ಕಪ್​ ಗೆದ್ದು ಕೊಟ್ಟ ಕ್ಯಾಪ್ಟನ್​ ಶ್ರೇಯಸ್​ ಅಯ್ಯರ್​ಗೆ ಬಿಗ್​ ಶಾಕ್​ ಕೊಟ್ಟ KKR; ನಾಯಕತ್ವದಿಂದ ಔಟ್​​!​​

author-image
Ganesh Nachikethu
Updated On
ಆರ್​​​ಸಿಬಿಯಿಂದ IPL ವಿನ್ನಿಂಗ್​ ಕ್ಯಾಪ್ಟನ್​ಗೆ ಬಿಗ್​ ಆಫರ್​​; ಬೆಂಗಳೂರಿಗೆ ಬಂತು ಹಾರ್ಸ್​ ಪವರ್​​
Advertisment
  • ಬಹುನಿರೀಕ್ಷಿತ 2025ರ ಇಂಡಿಯನ್ ಪ್ರೀಮಿಯರ್ ಲೀಗ್
  • ಶ್ರೇಯಸ್​ ಅಯ್ಯರ್​ಗೆ ಬಿಗ್​ ಶಾಕ್​ ಕೊಟ್ಟ ಕೆಕೆಆರ್​ ಟೀಮ್​​
  • ಸ್ಟಾರ್​ ಆಟಗಾರನಿಗೆ ಕ್ಯಾಪ್ಟನ್ಸಿ ನೀಡಲು ಕೆಕೆಆರ್​​ ಪ್ಲಾನ್​​​!

ಬಹುನಿರೀಕ್ಷಿತ 2025ರ ಇಂಡಿಯನ್ ಪ್ರೀಮಿಯರ್ ಲೀಗ್ ಆರಂಭಕ್ಕೂ ಇನ್ನೂ 6 ತಿಂಗಳು ಇದೆ. ಈ ಮುನ್ನವೇ ಐಪಿಎಲ್​​ ಜನರಲ್ಲಿ ದಿನದಿಂದ ದಿನಕ್ಕೆ ಕುತೂಹಲ ಹೆಚ್ಚಿಸಿದೆ. ಐಪಿಎಲ್ 2025ರ ಮೆಗಾ ಹರಾಜು ಪ್ರಕ್ರಿಯೆಗೂ ಮೊದಲು ಯಾರನ್ನು ರಿಲೀಸ್ ಮಾಡಬೇಕು? ಯಾರನ್ನು ಉಳಿಸಿಕೊಳ್ಳಬೇಕು? ಎಂದು ಐಪಿಎಲ್​ ತಂಡಗಳು ಪ್ಲಾನ್ ಮಾಡಿಕೊಂಡಿವೆ. ಹಲವು ತಂಡಗಳಲ್ಲಿ ಸ್ಟಾರ್ ಆಟಗಾರರ ಬದಲಾವಣೆಯಾಗಲಿದೆ.

ಈಗಾಗಲೇ ಕೆಲವು ಸ್ಟಾರ್ ಆಟಗಾರರಿಗೆ ಹಲವು ತಂಡಗಳಿಂದ ಬಿಗ್​ ಆಫರ್​ ಬಂದಿದೆ. ಈಗ ಮುಂಬೈ ಇಂಡಿಯನ್ಸ್​ ಮತ್ತು ಕೋಲ್ಕತ್ತಾ ನೈಟ್ ರೈಡರ್ಸ್‌ಗೆ ಸಂಬಂಧಿಸಿದ ಬಿಗ್ ಅಪ್ಡೇಟ್ ಒಂದು ಹೊರಬಿದ್ದಿದೆ. ಈ ಬಾರಿ ಮುಂಬೈ ಇಂಡಿಯನ್ಸ್ ಸ್ಟಾರ್​ ಬ್ಯಾಟರ್ ಸೂರ್ಯಕುಮಾರ್ ಯಾದವ್ ಅವರನ್ನು ತಂಡಕ್ಕೆ ಕರೆ ತರಲು ಕೆಕೆಆರ್ ಮುಂದಾಗಿದೆ.

ಅಯ್ಯರ್ ಸ್ಥಾನ ತುಂಬ್ತಾರಾ ಸೂರ್ಯ?

ಕಳೆದ ಸೀಸನ್​ನಲ್ಲಿ ಶ್ರೇಯಸ್ ಅಯ್ಯರ್ ನಾಯಕತ್ವದಲ್ಲಿ ಕೆಕೆಆರ್ ಟ್ರೋಫಿ ಗೆದ್ದಿತ್ತು. ಈ ಚಾಂಪಿಯನ್ ತಂಡ ಮುಂದಿನ ಸೀಸನ್​ನಲ್ಲಿ ನಾಯಕ ಶ್ರೇಯಸ್ ಅಯ್ಯರ್ ಅವರನ್ನು ಬದಲಿಸಲು ನಿರ್ಧರಿಸಿದೆ. ಸದ್ಯಕ್ಕೆ ಸಿಕ್ಕಿರೋ ಮಾಹಿತಿ ಪ್ರಕಾರ ಅಯ್ಯರ್ ಜಾಗಕ್ಕೆ ಕೆಕೆಆರ್ ಫ್ರಾಂಚೈಸಿ ಸೂರ್ಯಕುಮಾರ್ ಯಾದವ್ ಅವರನ್ನು ಸಂಪರ್ಕಿಸಿದೆ ಎಂದು ತಿಳಿದು ಬಂದಿದೆ.

ಸೂರ್ಯಕುಮಾರ್ ಮುಂಬೈ ತಂಡ ಸೇರೋ ಮುನ್ನ ಕೆಕೆಆರ್‌ ಭಾಗವಾಗಿದ್ದರು. ಇತ್ತೀಚೆಗೆ ಟೀಮ್ ಇಂಡಿಯಾದ ಟಿ20 ಸ್ವರೂಪದ ನಾಯಕರಾಗಿ ಸೂರ್ಯ ಆಯ್ಕೆಯಾಗಿದ್ದಾರೆ. ಇವರ ನಾಯಕತ್ವದಲ್ಲಿ ಭಾರತ ತಂಡ ಅದ್ಭುತ ಪ್ರದರ್ಶನ ನೀಡಿ ಶ್ರೀಲಂಕಾ ವಿರುದ್ಧ ಟಿ20 ಸರಣಿ ಗೆದ್ದಿದೆ.

ಇದನ್ನೂ ಓದಿ: ಮೋಸದಾಟದಿಂದ T20 ವಿಶ್ವಕಪ್​ ಗೆದ್ದಿದ್ಯಾ ಟೀಮ್​ ಇಂಡಿಯಾ? ಸ್ಟಾರ್​ ಕ್ರಿಕೆಟರ್​ನಿಂದ ಗಂಭೀರ ಆರೋಪ

ವಿಶೇಷ ಸೂಚನೆ: ಕ್ರಿಕೆಟ್​​ನ ವಿಶೇಷ ಸುದ್ದಿಗಳಿಗಾಗಿ ವೀಕ್ಷಿಸಿ ‘ರನ್ ಭೂಮಿ’ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ ಫಸ್ಟ್ ಚಾನೆಲ್

Advertisment