/newsfirstlive-kannada/media/post_attachments/wp-content/uploads/2025/04/AXAR_KL_RAHUL.jpg)
ಸೀಸನ್-18ರ ಐಪಿಎಲ್ ಮುಗೀದು 2 ತಿಂಗಳಾಗ್ತಿಲ್ಲ. ಈಗಾಗಲೇ ಐಪಿಎಲ್ ಫ್ರಾಂಚೈಸಿಗಳು, ಮುಂದಿನ ಸೀಸನ್ ತಯಾರಿಯಲ್ಲಿ ಬ್ಯಸಿಯಾಗಿದೆ. ಈ ಪೈಕಿ ಒಂದು ಕೊಲ್ಕತ್ತಾ ನೈಟ್ ರೈಡರ್ಸ್, ಕಳೆದ ಸೀಸನ್ನ ಪ್ರದರ್ಶನಕ್ಕೆ ಬೇಸರವಾಗಿರುವ ಮ್ಯಾನೇಜ್ಮೆಂಟ್ ಕನ್ನಡಿಗ ಕೆ.ಎಲ್.ರಾಹುಲ್ ಮೇಲೆ ಕಣ್ಣಿಟ್ಟಿದೆಯಂತೆ.
ಸೀಸನ್-18ರಲ್ಲಿ ನಿರೀಕ್ಷೆ ತಕ್ಕ ಪ್ರದರ್ಶನ ನೀಡದ ಕೊಲ್ಕತ್ತಾ ನೈಟ್ ರೈಡರ್ಸ್, ಮುಂದಿನ ಸೀಸನ್ಗೆ ಬಲಿಷ್ಠ ತಂಡ ಕಟ್ಟುವತ್ತ ದೃಷ್ಟಿ ಹರಿಸಿದೆ. ಈ ನಿಟ್ಟಿನಲ್ಲಿ ಕಾರ್ಯ ಪ್ರವೃತ್ತವಾಗಿರುವ ಕೊಲ್ಕತ್ತಾ ನೈಟ್ ರೈಡರ್ಸ್, ಬಿಗ್ ವಿಕೆಟ್ ಕೀಪರ್ ಆ್ಯಂಡ್ ಬ್ಯಾಟ್ಸ್ಮನ್ ಮೇಲೆ ಕಣ್ಣಿಟ್ಟಿದೆ.
ವಿ.ಕೀಪರ್ ಅಂಡ್ ಬ್ಯಾಟ್ಸ್ಮನ್ ಮೇಲೆ ಕೆಕೆಆರ್ ಕಣ್ಣು..!
ಸೀಸನ್-18ರಲ್ಲಿ ಕೊಲ್ಕತ್ತಾ ಅಟ್ಟರ್ ಪ್ಲಾಫ್ ಪರ್ಫಾಮೆನ್ಸ್ ನೀಡಿದೆ. ಇದಕ್ಕೆ ಪ್ರಮುಖ ಕಾರಣ ವಿಕೆಟ್ ಕೀಪರ್ಗಳಾದ ಕ್ವಿಂಟನ್ ಡಿಕಾಕ್, ರಹಮಾನುಲ್ಲಾ ಗುರ್ಬಾಜ್. ನಿರೀಕ್ಷೆಗೆ ತಕ್ಕ ಆಟವಾಡದ ಇವರು, ಕ್ರಮವಾಗಿ ಗಳಿಸಿದ್ದ ರನ್.. 152 ಹಾಗೂ 74 ಮಾತ್ರ. ಇದೇ ಕಾರಣಕ್ಕೀಗ ವಿಕೆಟ್ ಕೀಪರ್ ಬ್ಯಾಟರ್ನ ಟ್ರೇಡ್ ಮಾಡಿಕೊಳ್ಳುವ ಲೆಕ್ಕಚಾರದಲ್ಲಿದೆ.
ಇದನ್ನೂ ಓದಿ: KSCA ಹರಾಜಿನಲ್ಲಿ ರಾಹುಲ್ ದ್ರಾವಿಡ್ ಪುತ್ರ ಅನ್ಸೋಲ್ಡ್..!
ವಿಕೆಟ್ ಕೀಪರ್ ಆ್ಯಂಡ್ ಓಪನರ್ ಆಗಿ ಫೇಲ್ಯೂರ್ ಆಗಿದ್ದ ಕ್ವಿಂಟನ್ ಡಿಕಾಕ್, ರಹಮಾನುಲ್ಲಾ ಗುರ್ಬಾಜ್, ಟೂರ್ನಿಯುದ್ದಕ್ಕೂ ಗುಡ್ ಸ್ಟಾರ್ಟ್ ನೀಡಲೇ ಇಲ್ಲ. ಹೀಗಾಗಿ ಇಂಡಿಯನ್ ವಿಕೆಟ್ ಕೀಪರ್ಗಳಾದ ಕೆ.ಎಲ್.ರಾಹುಲ್, ಸಂಜು ಸ್ಯಾಮ್ಸನ್, ಧ್ರುವ್ ಜುರೇಲ್, ಇಶಾನ್ ಕಿಶನ್, ಜಿತೇಶ್ ಶರ್ಮಾ ಮೇಲೆ ಕಣ್ಣಾಕಿದೆ. ಈ ಐವರಲ್ಲಿ ಒಬ್ಬರನ್ನ ತಂಡಕ್ಕೆ ಕರೆತರುವ ಯತ್ನದಲ್ಲಿದೆ. ಯಾರಿಗೆ ಗಾಳ ಹಾಕುತ್ತೆ ಎಂಬ ಕ್ಯೂರಿಯಾಸಿಟಿ ಕ್ರಿಕೆಟ್ ವಲಯದಲ್ಲಿದೆ.
