ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ಸೋತ ಬೆನ್ನಲ್ಲೇ ಆರ್​ಸಿಬಿಗೆ ಮತ್ತೊಂದು ಶಾಕ್..!

author-image
Ganesh
Updated On
GT ವಿರುದ್ಧ ಆರ್​ಸಿಬಿಗೆ ಬಿಗ್​ ಚಾಲೆಂಜ್.. ಈ 6 ಪ್ರಶ್ನೆಗೆ ಉತ್ತರ ಕಂಡುಕೊಂಡರೆ ಗೆಲುವು ನಮ್ಮದೇ..!
Advertisment
  • ಐಪಿಎಲ್ ಟ್ರೋಫಿಗಾಗಿ ಮುಂದುವರಿದ ಕಾಳಗ
  • ಚಿನ್ನಸ್ವಾಮಿಯಲ್ಲಿ 2 ಪಂದ್ಯ ಸೋತಿರುವ ಆರ್​ಸಿಬಿ
  • ಎರಡು ಸೋಲುಗಳಿಂದ ಅಂಕ ಪಟ್ಟಿಯಲ್ಲಿ ಹಿನ್ನಡೆ

ಚಿನ್ನಸ್ವಾಮಿ ಮೈದಾನದಲ್ಲಿ ಸತತ ಎರಡು ಪಂದ್ಯ ಸೋಲುವ ಮೂಲಕ ಆಘಾತದಲ್ಲಿರುವ ಆರ್​ಸಿಬಿಗೆ ಮತ್ತೊಂದು ಶಾಕ್ ಆಗಿದೆ. ಪಾಯಿಂಟ್ಸ್ ಪಟ್ಟಿಯಲ್ಲಿ ಮೂರನೇ ಸ್ಥಾನದಲ್ಲಿದ್ದ ಆರ್​ಸಿಬಿ, ದಿಢೀರ್ ಅಂತಾ ನಾಲ್ಕನೇ ಸ್ಥಾನಕ್ಕೆ ಕುಸಿದಿದೆ. ಅದಕ್ಕೆ ಕಾರಣ ಕೋಲ್ಕತ್ತ ನೈಟ್ ರೈಡರ್ಸ್.

ಚೆನ್ನೈನಲ್ಲಿ ನಿನ್ನೆ ಸಿಎಸ್​ಕೆ ಮತ್ತು ಕೋಲ್ಕತ್ತ ನೈಟ್ ರೈಡರ್ಸ್ ತಂಡಗಳು ಮುಖಾಮುಖಿ ಆಗಿದ್ದವು. ಕೋಲ್ಕತ್ತ ನೈಟ್​ ರೈಡರ್ಸ್​ ಚೆನ್ನೈ ತಂಡವನ್ನು 9 ವಿಕೆಟ್​ಗಳಿಂದ ಮಣಿಸಿ ಪಾಯಿಂಟ್ಸ್ ಪಟ್ಟಿಯಲ್ಲಿ ಮೂರನೇ ಸ್ಥಾನಕ್ಕೆ ಬಂದಿದೆ.

ಇದನ್ನೂ ಓದಿ: ಆಲ್​ರೌಂಡರ್​ಗೆ ಬಿಗ್ ಶಾಕ್; IPLಗೆ ಬಂದಿದ್ದಕ್ಕೆ ಮುಂಬೈ ತಂಡದ ಪ್ಲೇಯರ್​​ ಬ್ಯಾನ್!

publive-image

ಇಲ್ಲಿಯವರೆಗೆ ಆರು ಪಂದ್ಯಗಳನ್ನು ಆಡಿರುವ ಕೆಕೆಆರ್, ಮೂರು ಪಂದ್ಯಗಳಲ್ಲಿ ಗೆಲುವು ಸಾಧಿಸಿ 6 ಅಂಕಗಳೊಂದಿಗೆ ಮೂರನೇ ಸ್ಥಾನಕ್ಕೇರಿದೆ. ಇನ್ನು ಐದು ಪಂದ್ಯಗಳಲ್ಲಿ ಎರಡರಲ್ಲಿ ಸೋತಿರುವ ಆರ್​ಸಿಬಿ ನಾಲ್ಕನೇ ಸ್ಥಾನಕ್ಕೆ ಕುಸಿದಿದೆ. ಇನ್ನು ಗುಜರಾತ್ ಟೈಟನ್ಸ್ ಐದು ಪಂದ್ಯಗಳಲ್ಲಿ ನಾಲ್ಕರಲ್ಲಿ ಗೆದ್ದು ಮೊದಲ ಸ್ಥಾನದಲ್ಲಿದೆ. ಡೆಲ್ಲಿ ಕ್ಯಾಪಿಟಲ್ಸ್ ಎರಡನೇ ಸ್ಥಾನದಲ್ಲಿದೆ.

ಪಂಜಾಬ್ ಕಿಂಗ್ಸ್, ಎಲ್​ಎಸ್​ಜಿ, ರಾಜಸ್ಥಾನ್ ರಾಯಲ್ಸ್, ಮುಂಬೈ ಇಂಡಿಯನ್ಸ್, ಚೆನ್ನೈ ಸೂಪರ್ ಕಿಂಗ್ಸ್​, ಸನ್​ ರೈಸರ್ಸ್​ ಹೈದರಾಬಾದ್ ತಂಡ ಕ್ರಮವಾಗಿ ಐದು, ಆರು, ಏಳು, ಏಂಟು, ಒಂಬತ್ತು ಹಾಗೂ 10ನೇ ಸ್ಥಾನದಲ್ಲಿವೆ.

ಇದನ್ನೂ ಓದಿ: ತವರಿನಲ್ಲಿ ಸಿಎಸ್​ಕೆಗೆ ಭಾರೀ ಮುಖಭಂಗ.. ಧೋನಿ ಪಾಲಿಗೆ ದುಸ್ವಪ್ನವಾಗಿ ಕಾಡಿದ ಒಬ್ಬ ಸ್ಟಾರ್​..!

ವಿಶೇಷ ಸೂಚನೆ: ಕ್ರಿಕೆಟ್​​ನ ವಿಶೇಷ ಸುದ್ದಿಗಳಿಗಾಗಿ ವೀಕ್ಷಿಸಿ 'ರನ್ ಭೂಮಿ' ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ ಫಸ್ಟ್ ಚಾನೆಲ್

Advertisment