/newsfirstlive-kannada/media/post_attachments/wp-content/uploads/2025/04/RINKU_SING_KULDEEP_1.jpg)
ಡೆಲ್ಲಿ ಕ್ಯಾಪಿಟಲ್ಸ್ ಅನ್ನು ತವರಿನ ಅಂಗಳದಲ್ಲಿ ಮಣಿಸಿ ಕೋಲ್ಕತ್ತಾ ನೈಟ್ ರೈಡರ್ಸ್ ವಿಜಯಶಾಲಿ ಆಗಿತ್ತು. ಈ ಪಂದ್ಯ ಮುಗಿದ ಮೇಲೆ ಆಟಗಾರರ ಮಧ್ಯೆ ಸ್ವಾರಸ್ಯರಕರವಾದ ಸಂಗತಿ ನಡೆದಿತ್ತು. ಏಪ್ರಿಲ್ 29 ರಂದು ನಡೆದ ಪಂದ್ಯದ ಬಳಿಕ ಕೋಲ್ಕತ್ತಾದ ಬ್ಯಾಟ್ಸ್ಮನ್ ರಿಂಕು ಸಿಂಗ್ ಕಪಾಳಕ್ಕೆ ಕುಲ್ದೀಪ್ ಯಾದವ್ ಹೊಡೆದಿದ್ದರು. ಈ ವಿಡಿಯೋ ಎಲ್ಲೆಡೆ ವೈರಲ್ ಆಗಿ ಭಾರೀ ಸಂಚಲನ ಮೂಡಿಸಿತ್ತು. ಸದ್ಯ ಇದಕ್ಕೆ ಕೆಕೆಆರ್ ಸ್ಪಷ್ಟನೆ ನೀಡಿದೆ.
ತನ್ನ ಅಧಿಕೃತ ಸೋಶಿಯಲ್ ಮೀಡಿಯಾದಲ್ಲಿ ವಿಡಿಯೋವನ್ನು ಪೋಸ್ಟ್ ಮಾಡಿರುವ ಕೋಲ್ಕತ್ತಾ ನೈಟ್ ರೈಡರ್ಸ್ ಫ್ರಾಂಚೈಸಿಯು ಈ ಬಗ್ಗೆ ಸ್ಪಷ್ಟನೆ ನೀಡಿದೆ. ರಿಂಕು ಸಿಂಗ್ ಕಪಾಳಕ್ಕೆ ಕುಲ್ದೀಪ್ ಯಾದವ್ ಹೊಡೆದಿರುವ ಹಿಂದೆ ದೀರ್ಘಕಾಲದ ಸ್ನೇಹ, ಗೆಳೆತನ ಇದೆ. ಫ್ರೆಂಡ್ಸ್ಶಿಪ್ ಅಲ್ಲಿ ಇದೆಲ್ಲಾ ಸಾಮಾನ್ಯ. ಇಬ್ಬರು ಉತ್ತರ ಪ್ರದೇಶದ ಆಟಗಾರರು ಆಗಿದ್ದರಿಂದ ಮೊದಲಿನಿಂದಲೂ ಇಬ್ಬರ ನಡುವೆ ಆತ್ಮೀಯತೆ ಇದೆ ಎಂದು ಫೋಟೋಗಳ ವಿಡಿಯೋ ಕೂಡ ಕೆಕೆಆರ್ ಹಂಚಿಕೊಂಡಿದೆ.
ಇದನ್ನೂ ಓದಿ:ಉಪ್ಪಿ ಅವರ ಫೇಮಸ್ ಹಾಡು ಹೇಳಿ ಖುಷಿ ಪಟ್ಟ ಸಾಲ್ಟ್.. ಅದ್ಯಾವ ಸಾಂಗ್ ಹೇಳಿ ನೋಡೋಣ..?
ಅಸನಿಗೆ ಆಗಿದ್ದೇನು?