ಕನ್ನಡಿಗ ಕೆ.ಎಲ್.ರಾಹುಲ್ ಮೇಲೆ ಕೊಲ್ಕತ್ತಾ ಕಣ್ಣು..!
ಐವರು ಇಂಡಿಯನ್ ವಿಕೆಟ್ ಕೀಪರ್ಗಳ ಪೈಕಿ ಕೊಲ್ಕತ್ತಾದ ಮೇನ್ ಟಾರ್ಗೆಟ್. ಕನ್ನಡಿಗ ಕೆ.ಎಲ್.ರಾಹುಲ್. ವಿಕೆಟ್ ಹಿಂದೆ ಗ್ಲೌಸ್ ತೊಟ್ಟು ಕೀಪಿಂಗ್ ಮಾಡುವ ಕೆ.ಎಲ್.ರಾಹುಲ್, ವಿಕೆಟ್ ಮುಂದೆ ನಿಂತು ಮ್ಯಾಚ್ ವಿನ್ನಿಂಗ್ ನಾಕ್ಸ್ ಆಡ್ತಾರೆ. ಎಲ್ಲಾ ಕಂಡೀಷನ್ಸ್ಗೂ ಸಲ್ಲುವ ಕನ್ನಡಿಗ ಟಾಪ್ ಆರ್ಡರ್ ಟು ಲೋವರ್ ಆರ್ಡರ್ ತನಕ ಬ್ಯಾಟ್ ಬೀಸಬಲ್ಲ ತಾಕತ್ತಿದೆ. ಇದಿಷ್ಟೇ ಅಲ್ಲ, ಕೆ.ಎಲ್.ರಾಹುಲ್ ಮೇಲಿನ ಒಲವಿಗೆ ಕಾರಣ ಕ್ಯಾಪ್ಟನ್ ಅಜಿಂಕ್ಯಾ ರಹಾನೆಯೂ ಆಗಿದ್ದಾರೆ ಅನ್ನೋದ್ರಲ್ಲಿ ಡೌಟೇ ಇಲ್ಲ.
ಕೆ.ಎಲ್.ರಾಹುಲ್ ಮೇಲೆ ಒಲವು ಯಾಕೆ..?
ಸದ್ಯ ಐಪಿಎಲ್ನ ಅನುಭವಿ ಕ್ಯಾಪ್ಟನ್ ಅಂದ್ರೆ ಅದು ಅಜಿಂಕ್ಯಾ ರಹಾನೆ. ಅಜಿಂಕ್ಯಾ ರಹಾನೆಯ ನಾಯಕತ್ವದ ಬಗ್ಗೆ ಮ್ಯಾನೇಜ್ಮೆಂಟ್ ಬೇಸರಗೊಂಡಿದೆ. ಟಿ20 ಫಾರ್ಮೆಟ್ಗೆ ಸೂಕ್ತವಲ್ಲ ಎಂಬ ನಿರ್ಣಯಕ್ಕೆ ಬಂದಿರುವ ಮ್ಯಾನೇಜ್ಮೆಂಟ್ಗೆ ತಂಡದಲ್ಲಿ ಪರ್ಯಾಯ ನಾಯಕ ಮಾತ್ರವಲ್ಲ. ಲಾಂಗ್ ಟರ್ನ್ ಕ್ಯಾಪ್ಟನ್ ಕ್ವಾಲಿಟಿಯ ಆಟಗಾರನಿಲ್ಲ. ಹೀಗಾಗಿ ನಾಯಕತ್ವದ ಅನುಭವ ಹೊಂದಿರುವ ರಾಹುಲ್ನ ಟ್ರೇಡ್ ಮಾಡಿದ್ರೆ, ತಂಡವನ್ನು ಯಶಸ್ವಿಯಾಗಿ ಮುನ್ನಡೆಸ್ತಾರೆ ಎಂಬ ನಂಬಿಕೆ ಇದೆ. ಈ ಕಾರಣಕ್ಕೆ ಕೆಕೆಆರ್ ಕನ್ನಡಿಗನ ಮೇಲೆ ವಿಶೇಷ ಆಸಕ್ತಿ ಹೊಂದಿದೆ.
ಇದನ್ನೂ ಓದಿ: ಸ್ಟಾರ್ ಗಿರಿ ಮುಂದೆ ಉಳಿದವ್ರು ಕಣ್ಮರೆ.. ಸಿರಾಜ್, ಜೈಸ್ವಾಲ್ ಬಗ್ಗೆ ಗಂಗೂಲಿ ಮಹತ್ವದ ಹೇಳಿಕೆ..!
ಒಂದೇ ಕಲ್ಲಲ್ಲಿ ಮೂರು ಹಕ್ಕಿ ಹೊಡೆಯೋ ಪ್ಲಾನ್
ವಿಕೆಟ್ ಕೀಪರ್ಸ್ ಹಲವರಿದ್ದಾರೆ. ಕೆ.ಎಲ್.ರಾಹುಲ್ ಯಾಕೆ ಎಂಬ ಪ್ರಶ್ನೆಗೆ ಉತ್ತರ. ಒಂದೇ ಕಲ್ಲಲ್ಲಿ ಮೂರು ಹಕ್ಕಿ ಹೊಡೆಯೋ ಉತ್ತರ. ಇತರೆ ವಿಕೆಟ್ ಕೀಪರ್ಸ್ಗೆ ಹೋಲಿಸಿದ್ರೆ, ಕೆ.ಎಲ್.ರಾಹುಲ್ಗೆ ನಾಯಕನಾಗಿ ತಂಡವನ್ನು ಮುನ್ನಡೆಸಿದ ಅನುಭವ ಇದೆ. ಬ್ಯಾಟಿಂಗ್ ಕನ್ಸಿಸ್ಟೆನ್ಸಿಯ ಜೊತೆಗೆ ವಿಕೆಟ್ ಕೀಪರ್ ಆಗಿ ತಂಡಕ್ಕೆ ನೆರವಾಗ್ತಾರೆ. ಇದಲ್ಲಕ್ಕಿಂತ ಕೆ.ಎಲ್.ರಾಹುಲ್ ಅನುಭವ ಹಾಗೂ ಇತರೆ ಆಟಗಾರರ ಜೊತೆ ಹೊಂದಿಕೊಳ್ಳುತ್ತಾರೆ. ಪ್ರತಿಯೊಬ್ಬರ ಜೊತೆ ಉತ್ತಮ ಬಾಂಧವ್ಯ ಹೊಂದಿರುವ ಕೆ.ಎಲ್.ರಾಹುಲ್, ತಂಡಕ್ಕೆ ಆಗಮಿಸಿದ್ರೆ, ಭಾರೀ ಲಾಭವೇ ಆಗುತ್ತೆ ಅನ್ನೋದು ಮ್ಯಾನೇಜ್ಮೆಂಟ್ ಲೆಕ್ಕಾಚಾರ.
ಅಂದು ಕೊಂಡಂತಾದ್ರೆ ಕೆಕೆಆರ್ಗೆ ರಾಹುಲ್ ಜಂಪ್..?
ಸದ್ಯ ಕೆ.ಎಲ್.ರಾಹುಲ್, ಕೇವಲ ಡೆಲ್ಲಿ ತಂಡದ ಆಟಗಾರನಾಗಿದ್ದಾರೆ. ಇದೇ ಕಾರಣಕ್ಕೆ ಡೀಲ್ ಮಾಡಿದ್ರೆ. ಕೊಲ್ಕತ್ತಾಗೆ ಬರಬಹುದು ಅನ್ನೋ ವಿಶ್ವಾಸ. ಡೆಲ್ಲಿ ಕ್ಯಾಪಿಟಲ್ಸ್ ಕೆ.ಎಲ್.ರಾಹುಲ್ನ ಕೈ ಬಿಡುತ್ತಾ ಅನ್ನೋದೆ ಪ್ರಶ್ನೆ. ಸೀಸನ್-18ರಲ್ಲಿ ಡೆಲ್ಲಿ ಸಕ್ಸಸ್ಗೆ ಕಾರಣವೇ ಕೆ.ಎಲ್.ರಾಹುಲ್. ಕೋಚಿಂಗ್ ಸ್ಟಾಫ್ ಜೊತೆ ವಿಶೇಷ ಬಾಂಧವ್ಯವೂ ಹೊಂದಿದ್ದಾರೆ. ಹೀಗಾಗಿ ಡೆಲ್ಲಿ ಕ್ಯಾಪಿಟಲ್ಸ್ ತಂಡದ ರಾಹುಲ್ನ ಟ್ರೇಡ್ನಲ್ಲಿ ಬಿಟ್ಟುಕೊಡುತ್ತಾ ಅನ್ನೋದೇ ಪ್ರಶ್ನೆ.
ಇದನ್ನೂ ಓದಿ: 2017ರಲ್ಲಿ ಪ್ರೀತಿ, ಇಬ್ಬರು ಮಕ್ಕಳು.. ಆಮೇಲೆ ನಿಗೂಢ ಕಣ್ಮರೆ.. ಗುಹೆ ಲೇಡಿ ಲವ್ ಕಹಾನಿ ರೋಚಕ..!
ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.30ಕ್ಕೆ ನ್ಯೂಸ್ಫಸ್ಟ್ಚಾನೆಲ್ನಲ್ಲಿ ‘ರನ್ ಭೂಮಿ’ ವೀಕ್ಷಿಸಿ