/newsfirstlive-kannada/media/post_attachments/wp-content/uploads/2025/04/Prabhsimran.jpg)
ಮಳೆಯ ಕಾರಣದಿಂದ ಕೋಲ್ಕತ್ತಾ ನೈಟ್ ರೈಡರ್ಸ್ ಹಾಗೂ ಪಂಜಾಬ್ ಕಿಂಗ್ಸ್ ನಡುವೆ ನಡೆದ 44ನೇ ಐಪಿಎಲ್ ಪಂದ್ಯವನ್ನು ರದ್ದು ಮಾಡಲಾಗಿದೆ. 2025ರ ಸೀಸನ್ನಲ್ಲಿ ಇದೇ ಮೊದಲ ಪಂದ್ಯ ಫಲಿತಾಂಶ ಇಲ್ಲದಾಗಿದ್ದು ಅಂಕಗಳನ್ನು ಎರಡು ತಂಡಗಳಿಗೆ ನೀಡಲಾಗಿದೆ
ಈಡನ್ ಗಾರ್ಡನ್ಸ್ ಸ್ಟೇಡಿಯಂನಲ್ಲಿ ನಡೆಯುತ್ತಿರುವ ಪಂದ್ಯದಲ್ಲಿ ಪಂಜಾಬ್ ಕಿಂಗ್ಸ್ ಹಾಗೂ ಕೆಕೆಆರ್ ತಂಡಗಳು ಇಂದು ಸಂಜೆ 7:30ಕ್ಕೆ ಕಣಕ್ಕೆ ಇಳಿವೆ. ಪಂಜಾಬ್ ಕಿಂಗ್ಸ್ ತಂಡದ ಕ್ಯಾಪ್ಟನ್ ಶ್ರೇಯಸ್ ಅಯ್ಯರ್ ಟಾಸ್ ಗೆದ್ದು ಮೊದಲ ಬ್ಯಾಟಿಂಗ್ ತೆಗೆದುಕೊಂಡು ಪೂರ್ಣಗೊಳಿಸಿದ್ದರು. ಓಪನರ್ಸ್ ಪ್ರಿಯಾಂಶ್ ಆರ್ಯ ಹಾಗೂ ಪ್ರಭಾಸಿಮ್ರನ್ ಅವರ ಅರ್ಧಶತಕದಿಂದ ಕೋಲ್ಕತ್ತಾ ನೈಟ್ ರೈಡರ್ಸ್ಗೆ 202 ರನ್ಗಳ ಬೃಹತ್ ಮೊತ್ತದ ಗುರಿ ನೀಡಲಾಗಿತ್ತು.
ಓಪನರ್ ಪ್ರಿಯಾಂಶ್ ಆರ್ಯ ಆರಂಭದಿಂದಲೇ ಬಿರುಸಿನ ಬ್ಯಾಟಿಂಗ್ ಪ್ರದರ್ಶನ ಮಾಡಿ ಕೆಕೆಆರ್ ತಂಡಕ್ಕೆ ಕಾಡಿದರು. ಪಂದ್ಯದಲ್ಲಿ ಒಟ್ಟು 35 ಎಸೆತಗಳನ್ನು ಎದುರಿಸಿದ ಸ್ಫೋಟಕ ಬ್ಯಾಟರ್ 8 ಬೌಂಡರಿ, 4 ಅಮೋಘವಾದ ಸಿಕ್ಸರ್ಗಳಿಂದ 69 ರನ್ಗಳ ಕಾಣಿಕೆಯನ್ನ ಪಂಜಾಬ್ ತಂಡಕ್ಕೆ ನೀಡಿದರು. ರಸೆಲ್ ಬೌಲಿಂಗ್ನಲ್ಲಿ ಕ್ಯಾಚ್ ಕೊಟ್ಟು ಹೊರ ನಡೆದರು.
