ಕೋಲ್ಕತ್ತಾ ನೀಡಿದ್ದ 262 ರನ್ಗಳ ಟಾರ್ಗೆಟ್ ಮಾಡಿದ ಪಂಜಾಬ್
ಹೊಡಿಬಡಿ ಆಟದಲ್ಲಿ ಹಲವು ದಾಖಲೆಗಳು, ಅವು ಯಾವ್ಯಾವುದು..?
45 ಬಾಲ್ನಲ್ಲಿ 8 ಫೋರ್, 9 ಸಿಕ್ಸರ್ ಸಮೇತ ಬೈರ್ಸ್ಟೋ ಸೆಂಚುರಿ
ಈಡನ್ ಗಾರ್ಡನ್ಸ್ ಕ್ರಿಕೆಟ್ ಸ್ಟೇಡಿಯಮ್ನಲ್ಲಿ ನಡೆದ ಇಂಡಿಯನ್ ಪ್ರೀಮಿಯರ್ ಲೀಗ್ ಹೈವೋಲ್ಟೇಜ್ ಪಂದ್ಯದಲ್ಲಿ ಕೋಲ್ಕತ್ತಾ ನೈಟ್ ರೈಡರ್ಸ್ ವಿರುದ್ಧ ಪಂಜಾಬ್ ಕಿಂಗ್ಸ್ ಭರ್ಜರಿ ಗೆಲವು ದಾಖಲಿಸಿದೆ. ಬರೋಬ್ಬರಿ 262 ರನ್ಗಳ ಬಿಗ್ ಟಾರ್ಗೆಟ್ ಚೇಸ್ ಮಾಡುವ ಮೂಲಕ ಇಡೀ ಐಪಿಎಲ್ ಇತಿಹಾಸದಲ್ಲೇ ಹೊಸ ದಾಖಲೆಗಳನ್ನು ಬರೆದಿದೆ.
ಇದನ್ನೂ ಓದಿ: ರಾಡ್ನಿಂದ ‘ಕೈ’ ಕಾರ್ಯಕರ್ತರ ಮೇಲೆ ಹಲ್ಲೆ ಆರೋಪ.. ವೋಟಿಂಗ್ ಮುಗೀತಿದ್ದಂತೆ ಹಾಸನ ಜಿಲ್ಲೆಯಲ್ಲಿ ಏನಾಯಿತು?
ಕೋಲ್ಕತ್ತಾ ಟೀಮ್ ನೀಡಿದ 262 ರನ್ಗಳ ಬೃಹತ್ ಮೊತ್ತ ಟಾರ್ಗೆಟ್ ಮಾಡಿದ ಪಂಜಾಬ್ ಸ್ಟೇಡಿಯಂನಲ್ಲಿ ಬರೀ ಸಿಕ್ಸರ್, ಬೌಂಡರಿಗಳನ್ನ ಬಾರಿಸುವ ಮೂಲಕ ಫ್ಯಾನ್ಸ್ಗೆ ಫುಲ್ ಕಿಕ್ ಕೊಟ್ಟಿದೆ. ಪಂದ್ಯದ ವೇಳೆ ಹಲವು ದಾಖಲೆಗಳು ಮೂಡಿ ಬಂದಿವೆ. ಇಡೀ ಐಪಿಎಲ್ ಇತಿಹಾಸದಲ್ಲೇ ಈ ರೀತಿ ಚೇಸ್ ಮಾಡಿರುವುದು ಇದೇ ಮೊದಲಾಗಿದೆ. ವಿಶ್ವದಲ್ಲೂ ಟಿ20 ಪಂದ್ಯಗಳಲ್ಲಿ ಇಷ್ಟೊಂದು ರನ್ಸ್ ಯಾರು ಚೇಸ್ ಮಾಡಿರಲಿಲ್ಲ.
