/newsfirstlive-kannada/media/post_attachments/wp-content/uploads/2024/08/RCB_TEAM-3.jpg)
2025ರ ಇಂಡಿಯನ್ ಪ್ರೀಮಿಯರ್ ಲೀಗ್ ಮೆಗಾ ಹರಾಜಿಗಾಗಿ ಭಾರೀ ತಯಾರಿ ನಡೆಯುತ್ತಿದೆ. ಸದ್ಯದಲ್ಲೇ ಎಲ್ಲಾ ಐಪಿಎಲ್ ಫ್ರಾಂಚೈಸಿಗಳು ಎಷ್ಟು ಆಟಗಾರರನ್ನು ರೀಟೈನ್ ಮಾಡಿಕೊಳ್ಳಬೇಕು ಅನ್ನೋ ನಿರ್ಧಾರ ಅಂತಿಮವಾಗಲಿದೆ. ಸದ್ಯ ಸಿಕ್ಕಿರೋ ಮಾಹಿತಿ ಪ್ರಕಾರ ಈ ಸಲ ಎಲ್ಲಾ ತಂಡಗಳಿಗೂ 4+2 ಆಟಗಾರರನ್ನು ರೀಟೈನ್ ಮಾಡಿಕೊಳ್ಳಲು ಅವಕಾಶ ನೀಡಬಹುದು ಎಂದು ತಿಳಿದು ಬಂದಿದೆ.
ಇನ್ನು, ಮೆಗಾ ಹರಾಜಿಗೂ ಮುನ್ನ ಪ್ರತಿ ಫ್ರಾಂಚೈಸಿಗಳು ನಾಲ್ವರನ್ನು ನೇರ ರಿಟೈನ್ ಮಾಡಿಕೊಳ್ಳಬಹುದು. ಬಳಿಕ ಉಳಿದ ಇಬ್ಬರು ಆಟಗಾರರನ್ನು ಆರ್ಟಿಎಂ ಕಾರ್ಡ್ ಬಳಸಿ ಹರಾಜಿಗೆ ರಿಲೀಸ್ ಮಾಡಲು ಅವಕಾಶ ನೀಡಲಾಗಿದೆ ಎಂದು ವರದಿಯಾಗಿದೆ. ಇದರ ಪ್ರಕಾರ ಮೆಗಾ ಹರಾಜಿಗೂ ಮುನ್ನ ಎಲ್ಲಾ ತಂಡಗಳು ಕನಿಷ್ಠ 19 ಆಟಗಾರರನ್ನು ರಿಲೀಸ್ ಮಾಡಲಿದೆ ಎಂಬುದು ಖಚಿತವಾಗಿದೆ. ಇದರ ಮಧ್ಯೆ ಕೆಕೆಆರ್ ತಂಡದ ಸ್ಟಾರ್ ಫಿನಿಶರ್ ರಿಂಕು ಸಿಂಗ್ ಆರ್ಸಿಬಿ ತಂಡ ಸೇರುವ ಸ್ಫೋಟಕ ಸುಳಿವು ನೀಡಿದ್ದಾರೆ.
ರಿಂಕು ಸಿಂಗ್ ಏನಂದ್ರು?
ಮುಂದಿನ ಸೀಸನ್ಗೆ ಕೊಲ್ಕತ್ತಾ ನೈಟ್ ರೈಡರ್ಸ್ ಫ್ರಾಂಚೈಸಿ ನಿಮ್ಮನ್ನು ರಿಟೈನ್ ಮಾಡಿಕೊಳ್ಳದಿದ್ರೆ ಯಾವ ತಂಡದ ಪರ ಆಡುತ್ತೀರಿ? ಅನ್ನೋ ಪ್ರಶ್ನೆ ರಿಂಕು ಸಿಂಗ್ಗೆ ಕೇಳಲಾಯ್ತು. ಈ ಪ್ರಶ್ನೆಗೆ ಕೆಕೆಆರ್ ಬ್ಯಾಟರ್ ರಿಂಕು ಸಿಂಗ್ ನೀಡಿದ ಉತ್ತರ ಹೀಗಿತ್ತು. ಕೆಕೆಆರ್ ನನ್ನನ್ನು ರಿಟೈನ್ ಮಾಡದಿದ್ರೆ, ನಾನು ರಾಯಲ್ ಚಾಲೆಂಜರ್ಸ್ ಬೆಂಗಳೂರು ಪರ ಆಡಲು ಎದುರು ನೋಡುತ್ತಿದ್ದೇನೆ ಎಂದರು.
Rinku singh wants to play for RCB ?
90% of the youngsters and foreign players wants to play for RCB just because of Kohli...That's Insane aura. pic.twitter.com/mhqgpXnEOx
— Gaurav (@Melbourne__82)
Rinku singh wants to play for RCB 😭
90% of the youngsters and foreign players wants to play for RCB just because of Kohli...That's Insane aura. pic.twitter.com/mhqgpXnEOx— Gaurav (@Melbourne__82) August 18, 2024
">August 18, 2024
ಇತ್ತೀಚೆಗೆ ರಿಂಕು ಸಿಂಗ್ ಸ್ಪೋರ್ಟ್ಸ್ ತಕ್ ಚಾನೆಲ್ಗೆ ನೀಡಿದ ಸಂದರ್ಶನದಲ್ಲಿ ತನಗೆ ಆರ್ಸಿಬಿ ಪರ ಆಡಬೇಕೆಂಬ ಆಸೆಯಿದೆ ಎಂದು ಬಿಚ್ಚಿಟ್ಟಿದ್ದಾರೆ. ಈ ಮೂಲಕ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡಕ್ಕೆ ಬರುವ ಇಂಗಿತ ವ್ಯಕ್ತಪಡಿಸಿದ್ದಾರೆ. ರಿಂಕು ಸಿಂಗ್ ಕೆಕೆಆರ್ನಿಂದ ಹೊರಬಂದರೆ ಆರ್ಸಿಬಿ ಅವರನ್ನು ಖರೀದಿ ಮಾಡಲು ಮುಗಿಬೀಳುವುದರಲ್ಲಿ ಅನುಮಾನವೇ ಇಲ್ಲ.
ಇದನ್ನೂ ಓದಿ: IPL 2025: ಬಿಸಿಸಿಐನಿಂದ ಶಾಕಿಂಗ್ ನಿರ್ಧಾರ; ಸ್ಟಾರ್ ಆಟಗಾರರಿಗೆ ದೊಡ್ಡ ಆಘಾತ!
ವಿಶೇಷ ಸೂಚನೆ: ಕ್ರಿಕೆಟ್ನ ವಿಶೇಷ ಸುದ್ದಿಗಳಿಗಾಗಿ ವೀಕ್ಷಿಸಿ ‘ರನ್ ಭೂಮಿ’ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ ಫಸ್ಟ್ ಚಾನೆಲ್