ಪ್ರಿಯಾಂಶ್ ಆರ್ಯ ಜೊತೆ ಕ್ರೀಸ್ಗೆ ಆಗಮಿಸಿದ್ದ ಓಪನರ್ ಪ್ರಭಾಸಿಮ್ರನ್ ಕೂಡ ಕೆಕೆಆರ್ ಬೌಲರ್ಗಳ ವಿರುದ್ಧ ಗುಡುಗಿದರು. ಆರ್ಯಗಿಂತ ತುಸು ಜೋರಾಗಿಯೇ ಬ್ಯಾಟ್ ಬೀಸಿದ ಪ್ರಭಾಸಿಮ್ರನ್ ಸ್ಫೋಟಕ 83 ರನ್ಗಳನ್ನು ಬಾರಿಸಿದರು. ಕೇವಲ 49 ಬಾಲ್ಗಳನ್ನು ಆಡಿದ ಪ್ರಭಾಸಿಮ್ರನ್ 6 ಬೌಂಡರಿ 6 ಆಕಾಶದೆತ್ತರ ಸಿಕ್ಸರ್ಗಳನ್ನು ಸಿಡಿಸಿದರು.
ಆದರೆ ಕೆಕೆಆರ್ನ 2ನೇ ಇನ್ನಿಂಗ್ಸ್ನಲ್ಲಿ ಆರಂಭವಾಗಿ ಸುನಿಲ್ ನೈರನ್ ಹಾಗೂ ರಹಮಾನುಲ್ಲಾ ಗುರ್ಬಾಜ್ ಬ್ಯಾಟಿಂಗ್ ಆರಂಭಿಸಿ ಒಂದು ಓವರ್ ಆಡಿ 7 ರನ್ಗಳನ್ನು ಗಳಿಸಿದ್ದರು. ಇನ್ನೊಂದು ಓವರ್ ಆರಂಭಿಸಬೇಕು ಎನ್ನುವಷ್ಟರಲ್ಲಿ ಈಡನ್ ಗಾರ್ಡನ್ಸ್ ಮೈದಾನದಲ್ಲಿ ಮಳೆ ಜೊತೆ ಕೆಟ್ಟದಾದ ವಾತಾವರಣ ಏರ್ಪಟ್ಟಿದೆ. ಇದರಿಂದ ಕೆಕೆಆರ್ ಹಾಗೂ ಪಂಜಾಬ್ ನಡುವಿನ ಪಂದ್ಯವನ್ನು ರದ್ದು ಮಾಡಿ ತಲಾ ಒಂದೊಂದು ಅಂಕ ನೀಡಲಾಗಿದೆ ಎಂದು ಹೇಳಲಾಗಿದೆ.
ಮ್ಯಾಚ್ ನಡೆಯುವಾಗ ವೇಳೆ ಮಳೆ ಬಂದಿದ್ದರಿಂದ ಮೈದಾನದಿಂದ ಎಲ್ಲ ಆಟಗಾರರು ಡ್ರೆಸ್ಸಿಂಗ್ ರೂಮ್ನತ್ತ ಓಡಿ ಹೋದರು. ಕೆಕೆಆರ್ ಸೆಕೆಂಡ್ ಬ್ಯಾಟಿಂಗ್ ಅನ್ನು ಆರಂಭಿಸಿತ್ತು. ಆದರೆ ಬ್ಯಾಡ್ ವೆದರ್ ಹಾಗೂ ಮಳೆ ಇದ್ದಿದ್ದರಿಂದ ಪಂದ್ಯವನ್ನೇ ರದ್ದು ಎಂದು ಘೋಷಣೆ ಮಾಡಿ ಒಂದೊಂದು ಪಾಯಿಂಟ್ ನೀಡಲಾಗಿದೆ. ಪಂದ್ಯದಲ್ಲಿ ಒಂದು ಓವರ್ ಮಾತ್ರ ಆಡಿದ್ದ ಕೆಕೆಆರ್ ಇನ್ನು 19 ಓವರ್ಗಳಲ್ಲಿ 195 ರನ್ಗಳನ್ನು ಗಳಿಸಬೇಕಿತ್ತು. ಮಳೆಯಿಂದ ಮ್ಯಾಚ್ ಅನ್ನು ನಿಲ್ಲಿಸಲಾಗಿದೆ.
ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ಫಸ್ಟ್ಚಾನೆಲ್ನಲ್ಲಿ ‘ರನ್ ಭೂಮಿ’ ವೀಕ್ಷಿಸಿ