/newsfirstlive-kannada/media/post_attachments/wp-content/uploads/2025/03/Rahane_Kohli.jpg)
ಬಹುನಿರೀಕ್ಷಿತ ಇಂಡಿಯನ್​ ಪ್ರೀಮಿಯರ್​ ಲೀಗ್​ ಸೀಸನ್​-18ಕ್ಕೆ ಭರದ ಸಿದ್ಧತೆ ನಡೆಯುತ್ತಿದೆ. ಕಪ್ ಗೆಲ್ಲಲೇಬೇಕೆಂಬ ಹಠಕ್ಕೆ ಬಿದ್ದಿರುವ ಆರ್​ಸಿಬಿ, ಈಗಾಗಲೇ ಅಭ್ಯಾಸ ಶಿಬಿರವನ್ನು ಆರಂಭಿಸಿದೆ. ಕೆಲ ತಂಡಗಳು ನಾಯಕನ ನೇಮಕದಲ್ಲಿ ಬ್ಯುಸಿಯಾಗಿವೆ. ಯಾರ್​ ಆಗ್ತಾರೆ ಕ್ಯಾಪ್ಟನ್ ಎಂಬ ಬಿಸಿಬಿಸಿ ಚರ್ಚೆಗಳೂ ನಡೆಯುತ್ತಿವೆ.
ಇನ್ನು, ಹಾಲಿ ಚಾಂಪಿಯನ್ಸ್​ ಕೊಲ್ಕತ್ತಾ ನೈಟ್ ರೈಡರ್ಸ್ ತಂಡದ ಕ್ಯಾಪ್ಟನ್ ವಿಚಾರದಲ್ಲಿ ಮಾತ್ರ ಈತನೇ ಕ್ಯಾಪ್ಟನ್ ಆಗ್ತಾನೆ ಅನ್ನೋ ಡಿಸಿಷನ್​ಗೆ ಬರಕ್ಕೆ ಆಗಿರಲಿಲ್ಲ. ಆದ್ರೀಗ ಕೆಕೆಆರ್ ತಂಡದ ಕ್ಯಾಪ್ಟನ್ಸಿ ಬ್ಯಾಟಲ್​ಗೂ ಕ್ಲೈಮ್ಯಾಕ್ಸ್​ ತಲುಪಿದೆ. ಇದಕ್ಕೆ ಫುಲ್​ ಸ್ಟಾಪ್ ಹಾಕುವ ಸಮಯ ಬಂದಿದ್ದು, ಕ್ಯಾಪ್ಟನ್ಸಿ ಬ್ಯಾಟಲ್​ನಲ್ಲಿ ರಹಾನೆ ಗೆದ್ದಾಗಿದೆ.
/newsfirstlive-kannada/media/post_attachments/wp-content/uploads/2025/03/Rahane_KKR.jpg)
23.75 ಕೋಟಿ ಪ್ಲೇಯರ್​ ವೆಂಕಟೇಶ್​​​ಗೆ ಇಲ್ಲ ನಾಯಕತ್ವ
ಮೆಗಾ ಹರಾಜು ಮುಗಿದಿದ್ದೆ ತಡ, ಯಾರ್​ ಯಾವ ತಂಡದ ನಾಯಕರಾಗ್ತಾರೆ ಅನ್ನೋ ಚಿತ್ರಣ ಸಿಕ್ಕಾಗಿತ್ತು. ಕ್ರಿಕೆಟ್​ ವಿಶ್ಲೇಷಕರು, ಪಂಡಿತರು ಸಹಿತ ಪ್ರತಿ ತಂಡದ ಭವಿಷ್ಯ ನುಡಿದಿದ್ದರು. ಕೊಲ್ಕತ್ತಾ ತಂಡದ ನಾಯಕತ್ವದ ವಿಚಾರದಲ್ಲಿ ಕ್ಲಾರಿಟಿಯೇ ಇರಲಿಲ್ಲ. ಇದಕ್ಕೆ ಕಾರಣ 23.75 ಕೋಟಿಯ ಒಡೆಯ ವೆಂಟಕೇಶ್​ ಅಯ್ಯರ್​​ಗೆ ನಾಯಕತ್ವದ ಸಿಗಬಹುದು ಅನ್ನೋ ಅಂದಾಜು ಒಂದಾದ್ರೆ, ಅನ್​ಸೋಲ್ಡ್​ ಟು ಸೋಲ್ಡ್​ ಆಗಿದ್ದ ಅಜಿಂಕ್ಯಾ ರಹಾನೆಗೆ ನಾಯಕತ್ವ ಯಾಕೆ ನೀಡ್ತಾರೆ ಅನ್ನೋ ಲೆಕ್ಕಾಚಾರ. ಈ ಲೆಕ್ಕಾಚಾರಗಳೆಲ್ಲ ಸುಳ್ಳಾಗಿದ್ದು, ಮುಂಬೈಕರ್​​ಗೆ ಕೊಲ್ಕತ್ತಾ ನೈಟ್ ರೈಡರ್ಸ್ ತಂಡವನ್ನ ರೈಡ್ ಮಾಡೋ ಭಾಗ್ಯ ಸಿಕ್ಕಿದೆ.
ಕೆಕೆಆರ್​​ನಿಂದ ಅಧಿಕೃತ ಘೋಷಣೆ
ಈ ಸಂಬಂಧ ಟ್ವೀಟ್​ ಮಾಡಿರೋ ಕೆಕೆಆರ್​ ತಂಡ ಅಜಿಂಕ್ಯ ರಹಾನೆ ಅವರನ್ನು ಹೊಸ ಕ್ಯಾಪ್ಟನ್​ ಆಗಿ ಘೋಷಣೆ ಮಾಡಿದೆ. ಹಾಗೆಯೇ ಕೆಕೆಆರ್​ ತಂಡದ ಉಪನಾಯಕರಾಗಿ ಶ್ರೇಯಸ್​ ಅಯ್ಯರ್​ ನೇಮಕ ಆಗಿದ್ದಾರೆ.
ವಿಶೇಷ ಸೂಚನೆ: ಕ್ರಿಕೆಟ್​​ನ ವಿಶೇಷ ಸುದ್ದಿಗಳಿಗಾಗಿ ವೀಕ್ಷಿಸಿ 'ರನ್ ಭೂಮಿ' ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ ಫಸ್ಟ್ ಚಾನೆಲ್
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us