/newsfirstlive-kannada/media/post_attachments/wp-content/uploads/2024/09/Shreyas_Iyer_KKR.jpg)
2024ರ ಇಂಡಿಯನ್ ಪ್ರೀಮಿಯರ್ ಲೀಗ್ ಚಾಂಪಿಯನ್ ತಂಡ ಕೋಲ್ಕತ್ತಾ ನೈಟ್ ರೈಡರ್ಸ್. ಕೆಕೆಆರ್ ತಂಡ ಐಪಿಎಲ್ ಚಾಂಪಿಯನ್ ಆಗುವಲ್ಲಿ ಶ್ರೇಯಸ್ ಅಯ್ಯರ್ ಪ್ರಮುಖ ಪಾತ್ರವಹಿಸಿದ್ದರು. ಮುಂದಿನ ಸೀಸನ್ಗೆ ಕೆಕೆಆರ್ ತಂಡದಿಂದ ಕ್ಯಾಪ್ಟನ್ ಶ್ರೇಯಸ್ ಅಯ್ಯರ್ಗೆ ಕೊಕ್ ನೀಡಲಾಗಿದೆ.
ಕೆಕೆಆರ್ 2025ರ ರೀಟೈನ್ ಪಟ್ಟಿ ರಿಲೀಸ್ ಮಾಡಿದೆ. ರಿಂಕು ಸಿಂಗ್ (13 ಕೋಟಿ), ಸುನಿಲ್ ನರೈನ್ (12 ಕೋಟಿ), ಆಂಡ್ರೆ ರಸೆಲ್ (12 ಕೋಟಿ), ವರುಣ್ ಚಕ್ರವರ್ತಿ (12 ಕೋಟಿ ), ಹರ್ಷಿತ್ ರಾಣಾ (ರೂ. 4 ಕೋಟಿ) ಮತ್ತು ರಮಣದೀಪ್ ಸಿಂಗ್ಗೆ 4 ಕೋಟಿ ನೀಡಿ ಕೆಕೆಆರ್ ಉಳಿಸಿಕೊಂಡಿದೆ. ಆದರೆ, ಕೆಕೆಆರ್ ತಂಡದಿಂದ ಶ್ರೇಯಸ್ ಅಯ್ಯರ್ ಅವರನ್ನು ಕೈ ಬಿಡಲಾಗಿದೆ.
ಶ್ರೇಯಸ್ ಅಯ್ಯರ್ಗೆ ಕೈ ಕೊಟ್ಟಿದ್ದೇಕೆ?
ಕೆಕೆಆರ್ ತಂಡದಿಂದ ಚಾಂಪಿಯನ್ ನಾಯಕ ಶ್ರೇಯಸ್ ಅಯ್ಯರ್ ಅವರನ್ನು ಕೈ ಬಿಡಲು ಕಾರಣವೇನು ಎಂದು ಸಿಇಒ ವೆಂಕಿ ಮೈಸೂರು ಬಹಿರಂಗಪಡಿಸಿದ್ದಾರೆ. ಐಪಿಎಲ್ 2025ರ ಟೂರ್ನಿಗಾಗಿ ಕೆಕೆಆರ್ ರೀಟೈನ್ ಲಿಸ್ಟ್ನಲ್ಲಿ ಶ್ರೇಯಸ್ ಅಯ್ಯರ್ ಮೊದಲ ಆಯ್ಕೆಯಾಗಿದ್ದರು. ಅವರು ನಮ್ಮ ಕ್ಯಾಪ್ಟನ್. ಮುಂದೆ ಬಲಿಷ್ಠ ತಂಡ ಕಟ್ಟಲೇಬೇಕು ಅನ್ನೋ ಉದ್ದೇಶದಿಂದಲೇ ಅವರನ್ನು ಕ್ಯಾಪ್ಟನ್ ಮಾಡಿದ್ದೆವು ಎಂದರು.
ನಾವು 2025ರ ಐಪಿಎಲ್ಗೆ ಅವರನ್ನು ರೀಟೈನ್ ಮಾಡಿಕೊಳ್ಳಲು ಮುಂದಾಗಿದ್ದೆವು. ಆದರೆ, ನಮಗೆ ಶ್ರೇಯಸ್ ಅಯ್ಯರ್ ಗ್ರೀನ್ ಸಿಗ್ನಲ್ ನೀಡಲಿಲ್ಲ. ರಿಟೇನ್ ಪ್ರಕ್ರಿಯೆಗೆ ಪರಸ್ಪರ ಒಪ್ಪಿಗೆ ಬೇಕು. ಶ್ರೇಯಸ್ ಅಯ್ಯರ್ ಕಡೆಯಿಂದ ಯಾವುದೇ ಒಪ್ಪಿಗೆ ಸಿಗಲಿಲ್ಲ. ಹೀಗಾಗಿ ಕೆಕೆಆರ್ ತಂಡದಿಂದ ಕೈ ಬಿಡಬೇಕಾಯ್ತು ಎಂದರು.
ಶ್ರೇಯಸ್ ಅವರೊಂದಿಗೆ ಈಗಲೂ ಕೆಕೆಆರ್ಗೆ ಉತ್ತಮ ಬಾಂಧವ್ಯ ಇದೆ. ಆದರೆ, ಶ್ರೇಯಸ್ ಅವರು ಹಣಕ್ಕಾಗಿ ಫ್ರಾಂಚೈಸಿ ಬಿಟ್ಟರು. ಹರಾಜಿನಲ್ಲಿ ತಮ್ಮ ಮೌಲ್ಯ ಎಷ್ಟು ಎಂದು ಚೆಕ್ ಮಾಡಲು ಮುಂದಾಗಿದ್ದಾರೆ. ಅವರ ನಿರ್ಧಾರವನ್ನು ಗೌರವಿಸುತ್ತೇವೆ ಎಂದರು ಸಿಇಒ ವೆಂಕಿ ಮೈಸೂರು.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