/newsfirstlive-kannada/media/post_attachments/wp-content/uploads/2025/04/Kabra-Jewels-gifts-to-employees-2.jpg)
ತಾನು ಬೆಳೆದು ತನ್ನವರನ್ನು ಬೆಳೆಸೋ ಗುಣ ಕೆಲವರಲ್ಲಿ ಕೆಲವರಿಗೆ ಮಾತ್ರ ಇರುತ್ತೆ. ಅದ್ರಲ್ಲೂ 100 ರೂಪಾಯಿ ಜಾಸ್ತಿ ಸಿಕ್ತು ಅಂದ್ರೆ ಬಚ್ಚಿಟ್ಟುಕೊಳ್ಳೋರನ್ನೂ ನೋಡ್ತೀವಿ. ಅದೇ ರೀತಿ ಅದೇ 100 ರೂಪಾಯಿಯಲ್ಲಿ 10 ರೂಪಾಯಿ ದಾನ ಮಾಡೋರನ್ನೂ ನೋಡ್ತೀವಿ.
ಗುಜರಾತ್‌ನ ಖೇಡಾ ಜಿಲ್ಲೆಯ ಆಭರಣ ಕಂಪನಿಯೊಂದು ತನ್ನ ಉದ್ಯೋಗಿಗಳಿಗೆ ಊಹಿಸೋಕೆ ಆಗದ ಉಡುಗೊರೆಗಳನ್ನ ಕೊಡೋ ಮೂಲಕ ಬರೋಬ್ಬರಿ 200 ಕೋಟಿ ರೂ.ಗಳ ವಹಿವಾಟಕ್ಕೆ ಸಂಭ್ರಮಾಚರಣೆ ಮಾಡಿಕೊಂಡಿದೆ.
ಕಬ್ರಾ ಜ್ಯುವೆಲ್ಸ್ ಅನ್ನೋ ಗುಜರಾತ್ನಲ್ಲಿರೋ ಕಂಪನಿ 19 ವರ್ಷಗಳ ಹಿಂದೆ ಅಂದ್ರೆ, 2006ರಲ್ಲಿ ಇಬ್ಬರು ಅಣ್ಣ ತಮ್ಮ ಶುರು ಮಾಡಿದ್ರು. ಅವರು ಕಂಪನಿಯ ಬ್ರಾಂಡ್ ಹೆಸರನ್ನು ಕೆಕೆ ಜ್ಯುವೆಲ್ಸ್ ಅಂತ ಇಟ್ಟಿದ್ರು. ಅದೇ ವರ್ಷದಲ್ಲಿ ಕಂಪನಿ, ಮೊದಲ ಶೋ ರೂಂ ಕೂಡ ಓಪನ್ ಮಾಡಿದ್ರು. ಆ ಟೈಂನಲ್ಲಿ ಕಂಪನಿಯಲ್ಲಿ ಕೇವಲ 12 ಜನ ಕೆಲಸಗಾರರಿದ್ದರು. ಮೊದಲ ವರ್ಷದಲ್ಲಿ ಕಂಪನಿಯ ವಹಿವಾಟು ಕೇವಲ 2 ಕೋಟಿ ರೂ.ಗಳಿತ್ತು.
ಆದ್ರೆ ಈಗ, ಅದೇ ಇಬ್ಬರು ಸಹೋದರರು, ಕಂಪನಿ ವಾರ್ಷಿಕವಾಗಿ 200 ಕೋಟಿ ರೂಪಾಯಿಗಳ ವ್ಯಾಪಾರ ಆಗಿದೆ. ಯಾರೇ ಆಗಲಿ, ಆದಾಯ ಬಂತು ಅಂದ್ರೆ ಗುಟ್ಟಾಗಿ ಇಡ್ತಾರೆ. ಆದ್ರೆ ಈ ಕೆಕೆ ಬ್ರದರ್ಸ್ ಮಾತ್ರ, ಬಹಿರಂಗವಾಗಿ ವಹಿವಾಟಿನ ಆದಾಯ ಬಂದಿದ್ದನ್ನ ರಾಜಾರೋಷವಾಗಿ ತನ್ನ ನೌಕರರಿಗೆ ತೋರಿಸಿದ್ದಾರೆ. ಆ ಟೈಂನಲ್ಲಿ ಎಲ್ಲಾ ನೌಕರರ ಮುಖದಲ್ಲೂ ಸಂತೋಷ, ಸಂಭ್ರಮ ಮನೆ ಮಾಡಿತ್ತು.
