀಗೆ ಸ್ಟಾರ್ ನಟಿಯರ ಜೊತೆ ಮಸ್ತ್ ಡ್ಯಾನ್ಸ್ ಮಾಡುತ್ತಾ ಇರುತ್ತಾರೆ. ಇದೀಗ ಸಪ್ತ ಸಾಗರದಾಚೆ ಎಲ್ಲೋ ಸೈಡ್ ಬಿ ಮೂಲಕ ಸಿನಿಪ್ರಿಯರನ್ನು ಗಮನ ಸೆಳೆದಿದ್ದ ನಟಿ ಚೈತ್ರಾ ಜೆ ಆಚಾರ್ ಇದೀಗ ಡ್ಯಾನ್ಸರ್ ಕಿಶನ್ ಬಿಳಗಲಿ ಜತೆ ಅನಿಮಲ್ ಸಿನಿಮಾದ ಪಹ್ಲೆ ಬೀ ಮೇನ್ ಹಾಡಿಗೆ ರೊಮ್ಯಾಂಟಿಕ್ ಡ್ಯಾನ್ಸ್ ಮಾಡಿದ್ದಾರೆ.
View this post on Instagram
ಇನ್ನು, ಈ ವಿಡಿಯೋವನ್ನು ಇನ್ಸ್ಟಾಗ್ರಾಮ್ ಖಾತೆಯಲ್ಲಿ ಶೇರ್ ಮಾಡಿಕೊಂಡಿದ್ದಾರೆ. ಈ ವಿಡಿಯೋ ನೋಡಿ ನೆಟ್ಟಿಗರು ಈಕೆ ಕನ್ನಡದ ಆಲಿಯಾ ಭಟ್‌ರಂತೆ ಕಾಣಿಸುತ್ತಿದ್ದಾರೆ ಎಂದಿದ್ದಾರೆ. ಕಿಶನ್ ಕನ್ನಡದ ರವಿಚಂದ್ರನ್, ಇವರು ರವಿಚಂದ್ರನ್‌ನ ಎಕ್ಸ್‌ಟ್ರಾ ಪ್ರೊ ವರ್ಷನ್ ಎಂದು ಕಾಮೆಂಟ್ ಮಾಡುತ್ತಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