newsfirstkannada.com

ಆರ್​​ಸಿಬಿ ವಿರುದ್ಧ ಗೆದ್ದು ಬೀಗಿದ ಕೆಕೆಆರ್​​.. ಬೆಂಗಳೂರು ಸೋಲಿಗೆ ಕಾರಣ ಯಾರು?

Share :

Published March 29, 2024 at 10:54pm

Update March 29, 2024 at 11:12pm

    ಆರ್​​ಸಿಬಿ ವಿರುದ್ಧ ಗೆದ್ದು ಬೀಗಿದ ಕೆಕೆಆರ್​ ಟೀಮ್​​

    ರಾಯಲ್​ ಚಾಲೆಂಜರ್ಸ್ ಬೆಂಗಳೂರಿಗೆ ಸೋಲು..!

    ವಿರಾಟ್​ ಕೊಹ್ಲಿ, ದಿನೇಶ್ ಕಾರ್ತಿಕ್​​​ ಹೋರಾಟ ವ್ಯರ್ಥ

ಇಂದು ಎಂ.ಎ ಚಿನ್ನಸ್ವಾಮಿ ಸ್ಟೇಡಿಯಮ್​ನಲ್ಲಿ ನಡೆದ ಇಂಡಿಯನ್​ ಪ್ರೀಮಿಯರ್​ ಲೀಗ್​​ ಪಂದ್ಯದಲ್ಲಿ ರಾಯಲ್​ ಚಾಲೆಂಜರ್ಸ್​ ಬೆಂಗಳೂರು ವಿರುದ್ಧ ಕೋಲ್ಕತ್ತಾ ನೈಟ್​ ರೈಡರ್ಸ್​​​ ಗೆದ್ದು ಬೀಗಿದೆ.

ಆರ್​​ಸಿಬಿ ನೀಡಿದ ಗುರಿ ಬೆನ್ನತ್ತಿದ ಕೆಕೆಆರ್​ ಕೇವಲ 16.5 ಓವರ್​ಗಳಲ್ಲಿ 186 ರನ್​ ಗಳಿಸೋ ಮೂಲಕ ಗೆದ್ದು ಬೀಗಿದೆ. ಕೆಕೆಆರ್​ ಪರ ಸುನಿಲ್​ ನರೈನ್​ 47, ವೆಂಕಟೇಶ್​ ಅಯ್ಯರ್​​ 50, ಸಾಲ್ಟ್​​ 30, ಶ್ರೇಯಸ್​​ ಅಯ್ಯರ್​​ 39, ರಿಂಕು ಸಿಂಗ್​ 5 ರನ್​ ಗಳಿಸಿದ್ದಾರೆ.

ಟಾಸ್​ ಸೋತರೂ ಫಸ್ಟ್​ ಬ್ಯಾಟಿಂಗ್​ ಮಾಡಿದ ಆರ್​​ಸಿಬಿ ಪರ ಓಪನರ್​ ಆಗಿ ಬಂದ ವಿರಾಟ್​ ಕೊಹ್ಲಿ ಅಜೇಯರಾಗಿ ಉಳಿದರು. ಕೇವಲ 59 ಬಾಲ್​ನಲ್ಲಿ 4 ಸಿಕ್ಸರ್​​, 4 ಫೋರ್​ ಸಮೇತ 83 ರನ್​ ಸಿಡಿಸಿದ್ರು.

ಮೊದಲಿಗೆ ಆರ್​​ಸಿಬಿ ಕ್ಯಾಪ್ಟನ್​ ಫಾಫ್​ ಡುಪ್ಲೆಸಿಸ್​​ ಹರ್ಷಿತ್​ ರಾಣಾ 2ನೇ ಓವರಿನ 5ನೇ ಬಾಲ್​ನಲ್ಲಿ ಭರ್ಜರಿ ಸಿಕ್ಸರ್​​ ಸಿಡಿಸಿದ್ರು. ಇದಾದ ಬೆನ್ನಲ್ಲೇ ಕೊನೇ ಬಾಲ್​ಗೆ ಸಿಕ್ಸರ್​​ ಬಾರಿಸಲು ಹೋದ ಫಾಫ್​ ಕ್ಯಾಚ್​ ನೀಡಿದ್ರು. ಬಳಿಕ ಕ್ಯಾಮೆರಾನ್ ಗ್ರೀನ್​ ಕೂಡ 2 ಸಿಕ್ಸರ್​​, 4 ಫೋರ್​ ಸಮೇತ 33 ರನ್​ ಗಳಿಸಿದ್ರು.

ಕ್ಯಾಮರಾನ್​ ಗ್ರೀನ್​ ಔಟಾದ ಬಳಿಕ ಬಂದ ಮ್ಯಾಕ್ಸಿ ಎಂದಿನಂತೆಯೇ ಬ್ಯಾಟ್​ ಬೀಸಿದ್ರು. ಕೇವಲ 19 ಬಾಲ್​​ನಲ್ಲಿ 1 ಸಿಕ್ಸರ್​​, 3 ಫೋರ್​ ಸಮೇತ 29 ರನ್​ ಸಿಡಿಸಿದ್ರು. ಎರಡು ಬಾರಿ ಮ್ಯಾಕ್ಸ್​ವೆಲ್​ಗೆ ಲೈಫ್​ ಸಿಕ್ಕಿತು. ಕೊನೆಗೆ ಸುನಿಲ್​ ನರೈನ್​​​ ಬೌಲಿಂಗ್​ನಲ್ಲಿ 14ನೇ ಓವರ್​ನಲ್ಲಿ ಮತ್ತೆ ಸಿಕ್ಸ್​ ಸಿಡಿಯಲು ಹೋದ ಮ್ಯಾಕ್ಸಿ ರಿಂಕು ಸಿಂಗ್​ಗೆ ಕ್ಯಾಚ್​ ನೀಡಿದ್ರು.

ಕೊನೆಗೆ ಬಂದ ದಿನೇಶ್​ ಕಾರ್ತಿಕ್​ ಭರ್ಜರಿ ಬ್ಯಾಟಿಂಗ್​ ಮಾಡಿದ್ರು. ಮೂರು ಸಿಕ್ಸರ್​​ ಸಮೇತ ದಿನೇಶ್​ ಕಾರ್ತಿಕ್​​ 20 ರನ್​ ಸಿಡಿಸಿದ್ರು. ಆರ್​​ಸಿಬಿ ನಿಗದಿತ 20 ಓವರ್​ಗಳಲ್ಲಿ 6 ವಿಕೆಟ್​ ನಷ್ಟಕ್ಕೆ 182 ರನ್​ ಪೇರಿಸಿ 183 ರನ್​ಗಳ ಗುರಿ ನೀಡಿತ್ತು.

ಇದನ್ನೂ ಓದಿ: ದಿನೇಶ್​​ ಕಾರ್ತಿಕ್​​, ಕೊಹ್ಲಿ ಭರ್ಜರಿ ಬ್ಯಾಟಿಂಗ್​.. ಕೆಕೆಆರ್​​ಗೆ ಆರ್​​ಸಿಬಿ ಬಿಗ್​ ಟಾರ್ಗೆಟ್

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಆರ್​​ಸಿಬಿ ವಿರುದ್ಧ ಗೆದ್ದು ಬೀಗಿದ ಕೆಕೆಆರ್​​.. ಬೆಂಗಳೂರು ಸೋಲಿಗೆ ಕಾರಣ ಯಾರು?

https://newsfirstlive.com/wp-content/uploads/2024/03/KKR-wins.jpg

Load More