ಅದೇ ರೀತಿ, ಹಿಂದೆ ಬಂದಿದ್ದ ದಾರಿಯನ್ನ ಮರೆಯದ ಕಬ್ರಾ ಜ್ಯುವೆಲ್ಸ್ ಕಂಪನಿ, ತಮ್ಮ ಉದ್ಯೋಗಿಗಳ ಜೊತೆ ಕೇಕ್ ಕಟ್ ಮಾಡಿ, ಗ್ರ್ಯಾಂಡ್ ಸೆಲೆಬ್ರೇಷನ್ ಮಾಡಿಕೊಳ್ತು. ಜಸ್ಟ್, ಕೇಕ್ ಕಟ್ ಮಾಡಿ, ಎಂಜಾಯ್ ಮಾಡಿದಿದ್ರೆ ಅಷ್ಟೇನೂ ಸುದ್ದಿಯಾಗ್ತಿತ್ತೋ ಏನೋ ಗೊತ್ತಿಲ್ಲ. ಆದ್ರೆ, ಬರೋಬ್ಬರಿ 19 ವರ್ಷಗಳ ಕಠಿಣ ಪರಿಶ್ರಮದಿಂದ 200 ಕೋಟಿ ರೂ.ಗಳ ವ್ಯಾಪಾರವಾಗಿದ್ದಕ್ಕೆ ಆ ಸಹೋದರರು ಅಂದುಕೊಂಡ ಕೆಲಸ ಮಾಡಿದ್ದಾರೆ. ಅದ್ರಂತೆ ನಡೆದುಕೊಂಡಿದ್ದಾರೆ.
2006ರಲ್ಲಿ ಕೇವಲ 21ನೇ ವಯಸ್ಸಿನಲ್ಲಿ ಆಭರಣ ಉದ್ಯಮಕ್ಕೆ ಎಂಟ್ರಿ ಕೊಟ್ಟ ಕೈಲಾಶ್ ಕಬ್ರಾ, ನಾವು ಕೇವಲ 12 ಜನರೊಂದಿಗೆ ಹಾಗೂ ವರ್ಷಕ್ಕೆ 2 ಕೋಟಿ ರೂ. ವಹಿವಾಟು ಹೊಂದಿರೋ ಕಬ್ರಾ ಜ್ಯುವೆಲ್ಸ್ ಅನ್ನು ಶುರು ಮಾಡಿದ್ವಿ. ಇವತ್ತು, ಈ ಕಂಪನಿಯಲ್ಲಿ 140 ಜನರು ಕೆಲಸ ಮಾಡ್ತಿದ್ದಾರೆ. 2024-25ನೇ ಆರ್ಥಿಕ ವರ್ಷದಲ್ಲಿ ಮೊದಲ ಬಾರಿಗೆ 200 ಕೋಟಿ ರೂಪಾಯಿಗಳ ಮಾರಾಟದ ಸಂಖ್ಯೆಯನ್ನು ದಾಟಿದ್ದೇವೆ. ಕಂಪನಿಯಲ್ಲಿ ಕೆಲಸ ಮಾಡ್ತಿರೋ ಉದ್ಯೋಗಿಗಳ ಪ್ರಯತ್ನ ಇಲ್ಲದೇ, ಈ ಸಾಧನೆ ಮಾಡೋಕೆ ಆಗ್ತಿರಲಿಲ್ಲ. ಹೀಗಾಗಿ, ತನಗಾಗಿ ಲಕ್ಸೂರಿ ಕಾರನ್ನ ಖರೀದಿಸೋ ಬದಲು, ಈ ಸಂತೋಷದ ಪ್ರಯಾಣಕ್ಕೆ, ಯಶಸ್ಸಿಗೆ ಪ್ರಮುಖ ಪಾತ್ರ ವಹಿಸಿದವರು ಹಾಗೂ ಆರಂಭದಿಂದಲೂ ಕಬ್ರಾ ಜ್ಯುವೆಲ್ಸ್ ಕುಟುಂಬದ ಭಾಗವಾಗಿರೋ ತಂಡದ ಸದಸ್ಯರಿಗೆ ಏನಾದ್ರೂ ಮಾಡಬೇಕು ಅನ್ನೋದು ನಮ್ಮ ಮನಸ್ಸಲ್ಲಿತ್ತು. ಅದಕ್ಕೋಸ್ಕರ ನಾವು 12 ಅತ್ಯಂತ ಹಿರಿಯ ಮತ್ತು ಸ್ಥಾಪಕ ಸದಸ್ಯರಿಗೆ ಕಾರುಗಳನ್ನು ಉಡುಗೊರೆಯಾಗಿ ಕೊಟ್ಟಿದ್ದೇವೆ. IPOನಲ್ಲಿ ಪಟ್ಟಿ ಮಾಡಲಾದ ಕಂಪನಿಗಳಲ್ಲಿ ಕಬ್ರಾ ಜ್ಯುವೆಲ್ಸ್ ಕೂಡ ಒಂದಾಗಿದೆ. ಕಳೆದ ಆರ್ಥಿಕ ವರ್ಷದಲ್ಲಿ ಕಂಪನಿಯ ವಹಿವಾಟು 170 ಕೋಟಿ ರೂ.ಗಳಷ್ಟಿತ್ತು ಅಂತ ಕಬ್ರಾ ಜ್ಯುವೆಲ್ಸ್ ಮುಖ್ಯಸ್ಥ ಕೈಲಾಶ್ ಕಬ್ರಾ ಮಾಹಿತಿ ಕೊಟ್ಟಿದ್ದಾರೆ.
ಆರಂಭದಲ್ಲಿ ನಿಮಗೆ ಒಂದು ಪದಗಳನ್ನ ಹೇಳಿದ್ವಿ. ತಾನು ಬೆಳೆದು ತನ್ನವರನ್ನು ಬೆಳೆಸೋ ಗುಣ ಕೆಲವರಲ್ಲಿ ಕೆಲವರಿಗೆ ಮಾತ್ರ ಇರುತ್ತೆ ಅಂತ. ಅದೇ ರೀತಿ ಕಬ್ರಾ ಜ್ಯುವೆಲ್ಸ್ ಮುಖ್ಯಸ್ಥರು, ತಮ್ಮ ಕಷ್ಟದ ಕಾಲದಲ್ಲಿ ಜೊತೆಯಾಗಿದ್ದ ಕೆಲಸಗಾರರಿಗೆ ಅದ್ದೂರಿ ಕಾರುಗಳನ್ನ ಗಿಫ್ಟಾಗಿ ಕೊಟ್ಟಿದ್ದಾರೆ. ಹೌದು, 2006ರಿಂದ ಫ್ಯಾಮಿಲಿಯಂತಿರೋ 12 ಸದಸ್ಯರಿಗೆ ಮಹೀಂದ್ರಾ XUV 700, ಟೊಯೋಟಾ ಇನೋವಾ, ಹುಂಡೈ ಐ10, ಹುಂಡೈ ಎಕ್ಸ್‌ಟರ್, ಮಾರುತಿ ಸುಜುಕಿ ಎರ್ಟಿಗಾ ಹಾಗೂ ಮಾರುತಿ ಸುಜುಕಿ ಬ್ರೆಝಾ ಸೇರಿಕೊಂಡು ಲಕ್ಷ ಲಕ್ಷ ಬೆಲೆ ಬಾಳೋ ಕಾರುಗಳ ಮುಂತಾದ ಕಾರುಗಳನ್ನು ಉಡುಗೊರೆಯಾಗಿ ಕೊಟ್ಟಿದ್ದಾರೆ.
ದೀಪಾವಳಿ ಬೋನಸ್‌ಗಳಾಗಿ ಕಾರುಗಳು, ಮೋಟಾರ್ ಸೈಕಲ್‌ಗಳು ಹಾಗೂ ಆಭರಣಗಳು ಸೇರಿದಂತೆ ತಮ್ಮ ಉದ್ಯೋಗಿಗಳಿಗೆ ಉದಾರ ಮನಸ್ಸಿನಿಂದ ಉಡುಗೊರೆಗಳನ್ನು ಕೊಡ್ರೋದ್ರಲ್ಲಿ ಫೇಮಸ್ ಆಗಿರೋ ಸೂರತ್ ಮೂಲದ ವಜ್ರ ವ್ಯಾಪಾರಿ ಸಾವ್ಜಿ ಧೋಲಾಕಿಯಾ ಅವರಿಂದ ಈ ರೀತಿಯ ಕೆಲಸಕ್ಕೆ ಸ್ಫೂರ್ತಿ ಬಂದಿದೆ ಅಂತ ಕಬ್ರಾ ಹೇಳ್ತಾರೆ. ಈ ಟೈಂನಲ್ಲಿ ತಾನು ಆಡಿ, BMW ಹಾಗೂ ಮರ್ಸಿಡಿಸ್ ಕಾರುಗಳನ್ನು ಖರೀದಿ ಮಾಡಲಿಲ್ಲ. ಮೊದಲು, ನಾನು ನನ್ನ ಸಂಕಲ್ಪವನ್ನು ಪೂರೈಸಿದ್ದೀನಿ. ತನ್ನ ತಂದೆ, ಚಿಕ್ಕಪ್ಪ ಹಾಗೂ ತಾತ ನನ್ನ ಮಾರ್ಗದರ್ಶಕರು. ನನ್ನ ವ್ಯವಹಾರದ ಗುರು ಗಣಪತ್ ಜಿ ಚೌಧರಿ, ನನಗೆ 'ಗಳಿಸಿ ಹಾಗೂ ಹಿಂತಿರುಗಿ' ಅನ್ನೋದ್ರ ಮಹತ್ವವನ್ನು ತನಗೆ ಕಲಿಸಿದ್ದಾರೆ ಅಂತ ಕೈಲಾಶ್ ಕಬ್ರಾ ಹೇಳಿದ್ರು. ಅವರು ಹೇಳಿದ್ದನ್ನ ಪರಿಪಾಲನೆ ಮಾಡೋದಕ್ಕೆ ನನಗೆ ಹೆಮ್ಮೆ ಇದೆ. ಅಹ್ಮದಾಬಾದ್‌ನಲ್ಲಿ 7 ಶೋ ರೂಂಗಳಿವೆ. ಗುಜರಾತ್‌ನ ಸಾಕಷ್ಟೂ ಕಡೆ ಹೆಚ್ಚಿನ ಬ್ರ್ಯಾಂಚ್ಗಳನ್ನ ಓಪನ್ ಮಾಡ್ತೀವಿ. ಕಂಪನಿಯು ಮೂರು ತಿಂಗಳ ಹಿಂದೆ ತನ್ನ IPO ಅನ್ನು ಯಶಸ್ವಿಯಾಗಿ ಶುರು ಮಾಡಿತ್ತು ಅಂತ ಹೇಳಿದ್ದಾರೆ.
ಇದನ್ನೂ ಓದಿ: ಹಾವುಗಳಿಗೆ ಲಕ್ಷ್ಮಣ ರೇಖೆ.. ಮನೆಯ ಸುತ್ತಲೂ ಈ ಬೀಜ ಇಟ್ಟರೆ ಸಾಕು; ನಿಮ್ಮ ಸನಿಹಕ್ಕೂ ಸುಳಿಯೋದಿಲ್ಲ ಸರ್ಪ!
ಜಗತ್ತಲ್ಲಿ ಇರುವುದೆಲ್ಲವ ಬಿಟ್ಟು, ಇರದುದರ ಎಡೆಗೆ ತುಡಿವುದೇ ಜೀವನ ಅನ್ನೋ ಮಾತು ಇಲ್ಲಿ ಸತ್ಯ ಅನ್ಸುತ್ತೆ. ಯಾಕಂದ್ರೆ ತನಗೆ ಸಿಗಬೇಕಾಗಿದ್ದದ್ದು ತನಗೆ ಸಿಕ್ಕೇ ಸಿಗುತ್ತೆ. ಹಣೆಬರಹದಲ್ಲಿ ಬರ್ದೇ ಇಲ್ಲ ಅಂದ್ರೆ ಅದು ಖಂಡಿತವಾಗಿಯೂ ಸಿಗಲ್ಲ ಅನ್ನೋದು ಈ ಸ್ಟೋರಿಯಲ್ಲಿ ಗೊತ್ತಾಗುತ್ತೆ. ಏನೇ ಆಗಲಿ, ಆದಾಯ ಬಂದಿದ್ರಿಂದ ಮಾಲೀಕರು ಖುಷಿಯಾಗಿದ್ದಾರೆ. ಅಷ್ಟೂ ವರ್ಷ, ತಾಳ್ಮೆಯಿಂದ ಕೆಲಸ ಮಾಡಿದ ಉದ್ಯೋಗಿಗಳು ಸಖತ್ ಖುಷಿಯಾಗಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