RCB ಹುಡುಗರ ಅತೀ ದೊಡ್ಡ ದಾಖಲೆ ಧೂಳಿಪಟ ಮಾಡಿದ ಕೆಕೆಆರ್​; ಏನದು..?

author-image
Ganesh
Updated On
RCB ಹುಡುಗರ ಅತೀ ದೊಡ್ಡ ದಾಖಲೆ ಧೂಳಿಪಟ ಮಾಡಿದ ಕೆಕೆಆರ್​; ಏನದು..?
Advertisment
  • ನಿನ್ನೆಯ ಪಂದ್ಯದಲ್ಲಿ ಡೆಲ್ಲಿ ವಿರುದ್ಧ ಕೆಕೆಆರ್​ಗೆ ದೊಡ್ಡ ಗೆಲುವು
  • ಸತತ ಮೂರನೇ ಗೆಲುವು ದಾಖಲಿಸಿದ ಕೋಲ್ಕತ್ತ ನೈಟ್​ ರೈಡರ್ಸ್​
  • ಇಂದು ಪಂಜಾಬ್ ಮತ್ತು ಗುಜರಾತ್ ಟೈಟನ್ಸ್​ ನಡುವೆ ಪಂದ್ಯ

ವಿಶಾಖಪಟ್ಟಣದಲ್ಲಿ ನಡೆದ ಐಪಿಎಲ್ 2024ರ 16ನೇ ಪಂದ್ಯದಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ತಂಡವನ್ನ ಸೋಲಿಸುವ ಮೂಲಕ ಕೋಲ್ಕತ್ತಾ ನೈಟ್ ರೈಡರ್ಸ್, ಲೀಗ್​ನಲ್ಲಿ ಸತತ ಮೂರನೇ ಗೆಲುವು ದಾಖಲಿಸಿದೆ. ಈ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಕೆಕೆಆರ್ 20 ಓವರ್‌ಗಳಲ್ಲಿ 7 ವಿಕೆಟ್ ಕಳೆದುಕೊಂಡು 272 ರನ್ ಗಳಿಸಿತು.

ಈ ಗುರಿ ಬೆನ್ನಟ್ಟಿದ ಡೆಲ್ಲಿ ಆರಂಭದಲ್ಲೇ ಪ್ರಮುಖ 4 ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿತು. ನಾಯಕ ರಿಷಬ್ ಪಂತ್ ಹಾಗೂ ಸ್ಟಬ್ಸ್ ಅರ್ಧಶತಕ ಸಿಡಿಸುವ ಮೂಲಕ ತಂಡ 100 ರನ್​ಗಳ ಒಳಗೆ ಆಲೌಟ್ ಆಗುವುದನ್ನು ತಪ್ಪಿಸಿದ್ರು. ಅಂತಿಮವಾಗಿ ಡೆಲ್ಲಿ ತಂಡ ಪೂರ್ಣ 20 ಓವರ್​ಗಳನ್ನ ಆಡದೆ 17ನೇ ಓವರ್​ನಲ್ಲಿ ತನ್ನೆಲ್ಲ ವಿಕೆಟ್ ಕಳೆದುಕೊಂಡು 166 ರನ್ ಕಲೆಹಾಕಿ ಸೋಲನ್ನ ಅನುಭವಿಸಿತು.

ಅತ್ಯಧಿಕ ಸ್ಕೋರ್​..!

  • 277/3 - ಎಸ್​ಆರ್​​ಹೆಚ್​​ vs ಮುಂಬೈ ಇಂಡಿಯನ್ಸ್​ (ಹೈದ್ರಾಬಾದ್​, 2024)
  • 272/7 - ಕೆಕೆಆರ್​ vs ಡೆಲ್ಲಿ ಕ್ಯಾಪಿಟಲ್ಸ್ (ವಿಶಾಕಪಟ್ಟಣ, 2024)
  • 263/5 - ಆರ್​ಸಿಬಿ vs ಪುಣೆ (ಬೆಂಗಳೂರು, 2013)
  • 257/5 -ಎಲ್​​ಎಸ್​ಜಿ vs ಪಿಬಿಕೆಎಸ್​ (ಮೋಹಾಲಿ, 2023)
  • 248/3 - ಆರ್​ಸಿಬಿ vs ಜಿಎಲ್​ (ಬೆಂಗಳೂರು, 2016)