ಪಂಜಾಬ್ ಮತ್ತು ಕೋಲ್ಕತ್ತಾ ಪಂದ್ಯದ ವೇಳೆ ಒಟ್ಟು 523 ರನ್ಗಳು ಹರಿದು ಬಂದಿದ್ದು ಬೌಂಡರಿಗಳಿಗಿಂತ ಸಿಕ್ಸರ್ಗಳನ್ನೇ ಹೆಚ್ಚಾಗಿ ಬ್ಯಾಟ್ಸ್ಮನ್ಗಳು ಬಾರಿಸಿದ್ದಾರೆ. ಕೆಕೆಆರ್ ಬ್ಯಾಟ್ಸ್ಮನ್ಗಳು 18 ಸಿಕ್ಸರ್, ಪಂಜಾಬ್ ಬ್ಯಾಟರ್ಸ್ 24 ಸಿಕ್ಸರ್ ಬಾರಿಸಿದ್ದಾರೆ. ಮ್ಯಾಚ್ ವೇಳೆ ಅಮೋಘವಾದ 42 ಸಿಕ್ಸರ್ಗಳು ಬಂದಿವೆ. ಅಂದರೆ 252 ರನ್ಗಳು ಕೇವಲ ಸಿಕ್ಸರ್ಗಳಿಂದ ಮಾತ್ರ ಬಂದಿವೆ. 37 ಬೌಂಡರಿಗಳಿಂದ 148 ರನ್ಗಳು ಬಂದಿವೆ. ಸಿಕ್ಸರ್ ಮತ್ತು ಬೌಂಡರಿಗಳಿಂದಲೇ 400 ರನ್ಗಳು ಎರಡೂ ಕಡೆಯಿಂದ ಬಂದಿವೆ. ಇದು ಐಪಿಎಲ್ನಲ್ಲಿ ದೊಡ್ಡ ದಾಖಲೆಯಾಗಿದೆ.
ಐಪಿಎಲ್ ಇತಿಹಾಸದಲ್ಲೇ ಅತೀ ಹೆಚ್ಚು ಸಿಕ್ಸರ್ಗಳು ಪಂಜಾಬ್ ಮತ್ತು ಕೋಲ್ಕತ್ತಾ ಪಂದ್ಯದ ವೇಳೆ ಬಂದಿವೆ. ಎರಡು ತಂಡಗಳು 250 ರನ್ಗಳ ಗಡಿ ದಾಟಿ ಬ್ಯಾಟಿಂಗ್ನಿಂದ ಅಬ್ಬರಿಸಿವೆ. 45 ಬಾಲ್ನಲ್ಲಿ 8 ಫೋರ್, 9 ಸಿಕ್ಸರ್ ಸಮೇತ ಬೈರ್ಸ್ಟೋ ಸೆಂಚುರಿ ಬಾರಿಸಿದ್ದು ದಾಖಲೆಯಾದ್ರೆ, ನಾಲ್ವರು ಬ್ಯಾಟ್ಸ್ಮನ್ಗಳು 25 ಬಾಲ್ ಒಳಗೆ ಅರ್ಧಶತಕ ಚಚ್ಚಿರುವುದು ಮತ್ತೊಂದು ದಾಖಲೆಯಾಗಿದೆ. ಎರಡೂ ತಂಡದ ನಾಲ್ವರು ಆರಂಭಿಕರು ಒಂದೇ ಪಂದ್ಯದಲ್ಲಿ ಅರ್ಧಶತಕ ಸಿಡಿಸಿದ ದಾಖಲೆ ಬರೆದಿದ್ದಾರೆ. ಕೆಕೆಆರ್ ಪರ ಸುನಿಲ್ ನರೈನ್ 71 ರನ್, ಫಿಲ್ ಸಾಲ್ಟ್ 75 ಗಳಿಸಿದರೆ, ಪಂಜಾಬ್ ಪರ ಜಾನಿ ಬೈರ್ಸ್ಟೋ ಅಜೇಯ 108 ರನ್, ಪ್ರಭುಸಿಮ್ರಾನ್ ಸಿಂಗ್ 54 ರನ್ ಗಳಿಸಿದರು.
ಇದನ್ನೂ ಓದಿ: ಜನಪ್ರಿಯ ಬಿರಿಯಾನಿ ಹೌಸ್ ಹೋಟೆಲ್ಗೆ ಬೆಂಕಿ.. ಮಾಲೀಕನಿಗೆ ಲಕ್ಷ, ಲಕ್ಷ ರೂಪಾಯಿ ನಷ್ಟ
ಇದನ್ನೂ ಓದಿ: ಸಿಗರೇಟ್ ಕೊಟ್ಟಿಲ್ಲವೆಂದು ಹಲ್ಲೆ.. ಚಾಕು ಇರಿದು ಇಬ್ಬರ ಯುವಕರ ಕೊಂದ ಪಾಪಿಗಳು
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