/newsfirstlive-kannada/media/post_attachments/wp-content/uploads/2025/03/Rahane-Batting.jpg)
ಇಂದು ಕೋಲ್ಕತ್ತಾದ ಈಡನ್ ಗಾರ್ಡನ್ ಸ್ಟೇಡಿಯಮ್ನಲ್ಲಿ ನಡೆಯುತ್ತಿರೋ 2025ರ ಐಪಿಎಲ್ ಉದ್ಘಾಟನಾ ಪಂದ್ಯದಲ್ಲಿ ಹಾಲಿ ಚಾಂಪಿಯನ್ ಕೆಕೆಆರ್, ಆರ್ಸಿಬಿ ಮುಖಾಮುಖಿ ಆಗಿವೆ.
ಟಾಸ್ ಗೆದ್ದ ಆರ್ಸಿಬಿ ಬೌಲಿಂಗ್ ಆಯ್ಕೆ ಮಾಡಿಕೊಂಡಿದೆ. ಹೀಗಾಗಿ ಕೆಕೆಆರ್ ತಂಡ ಮೊದಲು ಬ್ಯಾಟಿಂಗ್ ಮಾಡುತ್ತಿದೆ. ಕೆಕೆಆರ್ ತಂಡದ ಪರ ಮೊದಲ ಕ್ರಮಾಂಕದಲ್ಲಿ ಬ್ಯಾಟ್ ಮಾಡಲು ಬಂದ ಕ್ಯಾಪ್ಟನ್ ರಹಾನೆ ಅಬ್ಬರಿಸಿದರು.
ಕ್ವಿಂಟನ್ ಡಿಕಾಕ್ ಔಟ್ ಆಗುತ್ತಿದ್ದಂತೆ ಕ್ರೀಸ್ಗೆ ಬಂದ ಕ್ಯಾಪ್ಟನ್ ಅಜಿಂಕ್ಯಾ ರಹಾನೆ ಅವರು ಅಮೋಘ ಬ್ಯಾಟಿಂಗ್ ಮಾಡಿದರು. ಆರ್ಸಿಬಿ ಬೌಲರ್ಗಳನ್ನು ಕಾಡಿದ ಇವರು ಕೇವಲ 25 ಬಾಲ್ನಲ್ಲಿ ಅರ್ಧಶತಕ ಸಿಡಿಸಿದರು.
25 ಬಾಲ್ನಲ್ಲಿ ಅರ್ಧಶತಕ
ಮೊದಲ 25 ಬಾಲ್ನಲ್ಲಿ ಅಬ್ಬರಿಸಿದ ರಹಾನೆ ಸಿಡಿಲಬ್ಬರದ ಅರ್ಧಶತಕ ಚಚ್ಚಿದ್ರು. 4 ಭರ್ಜರಿ ಸಿಕ್ಸರ್, ಬರೋಬ್ಬರಿ 6 ಫೋರ್ ಬಾರಿಸಿದರು. ಇನ್ನೂ ಕ್ರೀಸ್ನಲ್ಲೇ ಬ್ಯಾಟ್ ಬೀಸುತ್ತಿದ್ದಾರೆ.
ಇದನ್ನೂ ಓದಿ:ಇಂದು KKR, RCB ಮುಖಾಮುಖಿ; ಕನ್ನಡಿಗ ಪಡಿಕ್ಕಲ್ ಸೇರಿ ಮೂವರಿಗೆ ಗೇಟ್ಪಾಸ್
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