/newsfirstlive-kannada/media/post_attachments/wp-content/uploads/2024/05/KKR-3.jpg)
KKR VS SRH: ಫೈನಲ್ ಬ್ಯಾಟಲ್​ಗೆ ಕೌಂಟ್​ಡೌನ್​​​ ಶುರುವಾಗಿದೆ. ಇನ್ನೇನು ಕೆಲವೇ ಗಂಟೆಗಳಲ್ಲಿ ರನ್​ಭೂಮಿಯಲ್ಲಿ ಉಭಯ ತಂಡಗಳು, ವೀರ ಸೇನಾನಿಗಳಂತೆ ಹೋರಾಡಲಿವೆ. ಸುಲಭವಾಗಿ ಸೋಲೊಪ್ಪಿಕೊಳ್ಳುವ ಜಾಯಮಾನ, ಎರಡು ತಂಡದ್ದಲ್ಲ. ಇಂತಹ ಹೈವೋಲ್ಟೇಜ್​ ಗೇಮ್​ನಲ್ಲಿ, ಕೆಕೆಆರ್​​​ ತಂಡಕ್ಕೆ ಬೌಲರ್​ಗಳೇ ಟ್ರೋಫಿ ಗೆಲ್ಲಿಸಿಕೊಡ್ತಾರಾ ಅನ್ನೋ ಪ್ರಶ್ನೆ ಉದ್ಭವಿಸಿದೆ. ಅದಕ್ಕೆಲ್ಲ ಕಾರಣ ಅವರ ಬೆಂಕಿ ಪರ್ಫಾಮೆನ್ಸ್​​​.
ಕ್ರೂಶಿಯಲ್ ಟೈಮ್​ನಲ್ಲಿ ಫಾರ್ಮ್​ಗೆ ಮರಳಿದ ಸ್ಟಾರ್ಕ್​..!
ಐಪಿಎಲ್ ಹಿಸ್ಟರಿಯಲ್ಲಿ ಗರಿಷ್ಠ ಮೊತ್ತಕ್ಕೆ ಸೇಲಾದ ವೇಗಿ ಮಿಚೆಲ್ ಸ್ಟಾರ್ಕ್​, ಆರಂಭಿಕ ಪಂದ್ಯಗಳಲ್ಲಿ ಕಳಪೆ ಆಟವಾಡಿದ್ರು. ಸಾಕಷ್ಟು ಟೀಕೆ ಕೂಡ ಎದುರಿಸಿದ್ರು. ನಂತ್ರ ತಪ್ಪನ್ನ ತಿದ್ದಿಕೊಂಡ ಸ್ಟಾರ್ಕ್,​ ಕ್ರೂಷಿಯಲ್​ ಟೈಮ್​ನಲ್ಲಿ ಫಾರ್ಮ್​ ಕಂಡುಕೊಂಡ್ರು. ಸದ್ಯ ಪವರ್​​​​ಪ್ಲೇ ಹಾಗೂ ಸ್ಲಾಗ್ ಓವರ್​ಗಳಲ್ಲಿ ಸ್ಟಾರ್ಕ್, ಎಫೆಕ್ಟಿವ್ ಬೌಲಿಂಗ್​ ಮಾಡ್ತಿದ್ದಾರೆ.
ರಾಣಾ, ಅರೋರ, ರಸೆಲ್ ತ್ರಿವಳಿಗಳ ಮಿಂಚಿನ ದಾಳಿ..!
ವೇಗಿ ಹರ್ಷಿತ್ ರಾಣಾ, ವೈಭವ್ ಅರೋರ ಹಾಗೂ ಆಂಡ್ರೆ ರಸೆಲ್,​​ ಮಿಂಚಿನ ದಾಳಿ ನಡೆಸ್ತಿದ್ದಾರೆ. ಹರ್ಷಿತ್​ 17, ರಸೆಲ್​​​ 16 ಹಾಗೂ ಅರೋರ 10 ವಿಕೆಟ್​​​ ಕಬಳಿಸಿದ್ದಾರೆ. ಈ ಬೆಂಕಿ ತ್ರಿಮೂರ್ತಿಗಳು ಇಂದು ಸಿಡಿದೆದ್ರೆ, ಹೈದ್ರಾಬಾದ್​ಗೆ​​​​​ ಸೋಲಿನ ದರ್ಶನ ಗ್ಯಾರಂಟಿ.
