/newsfirstlive-kannada/media/post_attachments/wp-content/uploads/2025/03/IPL_2025-1.jpg)
2025ರ ಐಪಿಎಲ್ ಸೀಸನ್- 18 ಕೋಲ್ಕತ್ತಾದಲ್ಲಿ ಗ್ರ್ಯಾಂಡ್ ಆಗಿ ಓಪನಿಂಗ್ ಪಡೆದುಕೊಂಡಿದೆ. ಉದ್ಘಾಟನಾ ಪಂದ್ಯದಲ್ಲೇ ಹಾಲಿ ಚಾಂಪಿಯನ್ ಕೆಕೆಆರ್ ತಂಡವನ್ನು ಆರ್ಸಿಬಿ ಮಣ್ಣುಮುಕ್ಕಿಸಿ ಗೆಲುವಿನ ಅಲೆಯಲ್ಲಿ ತೇಲುತ್ತಿದೆ. ಇದರ ಬೆನ್ನಲ್ಲೇ ಐಪಿಎಲ್ನ ಒಂದು ಪಂದ್ಯದ ಬಗ್ಗೆ ಬಿಗ್ ಅಪ್ಡೇಟ್ ಹೊರ ಬಿದ್ದಿದ್ದು, ಏಪ್ರಿಲ್ 6 ರಂದು ರಾಮ ನವಮಿಯಂದು ಲಕ್ನೋ ಮತ್ತು ಕೋಲ್ಕತ್ತಾ ನಡುವಿನ ಪಂದ್ಯ ನಡೆಯುವುದಿಲ್ಲ ಎಂದು ಹೇಳಲಾಗಿದೆ.
ಬಿಸಿಸಿಐ ವೇಳಾಪಟ್ಟಿ ಪ್ರಕಾರ ಏಪ್ರಿಲ್ 6 ಭಾನುವಾರ ರಾಮ ನವಮಿಯಂದು ಎರಡು ಪಂದ್ಯಗಳು ನಡೆಯಬೇಕಿತ್ತು. ಆದರೆ ಅಂದು ಕೇವಲ ಒಂದು ಪಂದ್ಯ ನಡೆಸುವುದಾಗಿ ಬಿಸಿಸಿಐ ಈಗಾಗಲೇ ಘೋಷಣೆ ಮಾಡಿದೆ. ಅಂದು ಮಧ್ಯಾಹ್ನ ಕೋಲ್ಕತ್ತಾದಲ್ಲಿ 3:30ಕ್ಕೆ ನಡೆಯಬೇಕಿದ್ದ ಲಕ್ನೋ ಹಾಗೂ ಕೆಕೆಆರ್ ನಡುವಿನ ಪಂದ್ಯವನ್ನು ಮುಂದಕ್ಕೆ ಹಾಕಲಾಗಿದೆ. ಅದರಂತೆ ಸಂಜೆ 7:30ಕ್ಕೆ ಹೈದರಾಬಾದ್ನಲ್ಲಿ ನಡೆಯುವ ಗುಜರಾತ್ ಹಾಗೂ ಸನ್ರೈಸರ್ಸ್ ಹೈದ್ರಾಬಾದ್ ನಡುವಿನ ಪಂದ್ಯ ನಿಗದಿಯಂತೆ ನಡೆಯುತ್ತದೆ.
ಇದನ್ನೂ ಓದಿ:ಕೆಂಪೇಗೌಡ ಏರ್ಪೋರ್ಟ್ನಲ್ಲಿ RCB ತಂಡಕ್ಕೆ ಭರ್ಜರಿ ಸ್ವಾಗತ.. ಫ್ಯಾನ್ಸ್ ಇಂದ ಶಿಳ್ಳೆ, ಕೇಕೆ, ಜೈಕಾರ
ಭದ್ರತೆ ಕಾರಣದಿಂದ ಲಕ್ನೋ ಹಾಗೂ ಕೆಕೆಆರ್ ನಡುವಿನ ಪಂದ್ಯವನ್ನ ಏಪ್ರಿಲ್ 8ಕ್ಕೆ ಮುಂದೂಡಲಾಗಿದೆ. ಬಂಗಾಳದಲ್ಲಿ ಏಪ್ರಿಲ್ 6 ರಂದು ಶ್ರೀರಾಮನವಮಿ ಹಬ್ಬ ಜೋರಾಗಿ ನಡೆಯುತ್ತದೆ. ಈ ವೇಳೆ ಪೊಲೀಸರಿಗೆ ಹೆಚ್ಚಿನ ಕೆಲಸ ಇರುತ್ತದೆ. ಕೋಲ್ಕತ್ತಾದ ಎಲ್ಲ ಕಡೆಯೂ ಪೊಲೀಸರು ಭದ್ರತೆಯಲ್ಲಿ ತೊಡಗಲಿದ್ದಾರೆ. ಇದರಿಂದ ಐಪಿಎಲ್ ಪಂದ್ಯಕ್ಕೆ ಭದ್ರತೆ ಕೊರತೆ ಆಗಬಹುದು. ಹೀಗಾಗಿ ಪಂದ್ಯ ಮುಂದೂಡುವಂತೆ ಪೊಲೀಸರು ಕ್ರಿಕೆಟ್ ಅಸೋಷಿಯೇಷನ್ ಆಫ್ ಬೆಂಗಾಲ್ (ಸಿಎಬಿ)ಗೆ ಮನವಿ ಮಾಡಿದ್ದರು.
ಸಿಎಬಿ ಈ ಬಗ್ಗೆ ಬಿಸಿಸಿಐಗೆ ಮನವಿ ಮಾಡಿತ್ತು. ಇದನ್ನು ಪರಿಗಣಿಸಿರುವ ಬಿಸಿಸಿಐ ಪಂದ್ಯವನ್ನು ಮುಂದಕ್ಕೆ ಹಾಕಿದ್ದು ಏಪ್ರಿಲ್ 8 ಮಂಗಳವಾರದಂದು ಎರಡು ಪಂದ್ಯಗಳು ನಡೆಯಲಿವೆ. ಕೋಲ್ಕತ್ತಾದಲ್ಲಿ ಮಧ್ಯಾಹ್ನ 3:30ಕ್ಕೆ ಲಕ್ನೋ ಹಾಗೂ ಕೆಕೆಆರ್ ನಡುವೆ ಕಾದಾಟ ನಡೆಯುತ್ತದೆ. ಅದರಂತೆ ವೇಳಾಪಟ್ಟಿಯಂತೆ ಅಂದು ನಡೆಯಬೇಕಿರು ಚಂಡೀಗಢದಲ್ಲಿ ಸಂಜೆ 7:30ಕ್ಕೆ ಪಂಜಾಬ್ ಹಾಗೂ ಚೆನ್ನೈ ಸೂಪರ್ ಕಿಂಗ್ಸ್ ನಡುವೆ ಗೆಲುವಿಗಾಗಿ ಹೋರಾಟ ನಡೆಯಲಿದೆ.
ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ಫಸ್ಟ್ಚಾನೆಲ್ನಲ್ಲಿ ‘ರನ್ ಭೂಮಿ’ ವೀಕ್ಷಿಸಿ