ಪಂದ್ಯದ ಬಳಿಕ ಕೆಕೆಆರ್ ಹಾಗೂ ಡೆಲ್ಲಿ ನಡುವಿನ ಪ್ಲೇಯರ್ಸ್ ಮೈದಾನದಲ್ಲಿ ನಿಂತು ಮಾತಾಡುತ್ತಿರುತ್ತಾರೆ. ಆಗ ಕುಲ್ದೀಪ್ ಯಾದವ್, ರಿಂಕು ಸಿಂಗ್ ಕೆನ್ನೆಗೆ ಒಂದೇಟು ಬಾರಿಸುತ್ತಾರೆ. ಇದಾದ ಮೇಲೆ ಇನ್ನೆರಡು ಮಾತುಗಳನ್ನು ಹೇಳುತ್ತಾ ಮತ್ತೊಂದು ಏಟನ್ನು ರಿಂಕು ಕೆನ್ನೆಗೆ ಹೊಡೆದಿದ್ದಾರೆ. ಆಗ ರಿಂಕು ಸಿಂಗ್ ಬೇಸರದಿಂದ ಕುಲ್ದೀಪ್ ಯಾದವ್ ಕಡೆಗೆ ನೋಡುತ್ತಾರೆ.
ರಿಂಕು ಗುರಾಯಿಸಿಕೊಂಡು ನೋಡಿದ ಮೇಲೆ ವಿಡಿಯೋ ಮುಗಿದು ಹೋಗುತ್ತದೆ. ಆದರೆ ಪಂದ್ಯ ಮುಗಿದ ಮೇಲೆ ಇಬ್ಬರ ನಡುವೆ ಯಾಕೆ ಹೀಗಾಯಿತು ಎಂಬುದು ಯಾರಿಗೂ ಗೊತ್ತಾಗಲ್ಲ. ಆದ್ರೆ ವಿಡಿಯೋ ಮಾತ್ರ ಸೋಶಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗುತ್ತದೆ. ಡೆಲ್ಲಿ ಸ್ಪಿನ್ನರ್ ಕುಲ್ದೀಪ್ ಯಾದವ್, ಕೆಕೆಆರ್ ರಿಂಕುಗೆ ಹೊಡೆದಿದ್ದು ಯಾಕೆ ಎಂದು ಎಲ್ಲರಿಗೂ ಅಚ್ಚರಿ ಮೂಡಿಸಿರುತ್ತದೆ. ಸದ್ಯ ಇದಕ್ಕೆ ಕೋಲ್ಕತ್ತಾ ಫ್ರಾಂಚೈಸಿ ರಿಂಕು-ಕುಲ್ದೀಪ್ ಇರುವ ಗೆಳೆತನದ ಫೋಟೋಗಳ ವಿಡಿಯೋ ಮಾಡಿ ಸ್ಪಷ್ಟನೆ ನೀಡಿದೆ.
Media (𝘴𝘢𝘯𝘴𝘢𝘯𝘪) vs (𝘥𝘰𝘴𝘵𝘰𝘯 𝘬𝘦 𝘣𝘦𝘦𝘤𝘩 𝘬𝘢) Reality!
𝘎𝘦𝘩𝘳𝘪 𝘥𝘰𝘴𝘵𝘪 feat. our talented UP boys 😂 pic.twitter.com/2fY749CSXf
— KolkataKnightRiders (@KKRiders)
Media (𝘴𝘢𝘯𝘴𝘢𝘯𝘪) vs (𝘥𝘰𝘴𝘵𝘰𝘯 𝘬𝘦 𝘣𝘦𝘦𝘤𝘩 𝘬𝘢) Reality!
𝘎𝘦𝘩𝘳𝘪 𝘥𝘰𝘴𝘵𝘪 feat. our talented UP boys 😂 pic.twitter.com/2fY749CSXf— KolkataKnightRiders (@KKRiders) April 30, 2025
">April 30, 2025
ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ಫಸ್ಟ್ಚಾನೆಲ್ನಲ್ಲಿ ‘ರನ್ ಭೂಮಿ’ ವೀಕ್ಷಿಸಿ