ಸ್ಪಿನ್ ಟು ವಿನ್ ಕೆಕೆಆರ್​​ನ ಗೆಲುವಿನ ಮಂತ್ರ..!
ಸ್ಪಿನ್ ಟು ವಿನ್​​​​​​ ಕೆಕೆಆರ್​ ತಂಡದ ಗೆಲುವಿನ ಗುಟ್ಟಾಗಿದೆ. ಶ್ರೇಯಸ್ ಬಳಗದಲ್ಲಿ ಮಿಸ್ಟ್ರಿ ಸ್ಪಿನ್ನರ್​​​ಗಳಿದ್ದಾರೆ. ದಾಳಿಗಿಳಿದ್ರೆ ವಿಕೆಟ್​​​ ಪಡೆಯುವ ವರುಣ್ ಚಕ್ರವರ್ತಿ ಹಾಗೂ ಸುನೀಲ್​ ನರೈನ್ ಸ್ಪಿನ್​​ ವೆಪನ್​​ಗಳಾಗಿದ್ದಾರೆ. ಇವರ ಸ್ಪಿನ್ ಜಾಲ ಬೇಧಿಸೋದು ಕಷ್ಟವೇ ಸೈ.
ಟೂರ್ನಿಯಲ್ಲಿ 94 ವಿಕೆಟ್ ಕಬಳಿಸಿದ ಕೆಕೆಆರ್​ ಬೌಲರ್ಸ್​..!
ಕೆಕೆಆರ್ ಬೌಲರ್​ಗಳು ಟೂರ್ನಿಯುದ್ದಕ್ಕೂ, ತಮ್ಮ ಜವಾಬ್ದಾರಿಯನ್ನ ಸಮರ್ಥವಾಗಿ ನಿಭಾಯಿಸಿದ್ದಾರೆ. ಅದಕ್ಕೆ 94 ವಿಕೆಟ್​​​​​ ಸರಮಾಲೇನೆ ಸಾಕ್ಷಿ. ವೇಗಿ ಹಾಗೂ ಸ್ಪಿನ್ನರ್​​ಗಳು ಜಿದ್ದಿಗೆ ಬಿದ್ದವರಂತೆ, ಪ್ರದರ್ಶನ ನೀಡ್ತಿದ್ದಾರೆ. ಹೇಳಿ ಕೇಳಿ ಇಂದು ಫೈನಲ್ ಸಮರ. ಕಪ್​​ ಗೆಲ್ಲಿಸಿಕೊಡುವ ಕಿಚ್ಚು ಅವರಲ್ಲಿದೆ. ಹೀಗಾಗಿ ಬೌಲರ್​ಗಳಿಂದಲೇ ಕೆಕೆಆರ್​ನಿಂದ, 3ನೇ ಬಾರಿ ಚಾಂಪಿಯನ್ ಪಟ್ಟಕ್ಕೇರಿದ್ರೂ ಆಶ್ಚರ್ಯಪಡಬೇಕಿಲ್ಲ.
ಫೈನಲಿ. ಕೆಕೆಆರ್ ತಂಡ ಬೌಲಿಂಗ್​ನಿಂದಲೇ ಟ್ರೋಫಿ ಜಯಿಸಿ ಇತಿಹಾಸ ರಚಿಸುವ ತವಕದಲ್ಲಿದೆ. ಇದಕ್ಕೆ ಡೇಂಜರಸ್​​​ ಹೈದ್ರಾಬಾದ್, ಆಸ್ಪಾದ ಕೊಡುತ್ತಾ? ಇಲ್ಲ ಕೆಕೆಆರ್ ಬಲಿಷ್ಠ ಬೌಲಿಂಗ್ ಕೋಟೆಯನ್ನ ಛಿದ್ರಗೊಳಿಸಿ, ಗೆಲುವಿನ ಬಾವುಟವನ್ನ ಹಾರಿಸುತ್ತಾ ಅನ್ನೋದನ್ನ ಕಾದು ನೋಡೋಣ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us