ಇದನ್ನೂ ಓದಿ:ತೆಲಂಗಾಣದಲ್ಲಿ ಮತ್ತೊಂದು ದುರಂತ; ತೀವ್ರ ಸ್ಫೋಟಕ್ಕೆ ಐವರು ಸ್ಥಳದಲ್ಲೇ ಸಾವು

ಇಂದು ಗುಜರಾತ್​ನ ಅಹಮದಾಬಾದ್​ನಲ್ಲಿರುವ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ನಡೆಯಲಿರುವ 17ನೇ ಪಂದ್ಯದಲ್ಲಿ, ಗುಜರಾತ್ ಟೈಟಾನ್ಸ್ ಹಾಗೂ ಪಂಜಾಬ್ ಕಿಂಗ್ಸ್ ತಂಡಗಳು ಮುಖಾಮುಖಿಯಾಗಲಿವೆ. ಮೊದಲ ಪಂದ್ಯದಲ್ಲಿ ಗೆಲುವಿನ ಬಳಿಕ, ಸತತ ಎರಡು ಪಂದ್ಯಗಳಲ್ಲಿ ಮುಗ್ಗರಿಸಿರುವ ಪಂಜಾಬ್ ಕಿಂಗ್ಸ್ ತಂಡ, ಗುಜರಾತ್ ಟೈಟಾನ್ಸ್ ತಂಡವನ್ನು ಎದುರಿಸಲಿದೆ.

ಇದನ್ನೂ ಓದಿ:ಬರ್ತ್​​ಡೇ ಹಿನ್ನೆಲೆಯಲ್ಲಿ ದೇವಸ್ಥಾನಕ್ಕೆ ಹೋಗಿದ್ದಾಗ ಭೀಕರ ಅಪಘಾತ; ತಾಯಿ ಮಗು ಸಾವು

ಇತ್ತ ಶುಭಮಾನ್ ಗಿಲ್ ಬಳಗ ಸತತ 2ನೇ ಗೆಲುವಿನ ನಿರೀಕ್ಷೇಯಲ್ಲಿದ್ರೆ, ಅತ್ತ ಶಿಖರ್ ಧವನ್ ಬಳಗ ಗೆಲುವಿನ ವಿಶ್ವಾಸದಲ್ಲಿದೆ. ಗುಜರಾತ್ ಟೈಟಾನ್ಸ್ ತಂಡ ಆಡಿರುವ ಮೂರು ಪಂದ್ಯಗಳಲ್ಲಿ 2 ಗೆಲುವು. 1 ಸೋಲಿನೊಂದಿಗೆ 4 ಅಂಕಕಲೆಹಾಕಿದ್ದು, ಇತ್ತ ಪಂಜಾಬ್ ಕಿಂಗ್ಸ್ ತಂಡ 1 ಗೆಲುವು. 2 ಸೋಲಿನೊಂದಿಗೆ 2 ಅಂಕ ಕಲೆಹಾಕಿದೆ.

ಇದನ್ನೂ ಓದಿ:ಇಬ್ಬರು ಮಕ್ಕಳ ಮೇಲೆ ಬೀದಿ ನಾಯಿಗಳು ಭಯಾನಕ ದಾಳಿ; ವಿಡಿಯೋ ನೋಡಿದ್ರೆ ಬೆಚ್ಚಿ ಬೀಳ್ತೀರಿ..

ವಿಶೇಷ ಸೂಚನೆ: ಕ್ರಿಕೆಟ್​​ನ ವಿಶೇಷ ಸುದ್ದಿಗಳಿಗಾಗಿ ವೀಕ್ಷಿಸಿ 'ರನ್ ಭೂಮಿ' ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ ಫಸ್ಟ್ ಚಾನೆಲ್

Advertisment