ಕೇಂದ್ರದಿಂದ ಭರ್ಜರಿ ಗುಡ್​ನ್ಯೂಸ್​​; ಇಂದೇ ರೈತರಿಗೆ ಸಿಗುತ್ತೆ 1.60 ಲಕ್ಷ; ನೀವು ಮಾಡಬೇಕಿದ್ದು ಇಷ್ಟೇ!

author-image
Ganesh Nachikethu
Updated On
ಕೇಂದ್ರದಿಂದ ಭರ್ಜರಿ ಗುಡ್​ನ್ಯೂಸ್​​; ಇಂದೇ ರೈತರಿಗೆ ಸಿಗುತ್ತೆ 1.60 ಲಕ್ಷ; ನೀವು ಮಾಡಬೇಕಿದ್ದು ಇಷ್ಟೇ!
Advertisment
  • ಕೇಂದ್ರ ಸರ್ಕಾರದಿಂದ ರೈತರಿಗೆ ಭರ್ಜರಿ ಗುಡ್​ನ್ಯೂಸ್​
  • ಇಂದೇ ರೈತರ ಖಾತೆಗೆ ಬರಲಿದೆ ಬರೋಬ್ಬರಿ 1.60 ಲಕ್ಷ
  • ಅದಕ್ಕಾಗಿ ರೈತರು ಮಾಡಬೇಕಾದ ಕೆಲಸ ಏನು ಗೊತ್ತಾ?

ಆರಂಭದಿಂದಲೂ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ರೈತರ ಹಿತಾಸಕ್ತಿ ದೃಷ್ಟಿಯಿಂದ ಹಲವು ಮಹತ್ವಾಕಾಂಕ್ಷೆ ಯೋಜನೆಗಳನ್ನು ಜಾರಿಗೆ ತಂದಿವೆ. ಸಂಕಷ್ಟದಲ್ಲಿರೋ ರೈತರಿಗೆ ಆರ್ಥಿಕ ನೆರವು ಒದಗಿಸಲು ಮಹತ್ವದ ಯೋಜನೆಗಳನ್ನು ಪರಿಚಯ ಮಾಡಿರುವುದು ಎಲ್ಲರಿಗೂ ಗೊತ್ತೇ ಇದೆ. ಈ ಪೈಕಿ ರೈತರಿಗೆ ವಿಶೇಷ ಕಿಸಾನ್ ಕ್ರೆಡಿಟ್ ಕಾರ್ಡ್ ಸ್ಕೀಮ್​ ಕೂಡ ಒಂದು.

ಕಿಸಾನ್ ಕ್ರೆಡಿಟ್ ಕಾರ್ಡ್ ನೀಡುವ ಮುಖ್ಯ ಉದ್ದೇಶ ದೇಶದ ಕೋಟ್ಯಾಂತರ ರೈತರಿಗೆ ಹಣಕಾಸಿನ ನೆರವು ಒದಗಿಸುವುದು. ಇದು ರೈತರ ಆದಾಯ ಕೂಡ ಹೆಚ್ಚಿಸುತ್ತದೆ ಎಂದರೆ ನಂಬಲೇಬೇಕು. ಬೆಳೆ ಕಟಾವು ಮಾಡಲು ಸಮಯಕ್ಕೆ ಬೇಕಿರೋ ಹಣದ ಬೇಡಿಕೆ ಪೂರೈಸುವುದು ಕೂಡ ಇದರ ಮತ್ತೊಂದು ಉದ್ದೇಶ. ಇದರ ಭಾಗವಾಗಿ ಕೇಂದ್ರ ಸರ್ಕಾರ ಈ ಕಾರ್ಡ್ ಮೂಲಕ ರೈತರಿಗೆ ಕಡಿಮೆ ಬಡ್ಡಿ ದರದಲ್ಲಿ ಸಾಲ ನೀಡಲಾಗುತ್ತದೆ.

ಕೃಷಿ ಸಾಲ ಪಡೆಯುವುದು ಹೇಗೆ?

ದೇಶದ ರೈತರು ಕಿಸಾನ್ ಕ್ರೆಡಿಟ್ ಕಾರ್ಡ್‌ ಮೂಲಕ ಕೃಷಿ ಸಾಲ ಪಡೆಯಬಹುದು. ಅದರಲ್ಲೂ ಸರಿಯಾದ ಸಮಯದಲ್ಲಿ ಲೋನ್​​ ರೀ ಪೇಮೆಂಟ್​ ಮಾಡಿದವರಿಗೆ ಬಡ್ಡಿಯಲ್ಲಿ ಸಬ್ಸಿಡಿ ಕೂಡ ಸಿಗಲಿದೆ. ಯಾವುದೇ ಜಾಮೀನು ಇಲ್ಲದೆ ಬರೋಬ್ಬರಿ 1.60 ಲಕ್ಷದವರೆಗೆ ಸಾಲ ನೀಡಲಾಗುತ್ತದೆ. ಇದಕ್ಕೆ ವಿಮೆ ಕೂಡ ಮಾಡಿಸಬಹುದು.

ಎಲ್ಲಾ ಬ್ಯಾಂಕ್​ಗಳಲ್ಲೂ ಕ್ರೆಡಿಟ್​ ಕಾರ್ಡ್​ ಲಭ್ಯ

ರೈತರು ಯಾವುದೇ ಬ್ಯಾಂಕ್‌ನಲ್ಲಿ ಬೇಕಾದ್ರೂ ಕಿಸಾನ್ ಕ್ರೆಡಿಟ್ ಕಾರ್ಡ್‌ಗಾಗಿ ಅರ್ಜಿ ಸಲ್ಲಿಸಬಹುದು. ಆದರೆ, ಒಂದು ಕಂಡೀಷನ್​ ಕೃಷಿಗೆ ಸಂಬಂಧಿಸಿದ ಚಟುವಟಿಕೆಗಳಿಗೆ ಮಾತ್ರ ಕಿಸಾನ್ ಕ್ರೆಡಿಟ್ ಕಾರ್ಡ್ ನೀಡಲಾಗುತ್ತದೆ. ಅಗತ್ಯ ದಾಖಲೆಗಳೊಂದಿಗೆ ಬ್ಯಾಂಕ್‌ಗೆ ಹೋದರೆ ಸಾಕು ಎರಡು ವಾರಗಳಲ್ಲಿ ಕ್ರೆಡಿಟ್​ ಕಾರ್ಡ್​ ಸಿಗುತ್ತದೆ.

ಯಾರಿಗೆ ಸಿಗಲಿದೆ ಕ್ರೆಡಿಟ್​ ಕಾರ್ಡ್​?

ರೈತರು ಯಾರು ಬೇಕಾದ್ರೂ ಕಿಸಾನ್ ಕ್ರೆಡಿಟ್ ಕಾರ್ಡ್ ಪಡೆಯಬಹುದು. ಕಿಸಾನ್ ಕ್ರೆಡಿಟ್ ಕಾರ್ಡ್ ಮಿತಿ ರೂ. 3,00,000 ಇರಲಿದೆ. ಕ್ರೆಡಿಟ್ ಸ್ಕೋರ್ ಚೆನ್ನಾಗಿದ್ರೆ ಹೆಚ್ಚು ಸಾಲು ಕೂಡ ಸಿಗುತ್ತದೆ. ಬಡ್ಡಿ ದರ ಕೇವಲ ಶೇ. 7 ರಷ್ಟಿದೆ, ಅದರಲ್ಲೂ 3 ರಷ್ಟು ಬಡ್ಡಿ ರಿಯಾಯಿತಿ ಇದೆ. ಇದಕ್ಕಾಗಿ ರೈತರು ವೋಟರ್​ ಐಡಿ ಮತ್ತು ಆಧಾರ್​ ಕಾರ್ಡ್​​ ನೀಡಬೇಕು. ಜಮೀನು ಹೊಂದಿಲ್ಲದಿದ್ರೂ ರೈತ ಸಮಾಜದ ಸದಸ್ಯರಾಗಿರಬೇಕು.

ಇದನ್ನೂ ಓದಿ: ಮೆಗಾ ಹರಾಜು; RCB ಕಡಿಮೆ ದುಡ್ಡಲ್ಲಿ ಖರೀದಿ ಮಾಡೋ ಮೂವರು ಸ್ಫೋಟಕ ಆಟಗಾರರು ಇವ್ರೇ!

ವಿಶೇಷ ಸೂಚನೆ: ಕ್ರಿಕೆಟ್​​ನ ವಿಶೇಷ ಸುದ್ದಿಗಳಿಗಾಗಿ ವೀಕ್ಷಿಸಿ ‘ರನ್ ಭೂಮಿ’ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ ಫಸ್ಟ್ ಚಾನೆಲ್

Advertisment